‘ಶಬರಿಮಲೈ ಹಲ್ವಾ’ ಹಿಂದಿನ ಕತೆ

ಅಯ್ಯಪ್ಪಸ್ವಾಮಿ ದರ್ಶನದ ನಂತರ ಹಿಂದಿರುಗುವ ಮಾಲಾಧಾರಿಗಳು ಕೇರಳ ಹಲ್ವಾ ತಂದೇ ತರುತ್ತಾರೆ. ಕೇರಳದ ಕೆಂಪು ಹಲ್ವಾ ಪ್ರತಿದಿನ ಶಬರಿಮಲೈಗೆ ಬರುವ ಭಕ್ತಾದಿಗಳ ಸಂಖ್ಯೆ 90 ಸಾವಿರ. ಪ್ರತಿನಿತ್ಯ ಕೇರಳದಲ್ಲಿ ಶಬರಿಮಲೈ ಭಕ್ತಾದಿಗಳಿಂದ 9 ಕೋಟಿಗೂ ಮೀರಿದ ಹಲ್ವಾ ಖರೀದಿಯಾಗುತ್ತದೆ, ಈ ವಿಶೇಷ ಹಲ್ವದ ಕುರಿತು ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್ ಅವರು ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಒಬ್ಬ ಶಬರಿಮಲೈ ಭಕ್ತಾದಿಗಳು ಕನಿಷ್ಟ 10 ಕಿಲೋ ಹಲ್ವಾ ಖರೀದಿಸಿದರೂ ಪ್ರತಿವಷ೯ ಇಲ್ಲಿಗೆ ಯಾತ್ರೆಗೆ ಬರುವವರ ಸಂಖ್ಯೆ ಒಂದರಿಂದ ಒಂದೂವರೆ ಕೋಟಿ ಭಕ್ತರು. ಬಹುತೇಕ ಭಕ್ತರು 20 ರಿಂದ 30 ಕಿಲೋ ಮತ್ತು ಕೆಲವರು 100 ಕಿಲೋ ತನಕ ಕೇರಳ ಹಲ್ವಾ ಖರೀದಿಸುತ್ತಾರೆ.

50 ಸೀಟಿನ ಶಬರಿಮಲೈ ಭಕ್ತಾದಿಗಳ ಬಸ್ ಡ್ರೈವರ್ ಒಬ್ಬರು ಹೇಳಿದ್ದು ಪ್ರತಿ ಶಬರಿಮಲೈಯಾತ್ರೆ ಮುಗಿಸಿ ಬರುವಾಗ ಅವರ ಬಸ್ಸಿನಲ್ಲಿ ಎಲ್ಲಾ ಭಕ್ತಾದಿಗಳಿಂದ ಸೇರಿ ಹತ್ತಿರ 2 ಟನ್ ತೂಕದಷ್ಟು ಕೇರಳ ಹಲ್ವಾ ಬರುತ್ತದೆ ಅನ್ನುತ್ತಾರೆ. ಅದೂ ಡಿಸೆಂಬರ್ ನಿಂದ ಜನವರಿ 15 ರವರೆಗೆ ಅಂದರೆ ಒಂದೂವರೆ ತಿಂಗಳಲ್ಲಿ ಇಲ್ಲಿ ಮಾರಾಟ ಆಗುವ ಹಲ್ವಾ ಕನಿಷ್ಠ 150 ಸಾವಿರ ಟನ್.

ಫೋಟೋ ಕೃಪೆ : ಅಂತರ್ಜಾಲ

ಅಂದರೆ 15 ಸಾವಿರ ಲಾರಿ ಲೋಡಿನಷ್ಟು ಹಲ್ವಾ ತಯಾರಿ ಮತ್ತು ಮಾರಾಟ ಆಗುತ್ತದೆ. ಶಬರಿಮಲೈ ಯಾತ್ರಿಗಳಿಗೆ. ಒಂದು ಅಂದಾಜಿನಂತೆ ಇದರ ಒಟ್ಟು ವಹಿವಾಟು 150 ಕೋಟಿಗೂ ಮಿಕ್ಕುತ್ತದೆ. ಇದು ಕೇವಲ 45 ದಿನದಲ್ಲಿ ಶಬರಿಮಲೆ ಭಕ್ತಾದಿ ಖರೀದಿಸುವ ಹಲ್ವಾದ ಪ್ರಮಾಣ. ಕೇರಳದ ಹಲ್ವಾ ಉತ್ಪಾದಕರ ಮತ್ತು ಮಾರಾಟಗಾರರ ವ್ಯಾಪಾರದ ಅಗಾದ ಗಾತ್ರ ಇವರಿಂದ ಅರಿವಾಗುತ್ತದೆ.

ಇಲ್ಲಿ ಹಲ್ವಾ ವ್ಯಾಪಾರದ ಸಿಂಹಪಾಲು ತ್ರಿಶೂರ್ ನ ಮರಿಯಮ್ಮನ ಹಲ್ವಾದ್ದು. ಸ್ಥಳಿಯ ಹಲ್ವಾ ತಯಾರಕರು ಶಬರಿಮಲೈ ಯಾತ್ರಾರ್ತಿಗಳ ವಾಹನ ಚಾಲಕರಿಗೆ ಉಚಿತವಾಗಿ ಕಾಂಪ್ಲಿಮೆಂಟರಿ 10 ಕೇಜಿ ಹಲ್ವಾ ಮತ್ತು ಬ್ಯಾಗ್ ಮತ್ತಿತರ ಉಡುಗೊರೆ ನೀಡುತ್ತಾರೆ ರೀತಿ ತಮ್ಮ ಹಲ್ವಾ ಉದ್ಯಮಕ್ಕೆ ಉತ್ತೇಜನ ನೀಡುತ್ತಿದ್ದಾರೆ.

ಕೇರಳ ಹಲ್ವಾ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿದೆ ಆದ್ದರಿಂದ ಕೇರಳದ ಹಲ್ವಾ ಉದ್ಯಮ ಕೂಡ ದೊಡ್ಡದಾಗುತ್ತಿದೆ. ಶಬರಿಮಲೆ ಹೋದವರು ಹಲ್ವಾ ತಂದೇ ತರುತ್ತಾರೆ ಮತ್ತು ತರಲೇ ಬೇಕೆಂಬ ಪದ್ಧತಿ ಕಡ್ಡಾಯವಾಗಿ ಆಚರಿಸುವಂತಾಗಿದೆ ಮತ್ತು ಪಾಲಿಸುವಂತಾಗಿದೆ. ಇಲ್ಲಿ ಹಲ್ವಾ ವ್ಯಾಪಾರದ ಸಿಂಹಪಾಲು #ತ್ರಿಶೂರ್ ನ #ಮರಿಯಮ್ಮನ_ಹಲ್ವಾ ಸಂಸ್ಥೆಯಿದ್ದಾಗಿದೆ.

ಶಬರಿಮಲೈ ಯಾತ್ರೆ ಹೋಗುವುದಾಗಿ ತಿಳಿಸಲು ಬಂದಿದ್ದವರ ಹತ್ತಿರ ಒ0ದು ಯಾತ್ರೆಗೆ ಬರುವ ಖರ್ಚು ವೆಚ್ಚಗಳ ಬಡ್ಜೆಟ್ ಬಗ್ಗೆ ಮಾತಾಡುವಾಗ ಅವರು ಹಲ್ವಾ ಖರೀದಿಗೆ ಹತ್ತು ಸಾವಿರ ಬೇಕು ಅಂದಿದ್ದರು. ಈ ರೀತಿ ಹಲ್ವಾ ವಿಚಾರ ಪ್ರಸ್ತಾಪವಾಗದೇ ಇರುವುದಿಲ್ಲ. ಕನಿಷ್ಟ 10 ಕೆ.ಜಿ.ಯಿಂದ 100 ಕಿಲೋ ತನಕ ಹಲ್ವಾ ಶಬರಿಮಲೆಗೆ ಹೋದ ಭಕ್ತಾದಿಗಳು ತಂದೇ ತರುತ್ತಾರೆ. ಭಕ್ತಾದಿಗಳಿಂದ ಬಂದ ನಂತರ ಹಲ್ವಾವನ್ನ ಅವರ ಕುಟುಂಬಿಕರುಗಳಿಗೆ, ಗೆಳೆಯರಿಗೆ ಸಿಹಿ ರೂಪದಲ್ಲಿ,  ಪ್ರಸಾದ ರೂಪದಲ್ಲಿ ಹ೦ಚುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ

ಶಬರಿಮಲೆಗೆ ಹೋಗುವ ಭಕ್ತಾದಿಗಳು ಕೇರಳದ ಹಲ್ವಾ ತರದೇ ಇರುವುದಿಲ್ಲ. ಇದು ಶಬರಿಮಲೆಯಾತ್ರೆಯ ಭಾಗವಾಗಿ ಆಚರಣೆಯಲ್ಲಿದೆ. ಕೇರಳದಲ್ಲಿ ಬಾಳೆ ಹಣ್ಣಿನ ಹಲ್ವಾ,ಗೋದಿ ಹಲ್ವಾ, ಕೇರಳ ರೆಡ್ ಹಲ್ವಾ, ಕ್ಯಾಲಿಕಟ್ ಬ್ಲಾಕ್ ಹಲ್ವಾ, ಮೈದಾ ಹಲ್ವಾ, ಕೋಜಿಕಾಡ್ ಹಲ್ವಾ ವಿದೇಶದಲ್ಲೂ ಪ್ರಸಿದ್ದಿ ಪಡೆದಿದೆ. ಕ್ಯಾಲಿಕಟ್ಟಿನ ಬ್ಲಾಕ್ ಹಲ್ವಾ ಕೇರಳ ಹಲ್ವಾದಲ್ಲೇ ಅತ್ಯುತ್ತಮ ಹಲ್ವಾ. ಇದರ ಬೆಲೆ ಸ್ವಲ್ಪ ಜಾಸ್ತಿ ಇದನ್ನು ತೆಂಗಿನ ಹಾಲು, ಅಕ್ಕಿ ಮತ್ತು ಬೆಲ್ಲದಿಂದ ತಯಾರಿಸುತ್ತಾರೆ. ಕೋಜಿಕಾಡ್ ಹಲ್ವಾ ಶುದ್ದ ತೆಂಗಿನ ಎಣ್ಣೆಯಿಂದ ತಯಾರಿಸುತ್ತಾರೆ.
ಹಲ್ವಾದ ಮೂಲ ಪರ್ಷಿಯಾ ದೇಶದ್ದು, 7 ನೇ ಶತಮಾನದಲ್ಲಿ ಬಳಸುತ್ತಿದ್ದ ಮಾಹಿತಿ ಇದೆ. 13 ನೇ ಸೆಂಚುರಿಯಲ್ಲಿ ಕಿತಬ್-ಅಲ್-ತಬಿಕಾ ಪುಸ್ತಕದಲ್ಲಿ ಹಲ್ವಾ ರೆಸಿಪಿ ದಾಖಲಾಗಿದೆ.
ಹಲ್ವಾ ಭಾರತಕ್ಕೆ ಪರ್ಷಿಯಾದಿಂದ ಅರಬ್ ವ್ಯಾಪಾರಿಗಳಿಂದ ಪರಿಚಯವಾಗಿ ಭಾರತದ ಲಖನೌ ಹಲ್ವಾಕ್ಕೆ ಪ್ರಸಿದ್ಧಿ ಆಗಿದೆ ಅದೇ ರೀತಿ ದಕ್ಷಿಣ ಭಾರತದ ತಮಿಳುನಾಡಿನ ತಿರುನಲ್ವೇಲಿಯ ಶುದ್ದ ತುಪ್ಪದ ಹಲ್ವಾ ಕೂಡ ವಿಶ್ವವಿಖ್ಯಾತಿ ಪಡೆದಿದೆ.

ತಿರುನಲ್ವೇಲಿ ಮತ್ತು ಶಬರಿಮಲೆಯ ಅಂತರ 215 ಕಿ.ಮಿ. ಈ ಕಾರಣದಿಂದಲೇ ಶಬರಿಮಲೈನಲ್ಲಿ ಹಲ್ವಾ ವ್ಯಾಪಾರ ಉದ್ಯಮ ಈ ಮಟ್ಟಕ್ಕೆ ಬೆಳೆಯಲು ಕಾರಣ ಅನ್ನುತ್ತಾರೆ.
ಶಬರಿಮಲೈ ಯಾತ್ರಾರ್ಥಿಗಳು ಕನಿಷ್ಟ 10 ಕಿಲೋ ಹಲ್ವಾ ಖರೀದಿಸಿದರೂ ಪ್ರತಿ ವಷ೯ ಇಲ್ಲಿಗೆ ಯಾತ್ರೆಗೆ ಬರುವವರ ಸಂಖ್ಯೆ ಒಂದರಿಂದ ಒಂದೂವರೆ ಕೋಟಿ ಭಕ್ತರು ಅದೂ ಡಿಸೆಂಬರ್ ನಿಂದ ಜನವರಿ 15ರ ವರೆಗೆ ಅಂದರೆ ಒಂದೂವರೆ ತಿಂಗಳಲ್ಲಿ ಇಲ್ಲಿ ಮಾರಾಟ ಆಗುವ ಹಲ್ವಾ ಕನಿಷ್ಟ 150 ಸಾವಿರ ಟನ್! ಅಂದರೆ 15 ಸಾವಿರ ಲಾರಿ ಲೋಡಿನಷ್ಟು! ಹಲ್ವಾ ತಯಾರಿ ಮತ್ತು ಮಾರಾಟ ಆಗುತ್ತದೆ ಇದರ ಒಟ್ಟು ವಹಿವಾಟು 150 ಕೋಟಿಗೂ ಮಿಕ್ಕುತ್ತದೆ. ಇದು ಕೇವಲ 45 ದಿನದಲ್ಲಿ ಅಂದರೆ ಶಬರಿಮಲೆ ಹಲ್ವಾದ ಕೇರಳದ ಹಲ್ವಾ ಉತ್ಪಾದಕರ ಮತ್ತು ಮಾರಾಟಗಾರರ ವ್ಯಾಪಾರದ ಗಾತ್ರ ಅರಿವಾಗುತ್ತದೆ.

ಇಲ್ಲಿ ಹಲ್ವಾ ವ್ಯಾಪಾರದ ಸಿಂಹಪಾಲು ತ್ರಿಶೂರ್ ನ ಮರಿಯಮ್ಮನ ಹಲ್ವಾದ್ದು. ಸ್ಥಳಿಯ ಹಲ್ವಾ ತಯಾರಕರು ವಾಹನ ಚಾಲಕರಿಗೆ ಉಚಿತವಾಗಿ 10 ಕೆಜಿ ಹಲ್ವಾ ಮತ್ತು ಬ್ಯಾಗ್ ಮತ್ತಿತರ ಉಡುಗೊರೆ ನೀಡಿ ತಮ್ಮ ಹಲ್ವಾ ಮಾರುಕಟ್ಟೆ ವಿಸ್ತರಿಸುತ್ತಿದ್ದಾರೆ ಈ ಮೂಲಕ ಕೇರಳದ ಹಲ್ವಾ ತಯಾರಾಕರು ತಮ್ಮ ಹಲ್ವಾ ಉದ್ಯಮಕ್ಕೆ ಉತ್ತೇಜನ ನೀಡಿದ್ದಾರೆ. ಶಬರಿಮಲೆ ಹೋದವರು ಹಲ್ವಾ ತಂದೇ ತರುತ್ತಾರೆ ಮತ್ತು ತರಲೇ ಬೇಕೆಂಬ ಪದ್ಧತಿ ಕಡ್ಡಾಯವಾಗಿ ಪಾಲಿಸುವಂತಾಗಿದೆ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading