ಹಳೆಯ ಶುಲ್ಕಕ್ಕಾಗಿ ಮಕ್ಕಳಿಗೆ ಹಿಂಸೆ ನೀಡಿದ ಶಾಲೆ

ಶಾಲೆಯ ಆರಂಭವಾಗಿ ಖುಷಿಯಿಂದ ಶಾಲೆಗೆ ಹೋದ ಮಕ್ಕಳನ್ನು ಹಳೆಯ ಶುಲ್ಕ ಪಾವತಿಯಾಗಿಲ್ಲ ಎನ್ನುವ ಕಾರಣಕ್ಕೆ  ಸುಮಾರು ೩೦೦ ಮಕ್ಕಳನ್ನು ಮೂರ್ನಾಲ್ಕು ಕೊಠಡಿಯಲ್ಲಿ ಕೂಡಿಹಾಕಿ ಮಾನಸಿಕ ಕಿರುಕುಳ ಕೊಡಲಾಗಿದೆ. ಆ ಶಾಲೆ ಯಾವುದು ತಪ್ಪದೆ ಮುಂದೆ ಓದಿ…

೨೦೧೯ ಮತ್ತು ೨೦೨೦ ರ ಮೊದಲಿನ ಸಮಯದ ಶುಲ್ಕವನ್ನು ಮತ್ತು ಈ ವರ್ಷದ ಶುಲ್ಕವನ್ನು ಪೂರ್ತಿಯಾಗಿ ಪಾವತಿಸಿದಲ್ಲಿ ಮಾತ್ರ ಮಕ್ಕಳಿಗೆ ತರಗತಿಗೆ ಪ್ರವೇಶ ಮತ್ತು ಎಲ್ಲ ಸೌಲಭ್ಯಗಳು ಸಿಗುತ್ತವೆ ಎಂದು ಪಾಲಕರಿಗೆ ವಿಡಿಯಾ ಪೂರ್ಣ ಪ್ರಜ್ಞಾ ಶಾಲೆಯಿಂದ ನಿನ್ನೆ ಮೆಸೇಜ್ ಬಂದಿದ್ದು ಇಂದು ಈ ವರ್ಷದ ಶುಲ್ಕವನ್ನು ಪಾವತಿಸಿದವರಿಗೂ ಹಳೆಯ ಶುಲ್ಕ ಬಾಕಿ ಇರುವ ಮಕ್ಕಳನ್ನ ಕೂಡಿಹಾಕಿ ಮಕ್ಕಳು ಕಣ್ಣೀರು ಹಾಕುವಂತೆ ಮಾಡಿದ್ದಾರೆ.

ಹಳೆಯ ಶುಲ್ಕ ಬಾಕಿ ಇರುವವರಿಗೆ ಈ ಹಿಂದೆಯೇ ಲಾಯರ್ ನೋಟಿಸ್ ಬಂದಿದ್ದು ಈ ಪ್ರಕರಣ ನ್ಯಾಯಾಲಯ ಮತ್ತು DERA ದಲ್ಲಿ ಬಾಕಿಯಿದ್ದು ಬಗೆಹರಿಯಬೇಕಿದ್ದರೂ ಅದಕ್ಕಾಗಿ ಮ್ಯಾನೆಜ್‌ಮೆಂಟ್‌ ನವರು ಮಕ್ಕಳ ಮತ್ತು ಪಾಲಕರ ಮೇಲೆ ದೌರ್ಜನ್ಯ ನಡೆಸಿರುವುದು ಮತ್ತು ಮಕ್ಕಳನ್ನು ಬೇರೆ ಬೇರೆಯೇ ನಾಲ್ಕು ಕೊಠಡಿಯಲ್ಲಿ ಕೂಡಿಹಾಕಿರುವುದು ಇಂದು ಪೋಲಿಸ್ ಮತ್ತು ಮಾಧ್ಯಮದವರ ಮುಂದೆ ಸಾಬೀತಾಗಿದೆ. ಮಾಧ್ಯಮದವರು ಆರಕ್ಷಕರು ಮತ್ತು ಪಾಲಕರು ಶಾಲೆಯೊಳಗೆ ನುಗ್ಗಿ ಮಕ್ಕಳನ್ನು ಬಿಡಿಸಿ ತರಗತಿಗೆ ಕಳಿಸಿದ್ದಾರೆ.

೨೦೧೯, ೨೦೨೦ ರಿಂದಲೂ ನಡೆಯುತ್ತಿರುವ ಆರ್ಥಿಕ ಅವ್ಯಹಾರದ ಬಗ್ಗೆ ಪೋಷಕರ ಗಮನಕ್ಕೆ ಬಂದಿದ್ದು ಪ್ರಶ್ನಿಸಿದಾಗ ಶಾಲೆಯ ಮ್ಯಾನೆಜ್‌ಮೆಂಟ್‌ ನವರಿಂದ ಇಲ್ಲಿಯತನಕ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಮತ್ತು ಅಲ್ಲಿಂದ ಇಲ್ಲಿಯತನಕವೂ ಮಕ್ಕಳಿಗೆ ತರಗತಿಯಲ್ಲಿ ಮತ್ತು ಪೋಷಕರಿಗೆ ಮಾನಸಿಕ ಕಿರುಕುಳವನ್ನು ಅವ್ಯಾಹತವಾಗಿ ನೀಡುತ್ತಲೇ ಬಂದಿದ್ದಾರೆ.

BEO ಯಲಹಂಕ ಅವರಲ್ಲಿ ಮುಂಜಾಗ್ರತವಾಗಿ ಪಾಲಕರು ೧೭ ಮೇ ೨೪ ರಂದು ದೂರನ್ನು ಸಲ್ಲಿಸಿದ್ದರು. ಇಂದು BEO ಅವರಿಗೆ ಕರೆ ಮಾಡಿದಾಗ ನಾನೇನೂ ಮಾಡಕಾಗಲ್ಲ ಅಂದಿದ್ದು ಮತ್ತು ಮಕ್ಕಳ ಹಕ್ಕು ಸಂರಕ್ಷಣಾ ಆಯೋಗಕ್ಕೆ ೨೭/೫ /೨೪ ರಂದು ಭೇಟಿ ನೀಡಿದ್ದು ಇಲ್ಲಿಯತನಕದ ಕಿರುಕುಳದ ಬಗ್ಗೆ ದೂರು ನೀಡಲಾಗಿತ್ತು. ಆದರೂ ಸಹಿತ ಶಾಲೆಯ ಮ್ಯಾನೆಜ್‌ಮೆಂಟ್‌ ನವರಾದ ಕಾರ್ಯದರ್ಶಿ ಗೋಪಾಲ್ ಶಬರಾಯ, ಜಂಟಿ ಕಾರ್ಯದರ್ಶಿ ಕೃಷ್ಣ ರವರು ದೂರುಗಳನ್ನು ನಿರ್ಲಕ್ಷಿಸಿ  ಮಾಧ್ಯಮದವರು, ಆರಕ್ಷಕರು ಮತ್ತು ಪಾಲಕರ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿರುವುದು ಸಾಕ್ಷಿ ಸಮೇತ ಸಾಬಿತಾಗಿದೆ. ಸರ್ಕಾರಿ ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳು ಇವರೆಲ್ಲರೂ ಸಹ ಈ ಪ್ರಕರಣದಲ್ಲಿ ಶಾಮಿಲಾಗಿದ್ದು ಮಕ್ಕಳಿಗೆ ರಕ್ಷಣೆ ಕೊಡುವಲ್ಲಿ ವಿಫಲರಾಗಿದ್ದಾರೆ.

ಮ್ಯಾನೆಜ್‌ಮೆಂಟ್‌ ನವರ ಇಲ್ಲಿಯತನಕದ ದುರ್ನಡತೆಯಿಂದ ಬೇಸತ್ತ ಪೋಷಕರು ದೂರು ಸಲ್ಲಿಸಲು ಮುಂದಾಗಿದ್ದು ಮಕ್ಕಳ ಹಿತದೃಷ್ಟಿಯಿಂದ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕಿರುಕುಳ ನೀಡಬಾರದೆಂಬ ದೃಷ್ಟಿಯಿಂದ ಇಂದು ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದರು.

ನೊಂದ ಪಾಲಕರ ಪರವಾಗಿ
ಎಂ.ಜೆ ಸತೀಶ್


  • ಆಕೃತಿಕನ್ನಡ ನ್ಯೂಸ್

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading