ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದ ಮಹಿಮೆ

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ದಂಡೆಯ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನವು ಸರಿಸುಮಾರು 550 ವರ್ಷಗಳ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಯಿತು ಎನ್ನಲಾಗುತ್ತದೆ. ಈ ದೇವಸ್ಥಾನದ ಮಹಿಮೆ ಕುರಿತು ಶಕುಂತಲಾ ಸವಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ದಂಡೆಯ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನ. ಮಂಡ್ಯ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಈ ಕ್ಷೇತ್ರ ಹೊಳೆ ಆಂಜನೇಯ ಎಂದೇ ಪ್ರಸಿದ್ದಿ. ಶ್ರೀಪಾದರಾಜರೂ ಮತ್ತು ಶ್ರೀ ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿ ಯನ್ನೂ ಪ್ರತಿಷ್ಠಾಪಿಸಿ ಪೂಜಿಸಿದರೂ ಎನ್ನಲಾಗಿದೆ. ಈ ಕಾರಣದಿಂದಲೇ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ. ಸರಿ ಸುಮಾರು 550 ವರ್ಷಗಳ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಯಿತ್ತು.

ಈ ಕ್ಷೇತ್ರದಲ್ಲಿ ಆಂಜನೇಯ ಸ್ವಾಮಿಯು ಜಾಗ್ರತನಾಗಿ ನೆಲೆಸಿದ್ದಾನೆ .ಇಲ್ಲಿನ ಆಂಜನೇಯ ಸ್ವಾಮಿ ಆಕರ್ಷಣೀಯವಾಗಿದೆ. ಇಲ್ಲಿ ಆಂಜನೇಯ ( ತ್ರೇತಾ ) ರಾಮಾಯಣ ಕಾಲದಲ್ಲಿ ಹನುಮನಾಗಿ. ( ದ್ವಾಪರ ) ಮಹಾಭಾರತ ಕಾಲದಲ್ಲಿ ಭೀಮನಾಗಿ , ( ಕಲಿ ) ಈ ಯುಗದಲ್ಲಿ ಮಧ್ವಾಚಾರ್ಯರ ಅವತಾರ ಎತ್ತಿದ್ದಾನೆ ಎಂದು ಹೇಳಲಾಗಿದ.

ಇಲ್ಲಿರುವ ಹನುಮನ ಮಧ್ಯದ 2 ಬೆರಳು ಉದ್ದ ಇದೆ. ಇವು ಮಧ್ವಾಚಾರ್ಯ ರು ಪ್ರತಿಪಾದಿಸಿರುವ ದ್ವೈತ ಸಿದ್ಧಾಂತ ಸಂಕೇತಿಸುತ್ತದೆ ಆಂಜನೇಯ ತನ್ನ ಎಡ ಕೈಯಲ್ಲಿ ” ಸೌಗಂಧಿಕಾ ಪುಷ್ಪ ” ಹಿಡಿದು ಕೊಂಡಿರುವುದು ” ಭೀಮ ” ನ ಅವತಾರ ಪ್ರತಿನಿಧಿಸುತ್ತದೆ.ಬಾಲದ ತುದಿಯಲ್ಲಿ ” ಗಂಟೆ ” ಇರುವುದು ” ವ್ಯಾಸರಾಜ” ರ ಪ್ರತಿಷ್ಠಾಪನೆಯ ಸಂಕೇತ ಹಾಗೂ ತಲೆಯ ಭಾಗದಲ್ಲಿ ಸೂರ್ಯ ಚಂದ್ರ ಇದ್ದಾರೆ ಇದು ಶ್ರೀ ಪಾದರಾಜ ರ ಪ್ರತಿಷ್ಠಾಪನೆ ಸಂಕೇತ. ಇಲ್ಲಿ ಆಂಜನೇಯನಿಗೆ ಜುಟ್ಟು ಇದೆ. ಇವೆಲ್ಲವನ್ನೂ 2 ನೆಯ ಚಿತ್ರದಲ್ಲಿ ಗಮನಿಸಿ ಸ್ನೇಹಿತರೆ. ಹೂವಿನ ಅಲಂಕಾರ ದಿಂದ ಗರ್ಭಗುಡಿಯ ದೇವರಲ್ಲಿ ಗೊತ್ತಾಗುವುದಿಲ್ಲ . ಇಲ್ಲಿನ ಮೂರ್ತಿ ಮುಖದ ಭಾಗ ಸುಮಾರು 10 ರಿಂದ 12 ವರ್ಷದಿಂದ ಅರ್ಧ ಇಂಚು ಬೆಳೆದಿರುತ್ತದೆ.ಎಂದು ಅರ್ಚಕರು ಹೇಳುತ್ತಾರೆ 2004 ರಾಮನವಮಿಯಂದು ಹಾಗೂ .2011 ರ ಚಂದ್ರ ಗ್ರಹಣ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿದ ಸಂಧರ್ಭದಲ್ಲಿ ದೇವಸ್ಥಾನದ ಒಳಗಿನಿಂದ ಶಂಖ, ಜಾಗಟೆ, ನಗಾರಿ ಬಾರಿಸಿದ ಶಬ್ದ ಬಂದಿತ್ತು ಎಂದು ಹೇಳುತ್ತಾರೆ.

ಇಲ್ಲಿನ ಇನ್ನೊಂದು ವಿಶೇಷ ಏನೆಂದರೆ ದೇವಸ್ಥಾನದಲ್ಲಿ ಒಂದು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ನಾಲ್ಣಣೆಯ ಕೆಲವು ಕಾಯಿನ್ ಗಳನ್ನು ಇಟ್ಟಿರುತ್ತಾರೆ ಆ ಕಾಯಿನ್ ತೆಗೆದುಕೊಂಡು ಅದ್ರ ಜೊತೆ ನಮ್ಮ ದುಡ್ಡು ಎಷ್ಟಾದರೂ ಸರಿ ಹಿಡಿದು ಕೊಂಡು ದೇವರಲ್ಲಿ ಪ್ರಾರ್ಥನೆ ಮಾಡಿ ದೇವಸ್ಥಾನಕ್ಕೆ ಒಂದು ಸುತ್ತು ಬಂದು ದೇವರಿಗೆ ಇಟ್ಟಿರುವ ತಟ್ಟೆಯಲ್ಲಿ ಹಾಕಿದರೆ ನಮ್ಮ ಇಷ್ಟಾರ್ಥಗಳು, ಬೇಡಿಕೆಗಳು ದೊಡ್ಡವೆ ಇರಲಿ ಚಿಕ್ಕವೆ ಇರಲಿ ಎಲ್ಲವೂ ನೆರವೇರುತ್ತದೆ ಎಂದು ಪ್ರತೀತಿ .
ಹಾಗೆ ಅಲ್ಲೇ ಹಿಂದೆ ವೆಂಕಟರಮಣ ಸ್ವಾಮಿ ದೇವಸ್ಥಾನ ಇದೆ. ಹಾಗೆ ದಾಸವರೇಣಯಾರ ಚಂದದ ಪ್ರತಿಮೆಗಳು ಆಕರ್ಷಿಸುತ್ತವೆ. ಹರಿಯುವ “ಹೊಳೆ” ಇದೆ ಜೊತೆಗೆ “ಗೋಶಾಲೆ ” ಇದೆ .ಸುತ್ತಲೂ ಚಂದದ ಆಕರ್ಷಕ ಪರಿಸರವಿದೆ.

ನನಗೆ ಸ್ಥಳದ ಮಹಿಮೆ ಗೊತ್ತಿರಲಿಲ್ಲ. ತುಂಬಾ ವರ್ಷಗಳಿಂದ ಹೋಗಬೇಕು ಅಂಥ ಆಸೆ ಇತ್ತು. ಇವತ್ತೇ ಮೊದಲ ಭಾರಿ ಹೋಗಿ ದರ್ಶಿಸಿದ್ದು.ತುಂಬಾ ಖುಷಿ ಆಯಿತು. ಮಧ್ಯಾಹ್ನ 1 ಗಂಟೆಗೆ ಬಾಗಿಲು ಹಾಕುತ್ತಾರೆ .ಹುಣ್ಣಿಮೆ , ಅಮಾವಾಸ್ಯೆ , ವಿಶೇಷ ದಿನಗಳಲ್ಲಿ 2 ಗಂಟೆ ತನಕ ವೂ ತೆರೆದಿರುತ್ತದೆ. ತುಂಬಾ ಚಂದದ ಪ್ರೇಕ್ಷಣೀಯ ಸ್ಥಳ..ಹೋಗಿ ಬನ್ನಿ ಸ್ನೇಹಿತರೆ ಒಮ್ಮೆ…


  • ಶಕುಂತಲಾ ಸವಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW