ಶೇಕ್ಸ್ಪಿಯರ್ ನೆನಪಿಸುವ ಛಾಯಾಚಿತ್ರಗಳು – ಡಾ.ಸ್ವಾಮಿ ಎಚ್ ಆರ್

ಶೇಕ್ಸ್ಪಿಯರ್ ಹುಟ್ಟಿದ ಸ್ಥಳಕ್ಕೆ ಹಿರಿಯ ಸಾಹಿತಿಗಳು ಡಾ.ಸ್ವಾಮಿ ಎಚ್ ಆರ್ ಅವರು ಭೇಟಿ ಕೊಟ್ಟ ಕ್ಷಣದಲ್ಲಿ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಸುಂದರ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ,ಆ ಫೋಟೋವನ್ನು ತಪ್ಪದೆ ನೋಡಿ…

ಇಂಗ್ಲೆಂಡ್  ಗೆ ಹೊರಡುವ ಮುನ್ನ ಅಗ್ರಹಾರ ಅಣ್ಣನಿಗೆ ಪೋನ್ ಮಾಡಬೇಕು ಎನ್ನಿಸಿ ಕರೆ ಮಾಡಿದಾಗ, ಹೌದಾ… ಎಂದು ಖುಷಿ ಪಡುತ್ತಾ ಹೇಳಿ madum Tussaud’s museum , globe theater. national geographic store and office, lidian house ಮತ್ತು Shakespeare ಹುಟ್ಟಿದ ಸ್ಥಳ Stafford upon Avon ನ್ನು ಮರೆಯಬೇಡ ಎನ್ನುತ್ತಾ. ಎಲ್ಲಿಂದ ಬಸ್ ಹತ್ತಬೇಕು ಎಂದು ಹೇಳಿ, ಮೇಸೆಜ್ ಕೂಡ ಮಾಡಿ, ಅಲ್ಲಿ ಏನೂ ಕೊಂಡುಕೊಳ್ಳಬೇಡ ಎಲ್ಲಾ ಇಲ್ಲೇ ಸಿಗುತ್ತದೆ ಎಂದು ಎಚ್ಚರಿಸಿ, ಮುಂಚೆನೆ ಹೇಳಿದ್ದರೆ ಪಾರ್ಟಿ ಮಾಡಬಹುದಾಗಿತ್ತು ಎಂದು ಶುಭಹಾರೈಸಿದರು.

This slideshow requires JavaScript.

 

ಇಂಗ್ಲೆಂಡ್ ಗೆ ಬಂದಾಗ ತಮ್ಮ ಮಂಜು ,ರೈಲ್ವೆ ನೌಕರರು strike ಇರೋದ್ರಿಂದ ಲಂಡನ್ ಹೋಗೋದು ಕಷ್ಟ ಎಂದಾಗ  ನಾನು ಶೇಕ್ಸ್ಪಿಯರ್ ಬಗ್ಗೆ ಹೇಳಿದಾಗ ಗೂಗಲ್ ಸರ್ಚ್ ಮಾಡಿ 2 ಗಂಟೆ ಪ್ರಯಾಣ ಅಷ್ಟೇ ಹೊರಡೋಣ ಎಂದು ಹೊರಟೆವು. ದಾರಿ ಸಾಗುತ್ತಲೇ ನಾನು ಹುಟ್ಟಿದೂರಿನ ಹೈಸ್ಕೂಲ್ ದಿನಗಳಲ್ಲಿ ಗಣಿತ ಪಾಠ ಮಾಡುತ್ತಿದ್ದ T S ಮೇಷ್ಟ್ರು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ ಶೇಕ್ಸ್ಪಿಯರ್ ನ ಮ್ಯಾಕ್ ಬೆತ್, ಜೂಲಿಯಸ್ ಸೀಸರ್, ನಾಟಕಗಳ ಪಾತ್ರಗಳ ಹೆಸರುಗಳನ್ನು ಬೋರ್ಡ್ ಮೇಲೆ ಬರೆದು ಇಂಗ್ಲಿಷ್ ಗಂಧ ಗಾಳಿ ಗೊತ್ತಿಲ್ಲದ ನಮಗೆ ಕನ್ನಡದಲ್ಲಿ ಹೆಳಿದ್ದು ಮರೆಯುವುದುಂಟೆ?. ಶಾಲಾ ವಾರ್ಷಿಕೋತ್ಸಕ್ಕೆ ಆಡಿಸಿದ ನಾಟಕದಲ್ಲಿ ನನಗೆ ಒಂದು ಹೆಣ್ಣು ಪಾತ್ರ ಕೊಟ್ಟು ನಟಿಸಲು ಪ್ರೊತ್ಸಾಹಿಸಿದ್ದರು. ನಾಟಕ ಮುಗಿದು ಎಷ್ಟೋ ದಿನಗಳಾದರೂ ಹುಡುಗರು ರಸ್ತೆಲ್ಲಿ ಸರೋಜಾ.. ಎಂದು ರೇಗಿಸುತ್ತಿದ್ದರು.

ಗಣಿತ ತಲೆಗೆ ಹತ್ತದಿದ್ದಾಗ ಬೆನ್ನಜಿಗಟಿ ,ಲಂಗ ಉಟ್ಟುಕೊಂಡು ಕುಣಿಯೋಕೆ ಲಾಯಕ್ ಎಂದು ಹೇಳಿದ್ದ ಶಿವಲಿಂಗಯ್ಯ ಮೇಷ್ಟ್ರು ನೆನಪಾದದ್ದು ಶೇಕ್ಸ್ಪಿಯರ್ ಮನೆಗೆ ಸಾಗುವಾಗ… ಧನ್ಯವಾದಗಳು ಸರ್…. ಶೇಕ್ಸ್ಪಿಯರ್ ಹುಟ್ಟಿದ ಮನೆ, ಹುಟ್ಟಿದ ನಾಟಕಗಳು ,ಉತ್ತುಂಗಕ್ಕೇರಿದಾಗ ಪಡೆದ ಪ್ರಶಂಸೆಗಳ ಫಲಕಗಳು ಅವರ ವಂಶವೃಕ್ಷ… ಇಂದಿಗೂ ಜೀವಂತ…


  • ಕ್ಯಾಮೆರಾ ಹಿಂದಿನ ಕಣ್ಣು ಮತ್ತು ಪುಟ್ಟ ಬರಹ : ಡಾ.ಸ್ವಾಮಿ ಎಚ್ ಆರ್ (ಹಿರಿಯ ಸಾಹಿತಿಗಳು, ಲೇಖಕರು, ಬರಹಗಾರರು )

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW