ಅರಬ್ ದೇಶದ ಹಣ್ಣಾದ ಖರ್ಜೂರ ದೇಶೀಯ ನೆಲೆದಲ್ಲೂ ತನ್ನ ಕಂಪನ್ನು ಬೀರಿದ ಹಣ್ಣು. ಬಿಸಿಲ ಬೇಗೆಗೆ ಬೆಂದ ಮಾನವನಿಗೆ ಆರೋಗ್ಯಕರ ಅಂಶವನ್ನು ನೀಡುವ ಖರ್ಜೂರ ಹಲವಾರು ರೋಗಗಳ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ. ಶಿಕ್ಷಕಿ, ಲೇಖಕಿ ಸೌಮ್ಯಾ ಸನತ್ ಅವರು ಖರ್ಜೂರದ ಮಹತ್ವದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಡ್ರೈ ಪ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ, ಆರೋಗ್ಯದ ಗಣಿ ಎನ್ನುವ ಗಟ್ಟಿಯಾದ ಒಣ ಖರ್ಜೂರದ ಹಣ್ಣನ್ನು ಪ್ರತಿನಿತ್ಯ ಸೇವಿಸಿದರೆ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ. ಅದರಲ್ಲೂ ಒಣ ಖರ್ಜೂರವನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಸೇವಿಸಿದರೆ ದೇಹ ಗಟ್ಟಿಯಾಗಿರುತ್ತದೆ.

ಫೋಟೋ ಕೃಪೆ :google
ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಖರ್ಜೂರ ಸೇವಿಸುವುದರಿಂದಾಗುವ ದೇಹಕ್ಕಾಗುವ ಅನುಕೂಲಗಳು
1. ಖರ್ಜೂರ ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಇವುಗಳಲ್ಲಿ ವಿಟಮಿನ್ ಮಿನರಲ್ ಅಧಿಕವಾಗಿದೆ. ಪ್ರೋಟೀನ್, ಜೀರ್ಣಕ್ರಿಯೆಗೆ ಸಹಾಯಕವಾಗುವ ಫೈಬರ್ ಮತ್ತು ವಿಟಮಿನ್ ಬಿ1, ಬಿ2, ಬಿ3 ಮತ್ತು ಬಿ5 ಅಲ್ಲದೆ ವಿಟಮಿನ್ ಎ1 ಮತ್ತು ಸಿ ಯಿಂದ ಸಮೃದ್ಧಗೊಂಡಿದೆ.
2. ಖರ್ಜೂರದಲ್ಲಿರುವ ಕಬ್ಬಿನಾಂಶ ರಕ್ತದ ಹೀನ ಸಮಸ್ಯೆಯನ್ನು ದೂರಮಾಡುತ್ತದೆ. ಪ್ರತಿದಿನ ಖರ್ಜುರ ತಿನ್ನುವುದರಿಂದ ರಕ್ತ ಹೀನತೆಯನ್ನು ಕಡಿಮೆ ಮಾಡುತ್ತದೆ.
3.ಖರ್ಜೂರದಲ್ಲಿರುವ ವಿಟಮಿನ್ ಬಿ ಕೂದಲಿಗೆ ಒಳ್ಳೆಯದಾಗಿದ್ದು ನಿಯಮಿತವಾಗಿ ಖರ್ಜೂರ
ಸೇವನೆಯಿಂದ ಕೂದಲು ಉದುರುವುದು ಕಡಿಮೆಯಾಗುವುದು .
4. ಖರ್ಜೂರದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಿರುವುದರಿಂದ ಖರ್ಜುರ ತಿಂದ ತಕ್ಷಣ ದೇಹಕ್ಕೆ ಶಕ್ತಿ ಒದಗುತ್ತದೆ. ದಿನಕ್ಕೆಮೂರು – ನಾಲ್ಕು ಖರ್ಜುರ ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ ಸಿಗುತ್ತದೆ.
5. ಕೀಲು ನೋವು ಮತ್ತು ಉರಿಯೂತಕ್ಕೆ ಮೂಲ ಕಾರಣವಾದ ವಾತ ದೋಷವನ್ನು ಸಮತೋಲನಗೊಳಿಸಲು ಖರ್ಜೂರ ಸಹಾಯ ಮಾಡುತ್ತದೆ. ಆದ್ದರಿಂದ ಕೀಲು ನೋವು ಮತ್ತು ಸಂಧಿವಾತದಿಂದ ಬಳಲುತ್ತಿರುವ ಜನರು ಈ ಹಣ್ಣುಗಳನ್ನು ಸೇವಿಸುವುದರಿಂದ ಪ್ರಯೋಜನ ಪಡೆಯ ಬಹುದು.
6. ಒಣ ಖರ್ಜೂರ ಇತರ ಆಹಾರಗಳಿಗಿಂತ ಹೆಚ್ಚಿನ ಫೈಬರ್ ಅನ್ನು ಹೊಂದಿದೆ.ಜೀರ್ಣಾಂಗವ್ಯೂಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಈ ಫೈಬರ್ ಬಹಳ ಅವಶ್ಯಕ. ಆಗಾಗ್ಗೆ ಮಲಬದ್ಧತೆ ಸಮಸ್ಯೆಗಳಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಒಣ ಖರ್ಜೂರವನ್ನು ನೀರಿನಲ್ಲಿ ನೆನೆಸಿ ಮತ್ತು ಮರುದಿನ ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆಗೆ ತ್ವರಿತ ಪರಿಹಾರವನ್ನು ಸಿಗುತ್ತದೆ.
. ಅಲ್ಲದೇ ಇದು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಬರದಂತೆ ತಡೆಯುತ್ತದೆ.
7. ಒಣ ಖರ್ಜೂರವನ್ನು ಪ್ರತಿ ರಾತ್ರಿ ನೆನೆಸಿ ಮರುದಿನ ಬೆಳಿಗ್ಗೆ ಸೇವಿಸುವುದರಿಂದ ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತಿಕೆ ಸುಧಾರಿಸುತ್ತದೆ. ಇದು ಆಲ್ಝೈಮರ್ನಂತಹ ವಯಸ್ಸಿಗೆ ಸಂಬಂಧಿಸಿದ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
8. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೂಳೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ ಪೋಷಕಾಂಶವಾಗಿದೆ. ಒಣ ಖರ್ಜೂರದಲ್ಲಿ ಈ ಕ್ಯಾಲ್ಸಿಯಂ ಹೇರಳವಾಗಿದೆ. ಮತ್ತು ಇದನ್ನು ನೆನೆಸಿ ಸೇವಿಸಿದಾಗ, ಕ್ಯಾಲ್ಸಿಯಂ ದೇಹಕ್ಕೆ ಸುಲಭವಾಗಿ ಸಿಗುತ್ತದೆ. ಆದ್ದರಿಂದ ಮೂಳೆ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು, ಪ್ರತಿದಿನ 3 ನೆನೆಸಿದ ಒಣ ಖರ್ಜೂರವನ್ನು ಸೇವನೆ ಉಪಯೋಗಕಾರಿ.
9.ಒಣ ಖರ್ಜೂರ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಒಣ ಖರ್ಜೂರದಲ್ಲಿ ಕೊಬ್ಬು ಕಡಿಮೆ, ಸೋಡಿಯಂ ಕಡಿಮೆ, ಪೊಟ್ಯಾಸಿಯಮ್ ಅಧಿಕ ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲ. ಇವೆಲ್ಲವೂ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
10. ಒಣ ಖರ್ಜೂರದಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ನಂತಹ ನೈಸರ್ಗಿಕ ಸಕ್ಕರೆಗಳು ಸಮೃದ್ಧವಾಗಿವೆ. ಈ ಸಕ್ಕರೆಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ನೀವು ದಿನವಿಡೀ ಶಕ್ತಿಯುತವಾಗಿರಲು ಬಯಸಿದರೆ, ಬೆಳಿಗ್ಗೆ ನೀರಿನಲ್ಲಿ ನೆನೆಸಿದ ಒಣ ಖರ್ಜೂರವನ್ನು ಸೇವಿಸಿ.
11. ಒಣ ಖರ್ಜೂರದಲ್ಲಿ ಇರುವಂತಹ ವಿಟಮಿನ್ ಬಿ5 ಆರೋಗ್ಯಕಾರಿ ತಲೆಬುರುಡೆಯನ್ನು ಕಾಪಾಡುವುದು. ಇದರ ಪರಿಣಾಮವಾಗಿ ಕೂದಲಿನ ಬುಡಗಳು ಬಲಗೊಳ್ಳುವುದು. ಒಣ ಖರ್ಜೂರವನ್ನು ನೀವು ಪ್ರತಿನಿತ್ಯ ಸೇವನೆ ಮಾಡಿದರೆ ಅದರಿಂದ ಒಡೆದ ತುದಿಗಳು, ಕೂದಲು ಒಣಗುವ ಸಮಸ್ಯೆ ನಿವಾರಣೆ ಮಾಡಬಹುದು.
12. ಈ ಹಣ್ಣುಗಳಲ್ಲಿ ಹೆಚ್ಚಿನ ಕ್ಯಾಲೊರಿಗಳಿರುವುದರಿಂದ ಅವು ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ದೇಹದ ಗಾತ್ರ ಹೆಚ್ಚಿಸಲು ದಿನಕ್ಕೆ 10 ರಿಂದ 15 ಖರ್ಜೂರಗಳನ್ನು ಸೇವಿಸಿ ನಂತರ ಒಂದು ಲೋಟ ಹಾಲು ಕುಡಿಯಿರಿ .
13. ಈ ಹಣ್ಣುಗಳನ್ನು ಅಸಿಡಿಟಿ ಹಾಗು ಗ್ಯಾಸ್ ತೊಂದರೆಗಳಲ್ಲಿ ಪರಿಣಾಮಕ್ರಿ ಔಷಧವಾಗಿ ಬಳಸಬಹುದು .ಇದಕ್ಕಾಗಿ 2 ತಾಜಾ ಖರ್ಜೂರಗಳನ್ನು ಸಣ್ಣಗೆ ಕತ್ತರಿಸಿ ಇವುಗಳನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದಾಗ ಇದು ಎದೆಯುರಿ ಶಮನಗೊಳಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.
ಖರ್ಜೂರವನ್ನು ಗರ್ಭವತಿಯರು ಹೇಗೆ ಬಳಸಬೇಕು?
14.ಪ್ರತಿದಿನ ಖರ್ಜೂರ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಪ್ರಯೋಜನಕಾರಿ ಆಗಿದೆ.
15. ಈ ಬದಲಾದ ಜೀವನಶೈಲಿಯಲ್ಲಿ ಕೂದಲಿನ ಹಲವು ಸಮಸ್ಯೆಗಳು ಕಾಡಬಹುದು. ಆದರೆ, ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರಿಂದ ಸುಂದರ ಕೇಶರಾಶಿಯನ್ನು ಹೊಂದಬಹುದು.

ಫೋಟೋ ಕೃಪೆ :google
ಖರ್ಜೂರವನ್ನು ಗರ್ಭವತಿಯರು ಹೇಗೆ ಬಳಸಬೇಕು ?
ಖರ್ಜೂರಗಳು ಹೆಚ್ಚು ಪೌಷ್ಟಿಕವಾಗಿದ್ದು, ಗರ್ಭಾವಸ್ಥೆಯಲ್ಲಿ ಇದು ಉತ್ತಮ ಪ್ರಮಾಣದ ಪೋಷಕಾಂಶಗಳನ್ನು ಪೂರೈಸುತ್ತದೆ. ಕೇಸರಿ, ತುಪ್ಪ, ಏಲಕ್ಕಿ ಮುಂತಾದ ಇತರ ಪದಾರ್ಥಗಳನ್ನು ಸೇರಿಸುವ ಮೂಲಕ ಖರ್ಜೂರದ ಸತ್ವಗಳನ್ನು ಇನ್ನೂ ಬಲಪಡಿಸಿ ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು. ಇದಕ್ಕಾಗಿ ಪಾಕವಿಧಾನ ಇಲ್ಲಿದೆ. ಇದನ್ನು ಆಯುರ್ವೇದ ವೈದ್ಯರು, ಗರ್ಭಿಣಿ ಮಹಿಳೆಯರಿಗೆ ಉಪಯೋಗಿಸುವಂತೆ ಸಲಹೆ ನೀಡುತ್ತಾರೆ.
ಸುಮಾರು 15 ತಾಜಾ ಖರ್ಜೂರಗಳನ್ನು ಸಣ್ಣಗೆ ಕತ್ತರಿಸಿ ಅದಕ್ಕೆ 10 ಟೀ ಚಮಚ ಶುದ್ಧ ತುಪ್ಪ ಬೆರೆಸಿ. ಒಂದು ಚಿಟಿಕೆ ಶುಂಠಿ ಪುಡಿ, ಏಲಕ್ಕಿ ಪುಡಿ ಮತ್ತು ಕೆಲವು ಎಳೆಗಳಷ್ಟು ಕೇಸರಿ (saffron) ಯನ್ನು ಸೇರಿಸಿ. ಇದನ್ನು ಗಾಳಿಯಾಡದಂತೆ ಗಾಜಿನ ಭರಣಿಯಲ್ಲಿ ತುಂಬಿಟ್ಟು . ಪ್ರತಿದಿನ ಇದನ್ನು 1 ಚಮಚದಷ್ಟು ಮುಂಜಾನೆ ಸೇವಿಸಬಹುದು. ತೂಕ ಹೆಚ್ಚಿಸಲು ಸಿದ್ಧರಿರುವ ಜನರು, ಗರ್ಭಿಣಿಯರು ಮತ್ತು ಕಡಿಮೆ ಶಕ್ತಿಯ ಮಟ್ಟವನ್ನು ಹೊಂದಿರುವ ಜನರು ಇದನ್ನು ಬಳಸಬಹುದು.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಮರೆಯದೆ ಪಡೆದುಕೊಳ್ಳಿ.
- ಸೌಮ್ಯಾ ಸನತ್
