‘ಆಷಾಡ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ   



ಆಷಾಢ ಮಾಸದಲಿ, ನವಜೋಡಿಗೆ ವಿರಹವು, ಸಪ್ಪಗಿರುವ ಸಮಯವಿದು…ಮುಂದೆ ಓದಿ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಆಷಾಡ ಕವಿತೆ…

ಆಷಾಢ ಮಾಸದಲಿ
ಬೀಸುತಿರೆ ಬಿರುಗಾಳಿ
ಸೂಸುತಿರೆ ಸೋನೆಮಳೆ
ನವಜೋಡಿಗೆ ವಿರಹವು

ಸಪ್ತಪದಿ ತುಳಿಯುತಲೆ
ಅಪ್ಪಿರುವ ಜೋಡಿಗಳು
ಸಪ್ಪಗಿರುವ ಸಮಯವಿದು
ನವಜೋಡಿಗೆ ವಿರಹವು

ಹಸೆಮಣೆಯ ನೆನಪುಗಳು
ಹಸಿಯಾಗೆ ಇರುವಾಗ
ಮಸಿಯಂತೆ ಎದುರಿಹುದು
ನವ ಜೋಡಿಗೆ ವಿರಹವು

ದೂಡಿದರು ದಿನದಿನವ
ಕಾಡುತಿವೆ ಮನದೊಳಗೆ
ಬೇಡಿಯಲಿ ಬಂದಿಸಿವೆ
ನವ ಜೋಡಿಗೆ ವಿರಹವು

ನಸುಕಿನಲಿ ನೆನಪಿಳಿದು
ತುಸು ಆಸೆ ತುಂಬಿರಲು
ಬಿಸಿಯುಸಿರ ಅಪ್ಪುಗೆಗೆ
ನವ ಜೋಡಿಗೆ ವಿರಹವು

ಮಲ್ಲಿಗೆಯು ತೋಟದಲಿ
ನಲ್ಲನಿಗೆ ಘಮಘಮಸಿ
ನಿಲ್ಲದಲೆ ಸೆಳೆಯುತಿರೆ
ನವಜೋಡಿಗೆ ವಿರಹವು

ಆಷಾಢ ಮುಗಿಯುತಲೆ
ಹಾಸಿರಲು ಹಸಿರುಲ್ಲು
ಬೀಸಿರಲು ತಂಗಾಳಿ
ನವ ಜೋಡಿಗೆ ಸರಸವು.


  • ಚನ್ನಕೇಶವ ಜಿ ಲಾಳನಕಟ್ಟೆ   (ಕವಿಗಳು, ಲೇಖಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW