‘ಸಮರಸ’ ಕವನ – ಡಾ.ಲಕ್ಷ್ಮಣ ಕೌಂಟೆ‘ಮರೆಯಲಾಗದು ಏನನ್ನೂ ಆ ಘಳಿಗೆ’ … ಕವಿ ಡಾ.ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವನ, ಮುಂದೆ ಓದಿ…

ಸಮಧ್ಯಾನ ಸಮರಸ
ಸಮಭಾವ ಸಮಭೋಗ
ನಿನ್ನಲ್ಲಿ ನಾನು ನನ್ನಲ್ಲಿ ನೀನು

ಎಲ್ಲದರಲ್ಲೂ ಹೀಗೆಯೇ
ಸಮಸಮವಾಗಿರುವಾಗ
ಸುಖದಲ್ಲಿ
ಅಸಮವೆಲ್ಲಿಯದು ಪ್ರಿಯೆ!

ಮರೆಯಲಾಗದು
ಏನನ್ನೂ
ಆ ಘಳಿಗೆಯ
ಸಮರತ್ಯೋತ್ಸವಗಳನ್ನು

ಅದೇಕೋ ಅನ್ನಿಸುತ್ತಿದೆ
ನಾಲಗೆಯ ಮೇಲೆ
ಒಂದೇ ಜೇನ ಹನಿ ಇರಿಸಿದಂತೆ
ಇನ್ನೊಂದಿಷ್ಟು ಮತ್ತೊಂದಿಷ್ಟು
ಮಗದೊಂದಿಷ್ಟು ಬೇಕಿತ್ತು ಸುಖವ
ಅದೂ ದೀರ್ಘಕಾಲ ಸ್ಮರಣೆಗೆ ದಕ್ಕುವಂತೆ..

ಒಂದೇ ಮಿಲನವಾದರೂ ಸಾಕು
ಸಂಗಮಿಸಬೇಕು
ಶಿವ ಶಿವೆಯರು ಸೇರಿ
#ಸಂಗಮೇಶ್ವರ ಆದಂತೆ

ಕ್ಷಣಿಕದಲ್ಲಿ ತೃಣ ಮಾತ್ರ ಸುಖವಿದೆ
ಬೆನ್ನಿಗೆ ತಲೆದೋರುತ್ತದೆ ಅತೃಪ್ತಿಯೂ
ತೃಪ್ತಿಯಿಲ್ಲ ಆನಂದವಿಲ್ಲ
ಎಲ್ಲ ಅವಸರದ ಸರಸವೇ..


  • ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು)  ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW