‘ಹೌದಾದರೆ ಹೌದೆನ್ನಿ ಇಲ್ಲವಾದರೆ ಇಲ್ಲವೆನ್ನಿ’ ಕವನ

‘ಸತ್ಯವಂತರಿಗಿಂತಲೂ ಮಿಥ್ಯವಂತರಿಗೆ ಈಗ ಕಾಲ !’ … ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ.ಸಿದ್ದು ಸಾವಳಸಂಗ ಅವರ ಕವನವನ್ನು ತಪ್ಪದೆ ಮುಂದೆ ಓದಿ…

ಒಳ್ಳೆಯವರಿಗಿಂತಲೂ
ದುಷ್ಟರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ಪ್ರಾಮಾಣಿಕರಿಗಿಂತಲೂ
ಮೋಸಗಾರರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ಸತ್ಯವಂತರಿಗಿಂತಲೂ
ಮಿಥ್ಯವಂತರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ದುಡಿಯುವವರಿಗಿಂತಲೂ
ಸೋಮಾರಿಗಳಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ಕಾಪಾಡುವವರಿಗಿಂತಲೂ
ಕೊಲ್ಲುವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ಕರುಣಾಮಯಿಗಳಿಗಿಂತಲೂ
ಕೆಟ್ಟಕಟುಕರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ತಾಳ್ಮೆ ತೋರುವವರಿಗಿಂತಲೂ
ಗಡಿಬಿಡಿ ಮಾಡುವವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ಸಹನಾವಂತರಿಗಿಂತಲೂ
ಮತ್ಸರ ಪಡುವವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ಸಹಾಯ ಮಾಡುವವರಿಗಿಂತಲೂ
ಮೋಜು ನೋಡುವವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

ನೀವು ಏನೇ ಮಾಡಿದರೂ
ಮೇಲೊಬ್ಬನಿದ್ದಾನೆ ಎಲ್ಲವನ್ನು ನೋಡಲು !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!

  • ಪ್ರೊ. ಸಿದ್ದು ಸಾವಳಸಂಗ (ಕಾವ್ಯನಾಮ – ಚಿರಂಜೀವಿ) – ತಾಜಪುರ,  ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು ವಿಜಯಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW