‘ನಯನ ಕಾಂತಿ’ ಕವನ – ವೀಣಾ ಶಂಕರ್

ನಗುಮೊಗದ ಕವಿಯತ್ರಿ ವೀಣಾ ಶಂಕರ್ ಅವರ ಒಂದು ಕವಿತೆಯನ್ನು ಪ್ರಕಟಿಸುವುದರ ಮೂಲಕ ಅವರ ಹುಟ್ಟುಹಬ್ಬಕ್ಕೆ ಆಕೃತಿಕನ್ನಡ ಶುಭಕೋರುತ್ತದೆ,ತಪ್ಪದೆ ಮುಂದೆ ಓದಿ…

ನೀನು ವೀಣೆ ನಾನು ತಂತಿ
ನುಡಿಸು ಪ್ರೇಮ ನಾದವ
ನಿನ್ನ ನಯನ ಕಾಂತಿ
ಇಳಿಸಿತು ಮನದ ಭಾರವ

ಸುಪ್ತಮನದಿ ಮಧುರವಾಗಿ
ಸಣ್ಣನೆ ಸುಳಿವ ಗಾಯನ
ತಪ್ತ ಮನಕೆ ಜೊತೆಯಾಗಿ
ಒಲವ ನಲಿವ ಚೇತನ

ನನ್ನ ಕಣ್ಣ ಕಾಂತಿಯಲ್ಲು
ನಿನ್ನ ಮುಖವೇ ಕಂಡಿದೆ
ನಾನು ಪಡೆದ ಪ್ರೀತಿಗಿಂದು
ಮನವು ಇಲ್ಲಿ ತಣಿದಿದೆ

ತಿಳಿಯದಂತ ತುಡಿತದಲ್ಲೂ
ಸೆಳೆಯುವಂತ ಕಲೆಯಿದೆ
ನನ್ನ ಮನದಿ ಮಿಡಿಯೋ
ಮಿಡಿತಕಿಲ್ಲಿ ಮುದವಿದೆ…..


  • ವೀಣಾ ಶಂಕರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW