ಕಾಳಿ ಕಣಿವೆಯ ಕಥೆಗಳ ಕುರಿತು- ನಿವೃತ್ತ ಕೆ. ಪಿ.ಸಿ.ಎಲ್ ಅಧಿಕಾರಿಗಳ ಮಾತು

ಕಾಳೀ ಕಣಿವೆಯಲ್ಲಿ ಅನೇಕ ವರ್ಷಗಳ ಕಾಲ ಶ್ರೀ ಹೂಲಿ ಶೇಖರ ಅವರ ಜೊತೆಯಲ್ಲಿದ್ದು ಸಹಕಾರ ನೀಡಿದ ನಿವೃತ್ತ ಹಿರಿಯ ಅಧಿಕಾರಿಗಳು ಲೇಖನ ಕುರಿತು ಹೀಗೆ ಬರೆಯುತ್ತಾರೆ.
ಕಾಳಿ ಕಣಿವೆಯ ಕಥೆಗಳು – ಲೇಖಕರು: ಹೂಲಿ ಶೇಖರ್

ಕಾಳಿ ಕಣಿವೆಯ ಕಥೆಗಳ ಬರಹ ಕೆಲವೊಮ್ಮೆ ವರದಿಯ ಹಾಗೂ ಉಪನ್ಯಾಸಗಳ ಧಾಟಿಗೆ ಇಳಿದರೆ, ಮತ್ತೆ ಕೆಲವೆಡೆ ಹರಟೆಯ ಕಡೆ ಹೊರಳುತ್ತವೆ. ಆದರೆ ಒಟ್ಟಾರೆಯಾಗಿ ಬರಹವು ಒಂದು ಬಗೆಯ ವಿನೋದ ಶೈಲಿಯಲ್ಲಿ ನಿರೂಪಿತವಾಗಿರುವುದರಿಂದ ತನ್ನ ಸ್ವಾರಸ್ಯವನ್ನು ಎಲ್ಲಿಯೂ ಕಡಿಮೆ ಮಾಡಿಕೊಳ್ಳುವುದಿಲ್ಲ.

ಈ ಬರಹದ ಉದ್ದಕ್ಕೂ ದಾಖಲಾಗಿರುವ ಬಹು ಸಂಖ್ಯೆಯ ವಿನೋದ ಪ್ರಸಂಗಗಳನ್ನು ಪ್ರಕಟಿಸುವುದಾದರೆ ಕನ್ನಡ ಹಾಸ್ಯ ಸಾಹಿತ್ಯಕ್ಕೆ ಅದೊಂದು ಒಳ್ಳೆಯ ಕೊಡುಗೆಯಾಗಬಹುದು. ಇಡೀ ಬರಹ ಒಂದರ್ಥದಲ್ಲಿ ಶೇಖರ್ ಹೂಲಿ ಅವರ ವೃತ್ತಿ ಜೀವನದ ಸಾಧನೆ ಹಾಗೂ ಸಾಹಸಗಳ ಮಾಹಿತಿ ಕೇಂದ್ರದಂತಿದೆ. ಅವರ ಕಠಿಣ ಪರಿಶ್ರಮದ ಬಗ್ಗೆ ಅವರಿಗೆ ಸಹಜವಾಗಿ ಹೆಮ್ಮೆ ಇದೆ. ಈ ಬರಹಗಳಲ್ಲಿ ಬಹುಮಟ್ಟಿಗೆ ಅವರ ವೃತ್ತಿ ಜೀವನದ ವೃತ್ತಾಂತವೇ ಪ್ರಧಾನವಾಗಿ ಅವರ ಅಂತರಂಗದ ತುಮುಲಗಳೂ ಸಂಘರ್ಷಗಳೂ ತೀರಾ ಗೌಣವಾದಂತೆ ತೋರಬಹುದು.

ಇದಲ್ಲದೆ ಇವರ ಬರಹವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಶ್ರೀಯುತರು ವೃತ್ತಿ ಜೀವನದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬಳಲಿರುವಂತೆ ಕಂಡುಬರುತ್ತದೆ. ಇದೆಲ್ಲಾ ಇವರ ಹಾಸ್ಯ ಮನೋಭಾವದಲ್ಲಿ ಮುಚ್ಚಿ ಹೋಗುತ್ತದೆ. ಇವರು ನೋವನ್ನು ನುಂಗಿಕೊಂಡು ನಗುವನ್ನು ಹಂಚುತ್ತಾರೆ ಎಂದರೆ ತಪ್ಪಾಗಲಾರದು. ಕಠಿಣ ಪರಿಶ್ರಮ/ ಕಷ್ಟ ಮರೆಸಲು ನಗು ಒಂದು ಒಳ್ಳೆಯ ಸಾಧನ ಎಂಬುದು ಇವರ ಅಭಿಪ್ರಾಯವೆಂದು ಭಾವಿಸಬಹುದು.

ಕಾವೇರಿಯನ್ನು ಅಗಸ್ತ್ಯ ಮಹರ್ಷಿಗಳು ಕಮಂಡಲುವಿನಲ್ಲಿ ಸೆರೆಹಿಡಿದಿಟ್ಟಂತೆ ಶೇಖರ್ ಹೂಲಿ ಯವರು ತಮ್ಮ ವೃತ್ತಿ ಜೀವನದ ಯಶೋಗಾಥೆಯನ್ನು ಕಾಳಿ ಕಣಿವೆಯ ಕಥೆಗಳಲ್ಲಿ ಸೆರೆಹಿಡಿದು ಅವರು ಬರೆದಿರುವ ಪರಿ, ಅದೊಂದು ಪುಟ್ಟ ಕಾವ್ಯವೋ ಎನ್ನುವಂತೆ ಇದೆ. ಐವತ್ತು ವರ್ಷಗಳ ಹಿಂದಿನ ವೃತ್ತಿ ಜೀವನದ ಅನುಭವಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಬರಹ ರೂಪಕ್ಕೆ ಇಳಿಸುವುದಿದೆಯಲ್ಲಾ ಅದು ಶ್ರೀ ಶೇಖರ್ ಹೂಲಿ ಅವರಿಂದ ಮಾತ್ರ ಸಾಧ್ಯ!

shivkumar

ಶಿವಕುಮಾರ್ ಬಾಣಾವರ  (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ. ಎಲ್)


The Episode -20 is really very interesting. The description of mist just above the Kali river water is very thrilling. The mist forms during winter that too in the morning. The colour of the water while flowing appears black. By the side of river we find rich greenery. The mist appears like white vapour. Such scenes are worthy to enjoy. While in Dandeli and Ganeshgudi colony such scenic beauty which I enjoyed is afresh in my mind even today. Secondly the episode of poachers hunting deers and other animals in the dark night and selling their fresh flesh during in the early morning on the river bed is very lively. The old photograph of inspection of Supa Dam site is liked by me. Shri K C Reddy, young Shri Hooli Shekhar, Shri S.R.Purohit cc, Shri A.K.Anantramu are seen in the photo among others. Shri A K Anantramu who retired as Suptd Engineer in KPCL was a pious and spiritual person and respected by all.The death of labourers while jungle cutting, transporting their bodies in the lorry, leaving the lorry near the Police Station by the Driver and coming for purchasing fresh meat of deer on the river bed, insensitiveness shown by him in the process are vividly described by the author Shri Hooli Shekhar in real life story. I am eagerly waiting to read next episode as the episodes are real life story which also I have come across during my service in Kali Hydro Electric Project. Thanks a lot, my affectionate friend Shri Hooli Shekha for helping me to bring back reminiscences.

ಎನ್. ಎಚ್. ಭಂಡಾರಿ (ನಿವೃತ್ತ, ಜನರಲ್ ಮ್ಯಾನೇಜರ್ ಎಚ್. ಆರ್ –  ಕೆ. ಪಿ.ಸಿ. ಎಲ್)


ಕಾಳಿ ಕಣಿವೆ ಕತೆಗಳು‘ ತಪ್ಪದೆ ಓದಿ. ಆಕೃತಿ ಕನ್ನಡದಲ್ಲಿ ಪ್ರತಿ ಶನಿವಾರ ಹೊಸದೊಂದು ಸಂಚಿಕೆ ನಿಮಗಾಗಿ ಬರುತ್ತಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ…

0 0 votes
Article Rating

Leave a Reply

1 Comment
Inline Feedbacks
View all comments
shivaleela hunasagi

ನಿಜವಾದ ಗುಂಡಿಗೆ ಬರಹದ ಪ್ರತಿಯೊಂದು ಭಾಗವನ್ನು ನೋವಲ್ಲೂ ನಲಿವನ್ನು ಅರಸುವ ಮಾಂತ್ರಿಕರು ಎಂದರೆ ತಪ್ಪಾಗದು…..ನಿಮ್ಮ ನೆನಪಿನ ಶಕ್ತಿ ಗೆ ನಮನಗಳು ಸರ್….

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW