ಸಮಸ್ತ ಜನತೆಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಹರಿಹರ ಬಿ ಆರ್ ಅವರ ಲೇಖನಿಯಲ್ಲಿ ಅರಳಿದ ಒಂದು ಕವನವನ್ನು ತಪ್ಪದೆ ಮುಂದೆ ಓದಿ…
ದಕ್ಷಿಣಾಯನದಿಂ ಉತ್ತರಾಯಣಕೆ ಪಥ ಚಲಿಸಿ
ಹನ್ನೆರಡು ಸಂಕ್ರಮಣದಲಿ ವಿಶೇಷ ಮಕರರಾಶಿ
ಚಳಿಯ ಹೋಗಲಾಡಿಸಲು ಎಳ್ಳುಬೆಲ್ಲ ಬೆರೆಸಿ
ಸಂಕ್ರಾಂತಿಯ ದಿನದಂದು ದೇವರ ಪೂಜೆಗರ್ಪಿಸಿ
ಕಬ್ಬಿನ ಜಲ್ಲೆಯೊಳುರಿಸಿ ಸಿಹಿಯಾದ ಹುಗ್ಗಿ
ಸಮೂಹದಿ ತಯಾರಿಸುವ ಸಡಗರಗಳ ಸುಗ್ಗಿ
ಹುರಿಗಡಲೆ ಕಡಲೇಬೀಜ ಕೊಬ್ಬರಿಗಳ ಮಿಶ್ರಣ
ಪ್ರಸಾದ ತಿಂದೊಳ್ಳೆ ಮಾತನಾಡಿರೆನುತ ಭಕ್ಷಣ
ಅಭಿಷೇಕದದಂದದಿ ಸುರಿವರು ಮಕ್ಕಳ ಶಿರಗಳ
ತಟ್ಟೆಯಿಂದಲೇ ನೇರಳೆ ಕಬ್ಬುಚೂರು ಚಿಲ್ಲರೆಗಳ
ತಂಡಿಯಾದ ಶರೀರಕೆ ಬಿಸಿಯಾಗಿಸುವ ಅಂದದಿ
ಹಸು ಹಾಯಿಸುವರು ಕೃಷಿಕರಿಗೆ ಖುಷಿಯಂದದಿ
ದೇವರುಗಳಿಗೆ ಹಗಲು ದಿನದ ಪ್ರಾರಂಭೋತ್ಸವ
ಸಂಭ್ರಮ ಉತ್ಸಾಹ ಮೇಳೈಸಿ ಸಂಕ್ರಾಂತ್ಯುತ್ಸವ
ಸಂಚಯನ ಕಾಲದಿ ಮಂಜಿನಲಿ ನಡೆದಾಡುತ
ಉಪವಿಷ್ಟನಾಗವ ಎಲ್ಲರ ಮನೆಗಳಿಗೆ ಆಗಮಿಸುತ
- ಹರಿಹರ ಬಿ ಆರ್ – ಅಕ್ಷಂತಲ ಬರಹ
