ಕುಷ್ಟಗಿಯ ಪುಣ್ಯಕ್ಷೇತ್ರ ‘ಬುತ್ತಿ ಬಸವೇಶ್ವರ’ ಇತಿಹಾಸದ ಕುರಿತು ನಟರಾಜ್ ಸೋನಾರ್ ಅವರು ಬರೆದ ಒಂದು ಲೇಖನವನ್ನು ತಪ್ಪದೆ ಓದಿ ಮತ್ತು ಅಲ್ಲಿಗೆ ಒಮ್ಮೆ ತಪ್ಪದೆ ಭೇಟಿ ನೀಡಿ…
ಅದು ಹನ್ನೆರಡನೆಯ ಶತಮಾನ. ಬಿಜ್ಜಳ ಅರಸನ ಮಂತ್ರಿ ಬಸವರಸ ಶರಣ ಬಸವಣ್ಣನವರ ಕಾಲ ಕಾಯಕ ದಾಸೋಹ ಪ್ರಸಾದ ವಚನ ಚಿಂತನ ಮಂಥನದ ಪುಣ್ಯದ ಕಾಲ ತದನಂತರ ಕಲ್ಯಾಣ ಕ್ರಾಂತಿಯ ಸಂದರ್ಭ ಅನೇಕ ಶರಣಗಣ ಕಲ್ಯಾಣ ತೊರೆದು ಕೈಬರಹದ ತಾಳೆಗರಿ ವಚನ ಕಟ್ಟುಗಳನ್ನು ವಚನ ಸಾಹಿತ್ಯ ವನ್ನು ಹೊತ್ತುಕೊಂಡು ಸಂರಕ್ಷಿಸುವ ಹೊಣೆಗಾರಿಕೆಯಿಂದ ಕಲ್ಯಾಣವನ್ನು ತೊರೆದು ಬೇರೆ ಬೇರೆ ಸ್ಥಳಗಳಿಗೆ ವಲಸೆಹೋಗುವ ಮಾರ್ಗದಲ್ಲಿ ಮುಂದೆ ಉಳುವಿಗೆ ಹೋಗುವ ರಸ್ತೆಯಲ್ಲಿ ಬರುವ ಊರು ಕುಷ್ಟಗಿ ಊರ ಹೊರಗೆ ಹುಣಸೆ ತೋಪು ಸುತ್ತಲೂ ಮಸಾರಿ ಹೊಲ ಪಕ್ಕದಲ್ಲಿ ಹೆದ್ದಾರಿ ರಸ್ತೆ ಇಂತಹ ಪ್ರಶಾಂತವಾದ ಹುಣಸೆ ತೋಪಿನ ನಿರ್ಜನ ಪ್ರದೇಶವೇ ವಾರ್ಡ ನಂಬರ ೩ ಬುತ್ತಿ ಬಸವೇಶ್ವರ ನಗರ ಈಗಿನಂತೆ ಊರು ಎನ್ ಎ ಮಾಡಿ ಪ್ಲಾಟ್ ಆಗಿರಲಿಲ್ಲ.
ಕುಷ್ಟಗಿ ಸಮುದ್ರ ಮಟ್ಟದಿಂದ ಎತ್ತರವಾಗಿದ್ದು, ಅಪಾರ ಅರಣ್ಯ ಸಂಪತ್ತು ಹೊಂದಿ ಭೌಗೋಳಿಕವಾಗಿ ತಂಪಾದ ಹಿತಮಿತ ವಾತಾವರಣ ವನಸ್ಪತಿ ಜೊತೆಗೆ ಹಳ್ಳ -ಕೆರೆ- ತೊರೆ- ಎರಿ- ಮಸಾರಿ- ಹೊಲಗಳಿದ್ದು ಇಂತಹ ಸಂಪಧ್ಭರಿತ ಪರಿಸರ ಹೊಂದಿದ್ದು, ಹಳೇ ಊರು ಬಿಟ್ಟು ಒಂದು ಕೀಮೀ ದೂರವಿದ್ದ ಈ ಪ್ರದೇಶ ದಾರಿ ಹೋಕರಿಗೆ ರೈತರಿಗೆ ನಿರಾಶ್ರಿತರ ತಂಗುದಾಣವಾಗಿ ದೊಡ್ಡಾದದ ಹಾಸು ಗಲ್ಲಿನ ಕಟ್ಟೆ ಕಟ್ಟೆ ಮೇಲೆ ನಂದಿಯ ವಿಗ್ರಹ ಹೀಗೆ ಒಂದು ಭಕ್ತಿ ಯ ಸಂಗಮವಾಗಿತ್ತು.
ಬಂದಂತಹ ದಾರಿಹೋಕರು ತಾವು ತಂದ ಬುತ್ತಿಯ ಗಂಟನ್ಬು ಬಿಚ್ಚಿಕೊಂಡು ಊಟಮಾಡಿ ತತ್ರಾಣಿಯಲ್ಕಿ ತಂದ ನೀರನ್ನು ಕುಡಿದು ಕೆಲಕಾಲ ವಿಶ್ರಮಿಸಿ ತಂಗಿ ಹೋದ ತಾಣವೇ ಈ ಈ ಬುತ್ತಿ ಬಸವೇಶ್ವರ ದೇಗುಲದ ಇತಿಹಾಸ ಕಾಲಕ್ರಮೇಣ ನಗರವಾದ ಕುಷ್ಟಗಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಪ್ರತಿವರುಷದಂತೆ ಅನೇಕ ಧಾರ್ಮಿಕ ಆಚರಣೆ ಪುರಾಣ ಪುಣ್ಯಕತೆ ನಡೆದು ಜಾತ್ರೆಯ ನೆಪದಲ್ಲಿ ನಗರದ ನಾಗರಿಕರು ಮನೆ ಬಿಟ್ಟು ಒಂದು ತಾಸು ಸುತ್ತಾಡಿ ಸಂಭ್ರಮಿಸುವ ಪರಿ ಅನನ್ಯವಾದುದು.
- ನಟರಾಜ್ ಸೋನಾರ್ – ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಕುಷ್ಟಗಿ.