‘ಹಲಗಲಿ ಬೇಡರ ದಂಗೆ’ ನಾಟಕದ ವಿಡಿಯೋ



ಖ್ಯಾತ ನಾಟಕಕಾರ ಹೂಲಿಶೇಖರ ಅವರ ಹಲಗಲಿ ಬೇಡರ ದಂಗೆ ನಾಟಕವನ್ನು ವಿಜಯನಗರ ಬಿಂಬ ತಂಡ ಇತ್ತೀಚಿಗೆ ಮಲತ್ತಹಳ್ಳಿ ಕಲಾಗ್ರಾಮದಲ್ಲಿ ಪ್ರದರ್ಶನ ಮಾಡಿತು, ನಾಟಕದ ಕೆಲವು ದೃಶ್ಯಗಳ ವಿಡಿಯೋ ಇಲ್ಲಿದೆ…

ಅಂಗ್ರೇಜಿ ಸರ್ಕಾರ ಹಲಗಲಿ ಬೇಡರ ಹತ್ತಿರದಲ್ಲಿದ್ದ ಶಸ್ತ್ರ ಅಸ್ತ್ರಗಳನ್ನು ತಮಗೆ ಒಪ್ಪಿಸುವಂತೆ ಆದೇಶ ನೀಡಿದಾಗ, ಬೇಡರು ನಮ್ಮ ಪ್ರಾಣವನ್ನೇ ಕೊಟ್ಟೆವು… ನಮ್ಮ ಅಸ್ತ್ರಗಳನ್ನ ಕೊಡಲಾರೆವು…ರಕ್ತ ಹರಿದರೂ ಸರಿ… ಎಂದು ತಮ್ಮ ಆಕ್ರೋಶವನ್ನು ಅಂಗ್ರೇಜಿ ಸರ್ಕಾರದ ವಿರುದ್ಧ ತೋರಿಸುತ್ತಾರೆ. ಬೇಡರು ತಮ್ಮ ಸ್ವಾಭಿಮಾನದ ಬದುಕನ್ನು ಮಾರಿಕೊಂಡು ಬದುಕಲು ಸುತಾರಾಮ ಒಪ್ಪದಿದ್ದಾಗ ಅಗ್ರೇಜಿ ಸರ್ಕಾರಕ್ಕೆ ದೊಡ್ಡ ತಲೆನೋವಾಗುತ್ತದೆ, ಅವರನ್ನು ಮೋಸದಿಂದ ಕೊಲ್ಲಬೇಕೆಂದು ನಿರ್ಧರಿಸದ ಅಂಗ್ರೇಜಿ ಸರ್ಕಾರ ಹಲಗಲಿ ಬೇಡರು ಚಿಂತೆ ಬಿಟ್ಟು ಮಲಗಿದ್ದಾಗ ಕಳ್ಳರಂತೆ ಬಂದು ಮಕ್ಕಳು ಮರಿ ಎನ್ನದೆ ಪ್ರತಿಯೊಬ್ಬರ ಮೇಲೂ ಗುಂಡನ್ನು ಹಾರಿಸಿ ಬೇಡರ ರಕ್ತದ ಮೇಲೆ ತಮ್ಮ ವಿಜಯೋತ್ಸವದವನ್ನು ಆಚರಿಸುತ್ತದೆ.

ಈ ನಾಟಕವು  ‘ಹಲಗಲಿ’ ಎನ್ನುವ ಊರಿನಲ್ಲಿ ನಡೆದ ಸತ್ಯಾಧಾರಿತ ಕತೆಯಾಗಿದ್ದು, ಹಲಗಲಿ ಬೇಡರು ಅಂಗ್ರೇಜಿ ಕೆಂಪು ಮೂತಿ ಸರ್ಕಾರದ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟದ ಕಥನ.

ಇದನ್ನು ಖ್ಯಾತ ನಾಟಕಕಾರ ಹೂಲಿಶೇಖರ್ ಅವರು ೩೫ ವರ್ಷಗಳ ಹಿಂದೆ  ಬರೆದಂತಹ ನಾಟಕ. ಹೂಲಿಶೇಖರ್ ಅವರೇ ಮೊದಲು  ಬಣ್ಣ ಹಚ್ಚಿ ರಂಗ ಪ್ರಯೋಗ ಮಾಡಿದ್ದರು. ಇದು  ಬೇರೆ ಬೇರೆ ಭಾಷೆಗಳಲ್ಲಿ, ಬೇರೆ ಬೇರೆ ತಂಡಗಳ ಮುಖಾಂತರ ಸುಮಾರು  ೩೦೦ ಕ್ಕೂ ಹೆಚ್ಚು ವೇದಿಕೆಗಳಲ್ಲಿ ರಂಗ ಪ್ರಯೋಗವನ್ನು ಕಂಡಂತಹ ನಾಟಕ.

‘ವಿಜಯನಗದ ಬಿಂಬ’ ತಂಡವು ಈ ನಾಟಕವನ್ನು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಇತ್ತೀಚೆಗಷ್ಟೇ ರಂಗ ಪ್ರಯೋಗವನ್ನು ಮಾಡಿತು, ಡಾ. ಎಸ್.ವಿ. ಕಶ್ಯಪ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಯಿಂದ ಕಲಾವಿದರನ್ನು ಇನ್ನಷ್ಟು ಹುರುದುಂಬಿಸಿತು.

ಈ ನಾಟಕದಲ್ಲಿ ಭಾಗವಹಿಸಿದ್ದ ಕಲಾವಿದರೆಲ್ಲ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಇನ್ನೊಂದು ವಿಶೇಷ.

ಸಿನಿಮಾಗಳ ಆರ್ಭಟದ ಮಧ್ಯೆದಲ್ಲಿ ಪ್ರೇಕ್ಷಕರ ಗ್ಯಾಲರಿ ತುಂಬಿ ತುಳುಕುತ್ತಿದ್ದನ್ನು ನೋಡಿದ ಮೇಲೆ ಒಂದು ಒಳ್ಳೆಯ ನಾಟಕ ಗೆದ್ದಿತು ಎನ್ನುವ ಸಂತೋಷ ಸಿಕ್ಕಿತು.

ಬಿಂಬ ತಂಡಕ್ಕೆ ಶುಭವಾಗಲಿ…

ಉದೋ… ಉದೋ… ಹುಲಿಗೆವ್ವಾ…

ನಾಟಕದ ಕೆಲವು ದೃಶ್ಯಗಳ ಈ ವಿಡಿಯೋದಲ್ಲಿ ನೋಡಬಹುದು.

ನಾಟಕ ಹಾಗು ಬಿಂಬ ತಂಡದ ಕುರಿತು ನಾಟಕ ರಚನಕಾರ ಹೂಲಿಶೇಖರ್ ಅವರು ಮಾತಾಡಿದ ಕ್ಷಣ : 


  • ಶಾಲಿನಿ ಹೂಲಿ ಪ್ರದೀಪ್

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW