ಡಾ. ಟಿ ತ್ಯಾಗರಾಜು ಅವರ ರಚನೆಯ ಕವನವನ್ನು ಪ್ರಕಟಿಸುವುದರ ಮೂಲಕ ಅವರಿಗೆ ಆಕೃತಿಕನ್ನಡ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರುತ್ತದೆ, ತಪ್ಪದೆ ಮುಂದೆ ಓದಿ…
ಮರೆಯದಿರು ಮನೆತನವ…
ಹೆತ್ತವರೊಂದೆಡೆ ಮಕ್ಕಳೊಂದೆಡೆ ಇದ್ದರೆ ಯಾರಿಗೆ ಹಿತವಯ್ಯ..
ಅವರಿಗೂ ತಳಮಳ ನಿಮಗೂ ತಳಮಳ ಕಳವಳ ನಿಜವಿದಕಯ್ಯ..
ಭಾವನಾತ್ಮಕ ಸಂಬಂಧವು ಜೊತೆ ಇದ್ದೊಡೆ ಅಂದವಯ್ಯ.
ಹಗಲಿರುಳು ಯೋಚನೆಗಳು ಬೆಂಬಿಡ್ದೆ ನೋಯ್ಸುವ್ದು
ಬೇಕೇನಯ್ಯ…
ಕಾಲಚಕ್ರದ ಬೊಂಬೆಗಳು ನಾವು ಎದುರಿದ್ದಡೆ ಸಂತಸ ನೂರ್ಮಡಿಸುವುದಯ್ಯ..
ವಯಸ್ಸಾದ ಜೀವಗಳಿಗೆ ಅದಕು ಇದಕೂ ಎದಕು ಇದ್ದರೊಳಿತಯ್ಯ..
***
ಚಿರ ನಿದ್ರೆಗೆ
ಜಾರಿರಬಹುದೇ
ತಾನು ಕಡಿದ ಮರ
ಮೇಲೆ
ಬೀಳಬಹುದೆಂಬ ಭಯದಲ್ಲಿ…!!
ಹುಟ್ಟಿದ ಮೇಲೆ
ಮನುಷ್ಯನು
ಸಾಯಲೇಬೇಕು
ಮರ ನೆಟ್ಟ ಮೇಲೆ
ತಾನಾಗಿ ಬೀಳಲೇಬೇಕು ಕಾಯನೇಕೋ ಸೃಷ್ಟಿ.,.!!
ಒಂದು
ಜೀವವ ಸಾಕಲಾಗದವ
ಕಡಿವ ಹಕ್ಕು ಅವಗಿಲ್ಲ ಅರಿತರವ
ದೈವಕ್ಕಿಂತ ಹೆಚ್ಚು ಅವನಲ್ಲವ …….!!
***
ನೆಮ್ಮದಿಯಿರದ
ಜೀವನ ಎಷ್ಟು ಕೋಟಿ
ಇದ್ದರೇನು ಫಲ.. ಕೇಳ ಮನುಜ….!!
ಹಿರಿಯರೊಟ್ಟಿಗೆ
ಕಳೆದ ಬಾಲ್ಯ ಯೌವ್ವನ
ಎಷ್ಟು ಚಂದಿತ್ತು ಅಲ.. ಅರಿ ಅಗ್ರಜ…!!
ಮತ್ತೆ ಬಾರದದುಕೆ
ಆ ಜೀವನ ತಡಕುವುದು
ನಿದ್ರೆ ಕಣ್ಣಲ್ಲಿ ಆಸೆಯಲಿ ಎಲ್ಲ.. ಸಹಜ…!!
- ಡಾ. ಟಿ ತ್ಯಾಗರಾಜು ಮೈಸೂರು
