ಕವಿಯತ್ರಿ, ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ಗುರು ಯಾರು ? ತಪ್ಪದೆ ಮುಂದೆ ಓದಿ…
ಗುರು ಯಾರು?
ನಿನಗೆ ನೀನೇ ಗುರು:’ಅಹಂ ಬ್ರಹ್ಮಾಸ್ಮಿ’!
ತನಗೆ ತಾನೇ ಗುರು..!
ಸಾಂಕೇತಿಕ
ಅಂದಮೇಲೆ ಈ ದೀನ ಮೊರೆಯೇಕೆ..?
ವಂದಿಮಾಗಧತನದ..ಬಾಲಬಡುಕರೇ. ನಿಮಗಲ್ಲ ಅದು ಪರಿಹಾರ
ಭಗವಂತನ ಆಟದ ದಾಳಗಳಾಗಿರುವಾಗ ‘ಅಹಂ ಬ್ರಹ್ಮಾಸ್ಮಿ’ ಎಂಬುವುದು ಬಹು ಅಹಂಕಾರದ ಮಾತು!
ಬ್ರಹ್ಮತ್ವ ನನ್ನು ಸಿದ್ಧಿಸಿಕೊಳ್ಳುವುದು ಸುಲಭದ ಮಾತೇ..?ಉಹ್ಞುಂ..
ಅದೂ ಒಂದು ಮಹಾಪದವಿಯೇ…!
ಮಹತ್ವವನ್ನು ಅಣುತ್ವದಲ್ಲಿ
ಬಿಂಬಿಸ ಹೊರಡುವುದು
ಕರಿಯ ಕನ್ನಡಿಯಲ್ಲಿ ಸೆರೆಹಿಡಿದಂತೆ.
ಅದಕ್ಕೂ ದಕ್ಕಬೇಕಲ್ಲ ಪೂರ್ಣತ್ವದ ವರ
ಅದನ್ನು ಸಿದ್ಧಿಸಲೂ ಅವನ ಕೃಪಾವರ್ಷವೇ ಬೇಕು ..!
‘ದೇಹಿ’ ಎಂದು ಬೇಡಲಿಕ್ಕೂ ‘ಪಾಹಿ’ಯೊಬ್ಬ ಬೇಕಲ್ಲ…
ಮೃಣ್ಮಯತೆಯಲ್ಲಿ ಅದನ್ನು ಸಿದ್ಧಿಸಿಕೊಳ್ಳುವುದು ಸಾಧ್ಯವೇ…
ಚಿತಾಗ್ನಿಯಲ್ಲಿ ಸಹಗಮಿಸುವುದಕ್ಕೂ
ಅದೆಂತಹ ಸಮರ್ಪಣಾ ಮನೋಭಾವ ಬೇಕು..!
ದೇಹವನ್ನು ಧಿಕ್ಕರಿಸುವುದಕ್ಕೂ
ಮೋಕ್ಷಕ್ಕೂ ವೀರ ವೈರಾಗ್ಯ ಬೇಡವೇ…?
ವಿಧಿ ‘ತ್ವಂ’ ಆದಮೇಲೆ ‘ಅಹಂ’ ಬಾಗುವುದು ಅವನಿಗೇ ತಾನೇ..
ನಿನ್ನ ಪ್ರಸಾದವೇ ಬಾಳು…ಹೇ ವಿಧಿಯೇ..ಶಠಣಾಗುವೆ ನಿನಗೇ..!
ನೀನಲ್ಲದೆ ನನಗೆ ನಿಂದಿಸಲಿಕ್ಕೂ ಸ್ತುತಿಸಲಿಕ್ಕೂ ನಿಮಿತ್ತಲಾದರೂ ಬೇಡವೇ…?
- ಶಿವದೇವಿ ಅವನೀಶಚಂದ್ರ