ಮಹಿಳಾ ಗಗನ ಯಾತ್ರಿಗಳ ನೀಳ ಕೇಶದ ಬಗ್ಗೆ ಅಂತರಿಕ್ಷ ಯಾತ್ರಿಗಳಿಗೆ ಆಹಾರ, ಆಮ್ಲಜನಕ, ನಿದ್ದೆ, ವೇತನದ ಬಗ್ಗೆ ಮಾಹಿತಿಯನ್ನು ಉದ್ಯಮಿ ಅರುಣ್ ಪ್ರಸಾದ್ ಅವರು ಓದುಗರಿಗೆ ನೀಡಿದ್ದಾರೆ ತಪ್ಪದೆ ಮುಂದೆ ಓದಿ…
ಭಾರತೀಯ ಕಾಲಮಾನ ಮಂಗಳವಾರ ಬೆಳಿಗ್ಗೆ 8:15 ಕ್ಕೆ ಗಗನಯಾತ್ರಿಗಳನ್ನ ಕರೆಯುತ್ತಿರುವ ನೌಕೆಯ ಬಾಗಿಲುಗಳು ಮುಚ್ಚಲ್ಪಟ್ಟವು.
- ರಾತ್ರಿ 10 15 ಕ್ಕೆ ಭೂಮಿಗೆಯಾನ ನೌಕೆ ಚಲನೆ ಆರಂಭ.
- ರಾತ್ರಿ 10.30ಕ್ಕೆ ನೌಕೆ ಭೂಮಿ ಕಡೆ ಪ್ರಯಾಣ ಆರಂಭ .
- ಈ ಹಂತದ ನೇರಪ್ರಸಾರವನ್ನು ನಾಸಾ ಕೇವಲ ಧ್ವನಿ ಮಾಧ್ಯಮದ ಮೂಲಕ ನೀಡಲಿದೆ.
- ಬುಧವಾರ ನಸುಕಿನ 2.15 AM ಗೆ ಭೂಮಿಗೆ ಮರಳುವ ನೇರಪ್ರಸಾರ ನಾಸಾ ಮುಂದುವರೆಸಿತು.
- ನಸುಕಿನ 2.15 AM ಗೆ ಭೂಮಿಯ ವಾತಾವರಣದಲ್ಲಿ ವೇಗ ತಪ್ಪಿಸಲು ಇಂಧನ ದಹಿಕೆ ಆರಂಭವಾಗಲಿದೆ.
- 3.27AM ಗೆ ಭೂಮಿ ಮುಟ್ಟುವ ಕ್ಷಣಗಣನೆ ಆರಂಭವಾಗಲಿದೆ ಎಂದು ನಾಸಾ ಪ್ರಕಟಿಸಿದೆ. (ನಿಗದಿ ಮಾಡಿದ ಈ ಸಮಯ ಹವಾಮಾನ ಮತ್ತು ಸುರಕ್ಷತೆ ಮಾನದಂಡದಲ್ಲಿ ಬದಲಾಗಬಹುದು)
- ಸುನೀತಾ ವಿಲಿಯಮ್ಸ್ , ಗ್ಯಾರಿ ವಿಲ್ಮೋರ್ ಮತ್ತು ಅವರ ಜೊತೆಗಿನ ಇನ್ನಿಬ್ಬರು ಗಗನಯಾತ್ರಿ ಸಂಗಾತಿಗಳು ಹಿಂದಿರುಗುವ ಪ್ರತಿಕ್ರಿಯೆಯನ್ನು ನಾಸಾದ ಅಧಿಕೃತ ಅಂತರ್ಜಾಲತಾಣ http://www.nasa.gov/live ಮೂಲಕ ವೀಕ್ಷಿಸಬಹುದಾಗಿದೆ.
- ಸುನೀತಾ ವಿಲಿಯಮ್ಸ್ ಮತ್ತು ಅವರ ಜೊತೆಯ ಗಗನಯಾನಿಗಳು ಭೂಮಿಗೆ ತಲುಪುವ ಹಂತದಲ್ಲಿದ್ದಾರೆ.
- ನಾವು ಭಾರತೀಯರಿಗೆ ಸುನಿತಾ ವಿಲಿಯಮ್ಸ್ ಭಾರತೀಯ ಮೂಲದ ತಂದೆಯ ಮಗಳೆಂಬ ಹೆಮ್ಮೆ ಆದ್ದರಿಂದಲೇ ಭಾರತೀಯರು ಅವರು ಸುರಕ್ಷಿತ ಭೂಮಿ ತಲುಪುವುದಕ್ಕಾಗಿ ಶುಭ ಹಾರೈಕೆ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ.

ಇದರ ಮಧ್ಯ ಕೆಲವು ಪ್ರಶ್ನೆಗಳಿವೆ ಅದೇನೆಂದರೆ :
*ಬಾಹ್ಯಾಕಾಶ ಕೇಂದ್ರದಲ್ಲಿ ಅತಿ ಹೆಚ್ಚು ದಿನ ಇದ್ದವರು ಯಾರು?
*ಅವರು ಎಷ್ಟು ದಿನ ಇದ್ದು ದಾಖಲೆ ಮಾಡಿದ್ದಾರೆ?
*ಸುನಿತಾ ವಿಲಿಯಮ್ಸ್ ಮತ್ತಿತರರು 7 ದಿನದ ಪ್ರಯೋಗಾರ್ಥವಾಗಿ ಹೋದವರು ಅಂತರಿಕ್ಷ ನೌಕೆಯ ಯಾಂತ್ರಿಕ ದೋಷಗಳಿಂದ 9 ತಿಂಗಳಿಗೂ ಹೆಚ್ಚು ದಿನ ಬಾಹ್ಯಾಕಾಶದಲ್ಲಿ ಇರಬೇಕಾಯಿತಲ್ಲ ಅವರಿಗೆ ಅಷ್ಟು ದಿನದ ಆಹಾರ ವ್ಯವಸ್ಥೆ ಆಮ್ಲಜನಕ ವ್ಯವಸ್ಥೆ, ನೀರಿನ ವ್ಯವಸ್ಥೆ ಹೇಗಾಯಿತು?
*ಮಹಿಳಾ ಗಗನಯಾತ್ರಿಗಳು ತಮ್ಮ ತಲೆ ಕೂದಲು ಹಾಗೇ ಬಿಡುವುದು ಯಾಕೆ ?
*ಇಂತಹ ಅನಿರಿಕ್ಷಿತ ತೊಂದರೆ ಇದಕ್ಕಿಂತ ಮುಂಚೆ ಬೇರೆ ಗಗನಯಾತ್ರಿಗಳು ಎದುರಿಸಿದ್ದರಾ?
ಈ ಮೇಲಿನ ಕುತೂಹಲಕಾರಿ ಪ್ರಶ್ನೆಗಳಿಗೆ ಮಾಹಿತಿ ಇಲ್ಲಿದೆ :
ರಶಿಯನ್ ಗಗನಯಾತ್ರಿ ಕಾಸ್ಮೋ ನಾಟ್ ಓಲೆರಿ ಪೋರಿಕೋವ್ 437 ದಿನ ನಿರಂತರವಾಗಿ ಬಾಹ್ಯ ಕೇಂದ್ರದಲ್ಲಿ ಇದ್ದು ದಾಖಲೆ ಮಾಡಿದವರು. ಅನೇಕ ಬಾರಿ ಬಾಹ್ಯಾಕಾಶ ಯಾತ್ರೆ ಮಾಡಿ ಒಟ್ಟು ಅತಿ ಹೆಚ್ಚು ದಿನ ಬಾಹ್ಯಾಕಾಶ ಕೇಂದ್ರದಲ್ಲಿ 878 ದಿನ 11 ಗಂಟೆ 30ನಿಮಿಷದ ದಾಖಲೆ ರಶ್ಯನ್ ಗಗನ ಯಾತ್ರಿ ಒಲೆಗ್ ಕೊನೆನೆಂಕೊ ಅವರದ್ದಾಗಿದೆ.
ಅಂತರಿಕ್ಷ ಯಾತ್ರಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರು ಭಾರತೀಯ ಮೂಲದ ಅಂತರಿಕ್ಷ ಯಾತ್ರಿಗಳಾದ ರಾಕೇಶ್ ಶರ್ಮ, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಂ, ರಾಜಾಚಾರಿ, ಶಿರಿಷ್ ಬಾಂಡ್ಲಾ.
ಸುನಿತಾ ವಿಲಿಯಮ್ಸ್ ಗಿಂತ ಭಯಾನಕವಾದ ಅನಿಶ್ಚಿತತೆ ಅನುಭವಿಸಿದ ಗಗನ ಯಾನಿ ರಶ್ಯದ ಸೆರಿಗೈ ಕ್ರಿಕ್ ಲೇವ್ ಅವರದ್ದಾಗಿದೆ. ಇವರು ಅಂತರಿಕ್ಷ ಯಾತ್ರೆಗೆ ಹೋದಾಗ ಯುಎಸ್ಎಸ್ಆರ್ ರಷ್ಯಾ ಒಕ್ಕೂಟ ಇತ್ತು ಇವರು ಅಂತರಿಕ್ಷ ಕೇಂದ್ರ ತಲುಪಿದ ನಂತರ ಡಿಸೆಂಬರ್ 26 1991 ರಂದು ಸೋವಿಯತ್ ಒಕ್ಕೂಟವು ವಿಸರ್ಜಿಸಿತು ಆಗ ಕ್ರಿಕ್ ಲೇವ್
ಬಾಹ್ಯಾಕಾಶ ಕೇಂದ್ರದಲ್ಲಿದ್ದರು.
ಆಗ ಬೈಕೊನೂರ್ ಮತ್ತು ಲ್ಯಾಂಡಿಂಗ್ ಪ್ರದೇಶ ಎರಡು ಹೊಸದಾಗಿ ಸ್ವತಂತ್ರವಾದ ಕಜಾಕಿಸ್ತಾನದಲ್ಲಿ ನೆಲೆಗೊಂಡಿದ್ದರಿಂದ ಅವರ ವಾಪಾಸು ಬರುವ ಕಾರ್ಯಾಚರಣೆಯ ಭವಿಷ್ಯದ ಬಗ್ಗೆ ಅನಿಶ್ಚತತೆ ಇತ್ತು. ಅವರು ಮೂಲತಃ ಯೋಜಿಸಿದ್ದಕ್ಕಿಂತ ಎರೆಡು ಪಟ್ಟು ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದರು, 311 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದರು, ಅವರು 1992 ಮಾರ್ಚ್ 25ರಂದು ಭೂಮಿಗೆ ಸುರಕ್ಷಿತವಾಗಿ ಬಂದು ತಲುಪಿದರು.
ಬಾಹ್ಯಾಕಾಶ ಕೇಂದ್ರದಲ್ಲಿ ಆಹಾರ ಮತ್ತು ಆಮ್ಲಜನಕದ ಪೂರೈಕೆ ಒಂದು ವರ್ಷದ ವರೆಗೆ ಬೇಕಾದಷ್ಟು ದಾಸ್ಥಾನು ಮಾಡಿರುತ್ತಾರೆ ಇದನ್ನು ನಾಸಾ ಖಚಿತಪಡಿಸಿದೆ. ನಿಲ್ದಾಣದಲ್ಲಿ ಆಮ್ಲಜನಕ ಉತ್ಪಾದಿಸಲು ಮತ್ತು ತ್ಯಾಜ್ಯಗಳನ್ನು ನಿರ್ವಹಿಸಲು ವ್ಯವಸ್ಥೆಗಳಿವೆ ಅನಿವಾರ್ಯ ಸಂದರ್ಭದಲ್ಲಿ ಈ ಸಂಪನ್ಮೂಲಗಳು ಸಾಕಾಗುವಂತೆ ನೋಡಿಕೊಳ್ಳಲು ನಿಖರವಾದ ಯೋಜನೆ ಇದೆ.
ಬಾಹ್ಯಾಕಾಶ ಸಂಶೋಧನೆಗಾಗಿ ನಾಸಾ ಜೊತೆಗೆ ಬಾಹ್ಯಾಕಾಶ ನಿಲ್ದಾಣದ ಪಾಲುದಾರರು ಆಗಾಗೆ ಹೆಚ್ಚುವರಿ ಸರಬರಾಜು ಸರಕುಗಳನ್ನು ಸಾಗಿಸುವ ಕಕ್ಷೆಯಲ್ಲಿರುವ ಸಂಕೀರ್ಣಕ್ಕೆ ಮರುಪೂರೈಕೆ ಕಾರ್ಯಚರಣೆಗಳನ್ನು ಮಾಡುತ್ತಿರುತ್ತಾರೆ. ಇತ್ತೀಚಿಗೆ 8200 ಪೌಂಡ್ ಗಳ ಆಹಾರ ಇಂಧನ ಮತ್ತು ಮೂರು ಟನ್ ಸರಕುಗಳನ್ನು ಹೊತ್ತ ಪ್ರೋಗ್ರೆಸ್ ಮರು ಪೂರೈಕೆ ನೌಕೆ ಬಾಹ್ಯ ನಿಲ್ದಾಣಕ್ಕೆ ತಲುಪಿತ್ತು ಎಂದು ನಾಸಾ ತಿಳಿಸಿದೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಮಲಗುವ ವ್ಯವಸ್ಥೆಗಳು ಶೂನ್ಯ ಗುರುತ್ವಾಕರ್ಷಣೆಯ ಪರಿಸರಕ್ಕೆ ಹೊಂದುಕೊಳ್ಳುತ್ತವೆ,ವಿಲಿಯಮ್ಸ್ ಸೇರಿ ಬಾಹ್ಯಾಕಾಶ ಕೇಂದ್ರದ ಸುತ್ತುವರಿದ ಪ್ರದೇಶಗಳಿಗೆ ಹೋಲುವ ವೈಯಕ್ತಿಕ ಮಲಗುವ ಕೇಂದ್ರಗಳಲ್ಲಿ ಮಲಗುತ್ತಾರೆ. ಗುರುತ್ವಾಕರ್ಷಣೆ ಅವರ ದೃಷ್ಟಿಕೋನದ ಮೇಲೆ ಪರಿಣಾಮ ಬೀರದ ಕಾರಣ ಅವರು ಯಾವುದೇ ಮೇಲ್ಮೈ- ನೆಲ-ಚಾವಣಿ ಅಥವಾ ಗೋಡೆ ಮೇಲೆ ಮಲಗಬಹುದು.
ಸುನಿತಾ ವಿಲಿಯಮ್ಸ್ ನೀಳ ಕೇಶ ರಾಶಿ ಅನೇಕರ ಕುತೂಹಲಕ್ಕೆ ಕಾರಣವಾಗಿತ್ತು, ಒಮ್ಮೆ ಅಮೆರಿಕ ಅಧ್ಯಕ್ಷರು ಕೂಡ ಇದನ್ನು ಉಲ್ಲೇಖಿಸಿದ್ದರು. ಅಂತರಿಕ್ಷದಲ್ಲಿ ಗುರುತ್ವಾಕರ್ಷಣೆ ಶೂನ್ಯವಿರುವುದರಿಂದ ಕೂದಲುಗಳು ಕಾಲ ಕಡೆಗೆ ಇರುವುದಿಲ್ಲ ಅವು ನೆಟ್ಟಗೆ ನಿಂತಂತೆ ಇರುತ್ತದೆ, ಗುರುತ್ವಾಕರ್ಷಣೆ ಇಲ್ಲದೆ ಇರೋದ್ರಿಂದ ಅಲ್ಲಿ ಅವರ ತಲೆ ಕೂದಲುಗಳು ಉದುರುವುದಿಲ್ಲ.
ಆದ್ದರಿಂದ ಅಂತರಿಕ್ಷ ಕೇಂದ್ರದಲ್ಲಿ ಮಹಿಳೆಯರು ತಲೆ ಕೂದಲನ್ನು ಕಟ್ಟುವ ಜಡೆ ಹಾಕುವ ಅವಶ್ಯಕತೆ ಇರುವುದಿಲ್ಲ ಆದ್ದರಿಂದ ಅವರು ತಮ್ಮ ಕಂಫರ್ಟ್ ಗಾಗಿ ಕೂದಲನ್ನು ಹಾಗೆ ಬಿಟ್ಟಿರುತ್ತಾರೆ. ಅಂತರಿಕ್ಷ ಬಾಹ್ಯಾಕಾಶ ಕೇಂದ್ರ ಪ್ರತಿ 90 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರುತ್ತದೆ ಆದ್ದರಿಂದ ಪ್ರತಿನಿತ್ಯ ಬಾಹ್ಯಕಾಶ ಕೇಂದ್ರದಲ್ಲಿರುವ ಗಗನ ಯಾತ್ರಿಗಳು ಪ್ರತಿ ನಿತ್ಯ16 ಬಾರಿ ಸೂರ್ಯಾಸ್ತ ನೋಡುತ್ತಾರೆ.
ಅಂತರಿಕ್ಷಯಾತ್ರಿಗಳಿಗೆ ಅವರ ಅನುಭವ ಮತ್ತು ಸೀನಿಯಾರಿಟಿ ಗಮನಿಸಿ ನಾಸಾ ವಾರ್ಷಿಕ ಒಂದು ಲಕ್ಷದ 25 ಸಾವಿರ ಡಾಲರ್ ನಿಂದ ಎರೆಡೂವರೆ ಲಕ್ಷ ಡಾಲರ್ ತನಕ ವೇತನ ನೀಡುತ್ತದೆ (ರೂಪಾಯಿ ಒಂದು ಕೋಟಿಯಿಂದ ಒಂದೂವರೆ ಕೋಟಿ ವಾರ್ಷಿಕ ವೇತನ) ಈಗ ಹೆಚ್ಚುವರಿ ಅಂತರಿಕ್ಷ ಕೇಂದ್ರದಲ್ಲಿ ಕಳೆಯಬೇಕಾಗಿದ್ದಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಅವರಿಗೆ ಒವರ್ ಟೈಮ್ ಸೇರಿ ಅತಿ ಹೆಚ್ಚು ವೇತನ ಪಾವತಿ ಆಗಲಿದೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
