ಮರಗೆಣಸು (ಕಪ್ಪಾ) ಮಹತ್ವ – ಅರುಣ್ ಪ್ರಸಾದ್

ಟ್ಯಾಪಿಯೋಕ ಎಂಬ ಹೆಸರು ಪೋಚು೯ಗೀಸರಿಂದ ಪಡೆದ, ಮಲೆಯಾಳಂದಲ್ಲಿ ಕಪ್ಪಾ ಅಂತ ಮನೆ ಮಾತಾಗಿರುವ ಈ ಮರ ಗೆಣಸು, 1880 – 85 ರ ಕೇರಳದ ಭೀಕರ ಬರಗಾಲದಲ್ಲಿ ಟ್ರಯೊ೦ಕರಮ್ ನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ರಿಂದ ಪರಿಚಯಸಲ್ಪಟ್ಟದ್ದಾಗಿದೆ. ಇದರ ಕುರಿತು ಲೇಖಕರಾದ ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಮೊನ್ನೆ ನನ್ನ ಮಲೆಯಾಳಿ ಮಿತ್ರ ಕುಟ್ಟಿಚನ್ ತಾನು ಬೆಳೆದ ಪೊಪ್ಪಾಯಿ, ಅನಾನಸ್, ಸುವಣ೯ಗೆಡ್ಡೆ, ಪೇರಲೆ ಮತ್ತು ಕೆಲ ತುಂಡು ಮರಗೆಣಸು ತಂದು ಕೊಟ್ಟ ಮತ್ತು ಬೇಯಿಸಿ ತಿನ್ನುವ ನೆಂದ್ರ ಬಾಳೆ ಹಣ್ಣು ಇನ್ನು ಬಂದಿಲ್ಲ ಅ೦ತಂದ. ಆನಂದಪುರದ ಮುಂಬಾಳಿನ ಗೋಕುಲ್ ಪಾರಂ ನ ಹಿಂಬಾಗದಲ್ಲಿ 3 ಎಕರೆ ಬಗರ್ ಹುಕುಂ ಜಾಗದಲ್ಲಿ ರಬ್ಬರ್ ಜೊತೆ ಇವೆಲ್ಲ ಬೆಳೆಯುತ್ತಾರೆ ಮತ್ತು ಸಾಗರ ಶಿವಮೊಗ್ಗದ ಸಂತೆಯಲ್ಲಿ ತಪ್ಪದೇ ಮರಗೆಣಸು ಜೊತೆ, ನೇಂದ್ರ ಬಾಳೆ ಹಣ್ಣು, ಸುವರ್ಣ ಗೆಡ್ಡೆ ಮತ್ತಿತ್ತರ ತರಕಾರಿ ಮಾರುತ್ತಾರೆ. ಇದಕ್ಕಾಗಿ ಒಂದು ಲಗೇಜ್ ಕ್ಯಾರಿಯರ್ ಇದೆ. ಇವರ ಹತ್ತಿರ ಇದೆ,ತುಂಬಾ ಶ್ರಮಜೀವಿ.

ಕಪ್ಪಾ ಅಂತ ಕೇರಳದವರು ಕರೆಯುವ ಕನ್ನಡಿಗರ ಬಾಯಲ್ಲಿ ಮರಗೆಣಸು ಆಗಿರುವ ಇದರ ಮೂಲ ಬ್ರಿಜಿಲ್, ಅತಿ ಕಡಿಮೆ ಮಳೆ ಆಶ್ರಿತ ಬೆಳೆ, ಹೆಚ್ಚು ಪೈಬ್ರಾಯಿಡ್ ಹೊಂದಿದೆ. ಕೇರಳಿಗರಿಗೆ ನಿತ್ಯ ಆಹಾರವಾಗಿದೆ, ಉಳಿದ ಪ್ರದೇಶದಲ್ಲಿ ಸಬ್ಬಕ್ಕಿ ರೂಪದಲ್ಲಿ ಮತ್ತು ಗಾಮೆ೯೦ಟ್ ಗಳಲ್ಲಿ ಬಟ್ಟೆಗೆ ಹಾಕುವ ಗ೦ಜಿಯಾಗಿ ಹೆಚ್ಚು ಬಳಕೆ.

This slideshow requires JavaScript.

 

ದೂರದ ಬ್ರಿಜಿಲ್ ನಿಂದ ಇದು ಕೇರಳಕ್ಕೆ ಬಂದ ಒಂದು ಇತಿಹಾಸವಿದೆ, ಇದು ಬ್ರಿಜಿಲ್ ನ ಮೂಲ ನಿವಾಸಿಗಳ ಆಹಾರ ಅವರು ಅವರ ಭಾಷೆಯಲ್ಲಿ ಇದನ್ನು ಟೂಪಿ ಅಂತ ಕರೆಯುವುದರಿಂದ ಈ ಪ್ರದೇಶ ಮೊದಲ ಬಾರಿಗೆ ತಲುಪಿದ ಪೋಚು೯ಗಿಸರಿಂದ ಟಾಪಿಯೋಕ ಅಂತ ಕರೆಯಲ್ಪಟ್ಟಿತಂತೆ. 1880 – 85 ರಲ್ಲಿ ದಕ್ಷಿಣ ಕೇರಳ ಟ್ರೂವೆಂಕೂರ್ ರಾಜ್ಯದಲ್ಲಿ ಭೀಕರ ಬರಗಾಲ ಬಂದಾಗ ಅಲ್ಲಿನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ ಇದನ್ನು ಕೇರಳಕ್ಕೆ ಪರಿಚಯಿಸುತ್ತಾರೆ ಸ್ವತಃ ಸಸ್ಯ ಶಾಸ್ತ್ರಜ್ಞರಾದ ಇವರು ರಾಜನಿಂದ ಸ್ಟತಃ ಅಡಿಗೆ ಮಾಡಿ ತಿಂದು ತೋರಿಸಿದ್ದರಿಂದ ಜನ ದೈಯ೯ದಿಂದ ಬೆಳೆದು ಬೆಳೆಸಿ ತಿನ್ನುತ್ತಾರಂತೆ.

ಎರಡನೇ ಮಹಾಯುದ್ಧದಲ್ಲಿ ಸೌತ್ ಈಸ್ಟ್ ಏಷಿಯಾದಲ್ಲಿ ಬಹಳಷ್ಟು ನಿರಾಶ್ರಿತರು ಇದರಿಂದ ಬದುಕಿದ ಇತಿಹಾಸ ಇದೆ. ಹಾಗಾಗಿ ಕೇರಳದ ಮಲೆಯಾಳಿಗಳಿಗೆ ಈ ಮರಗೆಣಸು ಹೆಚ್ಚು ಪರಿಚಿತ ಆಹಾರ ಆಗಿದೆ ಆದರೆ ಇದರ ಇತಿಹಾಸ ಅವರಾರಿಗೂ ನೆನಪಿಲ್ಲ. 1995 ರಲ್ಲಿ ಇದೇ ಕುಟ್ಟಿಚನ್ ನೇತೃತ್ವದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಈ ಗೆಣಸು ಬೆಳೆದಿದ್ದೆ.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW