‘ಚಹಾ ಕುಡಿದಷ್ಟು ದಾಹ ತಿರುವುದಿಲ್ಲ, ಕವಿತೆಗಳ ಓದಿದಷ್ಟು ಸಾಲುಗಳು ಮುಗಿಯುವುದಿಲ್ಲ’…ಕವಿ ಚೇತನ್ ಗವಿಗೌಡ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವನ, ತಪ್ಪದೆ ಮುಂದೆ ಓದಿ…
ನಿನ್ನನ್ನು ಕಾಣುವ ಘಳಿಗೆ
ಬದುಕೋ.. ಮರುಹುಟ್ಟೋ..
ಅರ್ಥವಾಗುತ್ತಿಲ್ಲ ;
ಒಂಟಿ ಅಂಥ ಅನ್ನಿಸಿದಾಗ
ನಾನೂ ಕೂಡ ಒನ್ ಟೀ
ಎಂದು ಜೊತೆ ಬರುವೆ..
ಥೇಟ್ ನೀನು ನನ್ನಿಷ್ಟದ ಕವಿತೆಗಳಂತೆ ;
ಚಹಾ ಕುಡಿದಷ್ಟು ದಾಹ ತಿರುವುದಿಲ್ಲ
ಕವಿತೆಗಳ ಓದಿದಷ್ಟು ಸಾಲುಗಳು ಮುಗಿಯುವುದಿಲ್ಲ..
ಭಾವಗಳ ತುಂಬುವೆ
ಮನದ ದುಗುಡಗಳ ಮರೆಮಾಚುವೆ..
ಇಳಿಸಂಜೆಯಲಿ
ಅವಳ ಕಣ್ಸನ್ನೆಯ ಸಂಭಾಷಣೆಯಲಿ
ಅಬೆಯಾಡುವ ಬೈಟು ಟೀ ಎದುರಲಿ
ಬಿಸಿ ಬಿಸಿ ಗುಟುಕೊಂದು ಹೀರಿದೆ
ಮನಸು ತಂಪಾಯಿತು..
ಅವಳ ಕೆನ್ನೆ ಕೆಂಪಾಯಿತು..!
- ಚೇತನ್ ಗವಿಗೌಡ