ಸ್ವೀಟ್ ಕಾರ್ನ್ ಮತ್ತು ಸೋಯಾಚಾಂಗ್ಸ್ ರೈಸ್ ಮಾಡುವ ವಿಧಾನವನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಕಾಗುವ ಪದಾರ್ಥಗಳು :
ಅಮೇರಿಕನ್ ಕಾರ್ನ್ 1ಕಪ್
ಹಸಿ ಮೆಣಸಿನಕಾಯಿ 4
ಈರುಳ್ಳಿ 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಸ್ಪೂನ್
ಚಕ್ಕೆ, ಅರ್ಧ ಇಂಚು
ಲವಂಗ 4
ಮರಾಠಿ ಮೊಗ್ಗು 2
ಅನಾನಸ್ ಮೊಗ್ಗು 1
ಪಲಾವ್ ಎಲೆ 2
ಏಲಕ್ಕಿ 2
ಸೋಯಾ ಚಾಂಗ್ಸ್ ಪೌಡರ್ 3 ಸ್ಪೂನ್ .
ಉಪ್ಪು
ಅಕ್ಕಿ 1 ಕಪ್
ನೀರು 2 ವರೆ ಕಪ್
ತುಪ್ಪ 4 ಸ್ಪೂನ್
ಎಣ್ಣೆ 2 ಸ್ಪೂನ್
ಜೀರಿಗೆ 1 ಸ್ಪೂನ್
ಕಾಳು ಮೆಣಸು 8

ಮಾಡುವ ವಿಧಾನ :
ಮೊದಲಿಗೆ ಕುಕ್ಕರ್ ಗೆ ಎಣ್ಣೆ , ತುಪ್ಪ ಹಾಕಿ ಬಿಸಿ ಆದ ಮೇಲೆ ಜೀರಿಗೆ, ಮೆಣಸು , ಮಸಾಲೆ ಐಟಂಸ್, ಹ. ಮೆ.ಕಾಯಿ, ಈರುಳ್ಳಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಎಲ್ಲವನ್ನೂ ಒಂದೊಂದಾಗಿ ಹಾಕುತ್ತ ಫ್ರೈ ಮಾಡಿಕೊಳ್ಳಿ.
ಈಗ ಅಕ್ಕಿ, ಕಾರ್ನ್, ಸೋಯಾ ಎಲ್ಲವನ್ನೂ ತೊಳೆದು ಕುಕ್ಕರ್ ಗೆ ಹಾಕಿ 5, ನಿಮಿಷ ಫ್ರೈ ಮಾಡಿ ಉಪ್ಪು ನೀರು ಹಾಕಿ ಮುಚ್ಚಳ ಮುಚ್ಚಿ ವಿಶಲ್ ಹಾಕಿ 2 ಅಥವಾ 3 ಕೂಗು ಕೂಗಿಸಿ .
ಪ್ರೆಶರ್ ಇಳಿದ ನಂತರ ಕತ್ತರಿಸಿ ಇಟ್ಟ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಪುನ ಮುಚ್ಚಳ ಮುಚ್ಚಿ ಇಡಿ. ಈಗ ರುಚಿಯಾದ ಸೋಯಾ ಮತ್ತು ಕಾರ್ನ್ ರೈಸ್ ರೆಡಿ.
ಮೊಸರು ಬಜ್ಜಿಯಿಂದಿಗೆ ಸವಿಯಿರಿ.
- ಶಕುಂತಲಾ ಸವಿ
