ಲೇಖನ : ವಾಣಿರಾಜ್ ಜೋಶಿ
ತಾಯಿ ಎನ್ನುವ ಗುಡಿಯಲ್ಲಿ ಪೂಜಾರಿಯ ಬದಲು ಆತ್ಮ. ಪೂಜೆಯ ಬದಲು ಪ್ರೀತಿ, ವಾತ್ಸಲ್ಯ, ಕರುಣೆ ಇರುವುದು. ತಾಯಿ ಎಂಬ ನುಡಿಗೆ ಅಮ್ಮಂದಿರನ್ನು ದಿನಾಲೂ ಪೂಜಿಸುವ ದೇಶ ನಮ್ಮ ಭಾರತ. ನಮ್ಮ ಅಮ್ಮಂದಿರಿಗೆ ಶುಭ ಹಾರೈಸಲು ಮೀಸಲಿಡೋಣ. ಈ ದಿನವನ್ನು ಅಮ್ಮಂದಿರ ದಿನ ಹರುಷ ಪಡೋಣ.
ನಮ್ಮಮ್ಮ ಚಂದ್ರಮತಿ. ತುಂಬಿದ ಮನೆಗೆ ಸೊಸೆಯಾಗಿ ಬಂದು ಎಲ್ಲರ ಪ್ರೀತಿಯನ್ನು ಗಳಿಸಿ ಆರತಿಗೊಂದು ಕೀರುತಿಗೊಂದು ಮಕ್ಕಳಿಗೆ ತಾಯಿಯಾದಳು. ಹಳ್ಳಿ ಮನೆ, ತೋಟದ ಕೆಲಸ ಹೀಗೆ ಹಲವಾರು ಒತ್ತಡದ ಕೆಲಸಗಳು ನಿನ್ನ ಮೇಲಿದ್ದವು. ಅವುಗಳನ್ನೆಲ್ಲ ನಗು ಮೊಗದಲ್ಲಿಯೇ ಚಿಟಕಿ ಕೊಡೆದ ಹಾಗೆ ಬಗೆಹರಿಸುತ್ತಿದ್ದೆ. ನೀನೇ ನನ್ನ ಮೊದಲ ಗುರುವಾದೆ. ಮನೆಗೆ ಬಂದ ಅತಿಥಿಗಳಿಗೆ ಪ್ರೀತಿಯಿಂದ ಅಡುಗೆ ಮಾಡಿ ಅವರ ಹೊಟ್ಟೆ ತುಂಬಿಸಿದೆ. ದಣಿವರಿಯದ ಕೆಲಸದ ನಡುವೆ ನನ್ನ ತಮ್ಮನ ಸಾಕಿ ಸಲುಹಿದ ಮಾತೆ ನೀನು. ಹೊಡೆತ ಬೈಗುಳಗಳ ಶಬ್ದವೇ ಗೊತ್ತಿರದ ಶಬ್ದಕೋಶವು ನೀನು.
ಸಹನಾ ಮೂತಿ೯ಯೇ ನೀನು. ಅತೀಯಾಗಿ ಪ್ರೀತಿಸುವ ಮಾತೆ. ನನ್ನ ಪಾಲಿಗೆ ನೀನೇ ಎಸ್. ಜಾನಕಿ, ನೀನೇ ಪಿ.ಸುಶೀಲ ಆಗಿದ್ದೆ. ಲಾಲಿ ಹಾಡಿದ ಗಾಯಕಿ. ಕಥೆ ಹೇಳಿದ ಕಥೆಗಾತಿ೯. ನಡುರಾತ್ರಿಯಲ್ಲೂ ನಮ್ಮ ಅಳುವಿಗೆ ಆರೈಕೆ ಮಾಡುವ ವೈದ್ಯೆ. ನಮ್ಮ ಹಠಕ್ಕೆಲ್ಲ ತಲೆಬಾಗಿ ನಿಂತ ವಕೀಲೆ. ಧೈರ್ಯ- ಸ್ಥೈಯ೯ ತುಂಬಿದ ಸಲಹೆಗಾತಿ೯. ಸ್ವತಂತ್ರ ಬದುಕು ಕಟ್ಟುವ ಕಲೆಯ ಕಲಿಸಿಕೊಟ್ಟ ಗುರು. ಮೊಮ್ಮಕ್ಕಳನ್ನು ಬೆಳಸಲು ಅತ್ಯುತ್ತಮ ಟಿಪ್ಸ ಕೊಡುವ ಸಹಾಯಗಾತಿ೯ ಅಮ್ಮ ನನ್ನಮ್ಮ .
ತನ್ನ ತವರುಮನೆಯನ್ನೂ, ಒಡಹುಟ್ಟಿದವರನ್ನೂ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವೆ. 60 ರ ವಯಸ್ಸಲ್ಲೂ ಬತ್ತದ ಉತ್ಸಾಹದ ಚಿಲುಮೆ. ಓದುವ ಹವ್ಯಾಸದ ಜೊತೆಗೆ ನಾನಾ ಬಗೆಯ ತಿಂಡಿಗಳನ್ನು ಮಾಡಿ ಮಕ್ಕಳ ಬರುವಿಕೆಗೆ ತುದಿಗಾಲಿನಲ್ಲಿ ಕಾಯುವ ಅಮ್ಮ. ಸದಾ ಹರಸಿ ಹಾರೈಸಿ ಅಂಗಳ ತುದಿಗೆ ಬಂದು ಟಾಟಾ ಮಾಡಿ ಬೀಳ್ಕೊಡುವ ಮಮತಾಮಯಿ ನಮ್ಮಮ್ಮ. ಅಂದು-ಇಂದು ಎಂದೆಂದಿಗೂ ಬದಲಾಗದೆ ತನ್ನತನವನ್ನು ಬಿಟ್ಟುಕೊಡದ ಅಮ್ಮ ನನ್ನಮ್ಮ.
ನಿನ್ನ ಕಣ್ಣುಗಳ ರೆಪ್ಪೆಯಾಗಿ ನಾನು ಮತ್ತು ತಮ್ಮ ನಿನ್ನನ್ನು ಸದಾ ಕಾಯುವೆವು. ಬಿಡು ಇನ್ನು ನಿನ್ನಯ ಚಿಂತೆಯನ್ನು. ಕಾಣದ ದೇವರಿಗೆ ಕೈ ಮುಗಿದು ಬೇಡುವೆ, ನಿನ್ನ ಕೃಪೆ ಇರಲಿ ಎಂದೆಂದೂ ನನ್ನ ಅಮ್ಮನ ಮೇಲೆ. ಪ್ರೀತಿಯ ನಿಧಿಯೇ ನೀನು.ನಿನಗೆ ಕೋಟಿ ಕೋಟಿ ನಮನ❤️
ವಾಣಿರಾಜ್ ಜೋಶಿ ಹಿಂದಿನ ಕವನ :
ನಿಮ್ಮ ಅಭಿಪ್ರಾಯಗಳನ್ನುಮೇಲಿನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಮತ್ತು ನಿಮ್ಮ ಲೇಖನವನ್ನು aakrutikannada@gmail.com ಕಳುಹಿಸಿ.