ಅಪ್ಪನ ಸಾವು ರಚನಾಳಿಗೆ ಮಾನಸಿಕ ಒತ್ತಡ ನೀಡಿತು. ಅದರಿಂದ ಅವಳ ಕಿವಿಯ ನರಕೆ ಪೆಟ್ಟಾಗಿ ಕಿವಿ ಕೇಳದ ಪರಿಸ್ಥಿತಿಗೆ ಹೋಗಿ ತಲುಪಿದಳು. ತಾಯಿ ಜಾನಕಿ ಮಗಳ ಪರಿಸ್ಥಿತಿ ನೋಡಿ ಇನ್ನಷ್ಟು ಕುಗ್ಗಿ ಹೋದರು. ಮುಂದೇನಾಯಿತು ಅರ್ಚನಾ ರವಿ ಅವರ ಅಪ್ಪಾ… ಅಪ್ಪಾ… ನೀನು ಬೇಕಪ್ಪಾ ಮುಂದುವರಿದ ಭಾಗ, ತಪ್ಪದೆ ಮುಂದೆ ಓದಿ…
ಮಗಳು ತಲೆನೋವು, ತಲೆನೋವು ಅಂದಾಗ ಅಪ್ಪನ ಅಗಲಿಕೆಯ ನೋವು ಹಾಗಾಗಿ ಅಂತ ಅಂದುಕೊಂಡಿದ್ದರು, ಕಿವಿ ಒಳಗೆ ಶಬ್ದ ಹೀಗೆ ಮಗಳು ಅಂದಾಗ, ಜೊತೆಗೆ ಪಕ್ಕದಲ್ಲಿ ಮೊಬೈಲ್ ರಿಂಗ್ ಆದರೂ ಕೇಳದೆ ಹೋದಾಗ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಆಸ್ಪತ್ರೆಯ ಟೆಸ್ಟ್ ನಂತರವೇ ಗೊತ್ತಾಗಿದ್ದು ಅವಳ ಕಿವಿಯ ತೊಂದರೆ ಶುರುವಾಗಿ ಹೆಚ್ಚು ಕಮ್ಮಿ 15 ದಿವಸವಾಗಿದೆ ಎಂದು. 50% ಅವಳ ಕಿವಿ ಹೋಗಿಯಾಗಿತ್ತು. ತಕ್ಷಣ ಕರೆದುಕೊಂಡು ಬಂದಿದ್ದಾರೆ ಅವಳ ಕಿವಿ ಕೇಳುತ್ತಿತ್ತೆನೊ…? ಆದರೆ ಅವಳ ಆರೋಗ್ಯದ ಬಗ್ಗೆ ಅವಳಿಗೆ ಆ ಕ್ಷಣ ತಿಳಿದೇ ಇರಲಿಲ್ಲ.
ಅವಳಿಗೆ ಕಿವಿಗೆ ಹಾಕಿದ ಇಯರ್ ಮಿಷಿನ್ ಕೂಡ ಲಾಭವಾಗದೆ ಹೋಯಿತು. ಅವಳ ಮಾನಸಿಕ ಒತ್ತಡ ಬಲವಾಗಿ ಕಿವಿಯ ನರಕೆ ಏಟಾಗಿ ಕೇಳದಂತಹ ಪರಿಸ್ಥಿತಿಗೆ ಬಂದು ನಿಂತಿತ್ತು. ಜಾನಕಿ ಅವರು ಮಗಳ ಪರಿಸ್ಥಿತಿ ನೋಡಿ ಕುಗ್ಗಿ ಹೋಗುತ್ತಿದ್ದರು, ಒಂದೇ ಧೈರ್ಯ ಒಡಹುಟ್ಟಿದ ಜಾನಕಿ ಅವರ ಅಣ್ಣ ಮಾಧವ ಜೊತೆಯಾಗಿ ನಿಂತಿದ್ದು. ರಚನಾಳ ಜೊತೆ ಆಸ್ಪತ್ರೆಯ ಓಡಾಟ ಅವರದೇ…
ಹೊರಗೆ ಬಂದು ಕಟ್ಟೆಯ ಮೇಲೆ ಸುಮ್ಮನೆ ಕೂತು ಬಿಟ್ಟಳು ರಚನಾ ಅದ್ಯಾರೋ ಹೇಳಿದ ಮಾತು ನೆನಪಾಗಿತ್ತು ಅವಳಿಗೆ ಹೋದವರೆಲ್ಲ ನಕ್ಷತ್ರಗಳಾಗುತ್ತಾರೆ ಎಂದು. ಅವಳಿಗೆ ಕಾಲೇಜ್ ಕೂಡ ಇನ್ನು ಮುಂದೆ ದೂರ ಎಂಬ ಭಾವ ಅವಳ ಅಂಗವೈಕಲ್ಯ ಮಾನಸಿಕವಾಗಿ ಕುಗ್ಗಿಸುತ್ತಿದೆ ಜೊತೆಗೆ ಅಪ್ಪ ಅಗಲಿಕೆ ಕೂಡ.
ಅಲ್ಲಿಂದ ಎದ್ದು ಅಪ್ಪನ ರೂಮಿಗೆ ಬರಲು ಅಲ್ಲಿ ಇದ್ದ ಕನ್ನಡಕ ಒಮ್ಮೆ ಪ್ರೀತಿಯಿಂದ ಸವರಿದಳು. ಅಲ್ಲಿ ನೇತು ಹಾಕಿದ ಅಪ್ಪನ ಶರ್ಟ್ ತೆಗೆದುಕೊಂಡು ತಾನು ಧರಿಸಿ ಅಪ್ಪ ಮಲಗುತ್ತಿದ್ದ ಹಾಸಿಗೆ ಮೇಲೆ ಹಾಗೆ ಮಲಗಿ ಬಿಟ್ಟಳು.
“ನನ್ನ ಪುಟ್ಟಮ್ಮ ತುಂಬಾ ಸ್ಟ್ರಾಂಗ್ ಅಂತ ಮಾಡಿದ್ದೆ ಅಪ್ಪನ ಹಾಗೆ, ಆದರೆ ಇಷ್ಟೊಂದು ವೀಕ್ ಅಂತ ಗೊತ್ತಿರಲಿಲ್ಲ..”ಅವಳ ಕಿವಿ ಹತ್ತಿರ ವಿಶ್ವನಾಥ್ ಅವರು ಮಾತನಾಡಿದ ಹಾಗೆ ಆಯಿತು. ಆದರೆ ಯಾರೂ ಇಲ್ಲ ಹಾಗೆ ಕಣ್ಮುಚ್ಚಿ ಮಲಗಿದಳು.

ಫೋಟೋ ಕೃಪೆ : ಅಂತರ್ಜಾಲ
“ನಾನು ಎಲ್ಲೂ ಹೋಗಿಲ್ಲ ಪುಟ್ಟಮ್ಮ ನಿನ್ನ ಹೃದಯದಲ್ಲಿ ಶಾಶ್ವತ ನಾನು. ನೀನು ಹೀಗೆ ಬೇಸರವಾಗಿದ್ದರೆ, ಸೋತು ಹೋದೆ ಅಂತ ಅನ್ಕೊಂಡ್ರೆ ನಿನ್ನ ಹೃದಯದಲ್ಲಿ ನಾನಿರೋದೇ ಇಲ್ಲ ಹಾಗೆ ಮಾತು ಆಡೋಲ್ಲ. ಈಗ ನಿನ್ನ ಅವಶ್ಯಕತೆ ಅಮ್ಮನಿಗಿದೆ ಪುಟ್ಟಮ್ಮ. ನಿನ್ನ ಮೇಲೆ ಭಾರ ಹಾಕಿ ನನ್ನ ಜೀವಾ ನಿನ್ನ ಕೈಗೆ ಕೊಟ್ಟಿದ್ದೇನೆ ನನ್ನ ಜಾನಕಿ ನ ಚೆನ್ನಾಗಿ ನೋಡ್ಕೊಂತಿಯ ಅಲ್ವಾ…? ನೋಡು ಕಣ್ಣು ಬಿಡು ನಿನಗೆ ಹೋಗಿದ್ದು ಕಿವಿ ಮಾತ್ರ ಕೈ ಕಾಲು ಕಣ್ಣು ಎಲ್ಲವೂ ಚೆನ್ನಾಗಿದೆ ಅಲ್ವಾ…? ಅಮ್ಮ ಮಾತನಾಡಿದ್ದನ್ನು ದಿನ ಸರಿಯಾಗಿ ಗಮನಿಸುತ್ತಾ ಇರು ನಿನಗೆ ಕೇಳೊಲ್ಲ ಅನ್ನೋದು ಮರೆತು ಬಿಡು.
ಆಗ ಎಲ್ಲವೂ ಕೇಳುತ್ತೆ. ವಿಶೇಷ ಶಕ್ತಿ ನಿನ್ನಲ್ಲಿದೆ ಪುಟ್ಟ ಅರ್ಥ ಮಾಡ್ಕೋ ಬೇರೆಯವರು ಮಾತಾಡೋದು..”ಅವಳ ಹೃದಯದಲ್ಲಿ ಅವಳ ಪಕ್ಕದಲ್ಲಿ ಅವಳ ತಂದೆ ವಿಶ್ವನಾಥ ಮಾತನಾಡಿದ ಹಾಗೆ ಆಯಿತು. ಒಮ್ಮೆಲೆ ಎದ್ದು ಕೂತು ಸುತ್ತಲೂ ನೋಡಿದಳು ಯಾರು ಇರಲಿಲ್ಲ, ಆದರೆ ಒಂದು ಅರ್ಥವಾಯಿತು ಶಾಶ್ವತವಾಗಿ ಅಪ್ಪ ನನ್ನ ಮನದಲ್ಲಿ ಇರುತ್ತಾರೆ. ಅವರು ನನ್ನ ಮೇಲೆ ಕಂಡ ಕನಸುಗಳಿಗೆ ರೆಕ್ಕೆಯಾಗಿ ನಾನು ಹಾರಬೇಕು ಎಂದು.
ಅಪ್ಪ ಮಲಗುತ್ತಿದ್ದ ಹಾಸಿಗೆಯಿಂದ ಎದ್ದು ಅಲ್ಲೇ ಇದ್ದ ಡ್ರಾ ಓಪನ್ ಮಾಡಲು ಎರಡು ಮೂರು ಡೈರಿ ಒಂದು ಡೈರಿ ತೆಗೆದಾಗ ಮನದ ನೋವಳು ನಗು ಬಂದ್ಬಿಟ್ಟಿತ್ತು ಅವರ ಅಕ್ಷರವೇ ಹಾಗೆ. “ಮಿಕ್ಸಿ ರಿಪೇರಿ, ಸೈಕಲ್ ರಿಪೇರಿ, ದಿನಸಿ ಅಂಗಡಿ ರಾಜಯ್ಯ, ದೇವಸ್ಥಾನ ಮನೆ ಶಂಕರ್ ರಾಯರು ..”ಹೀಗೆ ಹಲವಾರು ಫೋನ್ ನಂಬರ್ ಬರೆದಿತ್ತು. 300 ರ ಮೇಲೆ ಫೋನ್ ನಂಬರ್ ಅದರಲ್ಲಿತ್ತು…
ಮತ್ತೊಂದು ಡೈರಿ ಓಪನ್ ಮಾಡಿದಳು ಆಶ್ಚರ್ಯ…! ಓದುತ್ತಾ ಹೋದ ಹಾಗೆ ಕಣ್ಣಂಚಲಿ ನೀರು. ಪುಟ್ಟಮ್ಮನ ನಾಮಕರಣಕ್ಕೆ ಕರೆಯುವವರ ಲಿಸ್ಟ್, ಸ್ವೀಟ್ ಜಹಾಂಗೀರ್. ಒಟ್ಟು ಖರ್ಚು 30,000….
ಈ ತಿಂಗಳ ಖರ್ಚು 8000, ಕರೆಂಟ್ ಬಿಲ್ 450 ಲ್ಯಾಂಡ್ಲೈನ್ ಬಿಲ್ 600, ಮೊನ್ನೆ ಹೊರಗೆ ತಿರುಗಾಟಕ್ಕೆ ಹೋಗಿದ್ದು 5000 ಖರ್ಚಾಗಿದೆ. ಅದೆಷ್ಟು ಚೆನ್ನಾಗಿ ಪ್ರತಿ ತಿಂಗಳ ಖರ್ಚಿನ ಲೆಕ್ಕಾಚಾರ ಮಾಡಿದ್ದರು ಎಂದರೆ ಅಪ್ಪನ ವ್ಯವಹಾರಿಕ ಬುದ್ಧಿವಂತಿಕೆ ಬಗ್ಗೆ ತಿಳಿಯಿತು ರಚನಾಳಿಗೆ. ಅದರ ಜೊತೆ ಮನಸು ಭಾವುಕತೆಗೆ ದೂಡಿದ್ದು 18 ವರ್ಷದ ಕೆಳಗೆ ಅವಳ ನಾಮಕರಣಕ್ಕೆ ಖರ್ಚಾಗುವುದು ಹಾಗೂ ಹೇಗೆಲ್ಲಾ ಮಾಡಬೇಕು, ಯಾರ್ಯಾರನ್ನು ಕರಿಯಬೇಕೆಂದು ಬರೆದಿದ್ದು.
ಅಮ್ಮ ಯಾವಾಗಲೋ ಹೇಳಿದ್ದು ನೆನಪಾಗಿತ್ತು ರಚನಾ ಹುಟ್ಟಿದಾಗ ನಾಮಕರಣ ಪೂರ್ತಿ ಜವಾಬ್ದಾರಿ ವಿಶ್ವನಾಥ್ ಅವರ ತೆಗೆದುಕೊಂಡಿದ್ದು ಎಂದು. ಮತ್ತೊಂದು ಡೈರಿಯಲ್ಲಿ ಹೊಸ ಹೊಸ ರೆಸಿಪಿಗಳು ತಾವು ಮಾಡಿದಾಗ ಮರೆತು ಹೋದರೆ ಎಂದು ಬರೆದು ಇಡುತ್ತಿದ್ದರು. ಎಲ್ಲವನ್ನು ನೋಡಿ ಮನಸ್ಸು ಮತ್ತೆ ಭಾರವಾಯಿತು.
“ಅಪ್ಪ ನನಗೆ ಜಹಾಂಗೀರ್ ಇಷ್ಟ ಇಲ್ಲ ಆದ್ರೂ ಅದನ್ನೇ ಮಾಡಿಸಿದ್ದೆ ಅಲ್ಲ..”ಆ ಡೈರಿಗಳನ್ನೆಲ್ಲ ನೀಟಾಗಿ ತೆಗೆದಿಟ್ಟು. ಅಲ್ಲಿದ್ದ ಎಲ್ಲಾ ಕಾರ್ಡ್ಸ್ ಗಳ ಮೇಲೆ ಒಮ್ಮೆ ಕಣ್ಣು ಆಡಿಸಿ. ಕೆಳಗೆ ಮತ್ತೊಂದು ಫೈಲ್ ಇರುವುದು ನೋಡಿ ಅದನ್ನು ಓಪನ್ ಮಾಡಲು ಬೇಡವೆಂದರು ಕಣ್ಣಂಚಲಿ ನೀರು ಅದನ್ನು ತೆಗೆದುಕೊಂಡು ಅಮ್ಮನ ಹತ್ತಿರ ಹೋದಳು.
ಆರ್ಥಿಕವಾಗಿ ಎಂದು ಬಲಹೀನತೆ ಕಾಡದಂತೆ ಎಚ್ಚರವಹಿಸಿದ್ದರು ಅವರ ಮುಂದಾಲೋಚನೆ ರಚನಾ ಹಾಗೂ ಜಾನಕಿಯವರ ಬದುಕಿನಲ್ಲಿ ಅತಿಯಾದ ಆರ್ಥಿಕ ಮುಗ್ಗಟ್ಟು ಬರೆದಂತೆ ತಡೆದಿದ್ದು.
ಮುಂದುವರಿಯುತ್ತದೆ…
ಹಿಂದಿನ ಸಂಚಿಕೆಗಳು :
- ಅರ್ಚನಾ ರವಿ
