‘ನೀನಾಸಮ್ ಇಟ್ಟ ಹೆಜ್ಜೆ’ ಕೃತಿ ಪರಿಚಯ

ನೀನಾಸಂ ರೂವಾರಿಯಾದ ಕೆ.ವಿ.ಸುಬ್ಬಣ್ಣ ಅವರ ಸಾಂಸ್ಕೃತಿಕ ಸಾಹಸಗಾಥೆಯನ್ನು ‘ನೀನಾಸಮ್ ಇಟ್ಟ ಹೆಜ್ಜೆ’ ಕೃತಿಯಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ. ಈ ಕೃತಿಯ ಕುರಿತು ಹಿರಿಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನೀನಾಸಮ್ ಇಟ್ಟ ಹೆಜ್ಜೆ
ಲೇಖಕರು : ಡಾ.ಪ್ರಭು ಅಂಗಡಿ

ಎರಡು ದಶಕಗಳ ಹಿಂದೆ ನನ್ನ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಪ್ರಭು ಅಂಗಡಿ ಪದವಿಯ ನಂತರ ಎಂ.ಫಿಲ್. ಪದವಿಗೆ ನನ್ನ ಮಾರ್ಗದರ್ಶನದಲ್ಲಿ ನೋಂದಾಯಿಸಿದರು. ಅದಕ್ಕಾಗಿ ಅವರು “ನೀನಾಸಂ ಒಂದು ಅಧ್ಯಯನ “ಎಂಬ ವಿಷಯವನ್ನು ಆರಿಸಿಕೊಂಡರು. ಅವರು ಅಲ್ಲಿನ ವಿದ್ಯಾರ್ಥಿಯಾಗಿ ಅದರ ಒಳ ಹೊರಗನ್ನು ಬಲ್ಲವರಾಗಿದ್ದರು. ಅದು ಅವರ ಅಧ್ಯಯನಕ್ಕೆ ಅಧಿಕೃತತೆಯನ್ನು ತಂದುಕೊಟ್ಟಿತು. ಅದರಲ್ಲಿ ನೀನಾಸಂ ಉಗಮ, ಇಟ್ಟ ಹೆಜ್ಜೆಗಳು ತೊಟ್ಟ ರೂಪಗಳನ್ನು , ರಂಗವೇರಿಸಿದ ಮೈಲುಗಲ್ಲಾದ ನಾಟಕಗಳನ್ನು, ಅವುಗಳ ತಿರುಗಾಟವನ್ನು, ಪ್ರದರ್ಶನಗಳನ್ನು ಸ್ಪಂದನಗಳನ್ನು ಮಾತುಕತೆ ಎಂಬ ಅವರ ಪ್ರಕಟಣೆ. ಸಂಸ್ಕೃತಿ ಶಿಬಿರ ಇತ್ಯಾದಿಗಳ ಮೂಲಕ ಅದನ್ನು ಅಂತರರಾಷ್ಟ್ರೀಯ ರಂಗಕೇಂದ್ರವಾಗಿ ರೂಪುಗೊಂಡ ಬಗೆ ಇದೆಲ್ಲದರ ರೂವಾರಿಯಾದ ಕೆ.ವಿ.ಸುಬ್ಬಣ್ಣ ಅವರ ಸಾಂಸ್ಕೃತಿಕ ಸಾಹಸಗಾಥೆಯನ್ನು ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ. ಪ್ರಶ್ನೋತ್ತರಗಳ ಮೂಲಕ ಕರ್ನಾಟಕದ ವಿವಿಧ ರಂಗ ವಿದ್ವಾಂಸರ, ತಜ್ಞರ ಅಭಿಪ್ರಾಯಗಳು ಇದರಲ್ಲಿ ಸೇರ್ಪಡೆಯಾಗಿದೆ.

ಇದನ್ನು ಸಂಪ್ರಬಂಧದ ರೂಪದಲ್ಲಿ ವಿ.ವಿ.ಗೆ ಸಲ್ಲಿಸಿದ ನಂತರ ಮೌಲ್ಯ ಮಾಪನಗೊಂಡು ಅವರಿಗೆ ಎಂ.ಫಿಲ್ ಪದವಿಯನ್ನು ವಿ.ವಿ.ಪ್ರದಾನ ಮಾಡಿತು. ತರುವಾಯ ಅವರು ” ಕನ್ನಡ ನಾಟಕಗಳಲ್ಲಿ ಜಾನಪದ ಸಂವೇದನೆ” ಎಂಬ ವಿಷಯವನ್ನು ಕುರಿತು ನನ್ನ ಮಾರ್ಗದರ್ಶನದಲ್ಲಿ ಪಿಎಚ್ಡಿಗೆ ಅಧ್ಯಯನ ಮಾಡಿ ಮಹಾಪ್ರಬಂಧ ಸಲ್ಲಿಸಿದರು. ಅದರ ಮೌಲ್ಯ ಮಾಪನ ಮತ್ತು ಮೌಖಿಕ ಪರೀಕ್ಷೆ ಯ ನಂತರ ಅವರಿಗೆ ಪಿಎಚ್ಡಿ ಪದವಿಯನ್ನು ಮು.ವಿ.ವಿ ಪ್ರದಾನ ಮಾಡಿತು. ಡಾ.ಪ್ರಭು ಅಂಗಡಿ ತಮ್ಮ ಎಂ.ಪಿಲ್ ಸಂಪ್ರಬಂಧವನ್ನು “ನೀನಾಸಂ ಇಟ್ಟ ಹೆಜ್ಜೆ ” ಎನ್ನುವ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಅವರಿಗೆ ಮತ್ತು ಅವರ ಶ್ರೀಮತಿ ಲಲಿತಾ ಅಂಗಡಿ ( ನನ್ನ ಸ್ನಾತಕೋತ್ತರ ವಿದ್ಯಾರ್ಥಿ) ಯವರಿಗೆ ಅಭಿನಂದನೆಗಳು. ಯಾವುದೇ ವ್ಯಕ್ತಿಗಾಗಲಿ ಆತ್ಮಾವಲೋಕನ ಅಗತ್ಯ. ತಮ್ಮ ಸಾಧನೆಗಾಗಿ, ಅಂತರರಾಷ್ಟ್ರೀಯ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾದ ಶ್ರೀ ಕೆ.ವಿ.ಸುಬ್ಬಣ್ಣ ಅವರು ಸಂದರ್ಶನ ಒಂದರಲ್ಲಿ, ತಮ್ಮ ಸಾಧನೆಯ ಮಿತಿಯನ್ನು ಗುರುತಿಸಿಕೊಳ್ಳುವುದು ಹೀಗೆ: ” ನಮ್ಮ ಸಾಧನೆಯ ಸಮಗ್ರ ಚಿತ್ರ ಕಂಡು ಕೊಳ್ಳುವಾಗ ,ನಮ್ಮಲ್ಲಿನ ಅಪೂರ್ಣತೆಯು ಕಣ್ಣಿಗೆತಾಗಿ ಕಾಣತೊಡಗುತ್ತದೆ.

ಈ ಸಮುದಾಯದಲ್ಲಿನ ಅನಕ್ಷರಸ್ಥ ಹಾಗೂ ಹಿಂದುಳಿದ ವರ್ಗಗಳನ್ನು ನಮ್ಮ ವೃತ್ತದಲ್ಲಿ ಇನ್ನೂ ಪೂರ್ಣ ವಾಗಿ ಒಳಗೆ ಮಾಡಿಕೊಳ್ಳುವುದು ಇನ್ನೂ ಸಾಧ್ಯವಾಗದೆ ಉಳಿದಿದೆ.ಅ ಸಾಧನೆ ತೀರಾ ಮುಖ್ಯವಾದದ್ದು ಎಂದು ಅರಿತು ನಾವು ಆ ಬಗ್ಗೆ ಎಚ್ಚರವಿಟ್ಟುಕೊಂಡು ಪ್ರಯತ್ನ ನಡೆಸುತ್ತಿದ್ದೇವೆ.ಎನ್ನುವುದೇ ಸಮಾಧಾನ. ಸಮುದಾಯದ ಬದುಕಿನಲ್ಲೂ, ಸಂಘದ ಚಟುವಟಿಕೆಗಳಲ್ಲಿ ಒಟ್ಟಿಗೆ ಸಾಧಿತವಾಗಬೇಕಾದದ್ದು”.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW