‘ತಂದೆ ತಾಯಿಯ ಸಾಕಿರಣ್ಣ’ ಕವನ – ದಸ್ತಗಿರಿ ಸಾಬ್

ತಂದೆ ತಾಯಿಯ ಸಾಕಿರಣ್ಣ…ಅವರ ಋಣವ ತೀರಿಸೋಣ….- ನಿವೃತ್ತ ಶಿಕ್ಷಕರಾದ ದಸ್ತಗಿರಿ ಸಾಬ್ ಅವರ ಒಂದು ಕವನ, ತಪ್ಪದೆ ಮುಂದೆ ಓದಿ…

ತಂದೆ ತಾಯಿಯ ಸಾಕಿರಣ್ಣ
ನಾವೆಲ್ಲ ಅವರ ಋಣವ ತೀರಿಸೋಣ./ತಂದೆ/

ಪ್ರೀತಿ ಪ್ರೇಮದಿ ನಮ್ಮ ಬೆಳಸಿ
ಬೆವರು ಸುರಿಸಿ ನಮ್ಮ ಸಾಕಿ
ಸಾಲ ಸೋಲ ಮಾಡಿ ನಮಗೆ
ವಿದ್ಯೆ ಬುದ್ಧಿ ಕಲಿಸಿದಾತರು. /ತಂದೆ/

ಚಳಿಯು ಎನ್ನದೆ ಬಿಸಿಲು ಎನ್ನದೆ
ದೇಹವೆಲ್ಲ ಸವೆಸಿ ಸವೆಸಿ
ಮುಪ್ಪಿನಲ್ಲಿ ದಿಕ್ಕು ಕಾಣದೆ
ರೋಗ ರುಜಿನ ತುಂಬಿಕೊಂಡ. / ತಂದೆ/

ಕಣ್ಣು ಕಾಣದೆ ಕಿವಿಯ ಕೇಳದ
ನಡೆಯಲು ಕೈಲಾಗದವರನ್ನಾ
ದಿಕ್ಕುತೋಚದೆ ನರಳುತಿರುವ
ಶಕ್ತಿ ಇಲ್ಲದೆ ಮನೆಯಲ್ಲಿರುವ. /ತಂದೆ/

ತಂದೆಗಿಂತ ತಾಯಿಗಿಂತ ಮಿಗಿಲಾದ ದೇವರಿಲ್ಲ
ಅವರ ಸೇವೆ ಮಾಡಿ ನಾವು
ಅವರ ಋಣವ ತೀರಿಸೋಣ
ಹಸನು ಬದುಕನು ಸಾಗಿಸೋಣ. /ತಂದೆ/


  • ದಸ್ತಗಿರಿ ಸಾಬ್ – ನಿವೃತ್ತ ಶಿಕ್ಷಕರು, ಗೌರಿಬಿದನೂರು.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading