‘ಇದ್ದೇನಯ್ಯಾ ಇಲ್ಲದಂತೆ’ ಪುಸ್ತಕ ಪರಿಚಯ

ಲೇಖಕಿ ಶಶಿಕಲಾ ವೀರಯ್ಯ ಸ್ವಾಮಿ ವಸ್ತ್ರದ ಅವರ ‘ಇದ್ದೇನಯ್ಯಾ ಇಲ್ಲದಂತೆ’ ಕಾದಂಬರಿ ರೂಪದ ಆತ್ಮಕಥೆಯ ಕುರಿತು ಡಾ. ಎಸ್ ವಿ ಪ್ರಭಾವತಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಇದ್ದೇನಯ್ಯಾ ಇಲ್ಲದಂತೆ
ಪ್ರಕಾರ : ಕಾದಂಬರಿ ರೂಪದ ಆತ್ಮಕಥೆ
ಲೇಖಕರು : ಶಶಿಕಲಾ ವೀರಯ್ಯ ಸ್ವಾಮಿ ವಸ್ತ್ರದ
ಪ್ರಕಾಶನ : ಬಿ ಬಿ ಸಿ ಪಬ್ಲಿಕೇಷನ್ಸ ( ಬೆಳಗೆರೆ ಬುಕ್ಸ & ಕಾಫಿ ) ೨೦೧೪ .
ಪುಟ : ೩೧೮ 
ಬೆಲೆ : ೨೦೦

ಇದು ರವಿ ಬೆಳಗೆರೆ ಅವರಿಗೇ ಅರ್ಪಣೆಯಾಗಿದೆ. ಮಲ್ಲಿಕಾ ಘಂಟಿ ಮುನ್ನುಡಿ ಬರೆದಿದ್ದಾರೆ. ಪುರುಷ ಪ್ರಧಾನ ಸಂಸ್ಕೃತಿಯು ಒತ್ತುವ ಮೌಲ್ಯಗಳೇ ಬೇರೆ ಹೆಣ್ಣಿನ ಅಂತರಂಗವು ಪರಿಭಾವಿಸುವ ಮೌಲ್ಯಗಳೇ ಬೇರೆ ಎಂಬುದನ್ನು ಗಾಢವಾಗಿ ನಂಬಿದವರು ಮಲ್ಲಿಕಾ ಘಂಟಿ ಮತ್ತು ಶಶಿಕಲಾ. ಅದನ್ನು ಅತ್ಯಂತ ಸಹೃದಯತೆಯಿಂದ ನೋಡುವ ನಾನು ಪ್ರಭಾವತಿ ಈ ಮೂವರೂ ಸೇರಿದರೆ ಇದು ವಿಮರ್ಶೆಯಾಗುವುದಿಲ್ಲ ಕಾವ್ಯವಾಗುತ್ತದೆ ಅಷ್ಟೇ .

ಕರ್ನಾಟಕ ಲೇಖಕಿಯರ ಸಂಘವು ಹೊರತಂದ ಲೇಖ – ಲೋಕ ಸಂಪುಟಗಳನ್ನು ನಾನು ಬಹುವಾಗಿ ಮೆಚ್ಚಿ ಅಲ್ಲಿ ಇಲ್ಲಿ ಬರೆಯಲು ಮಾತನಾಡಲು ಕಾರಣರಾದವರು ಇಬ್ಬರು . ಅಲ್ಲಿಯ ಲೇಖನಗಳಲ್ಲಿ ತಮ್ಮ ಬಗ್ಗೆ ಪ್ರಾಮಾಣಿಕ ವಾಗಿ ಬರೆದು ಕೊಂಡ ಸಂಧ್ಯಾ ರೆಡ್ಡಿ ಮತ್ತು ಶಶಿಕಲಾ. ಆ ಲೇಖನದ ವಿಸ್ತೃತ ರೂಪವೇ ಈ ಕಾದಂಬರಿ . ಬಿಜಾಪುರ ದ ಭಾಷೆ ಯನ್ನೇ ಬಳಸುವಂತೆ ಹೇಳಿದ ತೇಜಸ್ವಿ , ನಿವೃತ್ತಿ ಯ ನಂತರ ವೃತ್ತಿ ಕೊಟ್ಟು ಕಾಪಾಡಿದ ರವಿ ಬೆಳಗೆರೆ, ಪುಸ್ತಕ ಕ್ಕೆ ದುಡಿದ ಯಶೋಮತಿ, ವೀರೇಶ್… ಎಲ್ಲರ ಶ್ರಮವೂ ಇಲ್ಲಿ ಸೇರಿದೆ. ನಾನು ಬಹುವಾಗಿ ಮೆಚ್ಚಿ ದ ಲೇಖನವೇ ಹೀಗೆ ಪುಸ್ತಕ ವಾಗಿ ಶಶಿಕಲಾ ನೇ ಹೀಗೆ ನೀಲಕ್ಕನಾಗಿ …….ಈಗಾಗಲೇ ಕರ್ಮವೀರದಲ್ಲಿ ಧಾರಾವಾಹಿಯಾಗಿ, ಚಂದನವಾಹಿನಿಯಲ್ಲಿ ಚರ್ಚೆಯಾಗಿ ಇಂಥದೊಂದು ಪುಸ್ತಕದ ಬಗ್ಗೆ ನಾನೇನು ಬರೆಯಬಲ್ಲೆ. ಅವಳು ನಗಿಸಿದಾಗ ನಕ್ಕು ಅಳಿಸಿದಾಗ ಅತ್ತು ಕೊನೆ ಕೊನೆಯ ಪುಟ ಗಳಿಗೆ ಬಂದಾಗ ಅವಳ ಧೀ ಶಕ್ತಿ ಗೆ ನಮೋ ಎಂದು ತಲೆ ಬಾಗಿ ಒಂದು ಥರಾ mesmarise ಆಗಿಬಿಡುವ ನಾನು ಏನು ಬರೆಯಬಲ್ಲೆ.

ಶಶಿಕಲಾ ವೀರಯ್ಯ ಸ್ವಾಮಿ ವಸ್ತ್ರದ

ಬಿಜಾಪುರದ ಮಹಿಳಾ ವಿ ವಿ ದ ಮಹಿಳಾ ಸಾಹಿತ್ಯ ಚರಿತ್ರೆಯ ಕಾವ್ಯ ಸಂಪುಟಕ್ಕೆ ಒಂದು ಲೇಖನ ಕೊಡಿ ಎಂದು ನಾನು ಪೀಡಿಸುತ್ತಿದ್ದಾಗ ಆತ್ಮಕಥೆ ಬರೆಯುತ್ತಿರುವೆ ಬಿಡುವಿಲ್ಲ ಅಂದಿದ್ದರು. ಅನಂತರ ಅವರ ಸಂಪಾದಿತ ಕೃತಿ ” ಪ್ರಣಯಿನಿ” ( ಇದರಲ್ಲಿ ನನ್ನ ಎರಡು ಕವಿತೆ ಗಳಿವೆ ) ಯ ಮುನ್ನುಡಿ ಯನ್ನೇ ಬಳಸಿಕೊಳ್ಳಲು ಹೇಳಿದ್ದರು . ಅದು ೨೦೧೦ ರ ಹಿಂದೆ ಮುಂದೆ. ಈಗ…. ನಾನೇನು ಬರೆಯಬಲ್ಲೆ ಎಲ್ಲಾ ವಿಶಿಷ್ಟ ಕೃತಿಗಳಂತೆಯೇ ನೀಲಾಳ ಬಾಲ್ಯದ ವಿವರಗಳು…. ಊರು ಗುಡಿ ಸಾಲೆ ಹಬ್ಬ ಹರಿದಿನ ಊಟ ಉಡುಗೆ …. ಚಿತ್ರ ವತ್ತಾಗಿ ಕಣ್ಣಿಗೆ ಕಟ್ಟುವಂತೆ ಇವೆ . ಅಲ್ಲೊಂದು ಕಲ್ಲು ಅದಕ್ಕೆ ಕೈ ಮುಗಿದು ಬರದಿದ್ದರೆ ಮಗು ಅಳು ನಿಲ್ಲಿಸುವುದಿಲ್ಲ. ಮಣ್ಣಿನ ಒಲೆ ಒಡೆದರೆ ಅಪಶಕುನ – ರೂಪಾ ಜೋಷಿ ಅವರ “ಶೃಂಖಲಾ” ದಲ್ಲಿ ತೇರಿಗೆ ಎಸೆಯಬೇಕಿದ್ದ ಖರ್ಜೂರ ಕೆಳಕ್ಕೆ ಬಿದ್ದು ಹೋದದ್ದು. ಇನ್ನೊಂದು ಖರ್ಜೂರ ಎಸೆಯುವಷ್ಟರಲ್ಲಿ ತೇರೇ ಮುಂದೆ ಹೊರಟು ಹೋದದ್ದು – ಹೀಗೆ ಇಂತಹ ವಿವರಗಳು ಇಲ್ಲೂ ಇವೆ ಶುಭ ನುಡಿಯದ ಈ ಶಕುನದ ಹಕ್ಕಿಗೆ ಶೃಂಖಲಾದ ನಾಯಕಿಯಾಗಲಿ ನೀಲಕ್ಕನಾಗಲಿ ಮಣಿಯದಿರುವುದೇ ಹೆಮ್ಮೆಯ ಸಂಗತಿ .

ಬಾಲ್ಯದ ವಿವರಗಳಲ್ಲಿ ಚಿಕ್ಕದೋ ದೊಡ್ಡದೋ ಹೇಳಿಕೊಳ್ಳಲೂ ಆಗದ. ಮರೆತೂಬಿಡಬೇಕಾದ ಲೈಂಗಿಕ ಶೋಷಣೆ, ಸೋದರ ಮಾವನ ಸಂಬಂಧ ಮದುವೆ ಯಾಗಿ ಹೆಂಡತಿಯಿದ್ದೂ ಮಗುವಾಗಲಿಲ್ಲವೆಂದು ನೀಲಾನ್ನ ಮದುವೆಯಾಗಿ ಆಮೇಲೆ ಮೊದಲ ಹೆಂಡತಿಗೇ ಮಕ್ಕಳಾಗುವ ನೀಲಾಗೆ ಮಗುವೇ ಆಗದಿರುವ ವಿಷಾದ ಬದುಕಿನುದ್ದಕ್ಕೂ ಹರಡಿದೆ.

ಶಶಿಕಲಾ ಗಿರಿಜಮ್ಮ ಮಗುವಿಗಾಗಿ ಹಂಬಲಿಸುವುದನ್ನು ನೋಡಿ ದರೆ ಒಂದು ಕಾಲದಲ್ಲಿ ನಾನೂ ಹಾಗೆ ಆಡಿದ್ದು ನೆನಪಾಗಿ ನಗು ಬಂತು. ಆದರೆ ಮಕ್ಕಳಿದ್ದೂ ನಾನು ಒಬ್ಬಂಟಿ. ಇವರಿಬ್ಬರಿಗೂ ಮಗುವಾಗದಿದ್ದರೂ ಬಂಧು ಬಳಗ ಸುತ್ತ ಮುತ್ತ . ಎಂತಹ ಆಭಾಸ. ಅಬ್ಬಾ ಈ ಬದುಕೇ ….ಆದರೆ ನನ್ನನ್ನು ಕಾಡುವುದೆಂದರೆ ಮಗುವಿಗಾಗಿ ಒಬ್ಬನನ್ನೇ ನಂಬುವುದೇಕೆ ಅವನಲ್ಲದಿದ್ದರಿನ್ನೊಬ್ಬ … ಅವನಂಥವನಿನ್ನೊಬ್ಬ … ನನ್ನ ದೇ ಕವಿತೆ ಯ ಸಾಲು …

ಅಚ್ಚು ಕಟ್ಟಾಗಿ ಸೀರೆ ಯುಟ್ಟು ಸೆರಗು ಪಿನ್ ಮಾಡಿ .. ಪಾಠ ಮಾಡುವ ಭಾಷಣ ಮಾಡುವ ಕವಿತೆ ಓದುವ ಶಶಿಕಲಾ ನೇ ಬೇರೆ …. ಈ ನೀಲಾನೇ ಬೇರೆ ..ಯವನಿಕಾ ಸಭಾಂಗಣ ದಲ್ಲಿ ಅಂತರರಾಜ್ಯ ಕವಿಗೋಷ್ಟಿ . ಬೇರೆ ಭಾಷೆಯ ಕವಿಯೊಬ್ಬ – ರಸಿಕ – ನಿಮ್ಮ body language ಚೆನ್ನಾಗಿದೆ ಎಂದು ಶಶಿಕಲಾ ಗೆ ಹೇಳಿದಾಗ ನನಗೆ ಅಸೂಯೆ ಅನಿಸಿತ್ತು ಏಕೆಂದರೆ ಕವಿ ಗೋಷ್ಠಿ ಯಲ್ಲಿ ನನ್ನ ಹೆಸರಿರಲಿಲ್ಲ ! ಇಂಥವು ಸಾವಿರ ನೆನಪು ಗಳು ಏನೆಂದು ಬರೆಯಲಿ ಎಷ್ಟೆಂದು ಬರೆಯಲಿ . ರವಿ ಬೆಳಗೆರೆ ಯವರು ಪ್ರಕಾಶಕರ ಮಾತು ಎಂಬ ಚಿಕ್ಕ ಬರಹದಲ್ಲಿ ಕೆಲವೇ ಮಾತುಗಳಲ್ಲಿ ಬಹಳಷ್ಟು ಹೇಳಿದ್ದಾರೆ . ಎರಡೂ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಹಿರಿಮೆ ಇವರದು . ಬೆಳಗಾವಿ ಯ ಸಮ್ಮೇಳನ ಕ್ಕೆ ಬಂದ ವಿಶ್ವ ಸುಂದರಿ ಹನ್ನೊಂದು ಲಕ್ಷ ಸಂಭಾವನೆ ಪಡೆದು ಬರೆದು ಕೊಂಡು ಬಂದ ಉರುಹೊಡೆದು ಕನ್ನಡ ಭಾಷಣವನ್ನು ಎರಡು ನಿಮಿಷ ದಲ್ಲಿ ಒಪ್ಪಿಸಿದ . ಆಕೆ ತಮ್ಮ ಪಕ್ಕದ ಕುರ್ಚಿ ಯಲ್ಲಿ ಕೂಡುತ್ತಲೇ ಜೇಬಿನಿಂದ ಬಾಚಣಿಗೆ ತೆಗೆದು ತಲೆ ಬಾಚಿ ಕೊಂಡ ( ತಲೆ ಯಲ್ಲಿ ಕೂದಲೇ ಇಲ್ಲ ! ) ಯಡಿಯೂರಪ್ಪ… ಬೆಂಗಳೂರು ಗೆ ಬಂದಾಗ ಅರ್ಥ್ ಎಂಬ ಹಿಂದಿ ಸಿನೆಮಾ ನೋಡಲು ಹೋಗಿ ಕ್ಯೂನಲ್ಲಿ ಹಿಂದೆ ನಿಂತಿದ್ದ ಆಸಾಮಿಯ ವಾಸನೆ ಹೊಡೆದು ಎರಡು ಟಿಕೆಟ್ ಖರೀದಿಸಿ ಗೋಡೆ ಪಕ್ಕ ತಾನು ಕುಳಿತು ಪಕ್ಕದ ಸೀಟಿನಲ್ಲಿ ವ್ಯಾನಿಟಿ ಬ್ಯಾಗ್ ನ್ನು ಕೂಡಿಸಿ … ( ಅಬ್ಬಾ ನಾನಾಗಿದ್ದರೆ ಸಿನಿಮಾ ನೋಡದೆ ವಾಪಸ್ ಬಂದು ಬಿಡುತ್ತಿದ್ದೆ)

ಶುಗರ್ ಬಿ ಪಿ ಬೆನ್ನು ಮೂಳೆ ಕುತ್ತಿಗೆ ಮೂಳೆ …. ಬೇರೆ ಯಾರಾದರೂ ಆಗಿದ್ದರೆ ಹಾಸಿಗೆ ಹಿಡಿಯುತ್ತಿದ್ದರು. ಚೆಂದ ಚೆಂದದ ಬಾಡಿಗೆ ಮನೆ ಗಳನ್ನು ತಿಕ್ಕಿ ತೊಳೆದು ಕನ್ನಡದ ಪುಸ್ತಕ ಗಳನ್ನು ಆತ್ಮಸಂಗಾತಿಗಳೆಂದು ಭಾವಿಸುವ ಶಶಿ ಅಕ್ಕ ( ನೀಲಕ್ಕ ) ತಾನೆಂದೂ ಒಂಟಿಯಲ್ಲ ಅನ್ನುತ್ತಾರೆ . ಆರೋಗ್ಯ ಕೈ ಕೊಡದಿದ್ದರೆ ಮುಂದಿನ ಭಾಗ ಬರೆಯುವ ಇಚ್ಛೆ ಯಿದೆಯಂತೆ . ಅದಕ್ಕಾಗಿ ಅತ್ಯಂತ ಪ್ರೀತಿ ಯಿಂದ ಕಾಯುವೆ


  • ಡಾ. ಎಸ್ ವಿ ಪ್ರಭಾವತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW