ಕುವೆಂಪು ಅವರ ಕೈಬರಹದಲ್ಲಿ ಮೊದಲ ಮಂತ್ರಮಾಂಗಲ್ಯ ಆಹ್ವಾನ ಪತ್ರಿಕೆಯನ್ನು ಮಗ ತೇಜಸ್ಟಿ ಅವರಿಗೆ ಬರೆದಿದ್ದರು. ಮಂತ್ರ ಮಾಂಗಲ್ಯ ಎಂದರೇನು? ಆರರಲ್ಲಿ ಏನಿದೆ ? ಅದನ್ನು ಉದ್ಯಮಿ, ಲೇಖಕರಾದ ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಂತ್ರಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ಮದುವೆಯಾಗಲು ಬಯಸುವವರಿಗೆ ಅನುಕೂಲವಾಗಲೆಂದು ಈಗಾಗಲೇ ಈ ಪದ್ಧತಿಯಲ್ಲಿ ಮದುವೆಯಾಗಿರುವವರ ಬಗ್ಗೆ ಇರುವ ಲೇಖನಗಳು, ಮದುವೆಯ ದಿನ ಪ್ರತಿಜ್ಞಾವಿಧಿ ಬೋಧಿಸುವ ವಿಡಿಯೋಗಳು, ಲಗ್ನಪತ್ರಿಕೆಯ ಮಾದರಿಗಳು ಮತ್ತು ಕೆಲವು ಫೋಟೋಗಳನ್ನು ಕೆಳಗಿನ ಲಿಂಕ್‌ಗಳಲ್ಲಿ ಕೊಡಲಾಗಿದೆ.
ಮಂತ್ರ ಮಾಂಗಲ್ಯ ಪುಸ್ತಕ: https://tinyurl.com/mantra-mangalya-book
ಮಂತ್ರ ಮಾಂಗಲ್ಯ ಸರಳ ವಿವಾಹ ಪದ್ಧತಿಯ ಮೂಲ ಆಶಯಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗದಂತೆ ಮೇಲೆ ತಿಳಿಸಿರುವ ಏರ್ಪಾಡುಗಳಲ್ಲಿ ಅವಶ್ಯಕತೆ ಇದ್ದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಮನವಿಗಳು:
೧. ಸಾಂಪ್ರದಾಯಕ ಆಡಂಬರದ ವಿವಾಹಗಳನ್ನೂ, ವರದಕ್ಷಿಣೆಯ ದಳ್ಳಾಳಿ ವಿವಾಹಗಳನ್ನೂ ಪ್ರೋತ್ಸಾಹಿಸದಿರಲು ಪ್ರಯತ್ನಿಸಿ. ಪ್ರತಿಭಟಿಸಿ ಹೋರಾಡಲು ಸಾಧ್ಯವಾಗದಿದ್ದರೂ ಕೊನೆಯಪಕ್ಷ ಅದರಲ್ಲಿ ಭಾಗಿಗಳಾಗದೆ ಉಳಿಯಲು ಪ್ರಯತ್ನಿಸಿ.
೨. ಮದುವೆ ಸಮಾರಂಭಗಳಲ್ಲಿ ಕೊಡುವ ಫಲತಾಂಬೂಲಗಳಿಗೆ ಬದಲು ಅನುಕೂಲವಿದ್ದವರು ಅತಿಥಿಗಳಿಗೆ ಒಂದೊಂದು ಮಂತ್ರಮಾಂಗಲ್ಯ ಪುಸ್ತಕವನ್ನು ಕೊಡಿರಿ.
೩. ಈ ಕ್ರಮದಲ್ಲಿ ಸಂಪ್ರದಾಯಗಳನ್ನು ತಿರಸ್ಕರಿಸಿ ಮದುವೆಯಾದ ವಧೂವರರನ್ನು ಜಾತ್ಯಾತೀತರೆಂದು ಪರಿಗಣಿಸಿ ಅವರಿಗೂ ಸರ್ಕಾರಿ ಸೌಲಭ್ಯಗಳಲ್ಲಿ, ನೌಕರಿಯಲ್ಲಿ, ಮೀಸಲಾತಿ ಸೌಲಭ್ಯ ಒದಗಿಸಲು ಮತ್ತು ಅವರ ಮಕ್ಕಳಿಗೆ ಒಂದು ತಲೆಮಾರಿಗೆ ಮಾತ್ರ ವಿದ್ಯಾಭ್ಯಾಸದಲ್ಲಿ ಮೀಸಲಾತಿ ಒದಗಿಸಲೂ ಪ್ರಯತ್ನಿಸೋಣ.
೪. ಮಂತ್ರಮಾಂಗಲ್ಯದ ಪ್ರಕಾರ ಮದುವೆಯಾಗುವವರು ಇದರ ಮೂಲ ಆಶಯಕ್ಕೆ ಭಂಗ ಬರದಂತೆ ಅದರ ವಿಧಿ ವಿಧಾನಗಳಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳನ್ನು ಮಾಡಬಹುದು.
ಮಂತ್ರಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ಮದುವೆಯಾಗಲು ಬಯಸುವವರಿಗೆ ಅನುಕೂಲವಾಗಲೆಂದು ಈಗಾಗಲೇ ಈ ಪದ್ಧತಿಯಲ್ಲಿ ಮದುವೆಯಾಗಿರುವವರ ಬಗ್ಗೆ ಇರುವ ಲೇಖನಗಳು, ಮದುವೆಯ ದಿನ ಪ್ರತಿಜ್ಞಾವಿಧಿ ಬೋಧಿಸುವ ವಿಡಿಯೋಗಳು, ಲಗ್ನಪತ್ರಿಕೆಯ ಮಾದರಿಗಳು ಮತ್ತು ಕೆಲವು ಫೋಟೋಗಳನ್ನು ಕೆಳಗಿನ ಲಿಂಕ್‌ಗಳಲ್ಲಿ ಕೊಡಲಾಗಿದೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
