ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ

ಯೋಗಮಯ ಯೋಗ ಸಾಧನ ಕೇಂದ್ರ ಹಾಗೂ ಸಂವೇದನಾ ಸೇವಾ ಸಂಸ್ಥೆ ಹಾಗೂ ಎಂ ಜಿ ಹಿರೇಮಠ ರಪಾಟಿ ಕಲ್ಯಾಣ ಮಂಟಪ ಇವರ ಸಂಯೋಗದಿಂದ ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಹಾಗೂ ಸೂರ್ಯ ಯಜ್ಞ ಹೋಮ ಕಾರ್ಯಕ್ರಮ ಇವತ್ತು ರಪಾಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ತಪ್ಪದೆ ಮುಂದೆ ಓದಿ…

ರಥಸಪ್ತಮಿಗೆ ತನ್ನದೇ ಆದಂತಹ ಮಹತ್ವವಿದೆ. ಯುಗಾದಿ ಹೇಗೆ ಹೊಸತನವನ್ನು ಹೊತ್ತು ತರುತ್ತದೆಯೋ ಹಾಗೆ ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳೆಯ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯಗೊಳಿಸುತ್ತದೆ.

ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯ ತಿಥಿಯಂದು ಸೂರ್ಯ ತನ್ನ ಹಳೆಯ ರಥವನ್ನು ಬಿಟ್ಟು ಹೊಸ ರಥವನ್ನು ಹತ್ತುತ್ತಾನೆ. ಈ ದಿನ ಸೂರ್ಯನು ದಕ್ಷಿಣಾಯದಿಂದ ಉತ್ತರಾಯಣದ ಕಡೆಗೆ ಪ್ರಯಾಣಿಸುತ್ತಾನೆ. ಈ ಒಂದು ದಿನವನ್ನು ಬಹಳ ವಿಶೇಷವಾಗಿ ಆಚರಿಸುತ್ತೇವೆ ಮತ್ತು ಪುರಾಣ ಕಾಲದಿಂದಲೂ ರಥಸಪ್ತಮಿಗೆ ತನ್ನದೇ ಆದ ಮಹತ್ವವಿದೆ ಎಂದು ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಉಪನ್ಯಾಸಕಿಯಾಗಿ ಬಂದಿದ್ದ ಕರ್ಷ ಫೌಂಡೇಶನ್ ಸಂಸ್ಥಾಪಕಿಯಾದ ಶ್ರೀಮತಿ ಸುಮಂಗಲ ದಾಂಡೆವಾಲಿ ಅವರು ವಿವರಿಸಿದರು.

ಯೋಗಮಯ ಯೋಗ ಸಾಧನ ಕೇಂದ್ರ ಹಾಗೂ ಸಂವೇದನಾ ಸೇವಾ ಸಂಸ್ಥೆ ಹಾಗೂ ಎಂ ಜಿ ಹಿರೇಮಠ ರಪಾಟಿ ಕಲ್ಯಾಣ ಮಂಟಪ ಇವರ ಸಂಯೋಗದಿಂದ ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಹಾಗೂ ಸೂರ್ಯ ಯಜ್ಞ ಹೋಮ ಕಾರ್ಯಕ್ರಮ ಇವತ್ತು ರಪಾಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಯೋಗಮಯ ಯೋಗ ಸಾಧನಾ ಕೇಂದ್ರದ ಯೋಗ ಗುರುಗಳಾದ ಶ್ರೀಯುತ ಲಕ್ಷ್ಮಣ್ ಬೋಡಕೆ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಆರೋಗ್ಯಂ ಭಾಸ್ಕರಾಧಿಚೇತ್ ಅಂದರೆ ಸೂರ್ಯ ಆರೋಗ್ಯದಾಯಿ, ಇವತ್ತಿನ ದಿವಸ ಸೂರ್ಯನ ಜಯಂತಿ ಎಂದು ಹೇಳುತ್ತಾರೆ ತನ್ನ ಪಥವನ್ನು ಬದಲಿಸುವ ಮುಖಾಂತರ ಭೂಮಿಯ ನಿವಾಸಿಗಳಿಗೆ ಚೈತನ್ಯವನ್ನು ನೀಡುತ್ತಾನೆ ಚಳಿಗಾಲದಲ್ಲಿ ಮುದುಡುವ ಶರೀರ ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದ ನವ ಚೈತನ್ಯವನ್ನು ತುಂಬಿಕೊಳ್ಳುತ್ತದೆ ಎಂದು ಹೇಳಿದರು. ತಮ್ಮ ಮಾತನ್ನು ಮುಂದುವರಿಸುತ್ತಾ ಯೋಗ ಮಯಂ ಯೋಗ ಸಾಧನ ಕೇಂದ್ರವು ಬಹಳಷ್ಟು ವರ್ಷಗಳಿಂದ ಯೋಗ ತರಗತಿಗಳ ಜೊತೆಗೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರಸ್ತುತ ಯೋಗಮಯಂ ಕೇಂದ್ರದವು ಧಾರವಾಡದಲ್ಲಿ ಮನೆ ಮಾತಾಗಿದೆ ಎಂದು ಹೇಳಿದರು.

This slideshow requires JavaScript.

 

ಈ ಒಂದು ಕಾರ್ಯಕ್ರಮವನ್ನು ಯೋಗಮಯಂ ಯೋಗ ಸಾಧನ ಕೇಂದ್ರದ ಎಲ್ಲಾ ಯೋಗ ಬಂಧುಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಶ್ರೀಯುತ ಸುರೇಶ್ ಹೆಗಡೆಯವರು ಮತ್ತು ಶ್ರೀಯುತ ವಿನೋದ್ ಅವರು ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡಿದ್ದರು. ಸಹ ಶಿಕ್ಷಕರಾದ ಶ್ರೀಮತಿ ಹೇಮಲತಾ ಹೆಗಡ್ಡಯ ಹೆಗ್ಡೆ, ಶ್ರೀ ನರೇಂದ್ರ ಪಟೇಲ್, ಶ್ರೀ ಸಂತೋಷ ಪೂಜಾರ ,ಹಾಗೂ ಶ್ರೀ ಅಶ್ವಿನ್ ಅಶ್ವಿನ್ ಅವರು ಉಪಸ್ಥಿತರಿದ್ದರು. ಶ್ರೀಮತಿ ಸುಮನ್ ಹೆಬ್ಳೀಕರ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ರೇಣುಕಾ ಅವರು ವಂದಿಸಿದರು . 160 ಕ್ಕೂ ಹೆಚ್ಚು ಜನಾ ಯೋಗ ಬಂಧುಗಳು ಆಫ್ಲೈನ್ ಮತ್ತು ಆನ್ಲೈನ್ ಮೂಲಕ 108 ಸೂರ್ಯ ನಮಸ್ಕಾರ ಮಾಡುವ ಮುಖಾಂತರ ಸೂರ್ಯದೇವನಿಗೆ ನಮಿಸಿದರು.


  • ಆಕೃತಿ ಕನ್ನಡ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading