ರಾಜ್ಯಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ -2015 ಮತ್ತು ಕುಮಾರಿ ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿ -2025 ಪ್ರಶಸ್ತಿ ಪ್ರಕಟವಾಗಿದ್ದು, ವಿವರ ಈ ಕೆಳಗಿನಿಂತಿದೆ…
ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗಾಗಿ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿದಾಗ ರಾಜ್ಯ ಮತ್ತು ರಾಜ್ಯದಾಚೆಯಿಂದಲೂ ನಾಡಿನ ಬರಹಗಾರರಿಂದ ಕಥೆ, ಕಾದಂಬರಿ ಮತ್ತು ಕಾವ್ಯ ಈ ಮೂರು ಪ್ರಕಾರದಲ್ಲಿ ಒಟ್ಟು 149 ಕೃತಿಗಳು ಹಾಗೂ ಕು/ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿಗಾಗಿ 46 ಕೃತಿಗಳು ಬಂದಿದ್ದವು. ಬಂದಂತಹ ಕೃತಿಗಳಲ್ಲಿ ಆರಂಭಿಕ ಸುತ್ತಿನಲ್ಲಿ ಸ್ಥಳೀಯ ಹಿರಿಯ ಸಾಹಿತಿಗಳು ಕೃತಿಗಳನ್ನು ಪರಿಶೀಲಿಸಿದ ನಂತರ ತೀರ್ಪುಗಾರರಿಗೆ ನೀಡಲಾಗಿತ್ತು. ಅವರು ಕೆಳಗಿನಂತೆ ಕೃತಿಗಳನ್ನು ಆಯ್ಕೆ ಮಾಡಿರುತ್ತಾರೆ.

ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ -2025
- ಕಾದಂಬರಿ: ತೊಂಡೆ ಚಪ್ಪರ – ಶ್ರೀ ಪ್ರಮೋದ್ ಮರವಂತೆ.
- ಕಥಾಸಂಕಲನ: ಒಂದು ತೇಗದ ಕುರ್ಚಿ- ಶ್ರೀ ಸಿದ್ದು ಸತ್ಯಣ್ಣವರ
- ಕವನಸಂಕಲನ: ಅರ್ಧ ಮುಖಗಳ ಶಹರು – ಶ್ರೀಮತಿ ಶೋಭಾ ನಾಯಕ
(ಈ ಮೂವರು ಸಾಹಿತಿಗಳಿಗೆ ತಲಾ ರೂ.10,000 ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಗುವುದು)

ಕುಮಾರಿ ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿ -2025
- ಮಹಿ (ಕಾದಂಬರಿ)- ಶ್ರೀಮತಿ ವಸು ವತ್ಸಲೆ
- ಚಾರ್ಲಿ…ಚಾರ್ಲಿ ವೇರ್ ಆರ್ ಯೂ (ಕತೆಗಳು)- ಶ್ರೀ ಗುಂಡುರಾವ್ ದೇಸಾಯಿ
(ಈ ಪ್ರಶಸ್ತಿಗೆ ಇಬ್ಬರು ಸಾಹಿತಿಗಳು ಆಯ್ಕೆಯಾಗಿರುವುದರಿಂದ ಇಬ್ಬರಿಗೂ ತಲಾ ರೂ.5000 ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಗುವುದು)
ಈ ಸಾಹಿತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ನಾಡಿನ ಖ್ಯಾತ ಕವಿ, ಕಥೆಗಾರ ಡಾ. ಚಿದಾನಂದ ಸಾಲಿ, ಖ್ಯಾತ ವಿಮರ್ಶಕಿಯರಾದ ಡಾ. ತಾರಿಣಿ ಶುಭದಾಯಿನಿ, ಪ್ರಸಿದ್ಧ ಕತೆಗಾರ, ಕಾದಂಬರಿಕಾರರಾದ ಶ್ರೀ ಕಂನಾಡಿಗಾ ನಾರಾಯಣ, ಹಿರಿಯ ಮಕ್ಕಳ ಸಾಹಿತಿ ಶ್ರೀ ರಾಜಶೇಖರ ಕುಕ್ಕುಂದ ಕಾರ್ಯ ನಿರ್ವಹಿಸಿರುವರು.
ಈ ಎರಡು ಪ್ರಶಸ್ತಿಗಳಿಗೆ ನಾಡಿನ ಬರಹಗಾರರು/ಪ್ರಕಾಶಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 195 ಕೃತಿಗಳು ಬಂದಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿದ ಲೇಖಕರಿಗೆ ಮತ್ತು ಪ್ರಕಾಶಕರಿಗೆ ಧನ್ಯವಾದಗಳು. ವಿಜೇತರಿಗೆ ಪ್ರಶಸ್ತಿಪ್ರದಾನ ಸಮಾರಂಭವನ್ನು ದಿ.08.03.2026. ರವಿವಾರದಂದು ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸೆಕ್ಟರ್ ಸಂಖ್ಯೆ 24. ನವನಗರ, ಬಾಗಲಕೋಟೆಯ ಸಭಾಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ಏರ್ಪಡಿಸಿದೆ.
ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಶ್ರೀಮತಿ ಹೇಮಾ ಪಟ್ಟಣಶೆಟ್ಟಿ, ತೀರ್ಪುಗಾರರು ಮತ್ತು ಇತರ ಗಣ್ಯರು ಉಪಸ್ಥಿತರಿರುವರು.ಈ ಕಾರ್ಯಕ್ರಮಕ್ಕೆ ಪ್ರತಿಷ್ಠಾನ ದಿಂದ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ.
ಮಲ್ಲಿಕಾರ್ಜುನ ಶೆಲ್ಲಿಕೇರಿ
ಅಧ್ಯಕ್ಷರು, ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ(ರಿ) ಯಂಡಿಗೇರಿ. ಜಿಲ್ಲಾ. ಬಾಗಲಕೋಟ
- ಆಕೃತಿಕನ್ನಡ ನ್ಯೂಸ್
