ವ್ಯಾಸ ಸಾಹಿತ್ಯದಲ್ಲಿ ವೇದ, ಉಪನಿಷತ್ತು ಭಾಗವತ ಮಹಾ ಭಾರತ ಹೀಗೆ ಅನೇಕ ಗ್ರಂಥಗಳಿವೆ. ಅವುಗಳನ್ನು ಓದಿ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು ಅಗೋಚರವಾದ ಸರ್ವೋತ್ತಮನಾದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಅವತಾರ ಪುರುಷರಿದ್ದಾರೆ. ಕವಿಯತ್ರಿ ಸಂಧ್ಯಾ ಟಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸಾಹಿತ್ಯವು ಮಾನವನ ಬದುಕಿಗೆ ಒಂದು ಸಾಧನವಾಗಿದೆ. ಇದು ಯಾರಿಗೂ ಕೆಡಕನ್ನು ಬಯಸುವುದಿಲ್ಲ.ಕೆಡಕಾಗುವ ಕಾಲದಲ್ಲಿ ಎಚ್ಚರಿಸುತ್ತವೆ. ಸಾಹಿತ್ಯದಲ್ಲಿ ಮುಖ್ಯವಾಗಿ ಮೂರು ವಿಧಾನ. ವ್ಯಾಸ ಸಾಹಿತ್ಯ, ದಾಸ ಸಾಹಿತ್ಯ, ಐತಿಹಾಸಿಕ ಸಾಹಿತ್ಯ. ವ್ಯಾಸ ಸಾಹಿತ್ಯದಲ್ಲಿ ವೇದ, ಉಪನಿಷತ್ತು ಭಾಗವತ ಮಹಾ ಭಾರತ ಹೀಗೆ ಅನೇಕ ಗ್ರಂಥಗಳಿವೆ. ಅವುಗಳನ್ನು ಓದಿ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು ಅಗೋಚರವಾದ ಸರ್ವೋತ್ತಮನಾದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಅವತಾರ ಪುರುಷರಿದ್ದಾರೆ.ಅವರೆಲ್ಲ ಲೋಕೋದ್ಧಾರಕ್ಕಾಗಿ ಶ್ರಮಿಸಿದ್ದಾರೆ.
ದಾಸ ಸಾಹಿತ್ಯದಲ್ಲಿ ಕೀರ್ತನೆ ಸುಳಾದಿ ಮೇರು ಕೃತಿಗಳು ವಚನಗಳನ್ನು ರಚಿಸಿದ್ದಾರೆ.ಹೀಗೆ ಗದ್ಯ ಪದ್ಯ ಕಥೆ ನಾಟಕ ಅವುಗಳಲ್ಲಿ ಪ್ರಕೃತಿಯ ಮಹಿಮೆ,ಕರುಣಾರಸ,ಹಾಸ್ಯಮಯ ಪ್ರೀತಿಯ ನಿಂದನೆ ವೈರಾಗ್ಯ ಹೀಗೆ ಅನೇಕ ಸಾಹಿತ್ಯಗಳು ಬಂದಿವೆ.ಎಲ್ಲ ಸಾಹಿತ್ಯ,ಧರ್ಮ,ಕ್ರಿಯೆಗಳಲ್ಲಿ ಮಾನವನಿಗೆ ವೈರಿಯಾದ ಮದ ಮತ್ಸರ,ಕಾಮ, ಕ್ರೋಧ ದ್ವೇಷ ಅಸೂಯೆಗಳನ್ನು ಹೊರಗಿಟ್ಟಿದ್ದಾರೆ. ಐತಿಹಾಸಿಕ ಸಾಹಿತ್ಯದಲ್ಲಿ ಕೃಷ್ಣದೇವರಾಯ, ಕಿತ್ತೂರು ರಾಣಿ ಚೆನ್ನಮ್ಮ, ಸಿಕ್ಕ ಚಿಕ್ಕ ಸಮಯದಲ್ಲಿ ನುಸುಳಕೋರರನ್ನು ಕೊಂದು ರಾಜ್ಯಕ್ಕೆ ಸಹಾಯ ಮಾಡಿದ ಒನಕೆ ಓಬವ್ವ ಎಷ್ಟೋ ಮಹನೀಯರು ಇರುವರು.
ಧರ್ಮದ ಮತಾಂಧತೆ ತೋರದೆ ತತ್ವಕ್ಕೆ ಗೌರವ ತೋರಿ ಕಾರ್ಯ ಮಾಡುವುದೇ ಸಾಧನ.ಅಬ್ದುಲಕಲಾಮ್ ಮತ ಭೇದವಿಲ್ಲದೆ ಕಾರ್ಯ ಸಾಧನೆ ಮಾಡಿದ್ದಾರೆ.ದೇಶ ಶಾಂತಿ ಸಮೃದ್ಧಿ ಆಗಲು ಮತಮದಾಂಧತೆ ತೊರೆದು ಶಾಂತಿಯಿಂದ ಪರಿಹಾರ ಕೊಂಡು ಕೊಳ್ಳಬೇಕು.
ಮಾತಿನಲ್ಲಿ ಅಪಸ್ವರ ಆದರೆ ಸಾಧನೆ ಮಾಡಿದವರಿಗೆ ಹಾನಿ ಎನೂ ಇಲ್ಲ.ಅದು ನಮ್ಮನ್ನೆ ಸುತ್ತುವುದು.ನಿಶಾಚಾರರು ಸೂರ್ಯನಿಗೆ ಬೈದರೆ ಅವನ ಪ್ರಕಾಶಕ್ಕೆ ಯಾವ ಹಾನಿಯು ಇಲ್ಲ. ಮತಮದಾಂಧತೆಯಿಂದ ಸಂವಿಧಾನ ಚೌಕಟ್ಟು ಮೀರದೆ ಒಬ್ಬರಿಗೊಬ್ಬರು ಆತ್ಮಸಾಕ್ಷಿ ಯಿಂದ ನಡೆದಲ್ಲಿ ಮಾನವೀಯತೆಯ ಮೌಲ್ಯ ಹೆಚ್ಚಾಗುತ್ತದೆ.ಮಳೆಯ ನೀರು ಓಣಿಯೊಳಗೆ ಹರಿದರೆ ಅದನ್ನು ಯಾರೂ ಸ್ನಾನ ಕುಡಿಯಲು ಉಪಯೋಗಿಸುವದಿಲ್ಲ.ಅದೇ ನೀರು ಕೆರೆ ಬಾವಿಗೆ ಹೋದಲ್ಲಿ ಎಲ್ಲದಕ್ಕೂ ಉಪಯೋಗಿಸುವರು.ಅದರಂತೆ ನಮ್ಮ ನಡೆ ನುಡಿಗಳಲ್ಲಿ ಎಲ್ಲರಿಗೂ ಹಿತವಾಗುವದನ್ನೆ ಬಯಸುವದು ಜನಪದ ಸಾಹಿತ್ಯ.
ಭೂಮಿಯು ಆನಂದದ ತೋಟ
ನಮಗಿದು ವರದಾನದ ಕೂಟ
ಗಮನಿಸು ಪ್ರಕೃತಿಯ ಆಟ
ಸಮರಸವಾಗಲಿ ಬದುಕಿನಾಟ
ಅಂದ ಚೆಂದದ ಹೂಗಳ ಸೌಭಾಗ್ಯ
ಯಾರಿಂದ ಬಂದ ಕೊಡಗೆಯ ಭಾಗ್ಯ
ಸೌರಭ ಸೂಸಿ ಕೊಡುತಿದೆ ಆನಂದ
ಕರ ಮುಗಿದು ಕೊಡು ಮನದಾನಂದ
ರಸ ರುಚಿ ತುಂಬಿದ ಹಣ್ಣುಗಳ ಮಾಟ
ಕೈ ಬೀಸಿ ಕರೆಯುತಿಹ ನಮ್ಮ ನೋಟ
ಇದು ಯಾರ ಕೊಡುಗೆ ತಿಳಿ ನೀ ಬಂಟ
ಸಾಧ್ಯವೆ ನಿನ್ನಿಂದ ಬಿಡು ನಿನ್ನ ಹಟ
ಸತತ ಭ್ರಮೆಯಿಂದ ದೂರಾಗು ತ್ವರಿತ
ವಿಹಿತ ಚಿಂತನೆ ಮಾಡು ಸರ್ವತ
ಶಾಸ್ತ್ರ ತಿಳಿದು ಕರ್ಮ ಮಾಡು ಸಂತತ
ಅಸ್ತ್ರ ಇದು ಸಾಪರೋಕ್ಷಿಯ ಪ್ರತೀತ
- ಸಂಧ್ಯಾ ಟಿ
