ಕವಿಯತ್ರಿ : ರೇಶ್ಮಾ ಗುಳೇದಗುಡ್ಡಾಕರ್
ನನ್ನೊಳಗಿನ ನಾನು
ಋಜುವಾತು ಮಾಡಬೇಕಿದೆ
ನನ್ನೊಳಗಿನ ನಾನು ಋಜುವಾತು
ಮಾಡಬೇಕಿದೆ
ಎದೆಗೆ ಇಟ್ಟ ಕೊಳ್ಳಿ
ಅರುವ ಮುನ್ನ
ಹರಳುಗಟ್ಟಿದ ನೆನಪುಗಳು
ಹನಿಯಾಗಿ ಹರಿಯುವ ಮುನ್ನ
ಸೋಗಿನ ಕಡಲಲ್ಲಿ ಅಲೆಯಾಗುವ ಮುನ್ನ
ನನ್ನೊಳಗಿನ ನಾನು
ಋಜುವಾತು ಮಾಡಬೇಕಿದೆ …..
ಬಣ್ಣ ಬಣ್ಣದ ನೋಟಗಳು
ಮನದ ಹಂದರ ಸೇರುವ ಮುನ್ನ
ಮೋಹ ಸಲೆಗೆ ಅಡಿಯಾಳಾಗುವ ಮುನ್ನ
ವಾಸ್ತವದ ತಳಹದಿಯ ಮರೆಮಾಚಿ
ಭ್ರಮರ ಲೋಕಕೆ ಕಾಲಿಡುವ ಮುನ್ನ
ಬಾಂಧವ್ಯ ದ ಆಚೆಗೊ
ಸ್ನೇಹದ ಸೆಳೆತದಾಚೆಗೊ
ನನ್ನ ನಾ
ಋಜುವಾತು ಮಾಡಬೇಕಿದೆ ….
ಏಳಿಗೆಯ ಬೇರುಗಳ ಕತ್ತರಿಸಿ
ಹಿಂದೆ ಮುಂದೆ ನಿಂದನೆಗೆ ಆಹಾರ
ಮಾಡಿ ನಾಜೂಕು ಮಾತುಗಳಾಡುತ
ನಮ್ಮೊಳಗೆ ಬೇರೆತು ದೂರ ಇರುವವರು
ಕತ್ತಿಮಸೆಯುವ ಮುನ್ನ
ನನ್ನೊಳಗಿನ
ನಾನು ಋಜುವಾತು ಮಾಡಬೇಕಿದೆ
ರೇಶ್ಮಾ ಗುಳೇದಗುಡ್ಡಾಕರ್ ಅವರ ಹಿಂದಿನ ಕವನ :
ಇದು ಕೊರೊನಾ ಸಮಯ
( ಸೂಚನೆ : ಕತೆ,ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ ak.shalini@outlook.com ಮಾಡಬಹುದು.ಮತ್ತು ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)