ಜ್ವರ ಬಂದಾಗಲೆಲ್ಲ ದೊಡ್ಡ ದೊಡ್ಡ ಸೆಲೆಬ್ರೆಟಿಗಳೆಲ್ಲ ಕನಸ್ಸಿನಲ್ಲಿ ಭೇಟಿಯಾಗುತ್ತಾರೆ, ನಿಮಗೂ ಹಾಗೇನಾ? ಎಂದು ಕೇಳುತ್ತಾರೆ ಲೇಖಕ ಮಂಜು ದೊಡ್ಡಮನಿ ಅವರು. ಜ್ವರ ಬಂದಾಗ ಏನೆಲ್ಲಾ ಆಗುತ್ತೆ ಎನ್ನುವ ಅನುಭವದೊಂದಿಗೆ ಬರೆದಿರುವ ಸುಂದರ ಲೇಖನವಿದು ನೋಡಿ…
ಇಂಗ್ಲೀಷ್ ಸಿನಿಮಾ ಅಂದ್ರೆ ಎಲ್ಲಿಲ್ಲದ ಹುಚ್ಚು ಹಿಡಸಿದ್ದು ನನ್ನ ನೆಚ್ಚಿನ ನಟರಾದ ಲಿಯೋನಾರ್ಡೋ,ಜಾನ್ ಡೆಪ್ಪ್,ವಿಲ್ ಸ್ಮಿತ್, ಟಾಮ್ ಕ್ರೂಯೀಸ್,ರಾಕ್ ಜಾಹ್ನಸನ್ ಅವರ ನಟನೆ. ಇವರನ್ನೆಲ್ಲ ನೋಡೋ ಅವಕಾಶ ಸಿಗತ್ತೆ ಅಂತ ಅನ್ಕೊಂಡಿರಲಿಲ್ಲ, ಅದೂ ಒಂದೇ ವೇದಿಕೆಯಲ್ಲಿ…! ನಂಗೆ ಬರೋ ಬಟ್ಲರ್ ಇಂಗ್ಲಿಷ್ನಲ್ಲೇ ಹಲ್ಲು ಗಿಂಜುತ್ತಾ ಹಾಯ್ ಹೇಳಿ ಫೋಟೋ ತೆಗೆಸಿಕೊಂಡಿದ್ದೂ ಆಯ್ತು…ಎಷ್ಟು ಜನಜಂಗುಳಿ ಇತ್ತು ಗೊತ್ತಾ,ಅಂತಹದರಲ್ಲಿ ನಂಗೆ ಅವಕಾಶ ಸಿಕ್ಕಿದ್ದೆ ಅದೃಷ್ಟ ಅನ್ಕೋಬೇಕು.

ಫೋಟೋ ಕೃಪೆ : flickr
ಇನ್ನೇನೂ ಅಲ್ಲಿಂದ ಇಳೀಬೇಕು ಅಂದುಕೊಂಡಾಗಲೇ ಪಕ್ಕದ ವೇದಿಕೆಯ ಸುತ್ತ ಗುಂಪೊಂದು ಜಮಾಯಿಸಿದ್ದು ಕಾಣಿಸ್ತು..ಅದೇನ್ ಪುಣ್ಯನೋ ಗೊತ್ತಿಲ್ಲ ಎರಡನೇ ಬಾರಿ ಮೋದಿಯವರನ್ನು ನೋಡೋ ಅವಕಾಶ ಸಿಕ್ಕಿದ್ದು..ಎಷ್ಟೇ ಗುಂಪು, ಗದ್ದಲವಿದ್ದರೂ ಅವರ ಹತ್ತಿರ ಸರಾಗವಾಗಿ ಹೋಗಿ ತಲುಪಿದ್ದು ನನಗಂತೂ ಆಶ್ಚರ್ಯವಾಗಿತ್ತು.ಮುಗುಳ್ನಗುತ್ತ ನಮಸ್ಕಾರದ ಎಕ್ಚೆಂಜ್ ಆಯ್ತು.ಒಂದೆರಡು ಫೋಟೋನೂ ತೆಗೆದುಕೊಂಡಿದ್ದಾಯ್ತು.ಅವರು ಕನ್ನಡದಲ್ಲಿ ಹೋಗಿ ಬನ್ನಿ ಅಂತ ಹೇಳಿದ್ದು ಎಷ್ಟು ಖುಷಿ ಅನ್ನಿಸ್ತು ಅಂದ್ರೆ, ಅದೇ ಖುಷಿಲೇ ಫೋಟೋಗಳನ್ನೆಲ್ಲ ನೋಡ್ತಾ ಕೆಳಗಿಳಿತಾ ಇದ್ದೇ sudden ನ್ನಾಗಿ ಒಂದು ಮೆಟ್ಟಿಲು ಮಿಸ್ ಆಗಿ ಎಚ್ಚರವಾಯಿತು.!
ನನ್ನ ಸಹೋದ್ಯೋಗಿ “ಜ್ವರಂ ವಚ್ಚಿಂದಿ ರಾ, ತಲ ನುಪ್ಪಿಗಾ ಉಂದಿ” ಎರಡು ದಿನ ಕೆಲಸಕ್ಕೆ ಬರೋಲ್ಲ ಅಂತ ಹೇಳಿದ್ದ.ನಾನು ನಕ್ಕು ಸುಮ್ಮನಾಗಿದ್ದೆ.ಎರಡು ದಿನ ಆದ್ಮೇಲೆ ಜ್ವರ ಕಡಿಮೆ ಆಗಿದ್ದು ಅವನಿಗೆ.

ಫೋಟೋ ಕೃಪೆ : CNN
ಆಗಿದ್ದು ಇಷ್ಟೇ ಬೆಳಗ್ಗೆ ೯ ಗಂಟೆಗೆಲ್ಲ ವ್ಯಾಕ್ಸಿನ್ ಹಾಕಿಸಿದ್ದೆ..ಅವನು ಚುಚ್ಚಿದ್ನೋ ಇಲ್ವೋ ಅನ್ನೋದೇ ಗೊತ್ತಾಗ್ಲಿಲ್ಲ…ಆಯ್ತು ಹೋಗಿ ಅಂದಾಗ್ಲೇ ಗೊತ್ತಾಗಿದ್ದು..ಅವನನ್ನೇ ಅನುಮಾನದಿಂದ ನೋಡ್ತಾ ಆಚೆ ಬಂದಿದ್ದೆ.ಸರ್ಟಿಫಿಕೇಟ್ ಬಂದಮೇಲೆ ಸ್ಟೇಟಸ್ ಹಾಕಿದ್ದೆ..ರೆಸ್ಟ್ ಮಾಡು, ಡೋಲೋ ಟ್ಯಾಬ್ಲೇಟ್ ತಗೋ,ಟೇಕ್ ಕೇರ್ ಅಂತ ಒಂದೋಂದೆ ಗೆಳೆಯರ ಮೆಸೆಜ್ ಬರ್ತಾ ಇತ್ತು..೧೧ ಗಂಟೆ ಆದ್ರೂ ಏನೂ ಆಗಿಲ್ಲ ಅಂತ ಮನದಲ್ಲೇ ನಗ್ತಾ ಇದ್ದೆ ಜೊತೆಗೆ ಅವನು ಇಂಜೆಕ್ಷನ್ ಮಾಡಿದ್ನೋ ಇಲ್ವೋ ಅಂತ ಅನುಮಾನ ಬೇರೆ ಇತ್ತು… ಶುರುವಾಯ್ತು ನೋಡಿ ಮೆಸೆಜ್ಗಳ ಜೊತೆ ಜ್ವರಾನೂ ಏರ್ತಾ ಹೋಯ್ತು..
Sudden ನ್ನಾಗಿ ಚಳಿ ಜ್ವರ ಸ್ಟಾರ್ಟ್ ಆಯ್ತು. ಕಿಡಕಿನೆಲ್ಲ ಮುಚ್ಚಿ,ಫ್ಯಾನ್ ಆಫ್ ಮಾಡಿ,ಇರೋ ಎರಡು ಜಾಕೆಟ್ ಹಾಕೊಂಡು ಒಂದು ಕಪ್ ಬ್ಲ್ಯಾಕ್ ಕಾಫಿ ಕುಡಿದು,ಒಂದು ಡೋಲೋ ಟ್ಯಾಬ್ಲೇಟ್ ಹಾಕೊಂಡು ಇರೋ ಎರಡೂ ಬೆಡ್ ಶೀಟ್ ಹೊದ್ದು ಮಲಗಿದ್ದು. ಮೇಲಿನ ಕನಸು ಬಿದ್ದು sudden ನ್ನಾಗಿ ಎಚ್ಚರ ಆಯ್ತು ನೋಡಿದ್ರೆ ಬಟ್ಟೆಯೆಲ್ಲ ಬೆವರು, ಕೇವಲ ಎರಡು ಗಂಟೆಗೆಲ್ಲ ಬಂದಿದ್ದ ಜ್ವರ ಎಲ್ಲ ಇಳಿದು ಅರಾಮ್ ಅನ್ಸಿದ್ದು. ಜ್ವರ ಬಂದಾಗಲೆಲ್ಲ ಈ ರೀತಿ ಸೆಲೆಬ್ರಿಟಿಗಳನ್ನೆಲ್ಲ ಮೀಟ್ ಆಗ್ತಾನೇ ಇರ್ತೀನಿ….
ಕಳೆದ ಸಾರಿ ಜ್ವರ ಬಂದಾಗ ನಮ್ಮ ಸುದೀಪ್ ಸರ್,ಪುನಿತ್ & ಜಾಕಿ ಚಾನ್ ಮೀಟ್ ಆಗಿದ್ದರು…
ಜ್ವರಾ ಬಂದಾಗ ನಿಮಗೂ ಹೀಗೆನಾ…!
- ಮಂಜು ದೊಡ್ಡಮನಿ (ಯುವ ಲೇಖಕರು)
