ಬೇಡವೋ ಸಿಸ್ಯಾ…ಕೂದಲ ವಿಷ್ಯಾ…- ದೇವರಾಜ ಚಾರ್



ಹಿಂದೆ ಕೂದಲು ಬಿಡುವುದು ಎಂದರೆ ದೇವರಿಗೆ ಮೂಡಿ ಕೊಡುವುದು ಎಂದರ್ಥವಾಗುತ್ತಿತ್ತು. ಆದರೆ ಇಂದು ಕೇಶರಾಶಿ ನೋಡುತ್ತಿದ್ದರೆ….ಮುಂದೆ ಓದಿ, ಲೇಖಕರಾದ ದೇವರಾಜ ಚಾರ್ ಅವರ ಲೇಖನಿಯಲ್ಲಿ ಕೇಶರಾಶಿ…

#ಕೇಶರಾಶಿ ಎಲ್ಲಿದೆ ಅಂತ ಯೋಚನೆ ಮಾಡ್ತಾ ಇದ್ದೀರಾ?. ಅದು ಬೇರೆ ಕಡೆ ಎಲ್ಲೂ ಇಲ್ಲ. ಪುರುಷರಲ್ಲೆ ಇದೆ. ಅದು ಹೆಚ್ಚಾಗಿ ನಟರಲ್ಲೆ ಇದೆ .

ಸುಮಾರು ಎರಡು ತಿಂಗಳಿಗೊಂದು ಸಾರಿ ನಾನು ಹೇರ್ ಕಟಿಂಗ್ ಮಾಡಿಸುವುದು ಸಾಮಾನ್ಯ, ಕಿರಿಕಿರಿ ಆಗುವ ಕಾರಣ ಉದ್ದ ಬಿಡುವುದು ಕಡಿಮೆ. ಒಂದು ದಿನ ಹೀಗೆ ಕೂದಲು ಬೆಳೆದಿತ್ತು ಕಿರಿಕಿರಿ ತಾಳಲಾರದೆ, ಸಲೂನ್ ಗೆ ಹೋದೆ. ಅವರು ಕತ್ತರಿ, ಬಾಚಣಿಕೆ ರೆಡಿ ಮಾಡ್ಕೊಂಡು ‘ಇಷ್ಟೊಂದು ಬೆಳೆಸಿಕೊಂಡು ಬಂದಿದ್ದೀರಲ್ಲ ಸಾರ್… ತಿಂಗಳಿಗೊಂದು ಸಾರಿ ಬಂದು ಮಾಡಿಸಿ ಕೊಂಡರೆ , ನಮಗೂ ಚಂದ ನಿಮಗೂ ಚೆಂದ ಅಂದರು, ನನಗೆ ಸಿಟ್ಟಿನ ಜೊತೆ ಸ್ವಲ್ಪ ಮಟ್ಟಿಗೆ ಬೇಸರವೂ ಆಯಿತು.

ಫೋಟೋ ಕೃಪೆ : vocal

ಆವಾಗಿನಿಂದ ಉದ್ದ ಕೂದಲ ಬೆಳೆದವರನ್ನು ನೋಡಿದಾಗ, ಯಾರೂ ಇವರನ್ನ ಏನೂ ಅನ್ನುವುದಿಲ್ಲವಲ್ಲ…ಅವರ ಹೆಂಡತಿ ಮಕ್ಕಳು ಹೇಗೆ ಸಹಿಸಿಕೊಳ್ಳುತ್ತಾರೋ ಎನ್ನೋ ಪ್ರಶ್ನೆ ಕಾಡುತ್ತದೆ. ಐವತ್ತು ವರ್ಷಗಳ ಹಿಂದಿನ ಹಿಂದಿ ಸಿನೆಮಾಗಳನ್ನು ನೋಡಿದರೆ ,ಆಗಿನ ನಟರೆಲ್ಲ ಉದ್ದುದ್ದ ಕೂದಲನ್ನು ಬಿಟ್ಟು,ಹಿಪ್ಪಿ ಕಟ್ ಮಾಡಿ ಸುಂದರವಾಗಿಯೇ ಕಾಣುತ್ತಿದ್ದರು. ನಂತರದ ದಿನಗಳಲ್ಲಿ ಕೂದಲನ್ನು ಹೆಚ್ಚು ಬಿಡದೆ, ಕ್ಲೀನ್ ಶೇವ್ ಮಾಡುವ ಕಾಲ ಬಂದಿತು.



#ಸಿನಿಮಾ ನಟರನ್ನೇ ಹಿಂಬಾಲಿಸುವ ಸಮಾನ್ಯ ಜನರೂ, ಐದಾರು ವರ್ಷಗಳಿಂದ ಮತ್ತೆ ಕೇಶರಾಶಿ ಕಾಣಿಸ್ತಾ ಇದೆ. ಈಗಿನ ನಟರಲ್ಲಿ ಎಷ್ಟು ಕೇಶರಾಶಿ ಇದೆ ಅಂದರೆ ಅವರ ಮುಖವನ್ನು ಗುರುತು ಹಿಡಿಯಲು ಮುಖವನ್ನು ಗುರುತಿಸಲು ಸಾಧ್ಯವೇ ಇಲ್ಲಾಕಣ್ಣುಗಳು ಮಾತ್ರ ದೊಡ್ಡದಾಗಿ ಕಾಣುತ್ತವೆ. ಡೈರೆಕ್ಟರ್ ರಿಂದ ಹಿಡಿದು ಎಲ್ಲರದು ಕೂದಲಮಯ, ಸಿನಿಮಾ ಕತೆಗೂ ಕೂದಲಿಗೂ ಏನು ಸಂಬಂಧ ಅರ್ಥವೇ ಆಗುವುದಿಲ್ಲ.

ಹಿಂದಿನ ಕಾಲದಲ್ಲಿ ಕೆಲವರು ದೇವರಿಗಾಗಿ ಮುಡಿ ಬಿಡುತ್ತಿದ್ದರು. ದೇವರ ಸನ್ನಿಧಿಗೆ ಹೋಗಿ ಮೂಡಿ ಕೊಡುತ್ತಿದ್ದರು, ಆಗ ಉದ್ದ ಕೂದಲವರನ್ನು ನೋಡಿದಾಗ ಯಾವುದೋ ದೇವರಿಗೆ ಹರಕೆ ಮಾಡಿಕೊಂಡಿರಬೇಕು ಎಂದೂ ಊಹಿಸಿಬಿಡುತ್ತಿದ್ದೆವು . ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ.

ಫೋಟೋ ಕೃಪೆ : thebaldgent

ಈಗಿನ ಕಾಲದಲ್ಲಿ ಕೂದಲು ಬಿಡುವುದಕ್ಕೆ ಕಾರಣ ಬೇಡಾ.  ಒಬ್ಬೊಬ್ಬ ನಟರ ಕೂದಲು ಅವತಾರಗಳನ್ನು ನೋಡಿದರೆ ಮಕ್ಕಳು ಹೋಗಲಿ ದೊಡ್ಡವರಿಗೆ ಭಯವಾಗುತ್ತದೆ.

ನಾಯಕರ ಆ ಉದ್ದನೆಯ ಕೂದಲು, ಅಬ್ಬರದ ಹಾಡು, ರಪ್ಪ ರಪ್ಪಾಂತ ಕುಣಿತ ಹೃದಯಾಘಾತವಾಗುವುದೇನೋ ಏನೋ ಎನ್ನುವ ಭಯವಾಗುತ್ತದೆ. ನಾಯಕನಿಗೆ ಬಾಹ್ಯ ಸೌಂದರ್ಯಕ್ಕಿಂತ, ನಟನಾ ಕಲೆ ತಿಳಿದಿರಬೇಕು.ಇದ್ದರೇ ಸಾಕು ಒಳ್ಳೆ ಸಾಧನೆ ಮಾಡಬಹುದು, ವಿಲನ್ ಅವತಾರಗಳು ಈಗಿನ ನಾಯಕರಲ್ಲಿ ಮಾರ್ಪಾಡು ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ನಾಯಕ ಎಂದರೆ ಸಜ್ಜನ,ಸುಸಂಸ್ಕೃತ ಎಂದೂ ನೋಡುವ ದಿನಗಳು ಮರೆತು ಹೋದವು. ಈಗ ನಾಯಕ ಎಂದರೆ ಉದ್ದ ಕೂದಲು, ಕೈಯಲ್ಲಿ ಸಿಗರೇಟ್, ಬಾಟಲ್ ಅಥವಾ ಮಚ್ಚು ಹಿಡಿದ ವಿಲನ್ ನಂತೆ. ಇದರಿಂದ ಸಮಾಜಕ್ಕೆ ಏನು ಸಂದೇಶ ಸಿಗುತ್ತಿದೆ ಅರ್ಥವಾಗುತ್ತಿಲ್ಲ. ಜನ ಇಷ್ಟ ಪಡುವುದು ವಿಲನ್ ಗುಣಗಳನ್ನ, ರೂಪವನ್ನಾ?

ಇದರ ಬಗ್ಗೆ ಚಿಂತನೆ ಮಾಡಬೇಕಿದೆ…


  • ದೇವರಾಜ ಚಾರ್ (ನಿವೃತ್ತ ಕೆಪಿಸಿಎಲ್ ಇಂಜೀನಿಯರ್) ಮೈಸೂರು. 

 

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW