ಕವಿಯತ್ರಿ ಪದ್ಮಶ್ರೀ ಗೋವಿಂದರಾಜ್ ಅವರ ಲೇಖನಿಯಲ್ಲಿ ಮೂಡಿ ಬಂದ ‘ಕಾಮುಕರು ರಾಕ್ಷಸರೆ ಕಣೇ ಹೆಣ್ಣೇ’ … ಕವನ ಹೃದಯ ಸ್ಪರ್ಶಿಸುತ್ತದೆ, ಮುಂದೆ ಓದಿ…
ಕಾಮುಕರು ರಾಕ್ಷಸರೆ ಕಣೇ ಹೆಣ್ಣೇ…
ಅವರಿಗೆ ಸತ್ತ ಹೆಣ್ಣಿನ
ಚರ್ಮ ಸ್ಪರ್ಶಿಸಿದರು ನರ ಏಳುವುದು..
ನೀ ಹೆಣ್ಣಾಗಿ ಹುಟ್ಟಿದ್ದು ತಪ್ಪಲ್ಲ
ಹೆಣ್ತನ ಮೈ ತುಂಬಿ ಸಹಜ
ಸೆಳೆತದ ತೆಕ್ಕೆಗೆ ಅಮರುಕೊಂಡಿದ್ದು ಅಪರಾಧವಲ್ಲ….
ಅಮಲೇರಿದ ರಕ್ಕಸರು ಬೀಡಾಡಿ ನಾಯಿಗಳಂತೆ
ಅಲ್ಲಿಲ್ಲಿ ಬೆದೆ ಬಂದು
ಕುಯ್ಯ್ಗುಟ್ಟುತ.
ಹಳಸನ್ನವ ನೆಕ್ಕಲು ಹೊಂಚು ಹಾಕುವಾಗ
ನೀ ಬೋರಿ ಭೋಜನಂದಂತೆ
ಕತ್ತಲ ಪೊದೆಯೊಳಗೆ ಸಿಗಬಾರದಿತ್ತು ಕಣೇ..
ಸ್ವೇಚ್ಛೆ…
ಸ್ವಾತಂತ್ರ
ಸೂರ್ಯ ನೆತ್ತಿಗೇರಿ ಮುಳುಗುವ ಮುಂಚಿನ ಭಾಷಣಕಷ್ಟೆ ಚೆಂದ ಇಲ್ಲಿ…
ನಂಬದಿರು
ತೆಕ್ಕೆಯ ಕೈಗಳ ಸ್ಪರ್ಶ ಸುಖವ…
ನೀ ನಾಯಿ ಮುಟ್ಟಿದ ಮಡಕೆ ಎನ್ನುವ ಅವ ಮತ್ತೆ
ಬರಲಾರ ಕಣೇ
- ಪದ್ಮಶ್ರೀ ಗೋವಿಂದರಾಜ್ (ಕವಿಯತ್ರಿ, ಲೇಖಕಿ)
