‘ಸೋಯಾ ಚಂಗ್ಸ್’ ಪರೋಟ : ಶಕುಂತಲಾ ಸವಿ

ಆಲೂ, ಮೂಲಂಗಿ, ಮಂತ್ಯೆ ಪರೋಟ ಹೀಗೆ ನಾನಾ ರೀತಿಯ ಪರೋಟಗಳನ್ನು ತಿಂದಿರಬಹುದು. ಆದರೆ ಆರೋಗ್ಯಕರವಾದ ಸೋಯಾ ಚಂಗ್ಸ್ ಪರೋಟವನ್ನು ತಿಂದಿಲ್ಲ ಎಂದರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಸೋಯಾ ಚಂಗ್ಸ್ ಪರೋಟ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಪದಾರ್ಥಗಳು :

  • ಗೋಧಿ ಹಿಟ್ಟು – 2 ಕಪ್
  • ಸೋಯಾ ಚಂಗ್ಸ್ – 6  ಸ್ಪೂನ್ ಪೌಡರ್
  • ಈರುಳ್ಳಿ – 2 ಸಣ್ಣಗೆ ಹಚ್ಚಿಕೊಳ್ಳಿ
  • ಮೆಂತ್ಯ ಸೊಪ್ಪು – ಸಣ್ಣಗೆ ಹಚ್ಚಿಕೊಳ್ಳಿ
  • ಬೇಯಿಸಿದ ಆಲೂಗಡ್ಡೆ – 2 ಸ್ಮ್ಯಾಶ್ ಮಾಡಿಕೊಳ್ಳಿ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಜೀರಿಗೆ ಪೌಡರ್ – ಸ್ವಲ್ಪ
  • ಅಚ್ಚ ಮೆಣಸಿನ ಪುಡಿ – ಸ್ವಲ್ಪ
  • ಕಾಯಿಸಿದ ಎಣ್ಣೆ – 2 ಸ್ಪೂನ್ ಅಥವಾ ತುಪ್ಪ
  • ಉಪ್ಪು ರುಚಿಗೆ ತಕ್ಕಷ್ಟು

This slideshow requires JavaScript.

ಮಾಡುವ ವಿಧಾನ :

ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ, ತಕ್ಕಷ್ಟು ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ. ನಂತರ ಚಪಾತಿ ಲಟ್ಟಿಸಿ ಕಾದ ತವಾ ಮೇಲೆ ಹಾಕಿ ಎರಡು ಬದಿ ಬೇಯಿಸಿ. ಇದನ್ನು ತುಪ್ಪ,ಬೆಣ್ಣೆ, ಗಟ್ಟಿ ಮೊಸರಿನೊಂದಿಗೆ ಸವಿಯಿರಿ.


  • ಶಕುಂತಲಾ ಸವಿ – ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW