ಹಸಿರಿರುವವರೆಗೂ ನಿಮ್ಮ ಹೆಸರು ಹಸಿರಾಗಿಯೇ ಇರುವುದು

ಜೀವನವನ್ನು ಜೀವಂತವಾಗಿ ಇರಿಸಿ ಹೋದ ಈ ಅಮೂಲ್ಯ ಚೈತನಕ್ಕೆ ನಮಿಸುತ್ತ, ದೇವರು ಇವರ ಆತ್ಮಕ್ಕೆ ಚಿರಶಾಂತಿ ಕೊಡಲಿ, ನಿಮ್ಮ ದೇಹ ಇರದಿದ್ದರೂ ಮನುಜನಿಗೆ ನೆರಳಾಗಿ, ಪಶು ಪಕ್ಷಿಗಳಿಗೆ ಆಸರೆಯಾಗಿ ನಿಮ್ಮ ಆತ್ಮ ಸದಾ ನಮ್ಮೊಡನೆ ಜೀವಂತವಿರುತ್ತದೆ, ಎಂದು ಹೇಳುತ್ತಾ, ವೃಕ್ಷಮಾತೆ ಮತ್ತೊಮ್ಮೆ ಹುಟ್ಟಿ ಬನ್ನಿ…

  • ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹಸಿರಿಗೆ ಉಸಿರು ಕೊಟ್ಟ ಮಾತೆ ಇನ್ನು ಮುಂದೆ ನೆನಪು ಮಾತ್ರ!

    ನಿತ್ಯವೂ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವವರ ಸಂಖ್ಯೆ ಅನೇಕ. ಆದರೆ ಸತ್ಕಾರ್ಯದಿಂದ ಕಾರ್ಯಗತ ಗೊಳಿಸಿ ಅದನ್ನು ಸಾಬೀತುಪಡಿಸಿದವರ ಸಂಖ್ಯೆ ತುಂಬಾ ಕಡಿಮೆ ಎನ್ನಬಹುದು. ಆದರೆ ಬರಿ ಬೊಗಳೆ ನುಡಿಯದೆ ತಮ್ಮ ಕಾರ್ಯದ ಮೂಲಕ ಸೇವೆಯನ್ನು, ಕರ್ತವ್ಯವನ್ನು ತೋರಿಸಿದವರ ಮೊದಲ ಸಾಲಿನಲ್ಲಿ ಬರುವ ಹೆಸರೇ ಸಾಲುಮರದ ತಿಮ್ಮಕ್ಕ. ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ವಿದ್ಯೆ ಇಲ್ಲದಿದ್ದರೂ ತಮ್ಮ ವಿಭಿನ್ನ ಹಾಗೂ ಅಮೂಲ್ಯ ಸೇವೆಯ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿದ ಈ ಸರಳ ಮಹಿಳೆಯ ಜೀವನವೇ “ಹಸಿರು ಕ್ರಾಂತಿ”ಯ ಅಧ್ಯಾಯ ಎನ್ನಬಹುದು.ಬಡತನ ಅನಕ್ಷರತೆಯ ನಡುವೆಯೂ ಒಂದು ಸಣ್ಣ ಕುಗ್ರಾಮದಿಂದ ಹಿಡಿದು ಜಾಗತಿಕವಾಗಿ ಗುರುತಿಸಲ್ಪಟ್ಟು ಪರಿಸರವಾದಿ ಯಾಗುವವರೆಗಿನ ಅವರ ಪ್ರಯಾಣವು ಎಲ್ಲರಿಗೂ ಒಂದು ಸ್ಫೂರ್ತಿಯಾಗಿ ಅವರ ಜೀವನದ ಈ ಕೆಲಸವು ಒಳ್ಳೆಯ ಉದ್ದೇಶದ ಶಕ್ತಿಗೆ ಸಾಕ್ಷಿಯಾಗಿದೆ.
  • ಅವಿದ್ಯಾವಂತರಾದರೂ ಆರಿವಿನಲ್ಲಿ, ಸಂಸ್ಕಾರದಲ್ಲಿ

    ವಿದ್ಯಾವಂತರನ್ನೂ ಮೀರಿಸುವ ಜ್ಞಾನ ಹೊಂದಿದ್ದರಿಂದಲೇ ಇಂದು ತಿಮ್ಮಕ್ಕ ಎಲ್ಲರ ಮನದಲ್ಲಿ ಹಚ್ಚ ಹಸಿರಾಗಿ ನಿಂತಿದ್ದಾರೆ. ಸಾಧನೆಗೆ ವಿದ್ಯೆ ಎಂಬ ಮಾನದಂಡವೇ ಬೇಕೆಂದೇನಿಲ್ಲ ಸಮಾಜಕ್ಕೆ ಒಳಿತು ಮಾಡುವ ಒಳ್ಳೆಯ ನಿಸ್ವಾರ್ಥ ಮನಸ್ಸಿದ್ದರೆ ಸಾಕು ಎಂದು ಸಾಬೀತು ಪಡಿಸಿದ ದಿಟ್ಟ ಮಹಿಳೆ ತಿಮ್ಮಕ್ಕ ಸಮಾಜದಲ್ಲಿ ಅದರ್ಶರಾಗಿ ಬಾಳಿದ್ದಾರೆ. ತನಗೆ ಮಕ್ಕಳಾಗಲಿಲ್ಲವೆಂದು ಕೊರಗದೆ ಸಮಾಜಕ್ಕೆ ಪರಿಸರಕ್ಕೆ ಉಪಯೋಗವಾಗುವ ಕಾಯಕ ಮಾದುತ್ತಿದ್ದರಿಂದಲೂ ಏನೋ ಆ ಪ್ರಕೃತಿಯೇ ಅವಳ ಮಗುವಾಗಲು ಮುಂದಾಯಿತೇನೂ ಅದಕ್ಕಿರಬೇಕು ತಿಮ್ಮಕ್ಕ ಪ್ರಕೃತಿಯನ್ನೇ ತನ್ನ ಮಡಿಲ ಮಗುವಾಗಿ ಮಾಡಿಕೊಂಡು ಸಾಲು ಸಾಲು ಮರಗಳನ್ನು ನೆಟ್ಟು ತನ್ನ ಮಕ್ಕಳೆಂತೆ ಪೋಷಿಸಿ ಸರಿ ಸುಮಾರು 8000 ಮರಗಳನ್ನು ಪೋಷಿಸಿ ಬೆಳೆಸಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಪುರಸ್ಕೃತಳಾಗಿ ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಹೆಸರು ಗಳಿಸಿ ಇತಿಹಾಸದಲ್ಲಿ ಅಚ್ಚಳಿಯದ ಹಚ್ಚ ಹಸಿರಂತೆ “ವೃಕ್ಷಮಾತೆ “ಎಂದೇ ಖ್ಯಾತಳಾಗಿದ್ದಾಳೆ.
  • ಇವರ ಜೀವನವೇ ರೋಚಕ ಎನ್ನಬಹುದು ತಾನು ತನ್ನದು ಹಣ ಆಸ್ತಿ ಎಂದು ಸ್ವಾರ್ಥತೆಯೇ ತುಂಬಿರುವ
    ಇಂದಿನ ಸಮಾಜದಲ್ಲಿ ತನ್ನ ಬಡತನದ ನಡುವೆಯೂ ನಿಸ್ವಾರ್ಥವಾಗಿ ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ತಾನು ನೆಟ್ಟ ಸಸಿಗಳಿಗೆ ನೀರುಣಿಸಲು ನಾಲ್ಕು ಕಿಲೋಮೀಟರ್ ದೂರದಿಂದ ನೀರನ್ನುತರುತ್ತಿದ್ದರು ಎಂಬುದನ್ನು ಕೇಳಿದಾಗ ನಿಜಕ್ಕೂ ಆಶ್ಚರ್ಯ ಮತ್ತು ಹೆಮ್ಮೆ ಎನಿಸುತ್ತದೆ, ಅಲ್ಲದೆ ಧನಕರುಗಳಿಂದ ತಾನು ನೆಟ್ಟ ಸಸಿಗಳನ್ನು ರಕ್ಷಿಸಲು ಸುತ್ತಲೂ ಮುಳ್ಳು ಪೊದೆಗಳನ್ನು ಹಾಕಿ ಸಂರಕ್ಷಿಸುತ್ತಾ ತಮಗೆ ಬರುತ್ತಿದ್ದ ಅತ್ಯಲ್ಪ ಆದಾಯವನ್ನು ಮರ ಗಿಡಗಳ ಪೋಷಣೆಗೆ ಬಳಸುತ್ತಿದ್ದ ಮೇರು ವ್ಯಕ್ತಿತ್ವದ ಈ ಚೈತನ್ಯ ತನ್ನ ನಿಸ್ವಾರ್ಥ ಸೇವೆಯಿಂದಲೇ ಗೌರವವನ್ನು ಗಳಿಸಿದ ಶ್ರೀಮಂತ ಮನಸಿನ ಅಪರೂಪದ ಮಹಿಳೆ. ಮರ ನೆಟ್ಟರೆ ಅದು ಮುಂದಿನ ಪೀಳಿಗೆಗಳಿಗೆ ಜೀವ ನೀಡುತ್ತದೆ ಪ್ರಕೃತಿಯ ಸಂರಕ್ಷಣೆ ದೇವರ ಆರಾಧನೆಯಂತೆ.ಹಾಗೂ ಪರಿಸರ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದು ಎಂಬ ಸತ್ಯವನ್ನು ತಿಳಿದು ಸಮಾಜ ಸೇವೆಗಾಗಿ ಬದುಕನ್ನೇ ಮುಡುಪಿಟ್ಟ ದಿಟ್ಟ ಹಾಗೂ ಜ್ಞಾನವಂತ ಹೆಣ್ಣು ತಿಮ್ಮಕ್ಕ.
  • ಮರಗಳನ್ನು ಬೆಳೆಸುವುದು, ಪ್ರಕೃತಿಯನ್ನು ರಕ್ಷಿಸುವುದು ಮಾನವ ಧರ್ಮ’’ ಎಂಬ ಸಂದೇಶವನ್ನು ಜೀವನದ ಮೂಲಕವೇ ತೋರಿಸಿದ ಮಹಿಳೆ ತಿಮ್ಮಕ್ಕ ಒಂದು ವ್ಯಕ್ತಿಯ ಸಣ್ಣ ಪ್ರಯತ್ನವೂ ಸಮಾಜಕ್ಕೆ ದೊಡ್ಡ ಕೊಡುಗೆ ಆಗಬಹುದು ಪ್ರಕೃತಿಗೆ ಪ್ರೀತಿ ಮತ್ತು ಕಾಳಜಿ ತೋರಿದರೆ, ಅದು ನಮಗೆ ಶಾಶ್ವತವಾದ ಸಿರಿಯಾಗಿ ಮರಳುತ್ತದೆ ಎಂಬ ಸತ್ಯವನ್ನು ಅರಿತು ಆ ನಿಟ್ಟಿನಲ್ಲೇ ಸಾಗಿದ ಪ್ರಜ್ಞಾನವಂತ ಮಹಿಳೆ,ಸಾಲು ಸಾಲು ಡಿಗ್ರಿಗಳನ್ನು ತೆಗೆದುಕೊಂಡ ವಿದ್ಯಾವಂತರು ಇಂದು ಜೀವನದ ಜೀವನದ ಮೌಲ್ಯಗಳನ್ನರಿಯದೆ ಸಮಾಜಕ್ಕೆ ಮಾರಕವಾದ ದೇಶದ್ರೋಹಿ ಕೆಲಸಗಳನ್ನು ಮಾಡುತ್ತಿರುವಾಗ ಯಾವುದೇ ವಿದ್ಯೆ ಡಿಗ್ರಿಗಳಿಲ್ಲದೆ

ತನ್ನ ಅರಿವಿನಿಂದ ಮಾಡಿದ ಇವರ ಕಾಯಕ ಪ್ರತಿಯೊಬ್ಬ ವಿದ್ಯಾವಂತರಿಗೆ ಸ್ಪೂರ್ತಿದಾಯಕವಾಗಿದೆ: 

  • ಸಾಲುಮರದ ತಿಮ್ಮಕ್ಕ ಅವರಿಗೆ ಸಂದ ಪ್ರಶಸ್ತಿಗಳು :
  • ರಾಷ್ಟ್ರೀಯ ಪೌರ ಪ್ರಶಸ್ತಿ – 1995
  • ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ -1997
  • ವೀರಚಕ್ರ ಪ್ರಶಸ್ತಿ – 1997 ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ – ಇವರಿಂದ ಮಾನ್ಯತೆಯ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು – ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ.
  • ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ – 2000
  • ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ – 2006
    ಪಂಪಾಪತಿ ಪರಿಸರ ಪ್ರಶಸ್ತಿ,ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ,ವಿವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್ ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ,ಮಹಿಳಾರತ್ನ ಪ್ರಶಸ್ತಿ,ನ್ಯಾಷನಲ್ ಸಿಟಿಜನ್ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ,ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ. 2010 ನೇ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಲಭಿಸಿದೆ. 2019 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ.
  • 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಇಷ್ಟಲ್ಲದೆ ಆಮೇರಿಕಾದ ಲಾಸ್ ಏಂಜಲೀಸ್ ಮತ್ತು ಓಸ್ಟ್ಯಾಂಡ್, ಕ್ಯಾಲಿಫೋರ್ನಿಯಾದಲ್ಲಿ ನೆಲೆಗೊಂಡಿರುವ ಅಮೇರಿಕದ ಪರಿಸರ ಸಂಘಟನೆಯು “ತಿಮ್ಮಕ್ಕನ ಪರಿಸರ ಶಿಕ್ಷಣ ಸಂಪನ್ಮೂಲಗಳು” ಎಂದು ಹೆಸರಿಸಿದೆ
    ಅಬ್ಬಾ ಕೇಳಲೇ ಇಷ್ಟು ಸೋಜಿಗವೆನಿಸುತ್ತದೆ ಎಂದರೆ ಅದು ನಿಜಕ್ಕೂ ಅದ್ಬುತ ಸಾಧನೆ ಅಲ್ಲವೇ.
  • ಇಷ್ಟೆಲ್ಲಾ ಮಾಡಿ ಜಾಗತಿಕ ಮನ್ನಣೆ ಪಡೆದಿದ್ದರೂ, ತಿಮ್ಮಕ್ಕಳ ಜೀವನವು ಅದ್ದೂರಿಯಾಗಿ ಇರಲಿಲ್ಲ ಸರ್ಕಾರಿ ಪಿಂಚಣಿಯನ್ನು ಅವಲಂಬಿಸಿ ಸರಳವಾಗಿ ಬದುಕುತಿದ್ದರು ಎಂಬುದು ನಿಜಕ್ಕೂ ಶ್ಲಾಘನೀಯ ಅವಳ ಈ ಸಾಧನೆ ಸಮಾಜಕ್ಕೆ ಪ್ರೇರಣೆಯುತವಾಗಿ ತಲತಲಾಂತರದವರೆಗೂ ಅವಳ ಅಮೂಲ್ಯ ಸೇವೆಯನ್ನು ಪ್ರತಿಬಿಂಬಿಸುತ್ತದೆ, ಸಾಲು ಮರದ ತಿಮ್ಮಕ್ಕ” ಜೀವಿತದ ಕತೆ ಸಮಾಜಕ್ಕೆ ಒಂದು ಶಾಶ್ವತವಾದ ಸಂದೇಶವನ್ನು ಇತ್ತಿದೆ ನಾವು ಬದಲಾಗಬಹುದು, ನಾವೇನು ಬಯಸಿದರೂ ಸಾಧಿಸಬಹುದು, ಆದರೆ ಅದಕ್ಕಾಗಿ ನಮ್ಮ ಮನಸು ನಿಷ್ಠೆಯಿಂದ ಕೂಡಿರಬೇಕು, ಮತ್ತು ನಮ್ಮ ಕಾರ್ಯಗಳು ಸಮಾಜವನ್ನು ಉತ್ತಮ ದಾರಿಎಡೆಗೆ ತಲುಪಿಸಲು ಬಲವಾಗಿ ಶ್ರಮಿಸಬೇಕು ಎಂಬ ಅತ್ಯದ್ಭುತ ಸಂದೇಶವನ್ನು ಕೊಟ್ಟು, ಸೃಷ್ಟಿ ಇರುವವರೆಗೂ ತನ್ನ ಜೀವನವನ್ನು ಜೀವಂತವಾಗಿ ಇರಿಸಿ ಹೋದ ಈ ಅಮೂಲ್ಯ ಚೈತನಕ್ಕೆ ನಮಿಸುತ್ತ, ದೇವರು ಇವರ ಆತ್ಮಕ್ಕೆ ಚಿರಶಾಂತಿ ಕೊಡಲಿ, ನಿಮ್ಮ ದೇಹ ಇರದಿದ್ದರೂ ಮನುಜನಿಗೆ ನೆರಳಾಗಿ, ಪಶು ಪಕ್ಷಿಗಳಿಗೆ ಆಸರೆಯಾಗಿ ನಿಮ್ಮ ಆತ್ಮ ಸದಾ ನಮ್ಮೊಡನೆ ಜೀವಂತವಿರುತ್ತದೆ, ಎಂದು ಹೇಳುತ್ತಾ, ಮತ್ತೊಮ್ಮೆ ಹುಟ್ಟಿ ಬನ್ನಿ…

  • ಗೀತಾಂಜಲಿ ಎನ್ ಎಮ್ – ಕೊಡಗು.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW