ಪ್ರೇಮದಲ್ಲಿ ಯಾವ ಗುಣಾಕಾರ, ಭಾಗಾಕಾರ ಅದಕಿಲ್ಲ ಪ್ರೇಮ ಪ್ರೇಮವಷ್ಟೇ…ಕವಿಯತ್ರಿ ವೀಣಾ ವೈಷ್ಣವಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನನ್ನೆಷ್ಟು ಪ್ರೀತಿಸುವಿರಿ..
ಅರಳುಗಣ್ಣಿನಲಿ ತುಂಟತನ
ಹೊತ್ತು ಕೇಳಿದಳು.
ಹೆಣ್ಣು ಜೀವವೇ ಹೀಗೆನೋ
ಸರಳವಾಗಿರುವೆವು ಅನ್ನುತಲೇ
ಸಂಕೀರ್ಣತೆಗೆ ದೂಡುವರು.
ಹುಚ್ಚಿ,
ಪ್ರೀತಿ ಅಳೆಯಲು ಯಾವ
ಮಾಪಕವುಂಟು
ಹೆಚ್ಚು ಅತಿ ಹೆಚ್ಚು
ಕಡಿಮೆ ಅತಿ ಕಡಿಮೆ
ಪ್ರೇಮ ಪ್ರೇಮವಷ್ಟೇ..
ನೀನಷ್ಟು ಕೊಡು
ನಾನೀಷ್ಟು ಕೊಡುವೆ ಎನ್ನುವುದಲ್ಲ
ಪ್ರೇಮ ಲೆಕ್ಕಚಾರದ ಮಾತಲ್ಲ
ಯಾವ ಗುಣಾಕಾರ, ಭಾಗಾಕಾರ ಅದಕಿಲ್ಲ
ಪ್ರೇಮ ಪ್ರೇಮವಷ್ಟೇ…
ಜೀವದ ಒಡತಿ ನೀನು
ನಿನ್ನ ವಿನಃ ಶೂನ್ಯ ನಾನು
ಎಷ್ಟೇಂದು ಕೆಳದಿರು ನನ್ನ
ನಿನೀಲ್ಲದೆ ನಾನಿಲ್ಲಾ
ನಿನ್ನ ಮರೆತು ಬೇರೆ ಬದುಕಿಲ್ಲ
- ವೀಣಾ ವೈಷ್ಣವಿ
