‘ಜೀವನ್ಮೂಕ್ತಿ ಪಡೆದ ವೃಕ್ಷಮಾತೇ’ ಕವನ

 

ತಿಮ್ಮಕ್ಕ ಕಂಡ ಕನಸನ್ನ ನನಸಾಗಿಸೋಣ…ಅವರಾಕಿದ ನೆರಳಲ್ಲಿ ಜೀವನ ನಡೆಸೋಣ…ಯುವಕವಿ ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

೧೯೧೧ ಜೂನ್ ೩೦ ತಿಮ್ಮಕ್ಕನ ಜನನ
ಚಿಕ್ಕರಂಗಯ್ಯ ವಿಜಯಮ್ಮರ ಒಳ್ಳೆತನ
ದಕ್ಕಿತು ಚಿಕ್ಕಯ್ಯನೆಂಬ ಪತಿಯ ಮನೆತನ
ಮರ ಬೆಳೆಸುವಲ್ಲಿಯೇ ಬಾಳಿದಳು ಕೊನೆತನ

೮೦೦೦ ಸಸಿಗಳ್ಳನ್ನ ನೆಟ್ಟ ಪ್ರಕೃತಿ ಮಾತೆ
ಪರಿಸರ ಉಳಿಸಿ ಬೆಳೆಸಿದಂತ ಜಗನ್ಮಾತೆ
೨೮೪ ಆಲದ ಮರ ಬೆಳಿಸಿದ ವೃಕ್ಷ ಮಾತೆ
ಮರಗಳನ್ನೇ ಮಕ್ಕಳ್ಳೆಂದರಿತ ಮಾಹಾಮಾತೆ

ತಿಮ್ಮಕ್ಕ ಕಂಡ ಕನಸನ್ನ ನನಸಾಗಿಸೋಣ
ಅವರಾಕಿದ ನೆರಳಲ್ಲಿ ಜೀವನ ನಡೆಸೋಣ
ತಿಮ್ಮಕ್ಕ ಅಮ್ಮನಿಗೆ ಚಿರಋಣಿ ಆಗಿರೋಣ
ಅಮ್ಮ ಬೆಳಿಸಿದ ಮರಗಳನ್ನ ಸಂರಕ್ಷಿಸೋಣ

ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಳು
ಮಕ್ಕಳಿಲ್ಲವೆಂಬ ಕೊರಗು ಮೆಟ್ಟಿನಿಂತಳು
ನರರ ಬಾಳಿಗೆ ನೆರಳಾಗಿ ಮುಕ್ತಿ ಪಡೆದಳು
ಸಾಲುಮರದ ತಿಮ್ಮಕ್ಕನೆಂದು ಹೆಸರಾದಳು


  • ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ – ತಾಳಕೇರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW