” ಹಣದ ಪ್ರಶ್ನೆ ಬರುವುದೇ ಇಲ್ಲ, ವ್ಯಕ್ತಿಯ ವ್ಯಕ್ತಿತ್ವದ ಘನತೆಯನ್ನು ಹಣದಿಂದ ಅಳೆಯಬಾರದು. ಯಾವುದೇ ಒಬ್ಬ ಪ್ರಯಾಣಿಕನು ಕೂಡ ತಾರತಮ್ಯಕ್ಕೆ ಒಳಗಾಗಬಾರದು ಎಂಬ ಕಾಳಜಿ ನಿಮ್ಮ ಸಂಸ್ಥೆಯ ಧ್ಯೇಯವಾಗಿರಲಿ” ಎಂದು ಮಿಸ್ಟರ ರೀವ್ಸ್ ಮಾರ್ಮಿಕವಾಗಿ ಹೇಳಿದರು. ವೀಣಾ ಹೇಮಂತ್ ಗೌಡ ಪಾಟೀಲ್ ಅಂಕಣದಲ್ಲಿ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ ಅವರಿಗೆ ಒಂದು ನುಡಿ ನಮನ, ತಪ್ಪದೆ ಮುಂದೆ ಓದಿ…
ಓರ್ವ ಕರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಓರ್ವ ಪೈಲೆಟ್ ಅವಮಾನಿಸಿದ. ವಿಮಾನ ಇಳಿದ ನಂತರ ಆ ಕಾರ್ಯನಿರ್ವಾಹಕ ಅಧಿಕಾರಿ ಏನು ಮಾಡಿದ ಗೊತ್ತೇ?
ಮಾಲ್ಕಂ ರೀವ್ಸ್ ಹೆಸರಿನ ಅಧಿಕಾರಿ ತನ್ನ ಹೆಗಲಲ್ಲಿ ಲ್ಯಾಪ್ಟಾಪ್ ನ ಬ್ಯಾಗನ್ನು ಹಾಕಿಕೊಂಡು ಕೈಯಲ್ಲಿ ಬೋರ್ಡಿಂಗ್ ಪಾಸ್ ಅನ್ನು ಹಿಡಿದುಕೊಂಡು ಏರ್ಪೋರ್ಟ್ ನ ಲಾಬಿಯನ್ನು ಪ್ರವೇಶಿಸಿದ. 43ರ ಹರಯದ ಆತ ಲಂಡನ್ ನಲ್ಲಿ ಇರುವ ‘ರೀವ್ಸ್ ಗ್ಲೋಬಲ್ ಕನ್ಸಲ್ಟನ್ಸಿ’ ಎಂಬ ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು ವ್ಯಾಪಾರ ನಿಮಿತ್ತದ ಪ್ರಯಾಣಗಳು ಆತನಿಗೆ ಹೊಸದಾಗಿರಲಿಲ್ಲ. ಆದರೆ ಈ ಬಾರಿಯ ಪ್ರಯಾಣ ಆತನ ಪಾಲಿಗೆ ವಿಶೇಷವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಬಹುಕೋಟಿ ಮೌಲ್ಯದ ಕಾಂಟ್ರಾಕ್ಟ್ ಒಪ್ಪಂದಕ್ಕೆ ಆತ ಸಹಿ ಹಾಕಿದ್ದ. ಅದಕ್ಕೆ ಪ್ರತಿಫಲವಾಗಿ ಆತ ತನ್ನನ್ನು ತಾನು ಅಭಿನಂದಿಸಿಕೊಳ್ಳಲು ವಿಮಾನದಲ್ಲಿ ಮೊದಲ ದರ್ಜೆಯ ಟಿಕೆಟ್ ಅನ್ನು ಪಡೆದಿದ್ದ.
ವಿಮಾನವನ್ನು ಏರಲು ಉದ್ಘೋಷಣೆ ಕೇಳುತ್ತಿದ್ದಂತೆ ಆತ ತನ್ನ ಸ್ವಂತ ವ್ಯಕ್ತಿತ್ವ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯದಿಂದ ಗಳಿಸಿಕೊಂಡ ಶಾಂತತೆ ಮತ್ತು ಆತ್ಮವಿಶ್ವಾಸದಿಂದ ವಿಮಾನದ ಪ್ರವೇಶ ದ್ವಾರದತ್ತ ಬಂದ. ಗಗನ ಸಖಿಯರು ಆತನನ್ನು ನಗುಮುಖದಿಂದ ಸ್ವಾಗತಿಸಿ ಆತನ ಸೀಟ್ ನಂಬರನ್ನು ತೋರಿಸಿದರು.
ಇನ್ನೇನು ಆತ ತನ್ನ ಸೀಟಿನತ್ತ ಹೋಗಿ ಕುಳಿತುಕೊಳ್ಳಬೇಕು ಎಂಬಷ್ಟರಲ್ಲಿ ವಿಮಾನದ ಬಾಗಿಲು ತೆರೆದು ಅದರಿಂದ ಹೊರಬಂದ ಕೆಂಚುಗೂದಲಿನ ಬಿಳಿಯ ವರ್ಣದ ವ್ಯಕ್ತಿ ಅತ್ಯಂತ ತೀಕ್ಷ್ಣವಾಗಿ ಮಾಲ್ಕಮ್ ನನ್ನು ದಿಟ್ಟಿಸಿ ನೋಡಿದ. ನಂತರ ಮಾಲ್ಕಮ್ ನ ಕೈಯಲ್ಲಿರುವ ಬೋರ್ಡಿಂಗ್ ಪಾಸ್ ಅನ್ನು ದಿಟ್ಟಿಸಿ ನೋಡುತ್ತಾ ಅತ್ಯಂತ ತಣ್ಣಗಿನ ಸ್ವರದಲ್ಲಿ ಫಸ್ಟ್ ಕ್ಲಾಸ್ ಸೀಟುಗಳು ಮುಂದುಗಡೆ ಇವೆ ತರಗತಿಯ ಸೀಟುಗಳು ಅತ್ತಕಡೆ ಇವೆ ಎಂದು ಹಿಂದೆ ಕೈ ಮಾಡಿ ತೋರುತ್ತ ಹೇಳಿದ.
ಗಲಿಬಿಲಿಯಾದಂತೆ ಕಂಡರೂ ಮಾಲ್ಕಮ್ ಹೌದು ನನಗೆ ಗೊತ್ತಿದೆ ನನ್ನ ಬಳಿ ಇರುವುದು ಫಸ್ಟ್ ಕ್ಲಾಸ್ ಟಿಕೆಟ್ ಎಂದು ಹೇಳಿದರು. ತನ್ನ ತುಟಿಗಳನ್ನು ತುಸು ಕೊಂಕಿಸಿದ ಪೈಲೆಟ್ ಇಲ್ಲಿ ಸೀನ್ ಕ್ರಿಯೇಟ್ ಮಾಡುವುದು ಬೇಡ. ಮೊದಲ ದರ್ಜೆಯ ಟಿಕೆಟ್ ನಿನ್ನಂತವರಿಗೆ ಅಲ್ಲ. ಬೇರೆಯವರು ನಿನ್ನಿಂದ ಕಾಯುವಂತಾಗುವ ಮೊದಲು ನೀನು ಇಲ್ಲಿಂದ ಹೋಗಿ ಹಿಂದಿನ ಸ್ಥಳದಲ್ಲಿ ಕುಳಿತುಕೋ ಎಂದು ಜೋರಾಗಿ ಗದರುವಂತೆ ಹೇಳಿದ ಇಡೀ ವಿಮಾನದಲ್ಲಿ ಒಂದು ಕ್ಷಣ ನಿಶ್ಯಬ್ದ ತಾಂಡವವಾಡಿತು ಅಲ್ಲಿಯ ಗಾಳಿ ಕೂಡ ಭಾರವಾದಂತೆ ಭಾಸವಾಯಿತು . ಗಗನಸಖಿಯೊಬ್ಬಳು ಇನ್ನೇನು ಬಾಯಿ ತೆರೆಯಬೇಕು ಎಂಬಷ್ಟರಲ್ಲಿ ಪೈಲೆಟ್ ನ ಕೈಗಳು ಆಕೆಗೆ ಸುಮ್ಮನಿರುವಂತೆ ಸನ್ನೆ ಮಾಡಿದವು. ಮಾಲ್ಕಮ್ ನ ಎದೆಯಲ್ಲಿ ಬಿಸಿಯಾದ ಉಸಿರು ತುಂಬಿಕೊಂಡಂತೆ ಭಾಸವಾಗಿ ಕ್ರೋಧವನ್ನು ತನ್ನೊಳಗೆ ನುಂಗಿಕೊಂಡು ಮತ್ತೊಂದು ಮಾತನ್ನು ಹೇಳದೆ ತನಗೆ ಕೊಡ ಮಾಡಲ್ಪಟ್ಟ ಸೀಟ್ನಲ್ಲಿ ಮಾತನಾಡದೆ ಸುಮ್ಮನೆ ಕುಳಿತು ಕೊಂಡ. ಪೈಲಟ್ ಮುಖ ಸಿಟ್ಟಿನಿಂದ ಮತ್ತಷ್ಟು ಕೆಂಪಾಯಿತು. ಆದರೆ ಜನರ ವಿರೋಧಕ್ಕೆ ಹೆದರಿ ಸುಮ್ಮನೆ ಕಾಕ್ ಪಿಟ್ ಸೇರಿಕೊಂಡ.
ರೀವ್ಸ್ ಸುಮ್ಮನಿದ್ದ ನಿಜ… ಆದರೆ ಆತನ ಸುತ್ತಲ ಪ್ರಯಾಣಿಕರ ಗುಸು-ಗುಸು ಮಾತುಗಳು ನಿಲ್ಲಲಿಲ್ಲ ವಿಮಾನ ಟೇಕ್ ಆಫ್ ಮಾಡಿದ ನಂತರ ಪ್ರಥಮ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲ ಪ್ರಯಾಣಿಕರಿಗೆ ಸುಂದರವಾದ ಬೆಲೆಬಾಳುವ ಗ್ಲಾಸುಗಳಲ್ಲಿ ಶಾಂಪೇನ್ ಕೊಡಲಾಯಿತು…. ಆದರೆ ಮಾಲ್ಕಮ್ ನ ಸರದಿ ಬಂದಾಗ ಆತನಿಗೆ ಶಾಂಪೇನ್ ಕೊಡಲು ಹಿಂಜರಿದ ಗಗನಸಖಿ ಕೇವಲ ನೀರಿನ ಬಾಟಲಿಯನ್ನು ಆತನ ಕೈಗಿಟ್ಟಳು. ಅತ್ಯಂತ ಸರಳವಾಗಿ ಆಕೆಗೆ ಧನ್ಯವಾದಗಳನ್ನು ಹೇಳಿದ ಮಾಲ್ಕಮ್ ವಿಮಾನದ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದ. ಆತನ ಕಿವಿಯಲ್ಲಿ ತನ್ನ ತಂದೆ ಹೇಳಿದ ‘ಜನರು ತಮ್ಮ ಗ್ರಹಿಕೆಯ ದೃಷ್ಟಿಯಿಂದ ನಿನ್ನನ್ನು ಅಳೆಯಲು ಪ್ರಯತ್ನಿಸುತ್ತಾರೆ. ಆದರೆ ಅವರ ಗ್ರಹಿಕೆಯನ್ನು ತಪ್ಪೆಂದು ತೋರಿಸಲು ನೀನೆಂದೂ ಹಿಂಜರಿಯಬೇಡ ಎಂಬ ಮಾತು ಪದೇ ಪದೇ ಕಿವಿಯಲ್ಲಿ ಅನುರಣಿಸಿತು.
ಪ್ರಯಾಣದ ಸಂಪೂರ್ಣ ಸಮಯವನ್ನು ಆತ ಮೌನವಾಗಿಯೇ ಕಳೆದ. ಆದರೆ ಆ ಪ್ರಶಾಂತ ಮೌನದ ಹಿಂದೆ ಅಚಲ ನಿರ್ಧಾರದ ಅಲೆಗಳು ಆತನನ್ನು ತಾಗುತ್ತಿದ್ದವು ವಿಮಾನ ಇಳಿದ ಕೂಡಲೇ ತಾನೇನು ಮಾಡಬೇಕು ಎಂಬುದರ ನೀಲ ನಕ್ಷೆ ಆತನ ಮನಸ್ಸಿನಲ್ಲಿ ಮೂಡಿತು. ವಿಮಾನ ಜುರಿಕ್ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಆತ ತನ್ನ ಸೀಟ್ ಬೆಲ್ಟನ್ನು ಸಡಿಲಿಸಿದ. ಉಳಿದ ಪ್ರಯಾಣಿಕರ ದೃಷ್ಟಿ ಆತನ ಕಡೆಗೆ ಇತ್ತು. ಮುಂದೆ ನಡೆದ ಸಂಗತಿ ಇಡೀ ವಿಮಾನದ ಸಿಬ್ಬಂದಿಗಳನ್ನು ತಣ್ಣಗಾಗಿಸಿತು.
ಕಾಕ್ ಪಿಟ್ ನಿಂದ ಹೊರಬಂದ ಪೈಲೆಟ್ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರಿಗೂ ಹಸ್ತ ಲಾಘವ ಮಾಡಿ ಕಳುಹಿಸಿದ. ಇದೀಗ ಆತನ ದೃಷ್ಟಿ ಇನ್ನೂ ತನ್ನ ಸೀಟಿನಲ್ಲಿಯೇ ಕುಳಿತಿದ್ದ ಮಾಲ್ಕಮ್ ನತ್ತ ಹೊರಳಿತು. ಇಲ್ಲಿಗೆ ನಿಮ್ಮ ಪ್ರಯಾಣ ಮುಗಿಯಿತು ನೀವು ಇನ್ನು ಇಳಿಯಬಹುದು ಸರ್! ಎಂದು ತುಸು ವ್ಯಂಗ್ಯದಿಂದ ಕೂಡಿದ ದನಿಯಲ್ಲಿ ಪೈಲೆಟ್ ರೀವ್ಸ್ ಗೆ ಹೇಳಿದ.
ಖಂಡಿತವಾಗಿಯೂ ಎಂದು ಹೇಳಿದ ರೀವ್ಸ್ ಅದಕ್ಕೂ ಮುನ್ನ ನಾನು ನಿಮ್ಮ ವಿಮಾನದ ಎಲ್ಲಾ ಸಿಬ್ಬಂದಿಗಳೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿ ತನ್ನ ಕೈಯಲ್ಲಿದ್ದ ಕಪ್ಪು ಬ್ರೀಫ್ ಬ್ಯಾಗನ್ನು ತೆರೆದು ಅದರಲ್ಲಿದ್ದ ತನ್ನ ಯುರೋಪಿಯನ್ ಗುರುತಿನ ಚೀಟಿಯನ್ನು ತೋರಿಸಿದ. ಅದನ್ನು ನೋಡಿದ ಪೈಲೆಟ್ ನ ತೊಡೆಗಳಲ್ಲಿ ನಡುಕ ಹುಟ್ಟಿ ಮುಖ ಚಿವುಟಿದರೂ ಹನಿ ರಕ್ತ ಬರದಷ್ಟು ಬಿಳಿಚಿಕೊಂಡಿತು. ರೀವ್ಸ್ ಅತ್ಯಂತ ಶಾಂತವಾಗಿ ವಿಮಾನದ ಎಲ್ಲ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ನಾನು ಯುರೋಪ್ ನ ವಿಮಾನಯಾನ ಪ್ರಾಧಿಕಾರದ ಎಥಿಕ್ಸ್ ಬೋರ್ಡ್ ನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇಡಿ ಯುರೋಪ್ ನಾದ್ಯಂತ ವಿಮಾನದ ಪೈಲೆಟ್ ಸಹಿತವಾಗಿ ಎಲ್ಲ ಸಿಬ್ಬಂದಿಗಳ ನಡವಳಿಕೆಯನ್ನು ವೀಕ್ಷಿಸಿ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೇಲಧಿಕಾರಿಗಳಿಗೆ ಮಾಹಿತಿಯನ್ನು ಕಳುಹಿಸುವ ಕಾರ್ಯ ನನ್ನದು. ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರಿಗೆ ನೀವು ತೋರಿದ ದುರ್ವರ್ತನೆಗಳನ್ನು ಕುರಿತು ಮೇಲಧಿಕಾರಿಗಳಿಗೆ ದೂರನ್ನು ಸಲ್ಲಿಸುತ್ತಿದ್ದೇನೆ. ವರ್ಗ, ವರ್ಣ ಭೇದಗಳ ಮೇಲೆ ನೀವು ಯಾವುದೇ ಪ್ರಯಾಣಿಕನ ಜೊತೆ ಅನುಚಿತವಾಗಿ ವರ್ತಿಸುವುದು ತರವಲ್ಲ. ಈ ನಿಯಮಾವಳಿಗಳು ನಿಮಗೆ ಗೊತ್ತಿದ್ದು ಕೂಡ ನೀವು ಆ ನಿಯಮಗಳನ್ನು ಪಾಲಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ ಎಂದು ಹೇಳಿದನು.
ಪೈಲೆಟ್ ‘ಅದು ಹಾಗಲ್ಲ ಮಿಸ್ಟರ ರೀವ್ಸ್’ ಎಂದು ಇನ್ನೇನೋ ಹೇಳಲು ಪ್ರಯತ್ನಿಸುತ್ತಿರುವಾಗ “ಮಿಸ್ಟರ್ ಪೈಲೆಟ್… ಇಂತಹ ಘಟನೆಗಳೇ ನಮ್ಮ ವಿಮಾನಯಾನ ಸಂಸ್ಥೆಗಳ ಘನತೆಯನ್ನು ತಗ್ಗಿಸುತ್ತಿದೆ. ಇಲ್ಲಿ ನೀವು ಮಾಡುವ ತಾರತಮ್ಯ ಜನರಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ. ಇದು ಅವರ ಆತ್ಮ ಗೌರವದ ಪ್ರಶ್ನೆ. ಯಾವುದೇ ಪ್ರಯಾಣಿಕನನ್ನು ಆತನ ವರ್ಣ, ವರ್ಗ, ಲಿಂಗಗಳ ಕಾರಣ ಅವಮಾನಿಸುವ ಹಕ್ಕು ನಿಮಗಿಲ್ಲ. ಈ ಘಟನೆಯನ್ನು ದಾಖಲಿಸಲಾಗಿದ್ದು ನಿಮ್ಮ ವಿಮಾನಯಾನ ಸಂಸ್ಥೆಯವರು ಈ ಕುರಿತು ಉತ್ತಮ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ ರೀವ್ಸ್ ತನ್ನ ವಸ್ತುಗಳನ್ನು ಸಂಗ್ರಹಿಸಿ ಅಲ್ಲಿಂದ ಕಾಲ್ತೆಗೆದ.
ವಿಮಾನದಿಂದ ಹೊರ ಹೊರಟ ಕೆಲವು ಪ್ರಯಾಣಿಕರು ಈ ಘಟನೆಯನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟರು. ಕೆಲವೇ ನಿಮಿಷಗಳಲ್ಲಿ ಇಡೀ ಯುರೋಪ್ ದೇಶಾದ್ಯಂತ ಹರಿದಾಡಿದ ಈ ವಿಡಿಯೋ ಅಪಾರ ಸಂಚಲನವನ್ನು ಸೃಷ್ಟಿಸಿತ್ತು. ವಿಮಾನ ನಿಲ್ದಾಣದಲ್ಲಿ ತನ್ನ ಲಗ್ಗೇಜುಗಳನ್ನು ಸಂಗ್ರಹಿಸಿ ರೀವ್ಸ್ ಹೊರಡುವಷ್ಟರಲ್ಲಿ ಘಟನೆಯನ್ನು ಖಂಡಿಸಿ ಸಾರ್ವಜನಿಕರು “ಫ್ಲೈ ವಿತ್ ರೆಸ್ಪೆಕ್ಟ್” ಎಂಬ ಹ್ಯಾಶಟ್ಯಾಗನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟವನ್ನು ಆರಂಭಿಸಿದರು.
ರೀವ್ಸ್ ಪ್ರಯಾಣಿಸುತ್ತಿದ್ದ ವಿಮಾನಯಾನ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಧಾನಕ್ಕಾಗಿ ಯತ್ನಿಸಿದರು, ಆದರೆ ಅದನ್ನು ಸಾರಾಸಗಟಾಗಿ ನಿರಾಕರಿಸಿದ ರೀವ್ಸ್ “ಇಲ್ಲಿ ಹಣದ ಪ್ರಶ್ನೆ ಬರುವುದೇ ಇಲ್ಲ ವ್ಯಕ್ತಿಯ ವ್ಯಕ್ತಿತ್ವದ ಘನತೆಯನ್ನು ಹಣದಿಂದ ಅಳೆಯಬಾರದು ಯಾವುದೇ ಒಬ್ಬ ಪ್ರಯಾಣಿಕನು ಕೂಡ ತಾರತಮ್ಯಕ್ಕೆ ಒಳಗಾಗಬಾರದು ಎಂಬ ಕಾಳಜಿ ನಿಮ್ಮ ಸಂಸ್ಥೆಯ ಧ್ಯೇಯವಾಗಿರಲಿ” ಎಂದು ಮಾರ್ಮಿಕವಾಗಿ ಹೇಳಿದರು. ಮರುದಿನ ಫ್ರಾಂಕ್ ಫರ್ಟ್ ನಲ್ಲಿ ಆ ಏರ್ ಲೈನ್ಸ್ ನ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮಾಪಣೆ ಕೋರಿ ಹೇಳಿಕೆ ನೀಡಿದರು.
ರೀವ್ಸ್ನ ಜೊತೆ ಪೈಲಟ್ ನಡೆದುಕೊಂಡ ರೀತಿಯನ್ನು ನೋಡಿ ಜಗತ್ತಿನಾದ್ಯಂತ ಜನರು ಪ್ರತಿಕ್ರಿಯಿಸಿದರು. ಸಾಕಷ್ಟು ಜನ ಕರಿಯರು ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡರು. ಮ್ಯಾಡ್ರಿಡ್ ನ ವಿಮಾನ ಸಂಸ್ಥೆಯಲ್ಲಿ ಕಲಿಯುತ್ತಿದ್ದ ಓರ್ವ ವಿದ್ಯಾರ್ಥಿ ಕ್ರೋಧಕ್ಕಿಂತ ಘನತೆ ಹೆಚ್ಚಿನದು ನಾವು ಕರಿಯರು ಎಲ್ಲ ಕಡೆ ಸಲ್ಲುತ್ತೇವೆ ಎಂದು ನೀವು ತೋರಿಸಿಕೊಟ್ಟಿದ್ದೀರಿ ಎಂದು ಬರೆದ ಪತ್ರವನ್ನು ಆತ ಬಹುದಿನಗಳ ಕಾಲ ತನ್ನೊಂದಿಗೆ ಇಟ್ಟುಕೊಂಡಿದ್ದ.
ಒಂದು ತಿಂಗಳ ನಂತರ ಮಾಲ್ಕಂ ರೀವ್ಸ್ ಮತ್ತೊಂದು ಬಾರಿ ವಿಮಾನದಲ್ಲಿ ಪ್ರಯಾಣಿಸಬೇಕಾಯಿತು. ಈ ಬಾರಿ ವಿಮಾನ ಏರಿದ ರೀವ್ಸ್ ಅವರನ್ನು ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು. ಇದು ರೀವ್ಸ್ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ..ನಿಜ. ಒಂದು ಹೋರಾಟದಿಂದ ಏನೂ ಸಾಧನೆ ಆಗುವುದಿಲ್ಲ ನಿಜ…. ಆದರೆ ಉತ್ತಮ ಆರಂಭ ಖಂಡಿತ ಸಾಧ್ಯವಾಯಿತು. ಪ್ರತಿ ನದಿಯು ಕೂಡ ತನ್ನ ಉಗಮ ಸ್ಥಾನದಲ್ಲಿ ಸಣ್ಣ ಝರಿಯೇ ಅಲ್ಲವೇ? ಏನಂತೀರಾ ಸ್ನೇಹಿತರೇ?
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
