“ಓಹ್ ಕನ್ನಡಾಂಬೆ ಕ್ಷಮಿಸಮ್ಮಾ”ಕವನ

ಕನ್ನಡವೂ ಇಂಗ್ಲೀಷಮಯವಾದರೆ ಹೇಗಿರುತ್ತೆ?… ಅಂತ ಕವಿ ಸುರೇಶಯ್ಯ ಎಚ್ ಎಂ ಅವರು ಒಂದು ಕವಿತೆಯನ್ನು ರಚಿಸಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಹೆಂಡತಿಯನ್ನು ” ವೈಫ್ ” ಅಂತೀವಿ,
ಜೀವನವನ್ನು    ” ಲೈಫ್ ” ಅಂತೀವಿ,
ಚಾಕುವನ್ನು      ” ನೈಫ್ ” ಅಂತೀವಿ,
ಕನ್ನಡವನ್ನು ಮರೆಮಾಚಿ ನಿಂತಿದ್ದೀವಿ

ಅತ್ತೆಯನ್ನು ” ಆಂಟಿ ” ಅಂತೀವಿ,
ಅವರ ಮಗಳನ್ನು ” ಸ್ವೀಟಿ ” ಅಂತೀವಿ,
ಕರ್ತವ್ಯವನ್ನು ” ಡ್ಯೂಟಿ ” ಅಂತೀವಿ,
ಪ್ರೇಮಿಯನ್ನು ” ಬ್ಯೂಟಿ ” ಅಂತೀವಿ.

ಪ್ರೇಮವನ್ನು ” ಲವ್ ” ಅಂತೀವಿ,
ಹಸುವನ್ನು ” ಕೌ ” ಅಂತೀವಿ,
ಇಷ್ಟಪಟ್ಟರೆ ” ವಾವ್ ” ಅಂತೀವಿ
ಇದನ್ನೇ ಕನ್ನಡ ಅಂದ್ಕೊಂಡ್ಡಿದ್ದೀವಿ.

ಮುತ್ತನ್ನು ” ಕಿಸ್ ” ಅಂತೀವಿ,
ಟೀಚರನ್ನು ” ಮಿಸ್ ” ಅಂತೀವಿ,
ಗೊಜ್ಜನ್ನು ” ಸಾಸ್ ” ಅಂತೀವಿ,
ಚೆನ್ನಾಗಿದ್ದರೆ ” ನೈಸ್ ” ಅಂತೀವಿ.

ಕ್ಷಮೆ ಕೇಳಲು ” ಸಾರಿ ” ಅಂತೀವಿ,
ಸೀರೆಯನ್ನು ” ಸ್ಯಾರಿ ” ಅಂತೀವಿ,
ಸಾಂತ್ವನಕ್ಕೆ ” ಡೋಂಟ್ ವರಿ ” ಅಂತೀವಿ
ಕನ್ನಡದ ಬಾಯಲ್ಲಿ ಆಂಗ್ಲವನ್ನು ನರ್ತಿಸುತ್ತೀವಿ.

ಮುಠಾಳನನ್ನು ” ಲೂಸ್ ” ಅಂತೀವಿ,
ಅವಕಾಶವನ್ನು ” ಚಾನ್ಸ್ ” ಅಂತೀವಿ,
ಮೋಹವನ್ನು ” ರೊಮಾನ್ಸ್‌ ” ಅಂತೀವಿ,
ಕನ್ನಡವನ್ನು ಮರೆತು ಬಾಳುತ್ತಿದ್ದೀವಿ.

ನಿಶ್ಯಬ್ದವನ್ನು ” ಸೈಲೆನ್ಸ್ ” ಅಂತೀವಿ,
ಹೊಡೆದಾಟವನ್ನು ” ವೈಲೆನ್ಸ್ ” ಅಂತೀವಿ,
ತಕ್ಕಡಿಯನ್ನು ” ಬ್ಯಾಲೆನ್ಸ್ ” ಅಂತೀವಿ
ಕನ್ನಡವನ್ನು ನಮ್ಮಲ್ಲೇ ನುಂಗಿಕೊಂಡಿದ್ದೀವಿ….!


  • ಸುರೇಶಯ್ಯ ಎಚ್ ಎಂ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW