ತವರು ನೆಲದಲ್ಲಿ ಕರುಳಿನ ಬಳ್ಳಿ ನೆಟ್ಟವರು!

ಹೂಲಿಶೇಖರ್ ಅವರ ‘ಸ್ವಾತಂತ್ರ್ಯದ ಕಿಡಿಗಳು’ ಮತ್ತು ‘ಹೂಲಿ ರಂಗ ಶಿಖರ’ ಕೃತಿಯ ಕುರಿತು ಹಾವೇರಿಯ ಲೇಖಕರಾದ ಅರಳಿಕಟ್ಟಿ ಗೂಳಪ್ಪ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಸ್ವಾತಂತ್ರ್ಯದ ಕಿಡಿಗಳು ಮತ್ತು ಹೂಲಿ ರಂಗ ಶಿಖರ
ಲೇಖಕರು : ಹೂಲಿ ಶೇಖರ್
ಪ್ರಕಾಶನ : ಆಕೃತಿಕನ್ನಡ ಪ್ರಕಾಶನ

ಬೆಲೆ : 150.00 ಮತ್ತು 500.00
ಖರೀದಿಗಾಗಿ : 99459 39436 – ಸಾಹಿತ್ಯಲೋಕ 

ನಾನು 2003-04 ರಲ್ಲಿ ಬಿ.ಎ ಅಂತಿಮ ವರ್ಷದಲ್ಲಿ ಓದ್ದುತ್ತಿದ್ದೆ. ಆಗ ಈಟಿವಿ ಕನ್ನಡ ವಾಹಿನಿಯಲ್ಲಿ ರಾತ್ರಿ ಮೂಡಲ ಮನೆ ಧಾರಾವಾಹಿ ಪ್ರಸಾರವಾಗುತ್ತಿತ್ತು. ಆಗ ಅದು ನಮ್ಮ ಕುತೂಹಲ ಮತ್ತು ಆಸಕ್ತಿಗೆ ಕಾರಣವಾಗಿತ್ತು. ಉತ್ತರ ಕರ್ನಾಟಕದ ಭಾಷಾ ಸೊಗಡು, ಗ್ರಾಮೀಣ ಪ್ರದೇಶದ ಸಂಪ್ರದಾಯ ಮತ್ತು ರೇಣುಕಮ್ಮ ಮುರಗೋಡ, ಸುನಿಲ್ ಪುರಾಣಿಕ್, ವೀರಣ್ಣ ಪತ್ತಾರ ಸೇರಿದಂತೆ ಬಹುತೇಕ ಕಲಾವಿದರು ನಮ್ಮ ಭಾಗದವರು ಎಂಬ ಅಭಿಮಾನ ಒಂದೆಡೆಯಾದರೆ ; ವೈಶಾಲಿ ಕಾಸರವಳ್ಳಿ ಅವರೊಂದಿಗೆ ಚಿತ್ರಕಥೆ – ಸಂಭಾಷಣೆ ಹೂಲಿಶೇಖರ ಸರ್ ಅವರದ್ದಾಗಿತ್ತು. ಡಾ.ಚಂದ್ರಶೇಖರ ಕಂಬಾರ ಅವರ ಶೀರ್ಷಿಕೆ – ಸಾಹಿತ್ಯ ಸಂಗೀತಕ್ಕೆ ಸಂಗೀತಾ ಕಟ್ಟಿ ಹಿನ್ನೆಲೆ ಗಾಯಕಿ. ಹೀಗಾಗಿ ಈ ಧಾರಾವಾಹಿ ಮನೆ ಮಂದಿಯನ್ನು ಆಕರ್ಷಿಸಿತ್ತು.

ಹೀಗೆ ನಮ್ಮನ್ನು ಆಕರ್ಷಿಸಿದ ಧಾರವಾಹಿಯ ಸಂಭಾಷಣೆ ಹೂಲಿಶೇಖರ ಸರ್ ಅವರದ್ದು ಎಂಬುದು ತಿಳಿದಿತ್ತು. ಆದರೆ ಅವರೊಂದಿಗೆ ಒಡನಾಟವಿರಲಿಲ್ಲ. ಕಳೆದ ವಾರ ಅವರು ನನಗೆ ಕಳಿಸಿದ ಎರಡು ಪುಸ್ತಕಗಳ ಪೈಕಿ ಸ್ವಾತಂತ್ರ್ಯದ ಕಿಡಿಗಳು ಎಂಬ ಎರಡು ನಾಟಕಳನ್ನೊಳಗೊಂಡ ಸ್ವಾತಂತ್ರ್ಯದ ಕಿಡಿಗಳು ಅತ್ಯಾಪ್ತವಾಯಿತು. ಸ್ವಾತಂತ್ರ್ಯ ಹೋರಾಟಗಾರರ ಕುರಿತು ನನಗಿರುವ ಆದರಾಭಿಮಾನ ಹೂಲಿ ಶೇಖರ್ ಸರ್ ಅವರು ನನಗೆ ಭಾವನಾತ್ಮಕವಾಗಿ ಮತ್ತಷ್ಟು ಹತ್ತಿರವಾದರು. ಬಂಟ ಅಮಟೂರು ಬಾಳಪ್ಪ ಮತ್ತು ಹಲಗಲಿ ಬೇಡರು ನಾಟಕಗಳು ನಮ್ಮ ನೆಲದ ನೈಜ ಪರಂಪರೆಯ ವಾರಸುದಾರಿಕೆಯನ್ನು ಪ್ರತಿನಿಧಿಸಿವೆ.

ಇನ್ನೂ ಹೂಲಿ ಶೇಖರ ಸರ್ ಅವರ 70 ನೇ ವರ್ಷದ ಅಭಿನಂದನ ನಿಮಿತ್ತ ಪ್ರಕಟವಾಗಿರುವ ‘ಹೂಲಿ ರಂಗ ಶಿಖರ’ ಅಭಿನಂದನ ಗ್ರಂಥಕ್ಕೆ ಲೇಖನ ಬರೆದವರನ್ನು ನಾನು ಬಲ್ಲೆ. ಹೀಗಾಗಿ ಅವರ ಬದುಕಿನ ಮಗ್ಗುಲುಗಳನ್ನು ತಿಳಿಯಲು ಸಾಧ್ಯವಾಯಿತು. ಅದಕ್ಕಾಗಿ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು.

2007ರಿಂದ ನಾನು 2011ರವರೆಗೆ ಬೆಳಗಾವಿ ಜಿಲ್ಲಾ ಈಟಿವಿ ಕನ್ನಡದ ವರದಿಗಾರನಾಗಿದ್ದೆ. ಆ ಸಂದರ್ಭದಲ್ಲಿ ಸವದತ್ತಿಯಲ್ಲಿ ಜರುಗುತ್ತಿದ್ದ ರಟ್ಟರ ಉತ್ಸವ, ಕಿತ್ತೂರಿನಲ್ಲಿ ಕಿತ್ತೂರು ಉತ್ತವ, ಎರಡನೇ ವಿಶ್ವ ಕನ್ನಡ ಸಮ್ಮೇಳನ, ಗಡಿ ನಾಡು ಕನ್ನಡ ಸಮ್ಮೇಳನಗಳಲ್ಲಿ ಪಾಲ್ಗೊಂಡು ವರದಿ ಮಾಡುತ್ತಿದ್ದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ನೆಲದ ಹಿರಿಮೆ ಅರಿತಿದ್ದೆ. ಅದರಲ್ಲಿ ಹೂಲಿ ಊರು ಕೂಡ ಒಂದು. ಸೊಗಲದ ಜಲಪಾತದಲ್ಲಿ ಈಜಾಡಿದ್ದು, ಮಡಿವಾಳ ಮಾಚಯ್ಯ ಲಿಂಗೈಕ್ಯರಾದ ಬೈಲಹೊಂಗಲ ತಾಲೂಕಿನ ಕಾರಿಮನಿ, ಡೋಹರ ಕಕ್ಕಯ್ಯನವರ ಕಕ್ಕೇರಿಯಂಥ ಶರಣ ಪರಂಪರೆಯ ನೆಲವನ್ನು, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪನವರಂಥ ಧೀರರ ಇತಿಹಾಸ ತಿಳಿದು ತಲೆಬಾಗಿರುವೆ.

ಇಂಥ ವಿಭಿನ್ನ ಹಿನ್ನೆಲೆಯ ನೆಲದಿಂದ ಬದುಕು ರೂಪಿಸಿಕೊಳ್ಳಲು ಬೇರೆಡೆ ಸಾಗಿರುವ ಹೂಲಿ ಶೇಖರ ಸರ್ ತಮ್ಮ ತವರು ನೆಲದ ನಂಟನ್ನು ಮರೆತಿಲ್ಲ. ಸಂಶಯವಿದ್ದರೆ ಅವರ ನಾಟಕಗಳು, ಧಾರವಾಹಿಗಳು, ಲೇಖನಗಳು ಮತ್ತು ಪುಸ್ತಕಗಳು ಪುರಾವೆ ನೀಡುತ್ತವೆ.

ಹೀಗೆ ತವರು ನೆಲದಲ್ಲಿ ಕರುಳಿನ ಬಳ್ಳಿ ನೆಟ್ಟ ಹೂಲಿ ಶೇಖರ ಸರ್ ಅವರಿಗೆ ಧನ್ಯವಾದಗಳು.


  • ಅರಳಿಕಟ್ಟಿ ಗೂಳಪ್ಪ – ಹಾವೇರಿ, ಲೇಖಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW