ರುಚಿಕರ ‘ಉಪ್ಪಿನ ಕಾಯಿಗಳು’

ಉಪ್ಪಿನಕಾಯಿ ಅಂದ್ರೆ ಲಿಂಬೆ ಉಪ್ಪಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ ಅಷ್ಟೇ ಅಲ್ಲ..ಹಲಸಿನ ಕಾಯಿ ಉಪ್ಪಿನಕಾಯಿ, ಶುಂಠಿ, ಹಸಿಮೆಣಸಿನ ಉಪ್ಪಿನಕಾಯಿ, ಬೆಟ್ಟದ ನೆಲ್ಲಿ ಉಪ್ಪಿನಕಾಯಿ ಕೂಡಾ ಮಾಡಬಹುದು.ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಉಪ್ಪಿನ ಕಾಯಿ ಮಾಡುವ ವಿಧಾನದ ಕುರಿತು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಎಲೆಯ ತುದಿಗೆ ಉಪ್ಪಿನಕಾಯಿ ಹಾಗೂ ಊಟದ ಕೊನೆಗೆ ಮೊಸರನ್ನ ಇಲ್ಲ ಅಂದ್ರೆ ಊಟ ಕಂಪ್ಲೀಟ್ ಆಗುವುದೇ ಇಲ್ಲ. ನಮ್ಮ ಮನೆಯಲ್ಲಂತು ಉಪ್ಪಿನಕಾಯಿ ಇರಲೇ ಬೇಕು. ಸೀಸನ್ ನಲ್ಲಿ ಸಿಗುವ ಉಪ್ಪಿನಕಾಯಿ ಮಾಡುವ ಪದಾರ್ಥ ಬಳಸಿ ಉಪ್ಪಿನಕಾಯಿ ಇದ್ದೆ ಇರುತ್ತದೆ. ಈಗ ಎಲ್ಲ ಸೀಸನ್ ನಲ್ಲಿ ಎಲ್ಲವೂ ಸಿಗುತ್ತದೆ.

ಸಧ್ಯಕ್ಕೆ ಇದಿಷ್ಟು ಬಗೆ ಬಗೆಯ ಉಪ್ಪಿನಕಾಯಿಗಳು ನಮ್ಮ ಮನೆಯಲ್ಲಿ ಇದೆ.

  • ಹಲಸಿನ ಕಾಯಿ ಉಪ್ಪಿನಕಾಯಿ
  • ಮಾವಿನಕಾಯಿ ಉಪ್ಪಿನಕಾಯಿ
  • ಲಿಂಬೆಹಣ್ಣು, ಶುಂಠಿ, ಹಸಿಮೆಣಸಿನ ಉಪ್ಪಿನಕಾಯಿ
  • ಬೆಟ್ಟದ ನೆಲ್ಲಿ ಕಾಯಿಯ ಉಪ್ಪಿನಕಾಯಿ
  • ಕಾಯಿ ಲಿಂಬೆ ಉಪ್ಪಿನ ಕಾಯಿ.

ಮಾಡುವ ವಿಧಾನ :

ಯಾವುದನ್ನೇ ಆದರೂ ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಒರೆಸಿ ಬೇಕಾದ ಆಕಾರಕ್ಕೆ ಹೆಚ್ಚಿ ಒಂದು ಲೆಯರ್ ಮಾವಿನ ಕಾಯಿ ಒಂದು ಲೇಯರ್ ಕಲ್ಲುಪ್ಪು ಹಾಕಿ ಗಟ್ಟಿಯಾಗಿ ಮುಚ್ಚಿ 3 ದಿನ ಇಡುತ್ತೇನೆ .ನಂತರ ದಿನ ಒಂದು ಸಲ ಡಬ್ಬ ಕುಲುಕಿ 15 ದಿವಸ ಉಪ್ಪಿನಲ್ಲಿ ನೆನೆಸುತ್ತೇನೆ.

ನಂತರ ಖಾರಕ್ಕೆ ತಕ್ಕಷ್ಟು ಗುಂಟೂರು ಬ್ಯಾಡಗಿ ಒಣಮೆಣಸಿನ ಕಾಯಿ ಬಿಸಿನೀರಿನಲ್ಲಿ ನೆನೆಸಿ. ರುಬ್ಬಿ ನೆನೆಸಿಟ್ಟ ಹೋಳುಗಳಿಗೆ ಹಾಕಿ ಚೆನ್ನಾಗಿ ಕಲಸಿ ಅರ್ಧ ಸ್ಪೂ. ಜೀರಿಗೆ , ಅರ್ಧ ಸ್ಪೂನ್ ಮೆಂತ್ಯ, 1 ಸ್ಪೂನ್ ಸಾಸಿವೆ ಹುರಿದುಕೊಂಡು ಮಿಕ್ಸಿಯಲ್ಲಿ ಡ್ರೈ ಪೌಡರ್ ಮಾಡಿಕೊಂಡು ಖಾರ ಹಾಕಿ ಕಲಸಿದ ಉಪ್ಪಿನಕಾಯಿಗೆ ಮಿಕ್ಸ್ ಮಾಡಿ 3 ಸ್ಪೂನ್ ಎಣ್ಣೆ ಕಾಯಿಸಿ ಇಂಗು ಸಾಸಿವೆ ಒಗ್ಗರಣೆ ಕೊಡುತ್ತೇನೆ . ಚೆನ್ನಾಗಿ ಮಿಕ್ಸ್ ಮಾಡಿ ಇಡುತ್ತೇನೆ.
ಈಗ ಉಪ್ಪಿನ ಕಾಯಿ ರೆಡಿ.

ನಂತರ ಇನ್ನೆರಡು ಸ್ಪೂನ್ ಎಣ್ಣೆ ಕಾಯಿಸಿ ತಣ್ಣಗೆ ಆದಮೇಲೆ ಈಗ ರೆಡಿ ಮಾಡಿಟ್ಟ ಉಪ್ಪಿನಕಾಯಿ ಮೇಲೆ ಕಾಯಿಸಿ ತಣ್ಣಗೆ ಆದ ಎಣ್ಣೆ ಹಾಕಿ ಟೈಟ್ ಆಗಿ ಮುಚ್ಚಳ ಮುಚ್ಚಿಟ್ಟರೆ ಆಯಿತು ಎಷ್ಟು ದಿನವಾದರೂ ಉಪ್ಪಿನ ಕಾಯಿ ಕೆಡುವುದಿಲ್ಲ ಹಾಗೆ ನಾನು ಯಾವುದೇ prisarvetive ಆಗಲಿ ವಿನೆಗರ್ ಆಗಲಿ ಹಾಕುವುದಿಲ್ಲ. ಈಗ ರುಚಿಯಾದ ಉಪ್ಪಿನಕಾಯಿ ರೆಡಿ.

ಲಿಂಬೆಹಣ್ಣು ಉಪ್ಪಿನಕಾಯಿಗೆ ಮಾತ್ರ ಕಲ್ಲುಪ್ಪು ಚೆನ್ನಾಗಿ ಬಿಸಿ ಮಾಡಿ ಹಾಕುತ್ತೇನೆ. ತುಂಬಾ ಟೇಸ್ಟಿ ಆಗಿ ಇರುತ್ತದೆ.


  • ಶಕುಂತಲಾ ಸವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading