ಹರ್ಷ ಹೆಂಡತಿ ಮಾತು ಕೇಳಿ ಹೆಂಡತಿ ಮನೆಗೆ ಗಂಡು ಮಗನಾಗಿ ಕೂತ. ವಿಧವೆ ತಾಯಿ, ಗರ್ಭಿಣಿ ತಂಗಿಗೆ ನಿರ್ಲಕ್ಷ್ಯ ಮಾಡಿದ. ಮುಂದೆ ಅವರ ಕತೆ ಏನಾಯಿತು ತಪ್ಪದೆ ಓದಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಕತೆ.
ಗಡಿಬಿಡಿಯಲ್ಲಿ ಲಲಿತಮ್ಮ ಬ್ಯಾಗ್ ಗಳನ್ನು ಎತ್ತಿ ಇಡುತ್ತಾ, ಹೊರಡಲು ತಯಾರಿ ಮಾಡುತ್ತಿದ್ದರು. ಮೂರೂ ವರ್ಷದ ಮೊಮ್ಮಗ ಸೂರ್ಯ, ಕಾಲ ಕಾಲಿಗೆ ಅಡ್ಡವಾಗಿ ಬರುತ್ತಿದ್ದ. ‘ಅಜ್ಜಿನಾ….ಮಾಡುವೆ’…. ಎನ್ನುತ್ತಾ ಅವರ ಬೆನ್ನು ಬಿದ್ದಿತ್ತು.
ಮಗಳು ಕವಿತಾ ತನ್ನ ಐದು ದಿನದ ಕೂಸನ್ನು ಎತ್ತಿಕೊಂಡು ಅದಕ್ಕೂ ಸ್ವೇಟರ್, ಟೋಪಿ ಹಾಕಿ ಸಿದ್ಧ ಮಾಡುತ್ತಿದ್ದಳು. ಲಲಿತಮ್ಮ “ಎಲ್ಲ ಸರಿ ಇದೇಯಾ?. ನೋಡಿಕೋ, ನಾವು ಹೋಗಿ ಬರಲು ಇನ್ನೂ ಎರಡು ದಿನವಾಗುತ್ತದೆ. ಕೂಸಿಗೆ ಬೇಕಾದ ಸಾಮಾನು ತೆಗೆದುಕೋ. ಈ ಚಳಿ ಬೇರೆ ಇನ್ನೂ ಮುಗಿದಿಲ್ಲ. ಇದರ ಕಾಲ ಸಾಕಾಗಿದೆ. ನನಗಂತೂ ನಿಮ್ಮಪ್ಪ ಹೋದಾಗ ನಾನು ಹೋಗ ಬೇಕಿತ್ತು. ಮೈಯಲ್ಲಿ ಬ್ಯಾನಿ ಇದ್ದವರನ್ನು ಬಿಟ್ಟ ಆ ದೇವರು. ನಿಮ್ಮಪ್ಪನನ್ನು ಕರೆದು ಕೊಂಡ ಎನ್ನುತ್ತಾ, ಬ್ಯಾಗ್ ತಗೆದುಕೊಂಡು ಮೊಮ್ಮಗನ ನೀರಿನ ಬಾಟಲಿಯನ್ನು ತಮ್ಮ ಕೈಚೀಲದಲ್ಲಿ ಹಾಕಿ ಅವನ್ನು ಎತ್ತಿಕೊಂಡರು.
ಮಗಳು ಆಗಲೇ ಮಗುವನ್ನು ತೆಗೆದುಕೊಂಡು ಹೊರಗೆ ಬಂದಿದ್ದಳು .ಲಿಲತಮ್ಮ ಬ್ಯಾಗನ್ನುತೆಗೆದುಕೊಂಡು ಮತ್ತೊಂದು ಕೈಯಲ್ಲಿ ಬಾಗಿಲು ಹಾಕಿ ಬೀಗ ಜಡಿದು, ಮನೆಯ ಬಾಗಿಲ್ಲನ್ನು ಒಮ್ಮೆ ನೋಡಿ ತುಂಬಿ ಬಂದ ಕಣ್ಣೀರು ಭಾರವಾದ ಮನದೊಂದಿಗೆ ಬಸ್ಟ್ಯಾಂಡ್ ಗೆ ತೆರಳಿದರು.
ಜಾತಪ್ಪನವರು ತೀರಿಕೊಂಡು 2 ವರ್ಷವಾಗಿದ್ದವು. ಅವರಿದ್ದಾಗಲೇ ಇಬ್ಬರು ಮಕ್ಕಳ ವಿವಾಹವು ನೇರವೇರಿತ್ತು. ಕೋವಿಡ್ ಕಾಲ ಸಾಫ್ಟ್ ವೇರ್ ವೃತ್ತಿಯ ಮಗ, ಸೊಸೆ ಮನೆ ಸೇರಿದ್ದರು. ಮಗಳು 2 ನೇ ಮಗುವಿನ ಬಾಣಂತಿಯಾಗಿ ತವರಿಗೆ ಬಂದಿದ್ದಳು. ಜಾತಪ್ಪನವರ ನಡೆಯಲ್ಲಿ ಎಲ್ಲವೋ ಸುಸೂತ್ರವಾಗಿ ಸಾಗುತ್ತಿದ್ದ ಸುಭಿಕ್ಷಾ ಸಮಯವದು. ಅವರು ನಿವೃತ್ತ ಶಿಕ್ಷಕರು. ಆದರೆ ಕೋವಿಡ್ ಅಲೆ, ಮನೆಯ ತಳಪಾಯವೇ… ಬುಡಮೇಲು ಮಾಡಿತ್ತು. ಜಾತಪ್ಪನವರು ಇಹಲೋಕ ತ್ಯಜಿಸಿದರು. ಮಗ ಹೆಂಡತಿಯ ತವರು ಸೇರಿದ. ಲಲಿತಮ್ಮ ಗರ್ಭಿಣಿ ಮಗಳ ಜೊತೆ ಬದುಕು ಸಾಗಿಸುತ್ತಿದ್ದರು.
ಅಗಾಗ ಬಂದು ಹೋಗುತ್ತಿದ್ದ ಮಗ ಹರ್ಷ ತಂದೆಯ ಪೇನ್ಷನ್ ಹಣದ ವಹಿವಾಟು ಎಲ್ಲ ತಾನೆ ತೆಗೆದುಕೊಂಡು ಎಷ್ಟು ಬೇಕೊ ಅಷ್ಟು ಮಾತ್ರ ತಾಯಿಗೆ ಕೊಟ್ಟು ಹೋಗುತ್ತಿದ್ದ. ಅದರೆ ಬರುಬರುತ್ತಾ ಹರ್ಷ ಮನೆಯ ಕಡೆ ಗಮನ ಹರಿಸುವುದೇ ಬಿಟ್ಟ. ಹೆಂಡತಿಯ ತವರು ಗದಗದಲ್ಲೆ ಠಿಕಾಣಿ ಹೋಡಿದ. ಆತನ ಅತ್ತೆ, ಮಾವ ಇಬ್ಬರು ನೌಕರಿದಾರರು, ಪದವಿ ಓದುತ್ತಿರುವ ನಾದಿನಿ, ಹರ್ಷ ಅಳಿಯ ಮಾತ್ರ ಅಗಿರದೆ ಅತ್ತೆಯ ಮನೆಗೆ ಮಗನಾಗಿದ್ದ. ಹೆಂಡತಿ ಸುಮ ಮನೆಗೆ ಹಿರಿ ಮಗಳು ಕೋವಿಡ್ ಸಂಕಷ್ಟ ಕಾಲ ಗಂಡ-ಹೆಂಡಿರ ಉದ್ಯೋಗ ಕಡಿತಗೊಂಡಿತ್ತು. ಆದರೆ ಈಗ ಮತ್ತೆ ಇಬ್ಬರು ವರ್ಕ ಫ್ರಮ್ ಹೋಮ್ ಮಾಡುತ್ತಿದ್ದರು. ಈ ಮಧ್ಯ ಹರ್ಷ ಕಾರ್ ನ್ನು ತೆಗೆದುಕೊಂಡ ಓಡಾಟಕ್ಕೆ ಎಂದು. ಅದರೆ ಓಡಾಟ ಎಲ್ಲ ಅತ್ತೆ- ಮಾವ- ನಾದಿನಿಯ ಸೇವೆಗೆ ಮೀಸಲಾಗಿತ್ತು. ಅತ್ತೆ ಮಾವನಗೂ ಹರ್ಷನನ್ನು ಕಂಡರೆ ಅಪಾರ ಅಭಿಮಾನ ಪ್ರತಿಯೊಂದುಕ್ಕೂ ಅವನ್ನು ಕೇಳಿ ತೀರ್ಮಾನ ಮಾಡುತ್ತಿದ್ದರು. ಗಂಡು ಮಕ್ಕಳು ಇಲ್ಲದ ಮನೆ ಎಂಬ ಕಾರಣ ಬೇರೆ,
ಹರ್ಷನನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಅಭಿಲಾಷೆ ಬಲವಾಗಿತ್ತು.
ಕೊನೆಯ ಅಳಿಯ ಹೇಗೋ… ಏನೋ…. ಎಂಬ ಮುಂದಾಲೋಚನೆಯೂ ಕೊಡಿತ್ತು. ನಾದಿನಿಗೆ ಗಂಡು ಹುಡುಕುವ ಶಾಸ್ತ್ರ ಅಗಾಗ ನಡೆಯುತ್ತಿತ್ತು. ಹರ್ಷ-ಸುಮಾರ ಅಧ್ಯಕ್ಷತೆಯಲ್ಲಿ ಇತ್ತ ತಾಯಿ ಲಲಿತಮ್ಮ ದಿನ ತುಂಬಿತ್ತಿರುವ ಮಗಳ ಚಿಂತೆ ಒಂದಾದರೆ, ಮತ್ತೊಂದು ಬದಲಾದ ಹರ್ಷನ ವರ್ತನೆ. ಪತಿಯ ಮರಣದಿಂದ ತಮಗೆ ಯಾರೂ ದಿಕ್ಕಿಲ್ಲ ಎನ್ನವು ನೋವು ಹೆಚ್ಚಾಗಿತ್ತು. ಮನೆಯ ವಾತಾವರಣ ಸ್ಮಶಾನವಾಗಿತ್ತು. ಹರ್ಷನಿಗೆ ಹಲವು ಬಾರಿ ಕರೆ ಮಾಡಿ ಮನೆಯ ಬಗ್ಗೆ ಹೇಳಿದರು. ಏನಾದರು ಉತ್ತರ ನೀಡಿ ತಾಯಿಗೆ ಸಮಾಧಾನ ಮಾಡುತ್ತಿದ್ದ. ತಾಯಿಯ ಜಾಡು ಗಂಡು ಮಕ್ಕಳು ಅಳೆಯುವಷ್ಟು ಯಾರೂ ಅರಿಯಲಾರರು. ಆ ಚಾಚಾಕ್ಯತೆ ಹರ್ಷನಿಗೆ ಸಹಜವಾಗಿಯೇ ಒಲಿದಿತ್ತು.
ಮಗಳನ್ನು ಆಸ್ಪತ್ರೆಗೆ ಸೇರಿಸುವ ದಿನಗಳು ಹತ್ತಿರವಾದವು. ಲಲಿತಮ್ಮ ಹರ್ಷ ಮತ್ತು ಸುಮಾಳನ್ನು ಗೋಗರೆದು ಕರೆದರು ಸುಮಾ ಬರಲು ಸಾಧ್ಯವಿಲ್ಲ ಎಂದು ಗಂಡನಿಗೆ ತಾಕೀತು ಮಾಡಿದಳು. “ಎಲ್ಲರ ಚಾಕರಿ ಮಾಡಲು ನಾ ರೆಡಿ ಇಲ್ಲ. ಅದು ಹಡೆದ ಬಾಣಂತಿ ಮನೆ ಬೇರೆ. ಅಗಲ್ಲ ಬೇಕಿದ್ದರೆ ನೀವೆ ಹೋಗಿ. ಅದರೆ ಅಲ್ಲೆ ಜಾಂಡಾ ಹೂಡ ಬೇಡಿ’ ಎಂದು ಆಜ್ಞೆ ಮಾಡಿದಳು.
ಒಲ್ಲದ ಮನಸ್ಸಿನಿಂದ ಬಂದ ಹರ್ಷ. ಮನೆಯ ಯಾವ ವಿಚಾರ ಮಾಡಲೂ ಇಲ್ಲ. ಯಾರ ಬಗ್ಗೆಯೂ ಕಾಳಜಿ ತೋರಲಿಲ್ಲ. ಲಲಿತಮ್ಮ ತಾವೇ ಮೊದಲು ಮಾತು ಮುಂದುವರೆಸಿ, ಆಸ್ಪತ್ರೆಯ ಖರ್ಚು ಮತ್ತು ವೆಚ್ಚದ ಬಗ್ಗೆ ಮನನಮಾಡಲು ಪ್ರಯತ್ನ ಮಾಡಿದರು ಸಹಜವಾಗಿಯೇ.
ಆದರೆ ಹರ್ಷ ಯಾವುದಕ್ಕೂ ಸೂಕ್ತವಾಗಿ ಪ್ರತಿಕ್ರಿಯಿಸಲಿಲ್ಲ. ಮನೆಯ ಜವಾಬ್ದಾರಿ ತೆಗೆದುಕೊಳ್ಳಲು ಒಪ್ಪಲಿಲ್ಲ. ಲಲಿತಮ್ಮ ಯಾವ ದಾರಿಯು ಕಾಣದೆ.
ಗಂಡನ ಪೇನ್ಷನ್ ಹಣ ತನಗೆ ಕೊಡುವಂತೆ ಕೇಳಿದಾಗ ಹರ್ಷ ಕೆರಳಿ ಕೆಂಡವಾದ. ಕೂಗಾಡಿದ. ಮಾತಿಗೆ ಮಾತು ಬೆಳೆಯಿತು, ತಂಗಿ ಕವಿತಾ ನಿಧಾನವಾಗಿ ಎದ್ದು ಬಂದು ಅಣ್ಣನ ಸಮಾಧಾನ ಮಾಡಲು ಪ್ರಯತ್ನ ಮಾಡಿದಳು. ಆದರೆ ಹರ್ಷ ತಾಳ್ಮೆ ಕಳೆದುಕೊಂಡು ತಂಗಿಯ ಮೇಲೆ ಕೈಮಾಡಿದ.
ಮುಂದುವರೆಯುವದು ………
- ರೇಶ್ಮಾ ಗುಳೇದಗುಡ್ಡಾಕರ್