ಅಂಗೈಯಲ್ಲಿ ಪ್ರಪಂಚ (ಭಾಗ- ೧೪)

ವೃದ್ಧಾಶ್ರಮ ನಿಜವಾಗಲೂ ಅವಶ್ಯಕತೆ ಇರುವವರಿಗೆ ವರವಾಗಲಿ. ಉಳಿದವರ ಬದುಕು ಹೊಂದಾಣಿಕೆಯಿಂದ ಹಸನಾಗಿರಲಿ ಎನ್ನುವುದೇ ಆಶಯ.  ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ವೃದ್ಧಾಶ್ರಮ ’ ತಪ್ಪದೆ ಮುಂದೆ ಓದಿ..

ಶಶಾಂಕ್, ಸಮೃದ್ಧಿಯದು ಲವ್ ಮ್ಯಾರೇಜ್. ಅತ್ತೆ- ಮಾವ ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಸಮೃದ್ಧಿಗೆ ಯಾಕೋ ಅವರೊಂದಿಗೆ ಸರಿ ಬರುತ್ತಿರಲಿಲ್ಲ. ಅವಳಿಗೆ ಬರಿ ಶಶಾಂಕ್ ಮಾತ್ರ ಮುಖ್ಯವಾಗಿದ್ದ. ಅತ್ತೆ -ಮಾವನ ಜೊತೆ ಪ್ರತಿದಿನದ ಹೊಂದಾಣಿಕೆ, ಅವರ ಮಾತುಕತೆ ಯಾವುದೂ ಅವಳಿಗೆ ಇಷ್ಟವಾಗುತ್ತಿರಲಿಲ್ಲ, ಬೇಕಾಗೂ ಇರಲಿಲ್ಲ. ಇಷ್ಟು ದಿನ ತನ್ನದೇ ಪ್ರಪಂಚದಲ್ಲಿ ಇದ್ದವಳಿಗೆ ಈಗ ಅದರಲ್ಲಿ ಶಶಾಂಕ್ ಗೆ ಮಾತ್ರ ಸ್ಥಾನ. ಇದರಿಂದ ಮನೆಯಲ್ಲಿ ದಿನಾ ಕಿರಿಕಿರಿ. ಮೊದಲಿದ್ದ ನೆಮ್ಮದಿಯೂ ಇಲ್ಲದೆ ಶಶಾಂಕ್ ನ ಅಪ್ಪ – ಅಮ್ಮ ಹೈರಾಣಾಗಿ ಹೋಗಿದ್ದರು.

ಶಶಾಂಕ್ ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದ್ದ. ಕೊನೆಗೆ ಹೆಂಡತಿಯ ಮಾತಿನಂತೆ ಅಪ್ಪ-ಅಮ್ಮ ಇಬ್ಬರನ್ನು ವೃದ್ಧಾಶ್ರಮಕ್ಕೆ ಕಳಿಸಿ ತಿಂಗಳ ಅವರ ಖರ್ಚನ್ನು ಕೊಡುವುದೆಂದಾಯಿತು. ಅತ್ತ ಮಗನ ಕಷ್ಟವನ್ನೂ ನೋಡಲಾಗದೆ ಇತ್ತ ವಯೋಸಹಜ ಕಾಯಿಲೆಗಳಿಂದ ಕೆಲವೊಂದಕ್ಕೆ ಯಾರ ಸಹಾಯವೂ ಇಲ್ಲದೆ ತಾವಿಬ್ಬರೇ ಇರಲೂ ಆಗದೆ ಇಂದು ಆ ವೃದ್ಧರಿಬ್ಬರು ಮನಸ್ಸಿಲ್ಲದ ಮನಸ್ಸಿನಿಂದ ವೃದ್ಧಾಶ್ರಮದ ದಾರಿ ಹಿಡಿದಿದ್ದರು.

ಈ ಒಂದು ದಿನ ತಮ್ಮ ಜೀವನದಲ್ಲಿ ಬರುತ್ತದೆ ಎಂಬ ಕಲ್ಪನೆಯೂ ಇಲ್ಲದವರಿಗೆ ಇದು ದೊಡ್ಡ ಆಘಾತ. ಸುಭದ್ರಮ್ಮನಿಗೆ ಈಗ ಸರಿಸುಮಾರು 70 ವರ್ಷವಿರಬಹುದು. ಗಂಡ ತೀರಿ ಆಗಲೇ ಐದು ವರ್ಷ ಕಳೆದಿದೆ. ಹೆಣ್ಣು ಮಕ್ಕಳ ಮದುವೆಯಾಗಿ, ಗಂಡುಮಕ್ಕಳು ಕೆಲಸಕ್ಕೆಂದು ಸಿಟಿ ಸೇರಿ ಎಷ್ಟೋ ವರ್ಷಗಳಾಗಿವೆ. ಗಂಡ ತೀರಿದ ನಂತರ ಸುಭದ್ರಮ್ಮ ಗಂಡು ಮಕ್ಕಳ ಜೊತೆ ಹೋಗಿರಲು ಮಾನಸಿಕವಾಗಿ ಸಿದ್ಧರಿದ್ದರೂ ಸಹ ಇದು ನಿನ್ನ ಮನೆ, ಇಲ್ಲಾದ್ರೆ ನಿಂಗೆ ಸ್ವತಂತ್ರ ಇದೆ, ಅಲ್ಹೋದ್ರೆ ಅವ್ರೆಲ್ಲ ಹೇಳ್ದಂಗೆ ಕೇಳ್ಕೊಂಡು ಇರ್ಬೇಕು, ಹಾಗೆ- ಹೀಗೆ ಎಂದು ಹೆಣ್ಣು ಮಕ್ಕಳು ಹೇಳಿದ ಮಾತು ಕೇಳಿ ಅಲ್ಲೇ ಉಳಿದರು. ಮೊದಲೂ ಅಷ್ಟೆ, ಗಂಡುಮಕ್ಕಳ ಮನೆಗೆ ಸಮಯ ಸಂದರ್ಭ ಎಂದು ಕರೆದಾಗ ನೀನ್ಯಾಕೆ ಹೋಗಿ ಮಾಡ್ತೀಯಾ ಎಂಬ ಅವರಿವರ ಮಾತು ಕೇಳಿ ಈಗ ಸುಭದ್ರಮ್ಮನಿಗೂ ಗಂಡುಮಕ್ಕಳು, ಸೊಸೆಯಂದಿರು, ಅವರ ಮಕ್ಕಳೆಂದರೆ ಅಷ್ಟಕ್ಕಷ್ಟೆ. ಹೆಣ್ಣುಮಕ್ಕಳು, ಅವರ ಮಕ್ಕಳೆಂದರೆ ಅಚ್ಚುಮೆಚ್ಚು. ಹಾಗಾಗಿ ಆ ಮನೆಯಲ್ಲಿ ಹೆಣ್ಣುಮಕ್ಕಳಿಗೇ ಆದ್ಯತೆ. ಅವರು ಹೇಳಿದಂತೆಯೆ ಎಲ್ಲಾ ನಡೆಯುವುದು. ಗಂಡು ಮಕ್ಕಳು ಖರ್ಚು ಮಾಡಲಿಕ್ಕೆ ಅವಶ್ಯಕತೆಗೆ ಬೇಕಾದಾಗ ಮಾತ್ರ. ಹಾಗಾಗಿ ಸೊಸೆಯಂದಿರು, ಮೊಮ್ಮಕ್ಕಳು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಸುಭದ್ರಮ್ಮನಿಗೆ ಏನೋ ಅಸಮಾಧಾನ. ಹಾಗಾಗಿ ಇಂದು ಕೈಲಾಗದ ಕಾಲದಲ್ಲಿ ಸುಭದ್ರಮ್ಮನಿಗೆ ಬಂದಿರಲು ಯಾರ ಮನೆಯೂ ಸರಿ ಹೊಂದುತ್ತಿಲ್ಲ. ಇತ್ತೀಚೆಗೆ ನನ್ನನ್ನು ಅತ್ಲಾಗೆ ವೃದ್ಧಾಶ್ರಮಕ್ಕಾದ್ರು ಸೇರ್ಸಿದ್ರೆ ಆಗ್ತಿತ್ತು ಎನ್ನುವುದು ಅವರ ಅಂಬೋಣ.

ಫೋಟೋ ಕೃಪೆ : ಗೂಗಲ್

ಇವೆಲ್ಲಾ ಒಂದೆರಡು ಉದಾಹರಣೆಗಳಷ್ಟೆ. ವೃದ್ಧಾಶ್ರಮವು ಮೊದ ಮೊದಲು ನಿರ್ಗತಿಕರಿಗಾಗಿ ಸರ್ಕಾರ ಅಥವಾ ಸೇವಾರ್ಥಿಗಳಿಂದ ನಿರ್ಮಿಸಲ್ಪಟ್ಟದ್ದು. ಒಂದು ಕಡೆ ಅಲ್ಪ ಆದಾಯ
(ವಿಧವಾ ವೇತನ ಅಥವಾ ವೃದ್ಧಾಪ್ಯ ವೇತನ) ಇದ್ದವರಿಗೆ,ಇನ್ನೊಂದು ಕಡೆ ಸ್ವಲ್ಪ ಹಣವಂತರಿಗಾಗಿ ಕಟ್ಟಡಗಳು ಇರುತ್ತಿತ್ತು. ನಂತರದ ದಿನಗಳಲ್ಲಿ ವೃದ್ಧಾಶ್ರಮ ಎನ್ನುವುದು ಶ್ರೀಮಂತಿಕೆ, ಮಕ್ಕಳು, ಸಂಬಂಧಗಳು ಎಲ್ಲವೂ ಇದ್ದಾಗ್ಯೂ ನಾನಾ ಕಾರಣಗಳಿಂದ ಅನಿವಾರ್ಯತೆ/ ಅವಶ್ಯಕತೆ ಎನಿಸಿದೆ.

“ವೃದ್ಧಾಶ್ರಮ ಎನ್ನುವುದು ವಯಸ್ಸಾದ ಕಾಲದಲ್ಲಿ ದಿನನಿತ್ಯದ ಬದುಕಿಗೆ ಬೇರೊಬ್ಬರ ಅಗತ್ಯವಿದ್ದಾಗ್ಯೂ ನೋಡಿಕೊಳ್ಳುವವರು ಯಾರೂ ಇಲ್ಲದಿದ್ದಾಗ ಅನುಕೂಲವಾಗುವಂತಹ ಒಂದು ವ್ಯವಸ್ಥೆ” ಎಂದರೆ ತಪ್ಪಲ್ಲ. ಒಂದೆರಡು ದಿನಕ್ಕಾದರೆ ಸಂಬಂಧಿಕರ, ನೆರೆಹೊರೆಯವರ ಮೇಲೆ ಅವಲಂಬಿತರಾಗಬಹುದು. ಕೊನೇ ಉಸಿರಿನ ತನಕ ಅಂದರೆ ಖಂಡಿತಾ ಕಷ್ಟ. ಏಕೆಂದರೆ, ಈ ಧಾವಂತದ ಬದುಕಲ್ಲಿ ಎಲ್ಲರಿಗೂ ಅವರವರದೇ ಆದ ಕೆಲಸ ಕಾರ್ಯಗಳು, ಕರ್ತವ್ಯಗಳು ಇರುತ್ತವೆ. ಹೀಗಿದ್ದಾಗ್ಯೂ ಸಹಾಯ ಮಾಡುವವರು ಮುಂದೆ ಬಂದರೂ ಯಾವಾಗಲೂ ಸಹಾಯ ಪಡೆಯಲು, ಕೆಲವೊಂದನ್ನು ಎಲ್ಲರಿಂದ ಮಾಡಿಸಿಕೊಳ್ಳಲು ಮುಜುಗರ, ಸಂಕೋಚ ಆಗಬಹುದು. ಮುಂದೊಮ್ಮೆ ಮಾಡಿಸಿಕೊಂಡರೆಂಬ ಹಂಗೂ ಉಳಿಯಬಹುದು.

ತೆರೆಮರೆಯಲ್ಲಿ ಆಡಿದ ಮಾತು ಕಿವಿಗೆ ಬಿದ್ದು ನೋವಾಗಲೂಬಹುದು. ಅನಾರೋಗ್ಯ, ಅಭದ್ರತೆ, ಯಾವಾಗ ಏನಾಗುತ್ತದೋ ಎಂಬ ಭಯ, ಸಂಗಾತಿಯ ಮರಣ,ಒಂಟಿತನ, ದುಡಿಮೆ ಇಲ್ಲದಿರುವುದು, ಹಣಕ್ಕೆ ಹಾಗೂ ಇತರ ವಿಷಯಗಳಲ್ಲಿ (ಊಟ- ತಿಂಡಿಗೆ, ಎಲ್ಲಿಗಾದರೂ ಹೋಗಬೇಕಾದಲ್ಲಿ) ಬೇರೆಯವರ ಆಶ್ರಯ ಬೇಕಾಗುತ್ತದೆ. ಇವೆಲ್ಲ ವೃದ್ಧರನ್ನು ಹೆಚ್ಚು ಕೊರಗುವಂತೆ ಮಾಡುತ್ತದೆ. ಇಂಥವರಿಗೆಲ್ಲ ಈ ವೃದ್ಧಾಶ್ರಮ ಒಂದು ವರದಾನವೆಂದರೆ ತಪ್ಪಲ್ಲ.

ವೃದ್ಧಾಶ್ರಮಕ್ಕೆ ಸೇರಲು/ ಸೇರಿಸಲು ಕಾರಣಗಳು :

  • ಮಕ್ಕಳಿಲ್ಲದೆ ಇರುವವರು. ಸಂಬಂಧಿಕರ ಆಶ್ರಯ ಬಯಸದೆ ಅಥವಾ ಅವರುಗಳು ಇವರ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿಲ್ಲದೆ ಇರುವುದು.
  • ಮಕ್ಕಳ ನಿರ್ಲಕ್ಷ್ಯ.
  • ಬಾಳ ಸಂಗಾತಿ ಮರಣಸಿದ ಮೇಲೆ ನೋಡಿಕೊಳ್ಳುವವರು ಇಲ್ಲದೇ ಇರುವುದು.
  • ಮಕ್ಕಳು, ತಂದೆ- ತಾಯಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ತಯಾರಿಲ್ಲದೆ ಇರುವುದು.
  • ವಿದ್ಯಾಭ್ಯಾಸಕ್ಕೆ, ಕೆಲಸಕ್ಕೆಂದು ವಿದೇಶಗಳಿಗೆ ತೆರಳಿದ ಮಕ್ಕಳು ಮುಂದೆ ಅಲ್ಲೇ ನೆಲೆಸಿರುವ ಕಾರಣ.
  • ಆಸ್ತಿಯೆಲ್ಲ ಕಿತ್ತುಕೊಂಡು ತಂದು ವೃದ್ಧಾಶ್ರಮಕ್ಕೆ ಬಿಟ್ಟು ಹೋದವರು.
  • ಆಸ್ತಿ, ಪೆನ್ಶನ್ ಹಣಗಳಿಗೆ ಹಿಂಸೆ ಮಾಡುವ ಮಕ್ಕಳು, ಸಂಬಂಧಿಕರ ಕಿರುಕುಳಕ್ಕೆ ಬೇಸತ್ತು ವೃದ್ಧಾಶ್ರಮ ಸೇರಿರುವವರು.
  • ಅನಾರೋಗ್ಯದಿಂದ ಬಳಲುತ್ತಿರುವವರು, ನೋಡಿಕೊಳ್ಳಲು ಯಾರೂ ಇಲ್ಲದಿರುವವರು, ಇದ್ದರೂ ಪ್ರತಿದಿನ ಇವರ ಸೇವೆ ಮಾಡಲು, ಸಮಯಕ್ಕೆ ಸರಿಯಾಗಿ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿರುವವರು.
  • ಬೆಡ್ ರಿಡನ್ ಆದಾಗ ಅವರನ್ನು ಎತ್ತಿ ಕೂರಿಸಲು,ಸ್ನಾನ ಮಾಡಿಸಲು ಪ್ರತಿದಿನ ಒಂದಿಬ್ಬರು ಬೇಕಾದಂತಹ ಸಮಯದಲ್ಲಿ ಮನೆಯಲ್ಲಿ ನೋಡಿಕೊಳ್ಳಲು ಕಷ್ಟವಾಗಬಹುದು. ಮನೆಯಲ್ಲಿರುವ ಮಹಿಳೆ ಆ ವ್ಯಕ್ತಿಯನ್ನು ಒಬ್ಬರೇ ಕೂರಿಸಿ ಮಾಡುವಷ್ಟು ಶಕ್ತರಲ್ಲದೇ ಇರಬಹುದು.
  • ಯಾವಾಗ ಹೇಗೆ ಎಂದು ತಿಳಿಯದ ಪರಿಸ್ಥಿತಿಯಲ್ಲಿ( ಒಮ್ಮೆ ಇದ್ದಂತೆ ಇನ್ನೊಮ್ಮೆ ಇರದಿರುವುದು, ಉದಾಹರಣೆಗೆ ಬಿಪಿ , ಶುಗರ್ ನಲ್ಲಿ ಉಂಟಾಗುವ ವ್ಯತ್ಯಾಸ) ಹಗಲು ರಾತ್ರಿಯೆನ್ನದೆ ಜೊತೆಯಲ್ಲಿ ಯಾರಾದರೂ ಇರಲೇಬೇಕಾದಂತಹ ಸಂದರ್ಭಗಳಲ್ಲಿ. ಏಕೆಂದರೆ, ದುಡಿಮೆ, ಮಕ್ಕಳ ಓದು ,ಅಡಿಗೆ, ಊಟ ,ತಿಂಡಿ ಇತರ ಕೆಲಸಗಳ ಅನಿವಾರ್ಯತೆ ಇದ್ದೇ ಇರುತ್ತದೆ.
  • ಮಕ್ಕಳು, ಸೊಸೆಯಂದಿರೊಡನೆ ಹೊಂದಾಣಿಕೆ ಇಲ್ಲದಿರುವುದು.
  • ವಯಸ್ಸಾದ ಕಾಲದಲ್ಲಿ ಕಳ್ಳಕಾಕರ ಭಯದಿಂದ ರಾತ್ರಿ ಸರಿಯಾಗಿ ನಿದ್ರಿಸಲು ಆಗದಿರುವುದು.
  • ಬೇಡದ ಯೋಚನೆಗಳು ಕಾಡುವುದು, ಖಿನ್ನತೆ, ಆತಂಕ, ಸಾವಿನ, ಭಯ, ವಯೋಸಹಜವಾಗಿ ಕಾಡುವ ಕಾಯಿಲೆಗಳು.
  • ವಯಸ್ಸಾದ ಮೇಲೆ ಅವಶ್ಯಕವಾಗಿರುವಂತಹ ಕನ್ನಡಕ, ಊರುಗೋಲು, ಕೆಲವೊಮ್ಮೆ ಮಾಡಬೇಕಾದ ಪಥ್ಯ, ದಿನನಿತ್ಯದ ಮಾತ್ರೆಗಳು ಹೀಗೆ ಯಾವುದನ್ನೂ ಸರಿಯಾಗಿ ಅನುಸರಿಸದೆ ಮತ್ತೆ ಮತ್ತೆ ಅನಾರೋಗ್ಯಕ್ಕೆ, ತೊಂದರೆಗಳಿಗೆ ಒಳಗಾಗುವುದಲ್ಲದೇ ಮನೆಯಲ್ಲಿರುವ ಎಲ್ಲರಿಗೂ ತೊಂದರೆ ಕೊಡುವುದರ ಜೊತೆಗೆ ಗಾಬರಿಗೊಳಿಸುವುದು. ಇದೆಲ್ಲದರಿಂದ ಬೇಸತ್ತು ಮನೆಯವರು ಇವರನ್ನು ಸುಧಾರಿಸಲು ಸಾಧ್ಯವಾಗದೆ ವೃದ್ಧಾಶ್ರಮಕ್ಕೆ ಸೇರಿಸುವ ತೀರ್ಮಾನ ಮಾಡಬಹುದು.
  • ಬೇಸಿಕ್ ಸ್ವಚ್ಛತೆ ಇಲ್ಲದಿರುವುದು. ಉದಾಹರಣೆಗೆ: ಟಾಯ್ಲೆಟ್ಗೆ ಹೋದರೆ ಫ್ಲೆಷ್ ಮಾಡದಿರುವುದು. ಕಮೋಡ್, ಇಂಡಿಯನ್ ಟಾಯ್ಲೆಟ್ ಗಳ ಫೆಸಿಲಿಟಿ ಇದ್ದರೂ ಬಚ್ಚಲಲ್ಲಿ ಮೂತ್ರ ಮಾಡಿ ಸರಿಯಾಗಿ ನೀರು ಹಾಕದೆ ಬರುವುದು. ಕಫವನ್ನು ವಾಶ್ ಬೇಸಿನ್, ಟಾಯ್ಲೆಟ್ ನಲ್ಲಿ ಉಗುಳಿ ಹಾಗೇ ಬರುವುದು. ಕೂದಲನ್ನು ಕಮೋಡ್ ಗೆ, ವಾಷ್ ಬೇಸಿನ್ ಗೆ ಹಾಕುವುದು. ತಲೆ ಬಾಚಿದ ಬಾಚಣಿಗೆಯ ಕೊಳೆಯನ್ನು ಅಡುಗೆಮನೆಯ ಸಿಂಕಲ್ಲಿ ಪಾತ್ರೆಗಳ ಮೇಲೆಲ್ಲಾ ಬೀಳುವಂತೆ ತೊಳೆಯುವುದು. ಉಪಯೋಗಿಸಿದ ಇಯರ್ ಬಡ್ಸ್ ನ್ನು ಎಲ್ಲೆಂದರಲ್ಲಿ ಇಡುವುದು. ಹೀಗೆ ತಮಗೆ ಆರೋಗ್ಯ ಚೆನ್ನಾಗಿದ್ದು ಈ ಎಲ್ಲವುದನ್ನೂ ಮಾಡಿಕೊಳ್ಳುವ ಹಾಗಿದ್ದಾಗಲೂ ಸಹ ಈ ರೀತಿಯ ವರ್ತನೆಗಳು ಮನೆಯಲ್ಲಿರುವ ಇತರರಿಗೆ ಬಹಳ ಹಿಂಸೆಯಾಗುತ್ತದೆ. ಹೇಳಿದರೂ ಬೇಕೆಂದೇ ಹಾಗೆ ಮಾಡುವುದರಿಂದ ಪ್ರತಿಬಾರಿ ನೋಡೀ ನೋಡೀ ಟಾಯ್ಲೆಟ್, ವಾಷ್ ಬೇಸಿನ್ ಕ್ಲೀನ್ ಮಾಡಲು ಮನೆಯಲ್ಲಿರುವ ಮಹಿಳೆಗೂ ಕಷ್ಟ ಆಗುತ್ತದೆ. ಗಡಿಬಿಡಿಯಲ್ಲಿರುವ ಗಂಡ ,ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಹೊಂದಿಸುವುದರ ಜೊತೆಗೆ ಇಂತಹ ವರ್ತನೆಗಳು ಅವಳ ತಾಳ್ಮೆಯನ್ನು ಕೆಣಕುವುದಂತೂ ಸತ್ಯ.
  • ಮನೆಯಲ್ಲಿ ಹಿರಿಯರೆಂಬ ಅಧಿಕಾರ, ಎಲ್ಲಾ ವಿಷಯದಲ್ಲೂ ಆಕ್ಷೇಪಣೆ, ಜಗಳ ,ಬಯ್ಯುವುದು, ಗೊಣಗಾಟ, ಶಾಪ ಹಾಕುವುದು,ಊಟ- ತಿಂಡಿ ಯಾವ ವಿಷಯದಲ್ಲೂ ತೃಪ್ತಿ ಇಲ್ಲದಿರುವುದು.
  • ನಮ್ಮಿಂದ ಮಕ್ಕಳ, ಮನೆಯವರ ದಿನನಿತ್ಯದ ಬದುಕಿಗೆ ತೊಂದರೆಯಾಗುತ್ತದೆ ಎಂದುಕೊಂಡು ತಾವೇ ತೀರ್ಮಾನಿಸಿ ವೃದ್ಧಾಶ್ರಮಕ್ಕೆ ಸೇರುವವರೂ ಇದ್ದಾರೆ.

ಫೋಟೋ ಕೃಪೆ : ಗೂಗಲ್

ಅನುಕೂಲಗಳು :

  • ಜೊತೆಯಲ್ಲಿ ಕಾಳಜಿ ವಹಿಸುವವರು ಇದ್ದಾರೆಂಬ ನೆಮ್ಮದಿ.
  • ಸಮಯಕ್ಕೆ ಸರಿಯಾಗಿ ಊಟ ತಿಂಡಿ, ನಿದ್ದೆ, ಸ್ನಾನಕ್ಕೆ ಬಿಸಿ ನೀರು ಹೀಗೆ ದಿನನಿತ್ಯದ ಅಗತ್ಯಗಳ ಪೂರೈಕೆ.
  • ಅನಾರೋಗ್ಯವೆನಿಸಿದರೆ ತಕ್ಷಣ ವೈದ್ಯರು, ಚಿಕಿತ್ಸೆಯ ವ್ಯವಸ್ಥೆ ಇರುವುದರಿಂದ ಗಾಬರಿ, ಆತಂಕದ ಪ್ರಶ್ನೆ ಮೂಡುವುದಿಲ್ಲ.
  • ಮಾತನಾಡಲು, ವಾಯು ವಿಹಾರ ಮಾಡಲು ಎಲ್ಲವುದಕ್ಕೂ ಸಮಾನ ವಯಸ್ಕರೋ,ಮನಸ್ಕರೋ ಇರುವುದರಿಂದ ಸಮಯ ಕಳೆಯಲು ಕಷ್ಟಪಡುವಷ್ಟಿಲ್ಲ.
  • ಟಿವಿ, ಪೇಪರ್ ,ಯೋಗ, ವ್ಯಾಯಾಮ, ಭಜನೆ ಇತರ ಹವ್ಯಾಸಗಳ ಜೊತೆಗೆ ಕೈಲಾದ ಸಣ್ಣಪುಟ್ಟ ಕೆಲಸಗಳಲ್ಲಿ( ತರಕಾರಿ ಹೆಚ್ಚುವುದು, ಗಿಡಕ್ಕೆ ನೀರು ಹಾಕುವುದು, ಬತ್ತಿ ಮಾಡುವುದು ಇತ್ಯಾದಿ) ತೊಡಗಿಸಿಕೊಂಡು ಎಲ್ಲರೊಂದಿಗೆ ಹೊಂದಿಕೊಂಡು ನಗು ನಗುತ್ತಾ ಇದ್ದರೆ ಸಂಧ್ಯಾಕಾಲ ಎನ್ನುವುದು ಅಷ್ಟು ಕಠಿಣ ಅಥವಾ ಶಿಕ್ಷೆ ಎನಿಸುವುದಿಲ್ಲ. ಇದರಿಂದ ಮನಸ್ಸಿಗೆ ಬೇಡದ ಯೋಚನೆ ಬರುವುದು ತಪ್ಪುತ್ತದೆ, ಹಾಗೂ ಮನೋರಂಜನೆ ದೊರೆತು ಉತ್ಸಾಹವೂ ಮೂಡುತ್ತದೆ.
  • ಮಕ್ಕಳಿಲ್ಲದ ಕಾರಣಕ್ಕೆ ಸಂಬಂಧಿಕರ ಮೇಲೆ ಅವಲಂಬನೆಯಾಗಲು ಇಷ್ಟವಿಲ್ಲದೆಯೋ ಅಥವಾ ಅವರುಗಳು ಇವರ ಜವಾಬ್ದಾರಿ ತೆಗೆದುಕೊಳ್ಳಲು ತಯಾರಿಲ್ಲದ ಕಾರಣದಿಂದಲೋ ಕೊನೆಗಾಲದಲ್ಲಿ ವೃದ್ಧಾಶ್ರಮದ ಆಶ್ರಯ ಬಯಸುತ್ತಾರೆ. ಒಬ್ಬರು ಹೋಗಿ ಒಬ್ಬರು ಉಳಿದರೆ ನಂತರದ ಬದುಕು ನರಕ. ಮೊದಲೇ ಇಬ್ಬರೂ ಒಟ್ಟಿಗೆ ವೃದ್ಧಾಶ್ರಮ ಸೇರಿದರೆ ಜೊತೆಯಲ್ಲಿ ಇದ್ದ ಹಾಗೂ ಆಗುತ್ತದೆ. ಒಬ್ಬರ ನಂತರ ಇನ್ನೊಬ್ಬರ ಬದುಕು ಮುಂದೇನು ಎಂಬ ಗೊಂದಲವಿಲ್ಲದೆ ನೆಮ್ಮದಿಯಾಗಿರಬಹುದು. ಮರಣದ ನಂತರವೂ ಮಾಡಬೇಕಾದ ಎಲ್ಲಾ ಕ್ರಿಯೆಗಳ ಜವಾಬ್ದಾರಿ ವೃದ್ಧಾಶ್ರಮದವರೇ ತೆಗೆದುಕೊಳ್ಳುವುದರಿಂದ ಅನಾಥ ಶವವಾಗುವ ಅಥವಾ ತೀರಿ ಮೂರ್ನಾಲ್ಕು ದಿನಗಳಾದರೂ ಯಾರಿಗೂ ತಿಳಿಯದೆ ಕೊಳೆತು ಹೋಗುವಂಥ ಪರಿಸ್ಥಿತಿ ಬರುವುದಿಲ್ಲ.
ಫೋಟೋ ಕೃಪೆ : ಗೂಗಲ್

ಅನಾನುಕೂಲಗಳು :


  • ಮಂಗಳ ಎಂ ನಾಡಿಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW