ವೆರಿಕೋಸ್ ವೇನ್ಸ್ ಗೆ ಮನೆಮದ್ದುಗಳು

ವೆರಿಕೋಸ್ ವೇನ್ಸ್ (Varicose Veins) ಗೆ ಕೆಲವು ಪರಿಣಾಮಕಾರಿ ಮನೆಮದ್ದುಗಳು ಮತ್ತು ಪಾರಂಪರಿಕ ಚಿಕಿತ್ಸೆ ವಿಧಾನಗಳು ಇವೆ. ಅವುಗಳನ್ನು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ …

ವೆರಿಕೋಸ್ ವೇನ್ಸ್ ರೋಗವು ಶಿರಾಸುಗಳಲ್ಲಿ (veins) ರಕ್ತದ ಹಿಂತಿರುಗುವಿಕೆ ಸರಿಯಾಗದಿರುವುದರಿಂದ ಉಂಟಾಗುತ್ತದೆ. ಇದರಿಂದ ಕಾಲುಗಳಲ್ಲಿ ಶಿರಾಸುಗಳು ಉಬ್ಬಿ, ನೋವು, ಊತ, ಬಣ್ಣ ಬದಲಾವಣೆ ಅಥವಾ ಚುರುಕು ನೋವು ಉಂಟಾಗುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಮನೆ ಮದ್ದುಗಳು ಮತ್ತು ಪಾರಂಪರಿಕ ಚಿಕಿತ್ಸೆ ವಿಧಾನಗಳು

  •  ಅರಿಶಿನ (Turmeric)

ರಕ್ತ ಸಂಚಲನ ಸುಧಾರಿಸಿ ಶಿರಾ ಗೋಡೆ ಬಲಪಡಿಸುತ್ತದೆ. ಪ್ರತಿದಿನ ಹಾಲಿನಲ್ಲಿ ಸ್ವಲ್ಪ ಅರಿಶಿನ ಹಾಕಿ ಕುಡಿಯುವುದು ಅಥವಾ ಬಿಸಿ ನೀರಿನಲ್ಲಿ ಮಿಶ್ರಿಸಿ ಸೇವಿಸುವುದು ಒಳ್ಳೆಯದು. ಹೊರಗೆ ಅರಿಶಿನ + ಎಳ್ಳೆಣ್ಣೆ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ ಶಿರಾ ಪ್ರದೇಶಕ್ಕೆ ಹಚ್ಚಬಹುದು.

  • ಅಲೋವೆರಾ (Aloe Vera)

ತಂಪು ಗುಣ ಹೊಂದಿದೆ, ಉಬ್ಬರವನ್ನೂ ನೋವನ್ನೂ ಕಡಿಮೆ ಮಾಡುತ್ತದೆ. ತಾಜಾ ಅಲೋವೆರಾ ಜೆಲ್ ನ್ನು ದಿನಕ್ಕೆ 2 ಬಾರಿ ಉಬ್ಬಿದ ಶಿರಾಸು ಪ್ರದೇಶದಲ್ಲಿ ಹಚ್ಚಬೇಕು.

  • ಅಶ್ವಗಂಧೆ + ಶತಾವರಿ + ಗೋಕ್ಷುರ ಲೇಹ್ಯ

ಈ ಮಿಶ್ರಣ ರಕ್ತಸಂಚಲನ ಬಲಪಡಿಸಿ ಶಿರಾ ಗೋಡೆಗೆ ಪೋಷಣೆ ನೀಡುತ್ತದೆ. ದಿನಕ್ಕೆ 1 ಚಮಚ ಬೆಳಿಗ್ಗೆ ಖಾಲಿ ಹೊಟ್ಟೆಗೆ ತೆಗೆದುಕೊಳ್ಳಬಹುದು (ಆಯುರ್ವೇದ ವೈದ್ಯರ ಸಲಹೆ ಮೇರೆಗೆ).

ಸೀತಾಪಲ ಬೀಜದ ಎಣ್ಣೆ, ಎಳ್ಳೆಣ್ಣೆ , ಅಗಸೆ ಎಣ್ಣೆ ಅಥವಾ ಕಸ್ತೂರಿ ಎಣ್ಣೆ ಮಸಾಜ್, ಕಾಲುಗಳಲ್ಲಿ ತೈಲ ಮಸಾಜ್ ಮಾಡುವುದು ಅತ್ಯಂತ ಮುಖ್ಯ. ರಾತ್ರಿಯಲ್ಲಿ ಮೃದುವಾಗಿ ಮೇಲಿನಿಂದ ಕೆಳಗೆ ಶಿರಾಸುಗಳ ದಿಕ್ಕಿನಲ್ಲಿ ಮಸಾಜ್ ಮಾಡಿದರೆ ರಕ್ತಸಂಚಲನ ಸುಧಾರಿಸುತ್ತದೆ.

  •  ತ್ರಿಫಲಾ ಚೂರ್ಣ (Triphala powder)

ರಕ್ತ ಶುದ್ಧಿ ಮತ್ತು ಪಾಚಕ ಕ್ರಿಯೆ ಸುಧಾರಿಸಲು ಸಹಾಯಕ. ರಾತ್ರಿ ಮಲಗುವ ಮುನ್ನ ಒಂದು ಚಮಚ ಬೆಚ್ಚಗಿನ ನೀರಿನಲ್ಲಿ ಸೇವಿಸಬಹುದು.

  • ಕಾಯಿಲೆಯ ಪ್ರದೇಶ ತಣ್ಣಗಾಗಿಸಬಾರದು

ಚಳಿ ನೀರಿನಲ್ಲಿ ಸ್ನಾನ ಮಾಡಿದರೆ ಶಿರಾಸುಗಳು ಹೆಚ್ಚು ಬಿಗಿಯಾಗುತ್ತವೆ. ಬಿಸಿ ನೀರಿನಲ್ಲಿ ಅಥವಾ ಗಾಳಿ ತಟ್ಟದಂತೆ ಕಾಲುಗಳನ್ನು ಕಾಪಾಡಬೇಕು.

 ಆಹಾರ ನಿಯಮಗಳು : 

ಲೋಹದ ಮತ್ತು ವಿಟಮಿನ್ Cಯುಕ್ತ ಆಹಾರ (ಹುಣಸೆ, ನಿಂಬೆ, ನಾವಲ್ ಹಣ್ಣು, ಧನ್ಯಾ, ಮೆಂತ್ಯೆ, ಕಬ್ಬು ರಸ). ಉಪ್ಪು, ತೈಲ, ಮಾಂಸಾಹಾರ ಹಾಗೂ ಬಿಗಿಯಾದ ಬಟ್ಟೆಗಳನ್ನು ತಾತ್ಕಾಲಿಕವಾಗಿ ತಪ್ಪಿಸಬೇಕು. ದಿನಕ್ಕೆ ಕನಿಷ್ಠ 2 ಲೀಟರ್ ನೀರು.

  • ಯೋಗಾಸನ ಮತ್ತು ವ್ಯಾಯಾಮ

ವಿಪರೀತ ಕರಣಿ, ಪವನಮುಖಾಸನ, ತಾಡಾಸನ, ಉತ್ತಾನಪಾದಾಸನ ಇವು ಬಹಳ ಪರಿಣಾಮಕಾರಿ. ಇವು ರಕ್ತದ ಹಿಂತಿರುಗುವಿಕೆಯನ್ನು ಸುಲಭಗೊಳಿಸುತ್ತವೆ.

ಎಚ್ಚರಿಕೆ

ನೋವು ತುಂಬಾ ಹೆಚ್ಚಿದ್ದರೆ ಅಥವಾ ಶಿರಾಸುಗಳ ಬಣ್ಣ ಕಪ್ಪಾಗುತ್ತಿದ್ದರೆ, ಅದು Venous ulcer ಅಥವಾ Thrombosis ಆರಂಭವಾಗುತ್ತಿರುವ ಸೂಚನೆಯಾಗಿರಬಹುದು — ಈ ಸಂದರ್ಭದಲ್ಲಿ ತಕ್ಷಣ ವೈದ್ಯರ ಸಲಹೆ ಅಗತ್ಯ. ಸಮಸ್ಯೆ ಆಳವಾಗಿದ್ದರೆ ನನ್ನನ್ನು ಸಂಪರ್ಕಿಸಬಹುದು ನನ್ನಲ್ಲಿ ಔಷಧೋಪಚಾರ ಇದೆ.


  • ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW