ಕನ್ನಡಿಗರ ಆಸ್ತಿ, ಕನ್ನಡಿಗರ ಆಟೋರಾಜ ಶಂಕರ ನಾಗ್ ನಮ್ಮನೆಲ್ಲ ಅಗಲಿ ವರ್ಷಗಳೇ ಕಳೆದಿವೆ. ಆದರೆ ಅವರ ನೆನಪುಗಳು ಅಮರ. ಅವರ ಸವಿನೆನಪಿನಲ್ಲಿ ಕವಿ ನಿಜಗುಣಿ ಎಸ್ ಕೆಂಗನಾಳ ಅವರು ಬರೆದ ಒಂದು ಸುಂದರ ಕವನ, ತಪ್ಪದೆ ಓದಿ…
ಕನ್ನಡಿಗರ ಆಸ್ತಿ ನಮ್ಮೆಲ್ಲರ
ಹೆಮ್ಮೆಯ ಈ ಶಂಕ್ರಣ್ಣ.
ಆ ಕನ್ನಡಿಗರು ಸದಾಕಾಲ
ಇಂದಿಗೂ ಸ್ಮರಿಸುವ ಮಾಣಿಕ್ಯ
ನಮ್ಮೆಲ್ಲರ ಕರಾಟೆಕಿಂಗ್ ಈ ಶಂಕ್ರಣ್ಣನವರು.
ನಮ್ಮ ಕನಾ೯ಟಕದ ಸಾಂಗ್ಲಿಯಾನ.
ನಮ್ಮ ಕನ್ನಡಿಗರ ಪಾಲಿಗೆ ಎಂದೆಂದಿಗೂ
ಇವರೇ ಅತ್ಯುತ್ತಮ ನಟರು ನಿಮಾ೯ಪಕರು.
ನಮ್ಮ ಕನಾ೯ಟಕದ ಹೆಮ್ಮೆಯ
ಆಟೋರಾಜಾ ಇವರು.
ಈ ಧರೆಯ ಮೇಲೆ ಮತ್ತೆ ಹುಟ್ಟಿ ಬರಲಿ
ಈ ಒಂದು ಮರೆಯಲಾಗದ ಮಾಣಿಕ್ಯ.
ನಮ್ಮೆಲ್ಲರ ಆಟೋರಾಜಾ ಈ ಶಂಕ್ರಣ್ಣನವರು.
ನಮ್ಮ ಕನಾ೯ಟಕಕ್ಕೆ ಇವರೇ
ಅಂದಿಗೂ ಇಂದಿಗೂ ಎಂದಿಗೂ
ಕನ್ನಡಿಗರ ಮನ ಮೆಚ್ಚಿಸಿರುವಂತ
ನಮ್ಮೆಲ್ಲರ ಪಾಲಿನ ಸಿ.ಬಿ.ಐ ಶಂಕ್ರಣ್ಣ.
ಮತ್ತೆ ಹುಟ್ಟಿ ಬರಬೇಕು ನಮ್ಮೆಲ್ಲರ
ಅಚ್ಚುಮೆಚ್ಚಿನ ಕನ್ನಡದ ಈ ಕುಲಪುತ್ರ.
ನಟನೆಯಲ್ಲೂ ಇವರು ಉತ್ತಮರು.
ಚಿತ್ರ ನಿಮಾ೯ಣದಲ್ಲೂ ಇವರು ಅತ್ಯುತ್ತಮರು .
ಕಥೆ ಬರೆಯುವಲ್ಲೂ ಇವರೇ ಪ್ರವೀಣರು.
ನಮ್ಮ ಕನ್ನಡಿಗರ ಪಾಲಿನ ಹೆಮ್ಮೆಯ
ಕಲಾವಿದರು ನಮ್ಮೆಲ್ಲರ ಈ ಶಂಕ್ರಣ್ಣನವರು.
- ನಿಜಗುಣಿ ಎಸ್ ಕೆಂಗನಾಳ (ಸಾಹಿತಿಗಳು ರಂಗಭೂಮಿ, ಕಲಾವಿದರು) ಕಲಬುರಗಿ.
