‘ವಿಸ್ಮೃತಿ’ ಫ್ಯಾಂಟಸಿ ನೀಳ್ಗತೆ (ಭಾಗ ೩) – ಭಾಗ್ಯ.ಕೆ.ಯುಮಗು ವಿಸ್ಮೃತಿಯ ಅಸಮಾನ್ಯ ನಡೆಯಿಂದ ಎಲ್ಲರನ್ನು ವಿಚಲಿತರನ್ನಾಗಿ ಮಾಡಿಬಿಟ್ಟಿತ್ತು.ಮಗುವಿನ ಜನನದ ನಂತರ ಕೈಯಲ್ಲಿ ಹಿಡಿದ ಕೆಲಕ್ಷಣದಲ್ಲೆ ಕೊಸರಿಹೋದ ಅಶ್ವತ್ಥಾಮರ ಪ್ರಾಣಪಕ್ಷಿ ಹಾರಿಹೋದದ್ದು ವಿಪರ್ಯಾಸವೋ, ವೈಚಿತ್ರ್ಯವೋ ತಿಳಿಯದು, ಮುಂದೆ ಓದಿ ಕತೆಗಾರ್ತಿ ಭಾಗ್ಯ.ಕೆ.ಯು ಅವರ ‘ವಿಸ್ಮೃತಿ’ಫ್ಯಾಂಟಸಿ ನೀಳ್ಗತೆ…

ಮಗು ವಿಸ್ಮೃತಿಯ ಅಸಹಜ, ಅಸಮಾನ್ಯ ವರ್ತನೆಯಿಂದಾಗಿ ಆತಂಕಿತರಾದರು ಪ್ರಭಲಾಂಭಿಕೆ. ಅಶ್ವತ್ಥಾಮರು ತಮಗೆ ಜನಿಸುವುದು ಹೆಣ್ಣು ಮಗುವೇ ಎಂದು ನಿಖರವಾಗಿ ಸೂಚಿಸಿದ್ದು ಅಲ್ಲದೆ.. ಆ ಮಗುವಿಗೆ ವಿಸ್ಮೃತಿಯೆಂದೇ ಹೆಸರಿಡಲು ಸೂಚಿಸಿದ್ದು ವೈಚಿತ್ರ್ಯವೆನಿಸಿತ್ತು. ಮಗುವಿನ ಜನನದ ನಂತರ ಕೈಯಲ್ಲಿ ಹಿಡಿದ ಕೆಲಕ್ಷಣದಲ್ಲೆ ಕೊಸರಿಹೋದ ಅಶ್ವತ್ಥಾಮರ ಪ್ರಾಣಪಕ್ಷಿ ಹಾರಿಹೋದದ್ದು ವಿಪರ್ಯಾಸವೋ, ವೈಚಿತ್ರ್ಯವೋ ತಿಳಿಯದು, ಆದರೆ ಇದರಿಂದ ಬಳಲಿದ್ದವರು ಪ್ರಭಲಾಂಭಿಕೆ ಮಾತ್ರ.

ಕುಬ್ಜ ಮಾಯಾಲೋಕವನ್ನು ರಕ್ಷಿಸಿದ್ದ ಅಷ್ಟಶಕ್ತಿವಲಯ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಂತೆ ನಳನಳಿಸುತ್ತಾ ಗೋಚರವಾದ ಮಾಯಾಲೋಕವನ್ನು ಸಂರಕ್ಷಿಸಲು ಪರಿವ್ರಾಜಿಕೆ ಮಾಯಾವಿನಿಯ ದಾರಿಗಾಗಿ ಕಾದಿದ್ದಳು ಮೇದಿನಿ. ದಿವ್ಯಜ್ಞಾನದಿಂದ ತಂದೆಯು ದಿವ್ಯತಥ್ಯ ಬೆಳಕಿನಲ್ಲಿ ಲೀನವಾದ ದೃಶ್ಯವನ್ನು, ಮಾತಂಗನ ಉದಯವನ್ನು ಗ್ರಹಿಸಿದ್ದಳು. ತನ್ನ ಶಕ್ತಿಯು ಕುಂದಿಹೋದದ್ದನ್ನು ನೆನೆದು ನೀರಸಳಾದಳು. ಅಸಹಾಯಿಯಾದ ಆಸ್ಥಾನದ ಸೇನಾಶಕ್ತಿಯನ್ನು ಎಣಿಸಿ ಮಾಯಾಲೋಕದಲ್ಲಿ ದಿವ್ಯ ಮೌನ ಪಸರಿತ್ತು.

ದಟ್ಟಾರಣ್ಯದ ನಡುವಿದ್ದ ತೊರೆಯ ಹರಿವಿನ ತಟದಲ್ಲಿ ನಿಂದು.. ಮಾಯಾವಿನಿಯು ವಿಹಂಗ ರಾಜನ ಸಹಚರನಿಗಾಗಿ ಕಾದಿದ್ದಳು. ಅಶ್ವವನ್ನೇರಿ ಕ್ಷಿತಗದಿಂದ ಬರುವವನಿದ್ದ ಆರುಣಿ ವಿಹಂಗ ರಾಜನಿಗೆ ಸಹಚರ ಮಾತ್ರವಲ್ಲದೆ ಅವನ ವಿಸ್ಮಯ ಲೋಕದ ಪರಿವೇದಿಯಾಗಿದ್ದನು.

ಅವನ ಬರುವಿಕೆಗೆ ಕಾದಿದ್ದ ಮಾಯಾವಿನಿಯು ಆರುಣಿಯನ್ನು ಘಾತಿಸಿಕೊಂದಳು.

ವಿಷಯವನ್ನರಿತ ವಿಹಂಗ ನು ಮಾಯಾಲೋಕವನ್ನು ಅತಿಕ್ರಮಿಸಲು, ಮೇದಿನಿಯನ್ನು ವಶಪಡಿಸಿಕೊಂಡು ವಿವಾಹವಾಗಲು ಹಪಹಪಿಸಿ ಪೊರಮಟ್ಟನು.
ತನ್ನ ಪ್ರಚಂಡ ಸೇನೆಯನ್ನು ಸಬಲಗೊಳಿಸಿ ಮಾಯಾಲೋಕವನ್ನು ನಿರ್ನಾಮಗೊಳಿಸಿ, ಮೇದಿನಿಯಲ್ಲಿ ಅನುರಕ್ತನಾಗಲು ಹಾತೊರೆದಿದ್ದ ವಿಹಂಗ ರಾಜನು ತನ್ನ ಅಷ್ಟಶಕ್ತಿಯನ್ನು, ಮಂತ್ರವಿದ್ಯೆಯಾದ ಯಾತು ವಿದ್ಯೆಯನ್ನು, ಪ್ರಚಂಡತಂತ್ರ ವಿದ್ಯೆಯನ್ನು ಬಳಸಿ ಮಾಯಾಲೋಕವನ್ನು ಆಕ್ರಮಣ ಮಾಡಿದಾಗ.. ಮಾಯಾವಿನಿಯು ತನ್ನ ಶಕ್ತಿಯನ್ನೆಲ್ಲಾ ಬಳಸಿ ಪ್ರತ್ಯಾಕ್ರಮಣ ನಡೆಸಿದ್ದಳು. ಕೊನೆಗೆ ಅವಳಿಂದ ವಿಹಂಗ ರಾಜನನ್ನು ಎದುರಿಸಲಾಗದೆ ಬೇರೆ ದಾರಿಗಾಣದೆ ಶರಣಾದಳು. ಮಾಯಾವಿನಿಯನ್ನು ಶಮನಗೊಳಿಸಲು ನಿರ್ಧರಿಸಿದ್ದ ವಿಹಂಗ ರಾಜನು ಮಾಯಾವಿನಿಯ ಶಕ್ತಿಗಳನ್ನು ತನ್ನಲ್ಲಿ ಅವಾಹಿಸಿಕೊಂಡು ಮುಕುರದಲ್ಲಿ ಅವಳನ್ನು ಬಂಧಿಸಿ, ಮಾಯಾಲೋಕವನ್ನು ತನ್ನ ಮಂತ್ರಶಕ್ತಿಯಿಂದ ದಹಿಸಲು ಅಗ್ನಿಯನ್ನು ಆಹ್ವಾನಿಸುವಾಗ.. ಮೇದಿನಿಯು ಅಗ್ನಿಸ್ತಂಭ ವಿದ್ಯೆಯಿಂದ ಬೆಂಕಿಯನ್ನು ಸುಡದಂತೆ ಮಾಡಿ ಸಂಸ್ಥಾನವನ್ನು ರಕ್ಷಿಸಿದ್ದಳು.

ಮೇದಿನಿಯನ್ನು ನೋಡುತ್ತಲೇ ಆಕೆಯ ಸೌಂದರ್ಯಕ್ಕೆ ಸಮ್ಮೋಹಿತನಾದ ಅವನ ಮನಸ್ಸಿನಲ್ಲಿ ವಿಕಾರವುಂಟಾಯಿತು. ಕಠೋರವಾದ ನಿಷ್ಠೆಯಿಂದ ಆಚರಿಸಿದ್ದ ಬ್ರಹ್ಮಚರ್ಯವು ಮೇದಿನಿಯನ್ನು ಕಾಣುತ್ತಲೇ ಸಡಿಲಗೊಂಡಿತ್ತು.

ವಿಹಂಗ ರಾಜನು ರಾಕ್ಷಸ ಯಾತುದೂತನಾಗಿದ್ದು ತನ್ನ ಸಹಸ್ರವರ್ಷಪ್ರಾಯದವರೆಗೂ ಬ್ರಹ್ಮಚರ್ಯವನ್ನು ಕಠಿಣವಾಗಿ, ನಿಷ್ಠೆಯಿಂದ ಪಾಲನೆ ಮಾಡಿದ್ದವನು. ಮೇದಿನಿಯು ಅಗ್ನಿಸ್ತಂಭ ವಿದ್ಯೆಯಿಂದ ತನ್ನ ರಾಜ್ಯವನ್ನು ರಕ್ಷಿಸುವಾಗ ಅವಳನ್ನು ವರಿಸುವ ಮಹದುದ್ಧೇಶದಿಂದ ಮಾಯಾಲೋಕದ ಪತನದೆಡೆಗೆ ಲಕ್ಷಿಸದೆ ಅವಳನ್ನು ಎಳೆದು ತಂದನು ತನ್ನ ವಿಸ್ಮಯಲೋಕಕ್ಕೆ.

ಪರಿವ್ರಾಜಿಕೆ ಮಾಯಾವಿನಿ ಆರುಣಿಯನ್ನು ಹತಗೈದನೆಂದು ಭ್ರಮಿಸಿದ್ದರೆ, ಆರುಣಿ ವಿಸ್ಮಯಲೋಕದ ದ್ವಾರದಲ್ಲೆ ನಿಂತು ವಿಹಂಗ ರಾಜನನ್ನು ಸ್ವಾಗತಿಸಿದಾಗ ಮೇದಿನಿ ದಿಗ್ಭ್ರಮೆಗೊಂಡಳು. ವಿಸ್ಮಯ ಲೋಕಕ್ಕೆ ಅವಳು ಅಡಿಯಿಟ್ಟೊಡನೆ ದಿವ್ಯಕಾಂತಿ ವಿಸ್ಮಯಲೋಕವನ್ನು ಪ್ರಜ್ವಲಿಸುವಂತೆ ಮಾಡಿತ್ತು.

ನಂದಿಹೋದ ಪ್ರಣತಿಯ ಪ್ರಖರತೆ ವಿಸ್ಮಯ ಆಸ್ಥಾನದ ಗದ್ದುಗೆಯನ್ನು ಬಿಂಬಿಸುವಾಗ ವಿಹಂಗ ರಾಜನು ವಿಜಯಭಾವದಿಂದ ಮುಡುಹಿಕ್ಕಿ ತನ್ನ ಅಭೀಷ್ಟೆಯನ್ನು ವ್ಯಕ್ತಪಡಿಸಿದ.

ಮೇದಿನಿಯಿಂದ ತುಚ್ಛೀಕರಿಸಿದ ಭರ್ತ್ಸನೆಯನ್ನು ಎದುರಿಸಿದಾಗ ವ್ಯಗ್ರವಾಯಿತು ಅವನ ಮನ.

ಅವಳನ್ನೊಂದು ಕೋಣೆಯಲ್ಲಿ ಬಂಧಿಸಿ.. ಹೊರಬಾರದಂತೆ ಮಂತ್ರ ಶಕ್ತಿಯಿಂದ ಕೋಣೆಯನ್ನು ಭದ್ರಪಡಿಸಿದ್ದ. ಆಸ್ಥಾನದ ಮುತ್ತೆಯರನ್ನು ಮೇದಿನಿಯ ಕಾವಲಿಗಿರಿಸಿದ. ಭವ್ಯವಾದ ಯಜ್ಞ ಯಾಗಕ್ಕೆ ಅಣಿಗೊಳಿಸಲು ಆರುಣಿಗೆ ಆಜ್ಞೆಯನ್ನು ಹೊರಡಿಸಿದ.

ಮಲಗಿದ್ದ ಮಗು ಮತ್ತೆ ಅದೇ ತೆರನಾಗಿ ಎದ್ದು ಕುಳಿತಿತ್ತು. ನಿದ್ರೆಗಣ್ಣಲ್ಲೆ ಮತ್ತದೇ ಮಾತುಗಳನ್ನು ಆಲಿಸಿಕೊಂಡ ಪ್ರಭಲಾಂಭಿಕೆಗೆ ಇನ್ನೂ ಸುಮ್ಮನಿರಲು ಸಾಧ್ಯವಾಗದೆಂದು ತಿಳಿದುಬಂದಿತ್ತು. ಪರ್ಣಕುಟೀರಕ್ಕೆ ಹೋಗಿ ಬರುವುದು ಒಳಿತೆನಿಸಿತು. ಆ ಮೊದಲು ಒಮ್ಮೆ ವೈದ್ಯರನ್ನು ಕಾಣುವುದು ಲೇಸು, ಈಗಿರುವ ಪರಿಸ್ಥಿತಿಯಲ್ಲಿ ಮಗುವನ್ನು ದಟ್ಟಾರಣ್ಯಕ್ಕೆ ಕರೆದೊಯ್ಯುವುದು ಸಾಧ್ಯವಾಗದೆ ಹೋಗಬಹುದು ಎನಿಸಿತು. ಹಾಗೆಯೇ ಮಗುವಿನ ಪಕ್ಕದಲ್ಲೆ ಹಾಸಿಗೆಗೆ ತಲೆಯಾನಿಸಿದ್ದರು.
ಗತದ ನೆನಪುಗಳನ್ನು ಮೆಲುಕು ಹಾಕಲು ಶುರುವಿಟ್ಟಿತ್ತು ಮನ.

ವಿಸ್ಮೃತಿಯ ಜನನ ಕಾಲದಲ್ಲಿ ಅಶ್ವತ್ಥಾಮರು ಮರಣ ಹೊಂದಿದಾಗ.. ಬಂಧುಬಾಂಧವರಿಂದ ಮೂದಲಿಕೆ, ಹೀಗಳಿಕೆ, ಮೋಸ, ವಂಚನೆ, ಆಪಾದನೆ ಹೀಗೆ ಹಲವು ಬಗೆಯ ನೋವುಂಡು ತಾವು ವಾಸವಿದ್ದ ಮನೆಯನ್ನು ತೊರೆದು ಅಲ್ಲಿಂದ ಹೊರಬಿದ್ದಿದ್ದರು. ಹುಟ್ಟಿದ ನಂತರ ತಾನು ಯಾರೆಂಬುದೇ ತಿಳಿಯದೆ ಅನಾಥಾಲಯದಲ್ಲಿ ಬೆಳೆದ ಪ್ರಭಲಾಂಭಿಕೆಗೆ ಶಿಕ್ಷಣ ಸವಲತ್ತು ದೇವನಾಗಿಯೇ ನೀಡಿದ್ದ ಸಂಪತ್ತೆನಿಸಿತ್ತು. ಅನಾಥಾಲಯದಲ್ಲೆ ಓದಿಬೆಳೆದು ಕೆಲಸವನ್ನು ಅರಸಿ ಬರುತ್ತಲಿದ್ದವರನ್ನು.. ದಟ್ಟಾರಣ್ಯದ ರಸ್ತೆಯಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ.. ಅಲ್ಲಿಯೇ ಆಶ್ರಮದಲ್ಲಿ ನೆಲೆಸಿದ್ದ ಅಶ್ವತ್ಥಾಮರ ಭೇಟಿಯಾಗಿತ್ತು ಅಂದು. ಹೀಗೆ ಆಗಾಗ್ಗೆ ಅರಣ್ಯದ ಭಾಗಕ್ಕೆ ಬರುವಾಗ ಸಹಜವಾದ ಭೇಟಿಗಳು ಜರುಗಿದ್ದವು. ತದನಂತರ ತಾವಾಗಿಯೇ ಪ್ರಭಲಾಂಭಿಕೆಯನ್ನು ಮೆಚ್ಚಿ ಮದುವೆಯಾಗಿದ್ದರು ಅಶ್ವತ್ಥಾಮರು.

ಅಶ್ವಾತ್ಥಾಮರು ಪರ್ಣಕುಟೀರದಲ್ಲಿ ಜನಿಸಿದ್ದವರು.

ಅಪುತ್ರನಾದ ಬ್ರಾಹ್ಮಣನೊಬ್ಬ ಪರುಷಾಟವಿಯ ಮಾರ್ಗವಾಗಿ ಎತ್ತಿನಬಂಡಿಯಲ್ಲಿ ಸಂಚರಿಸುವಾಗ.. ಅದಾಹುದೋ ಕೆಟ್ಟ ಶಕ್ತಿಯಿಂದ ಭಯಕ್ಕೊಳಗಾಗಿ ಅಡವಿಯ ನಟ್ಟನಡುವಿನಲ್ಲಿ ನೆಲೆಸಿದ್ದ ಋಷಿವರ್ಯರ ಸಹಾಯದಿಂದ ಆಶ್ರಯಪಡೆದು ಕೆಲಕಾಲ ಅಲ್ಲಿಯೇ ನೆಲೆನಿಂತರು. ವೇದಶಾಸ್ತ್ರ ಪಠಣ ಮಾಡಿದ್ದ ಬ್ರಾಹ್ಮಣರು ತಪಸ್ಸಿನ ಫಲವಾಗಿ ಋಷಿವರ್ಯರಿಂದ ಜ್ಞಾನೋಪದೇಶವನ್ನು ಪಡೆದು ಸಂತಾನಾರ್ಥವಾಗಿ ಬೇಡಿಕೊಂಡ ವರ ಅಶ್ವತ್ಥಾಮರಾಗಿದ್ದರು. ಹೀಗೆ ಅಶ್ವತ್ಥಾಮರು ಪರ್ಣಕುಟೀರದಲ್ಲೆ ತಮ್ಮ ಬಾಲ್ಯ ಯೊವ್ವನವನ್ನು ಕಳೆದು, ವೇದ ಮಂತ್ರಪಠಣ, ವೃತ ವಿಧಿಗಳನ್ನು ಪಾಲಿಸಿ ಋಷಿವರ್ಯರನ್ನು ಸಂಪ್ರೀತಗೊಳಿಸಿ ಜ್ಞಾನೋಪದೇಶವನ್ನು, ಮಂತ್ರಸಾಕ್ಷಾತ್ಕಾರ ಶಕ್ತಿಯನ್ನು, ತಪೋಶಕ್ತಿಯನ್ನು ಪಡೆದು ಆಶ್ರಮದಲ್ಲಿ ದೇದೀಪ್ಯಮಾನವಾಗಿ ಬೆಳಗಿದ್ದರು.

ಅಶ್ವತ್ಥಾಮರಿಗೆ ಇಷ್ಟೆಲ್ಲಾ ಸಿದ್ಧಿಸಿದ್ದರೂ ಅವರ ಮರಣವನ್ನು ಹುಡುಕಿಕೊಂಡು ಅವರೇ ಬರಲಾಗಿಯೇ ಪ್ರಭಲಾಂಭಿಕೆಯನ್ನು ವರಿಸಿದ್ದರು!. ತಮಗೆ ಜನಿಸುವ ಮಗುವಿನಿಂದ ಜಗತ್ತಿಗೆ ಸತ್ಕಾರ್ಯವಾಗಬೇಕಿರುವುದನ್ನು ಅರಿತೇ ಈ ಮಹಾ ಕಾರ್ಯದಲ್ಲಿ ತೊಡಗಿದ್ದರು.ಸಾಧಾರಣ ಹೆಣ್ಣಾದ ತನ್ನನ್ನು ಬ್ರಹ್ಮಜ್ಞಾನಿಯಾದ ಅಶ್ವತ್ಥಾಮರನ್ನು ವಿವಾಹದವಾದದ್ದು ಸೋಜಿಗವೆನಿಸಿದ್ದರೂ.. ಮುಂದಿನ ವಿಚಾರಧಾರೆಯಲ್ಲಿ ಸಿಲುಕದೆ.. ಅಶ್ವತ್ಥಾಮರ ನಿರ್ಮಲ ಪ್ರೀತಿಯಲ್ಲಿ ದಿನಕಳೆದಿದ್ದರು. ಆದರೊಂದು ಕೊರಗು ಅವರನ್ನು ಪಾಪಭೀತಳನ್ನಾಗಿಸಿತ್ತು. ಬ್ರಹ್ಮಜ್ಞಾನಿಯಾದ ಅಶ್ವತ್ಥಾಮರ ಧರ್ಮಶ್ರದ್ಧೆ, ಆತ್ಮಶುದ್ಧಿ, ಜ್ಞಾನಸಂಪತ್ತು, ತಪೋಶಕ್ತಿಯೆಲ್ಲವನ್ನು ತಾನು ಅಶುದ್ಧಗೊಳಿಸಿದ್ದೆನೆನೋ, ಲೌಕಿಕ ಜೀವನದತ್ತ ಅವರನ್ನು ಡೂಡಿ ಪಾಪಕರ್ಮ ಮಾಡಿದೆನೆನೋ ಎಂಬ ಪಾಪಭೀತಿ ಅವರನ್ನು ಇನ್ನಿಲ್ಲದೆ ಕಾಡತೊಡಗಿತ್ತು.

ಈಗ ಮಗು ವಿಸ್ಮೃತಿಯ ಅಸಮಾನ್ಯ ನಡೆಗಳು ಕೂಡ ವಿಚಲಿತರನ್ನಾಗಿ ಮಾಡಿಬಿಟ್ಟಿತ್ತು. ಈ ಸಮಯದಲ್ಲಿ ಪರ್ಣಕುಟೀರಕ್ಕೆ ಹೋಗಿ ಬರುವುದು ಲೇಸೆನಿಸಿತ್ತು. ಅದೇ ತೆರನಾಗಿ ವಿಸ್ಮೃತಿಯ ಬಾಯಿಯಿಂದಲೂ “ಪರುಷಾಟವಿತ್ತ ಹೆಜ್ಜೆಗಳು ಸಾಗಬೇಕು, ಅವನಿಂದೀಗ ರಕ್ಷಣೆಬೇಕು, ಪರಿವ್ರಾಜಕರನ್ನು ಕಾಣಬೇಕು..” ಹೀಗೆ ಘೋಷಣೆಯನ್ನು ಕೇಳಲ್ಪಟ್ಟಿದ್ದರು. ಹಾಗಾಗಿ ನಾಳೆಯೊಮ್ಮೆ ವೈದ್ಯರನ್ನು ಕಂಡು ಮಗುವಿಗೆ ಪ್ರಯಾಣ ಮಾಡಲು ಸಾಧ್ಯವಾಗುವಂತೆ ಚಿಕಿತ್ಸೆ ಪಡೆದು ಅಡವಿಯತ್ತ ಹೊರಡಲು ಸಿದ್ಧರಾದರು.

ಮುಂದುವರೆಯುವುದು…


  • ಭಾಗ್ಯ.ಕೆ.ಯು (ಗೃಹಿಣಿ, ಹವ್ಯಾಸಿ ಬರಹಗಾರ್ತಿ), ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW