ಕರ್ನಾಟಕದ ರಂಗಭೂಮಿಯಲ್ಲಿ ಕೆ.ಹಿರಣ್ಣಯ್ಯನವರು ಮತ್ತು ಮಾಸ್ಟರ್ ಹಿರಣ್ಣಯ್ಯನವರು ಅವರದು ಅಚ್ಚಳಿಯದ ಹೆಸರು.ಇಂಥ ಕಲಾ ಲೋಕದ ಕುಡಿಯಾದ ಬಾಬು ಹಿರಣಯ್ಯನವರ ಬಗ್ಗೆ ಕುತೂಹಲ ಇರುವುದು ಸಹಜವೆ. ಅವರ ಸಂದರ್ಶನವನ್ನು ನಾಟಕಕಾರ ಹೂಲಿಶೇಖರ್ ಅವರು ಮಾಡಿದ್ದಾರೆ, ಮುಂದೆ ಓದಿ…
ಕರ್ನಾಟಕದ ರಂಗಭೂಮಿಯಲ್ಲಿ ಕೆ.ಹಿರಣ್ಣಯ್ಯನವರು ಮತ್ತು ಮಾಸ್ಟರ್ ಹಿರಣ್ಣಯ್ಯನವರು ಅವರದು ಅಚ್ಚಳಿಯದ ಹೆಸರು. ಇವರಿಬ್ಬರೂ ಸಹಜ ಕಲಾವಿದರು. ರಂಗಮಂಚದಲ್ಲಿ ಲೀಲಾಜಾಲವಾಗಿ ಅಭಿನಯಿಸಿದವರು. ಇಬ್ಬರದೂ ವಿಶಿಷ್ಟ ಮಾತುಗಾರಿಕೆ. ಸೆಳೆಯಬಲ್ಲ ಭಾಷೆ. ಮಾತುಗಾರಿಕೆ, ನಾಟಕ ರಚನೆ ಮತ್ತು ಪ್ರೇಕ್ಷಕ ಸಮೂಹವನ್ನು ಕಟ್ಟುವ ಶಕ್ತಿ, ಕಂಪನಿಯನ್ನು ಮುನ್ನಡೆಸುವ ತಾಕತ್ತು ಇಬ್ಬರಿಗೂ ಇತ್ತು. ಮಾಸ್ಟರ್ ಹಿರಣ್ಣಯ್ಯನವರು ಇನ್ನಷ್ಟು ಮುಂದುವರೆದು ವಿಶಿಷ್ಟತೆಯ ಮತ್ತೊಂದು ಶಿಖರ ದಾಟಿದರು. ಕಂಪನಿಯನ್ನು ಕಟ್ಟುವುದರೊಂದಿಗೆ ತಾವೇ ನಟಿಸಿ ಹಲವು ಮಹಾನ್ ನಟರ ತಂಡವನ್ನು ಮುನ್ನಡೆಸಿದರು. ಆಕಾಲಕ್ಕೆ ರಂಗಭೂಮಿಯಲ್ಲಿ ಹೊಸ ಛಾಪು ಮೂಡಿಸಿದವರು. ಸಾವಿರಾರು ರಂಗ ಪ್ರಯೋಗಗಳನ್ನು ನೀಡಿ ರಾಜ್ಯ ಮತ್ತು ಗಡಿಯಾಚೆ ಕನ್ನಡದ ಹೆಸರನ್ನು ಚಿರಸ್ಥಾಯಿಸಿದರು. ಕೆ.ಹಿರಣ್ಣಯ್ಯನವರನ್ನು ಎಂದೂ ಕಲ್ಚರ್ಡ ಕಮೆಡಿಯನ್ ಎಂದೂ, ಮಾಸ್ಟರ್ ಹಿರಣ್ಣಯ್ಯನವರಿಗೆ ‘ನಟ ರತ್ನಾಕರ’ ಎಂತಲೂ ಅಭಿಮಾನಿಗಳು ಪ್ರೀತಿಯಿಂದ ಕರೆದಿದ್ದಾರೆ. ಇಂಥ ಕಲಾ ಲೋಕದ ಕುಡಿಯಾದ ಬಾಬು ಹಿರಣಯ್ಯನವರ ಬಗ್ಗೆ ಕುತೂಹಲ ಇರುವುದು ಸಹಜವೆ. ಮೂರನೆಯ ತಲೆಮಾರಿನ ಈ ಕಲಾವಿದ ನಾಟಕ ಕುಲುಮೆಯಲ್ಲಿ ಬೆಂದು ಅರಳಿದವರು. ತಮ್ಮ ಬಾಲ್ಯದಲ್ಲಿ ತಾತ ದಿ.ಕೆ.ಹಿರಣ್ಣಯ್ಯನವರು ಮತ್ತು ನಂತರ ತಂದೆ ಮಾಸ್ಟರ ಹಿರಣ್ಣಯ್ಯವರ ರಂಗ ಸಂಸ್ಕಾರ ಪಡೆದ ಬಾಬು ಅವರು ಹಿರಣ್ಮಯ್ಯನವರ ರಂಗ ಪರಂಪರೆನ್ನು ಮುಂದುವರೆಸಿದವರು. ಬಾಲ್ಯದಲ್ಲಿ ನಾಟಕ ಮನೆಯಲ್ಲಿ ಸಂಸ್ಕಾರ ದೀಕ್ಷೆ ಪಡೆದ ಬಾಬು ಅವರು ಹಿರಣ್ಣಯ್ಯ ಹೆಸರನ್ನು ಪರಂಪರೆಯಾಗಯೇ ಉಳಿಸಿದ್ದಾರೆ.

(ಕರ್ನಾಟಕದ ರಂಗಭೂಮಿಯಲ್ಲಿ ಅಚ್ಚಳಿಯದ ಹೆಸರು ಕೆ.ಹಿರಣ್ಣಯ್ಯ)
ತಂದೆಯವರಿಗೆ ಓದಿಸಬೇಕೆಂಬ ಹಂಬಲವಿತ್ತು. ರಂಗಭೂಮಿಯಿಂದ ದೂರವಿಟ್ಟು ಬಿ.ಇ. ಓದಿಸಿದರು. ಆದರೆ ಬಾಬು ಅವರ ಆಸಕ್ತಿಯೇ ಬೇರೆಯಾಗಿತ್ತು. ಇಂಜಿನಿಯರ ಆಗಿ ಉದ್ಯೋಗ ಸೇರದೆ ಅವರ ರಕ್ತಗತವಾಗಿದ್ದ ಕಲೆಯನ್ನೇ ಆರಿಸಿಕೊಂಡರು. ಬಾಲ್ಯದಲ್ಲಿ ತಂದೆಯ ಕಂಪನಿಯಲ್ಲಿ ನಾಟಕದ ತಾಲೀಮು, ಪ್ರದರ್ಶನಗಳನ್ನ ನೋಡುತ್ತಿದ್ದ ಬಾಬು ಅವರಿಗೆ ನಾಟಕದ ಆಸಕ್ತಿ ಇಮ್ಮಡಿಯಾಯಿತು. ನಾಟಕದ ಒಲವಿನ ಕಡೆಗೆ ಸರಿದರು. ತಾತನ ಮತ್ತು ತಂದೆಯ ನಾಟಕಗಳನ್ನು ನೋಡುತ್ತ ಆಸಕ್ತಿಯಿಂದ ನಾಟಕ ನೋಡುತ್ತ ಬೆಳೆದರು. ಆಗಿನ ಕಾಲದಲ್ಲಿ ಕಂಪನಿಯ ನಾಟಕದಲ್ಲಿದ್ದ ಕಲಾವಿದರ ಒಡನಾಟವೂ ಬೆಳೆಯಿತು.

( ‘ನಟ ರತ್ನಾಕರ’ ಮಾಸ್ಟರ್ ಹಿರಣ್ಣಯ್ಯ ಮತ್ತು ಅವರ ಮಗ ಬಾಬು ಹಿರಣ್ಣಯ್ಯ ನಾಟಕದ ಒಂದು ದೃಶ್ಯದಲ್ಲಿ)
ನಾಟಕ ಮತ್ತು ಕಿರುತೆರೆಗಳಲ್ಲೂ ಒಲವು ಮೂಡಿ ಇಂದು ಪೂರ್ಣಾ ಪ್ರಮಾಣದ ಕಲಾವಿದರಾಗಿ ಬೆಳೆದಿದ್ದಾರೆ. ನಾಟಕ ಮತ್ತು ಕಿರುತೆರೆ-ಸಿನಿಮಾಗಳಲ್ಲಿ ತೊಡಗಿದ್ದಾರೆ.
೧. ಮೊದಲು ನಿಮ್ಮ ವೈಯಕ್ತಿಕ ಪರಿಚಯ ಹೇಳಿ.
ನಾನು ಹುಟ್ಟಿದ್ದು ೨೭.೦೩.೧೯೬೧ ರಲ್ಲಿ. ತಂದೆ ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು. ನನ್ನ ತಾಯಿ ಶಾಂತಮ್ಮನವರು. ನನಗೆ ಇಬ್ಬರು ಹೆಣ್ಣುಮಕ್ಕಳು. ಇಬ್ಬರಿಗೂ ವಮದುವೆಯಾಗಿದ್ದಾರೆ.
೨. ಸಂತೋಷ ನೋಡಿ. ವಿಶ್ವ ರಂಗ ದಿನಾಚರಣೆಯ ದಿನವೇ ಹುಟ್ಟಿದ್ದೀರಿ. ರಂಗಭೂಮಿಯ ಅನುಬಂಧವಿದು. ತಾತ ಮತ್ತು ತಂದೆಯವರು ಅಪ್ರತಿಮ ರಂಗ ಕಲಾವಿದರು, ಅವರಿಬ್ಬರನ್ನೂ ತೊಟ್ಟಿಲಲ್ಲಿ ತೂಗಿದ ಮಾಹಾನ್ ಕಲಾವಿದರು ಅವರು. ನಿಮ್ಮ ಬಾಲ್ಯದಲ್ಲಿ ಕುತೂಹಲ ಹೇಗಿತ್ತು?
ನಾನು ಬಾಲ್ಯದಲ್ಲಿ ಬೆಳೆದದ್ದು ವೃತ್ತಿ ರಂಗಭೂಮಿಯ ಸಂಸ್ಥೆಯ ವಾತಾವರಣದಲ್ಲಿ. ಆಗ ರಂಗದಿಗ್ಗಜರಾದ ಮುನಿಯಪ್ಪ, ಮುಸುರಿ, ಯೋಗಾನರಸಿಂಹ,ಸುಭದಮ್ಮ ಮನ್ಸೂರು, ನಾಗರತ್ನಮ್ಮ ಎಲ್ಲರ ಮುದ್ದಿನ ಮಕ್ಕಳಾಗಿ ಅವರ ಮಕ್ಕಳೊಂದಿಗೆ ನಮ್ಮ ಒಡನಾಟ. ನಾಟಕ ತಂಡದೊಂದಿಗೆ ನಮಗೂ ಸುತ್ತಾಟವಿತ್ತು. ದಿನವೂ ನಾಟಕ ನೋಡುವುದು ಮತ್ತು ಬಾಲ ಪಾತ್ರ ಮೂಡಿತು. ಸಾಮಾನ್ಯವಾಗಿತ್ತು. ಸಂಗೀತ ಮತ್ತು ನೃತ್ಯ ಅಭ್ಯಾಸವೂ ಇರುತ್ತಿತ್ತು. ತಂದೆಗೆ ನಮ್ಮ ಊಗ್ಗೆ ಎಲ್ಲಿಲ್ಲದ ಪ್ರೀತಿ. ಅದರ ಜೊತೆಗೆ ನಮ್ಮ ಬಗ್ಗೆಯೂ ಶಿಕ್ಷಣ ಬಗ್ಗೆಯೂ ಕಾಳಜಿ ನಹಿಸಿದ್ದರು. ನಮ್ಮನ್ನು ಸುಖದಿಂದ ಸಾಕಿದರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ನಾವು ಬದುರಲು ಕಲಿಸಿದರು.
೩. ನಾಟಕದಲ್ಲಿ ನಿಮಗೆ ಆಸಕ್ತಿ ಹೇಗೆ ಹುಟ್ಟಿತು.
ಹುಟ್ಟಿ ಬೆಳೆದದ್ದು ಅದೇ ನಾಟಕದ ವಾತಾವರಣದಲ್ಲಿ. ನಾಟಕದ ಕ್ಯಾಂಪ್ ಸುತ್ತಾಟದಲ್ಲಿ. ದಿನವೂ ನಾಟಕ ನೋಡುವುದು. ರಿಹರ್ಸಲ್ ಗಂಭೀರವಾಗಿ ನೋಡುವುದು, ನಮ್ಮನ್ನೂ ಸೇರಿಸಿಕೊಂಡು ಪಾತ್ರ ಮಾಡಿಸುವುದು ನಡೆಯುತ್ತಿತ್ತು. ಬಾಲನಟನಾಗಿ ರಂಗಭೂಮಿಗೆ ಕಾಲಿಟ್ಟೆ. ತಂದೆಯವರ ಪ್ರೋತ್ಸಾಹವಿತ್ತು. ಬಣ್ಣದ ಲೋಕ ನನಗೆ ಅಲ್ಲಿ ಬಾಗಿಲು ಬೇಗ ತೆರೆಯಿತು. ತಂದೆಯವರು ನಮಗೆ ಭಾಷೆ, ಮಾತು ಕಲಿಸಿದರು. ಸಾಹಿತ್ಯ- ಸಂಗೀತದ ಕಡೆಗೂ ನಮ್ಮ ಗಮನ ಕಡೆಗೆ ಗಮನ ನೀಡಿದರು. ಅವರೇ ನಮಗೆ ರಂಗ ಗುರುವಾಗಿದ್ದರು. ರಂಗಾಸಕ್ತಿ ತಾನಾಗಿಯೇ ನಮಗೆ ಮೂಡಿಬಂದಿತು. ದೊಡ್ಡ ನಟರ ಸಹವಾಸ, ನಾಟಕ ಕಲಿಕೆಯಿಂದ ನಾನು ರಂಗಾಸಕ್ತಿ ತಾನಾಗಿಯೇ ಮೂಡಿತು. ಕ್ಯಾಂಪುಗಳು ಬದಲಾದಾಗ ನಮ್ಮ ವಾಸದ ಮನೆಯೂ ಬದಲಾಗುತ್ತಿತ್ತು. ಅಲ್ಲಿಯ ಜನಜೀವನ, ವಾತಾವರಣ, ಬದುಕಿನ ಶೈಲಿಯೂ ನಮಗೆ ಪಾಠ ಕಲಿಸುತ್ತಿದ್ದವು.
೪.ಇದರಿಂದ ನಿಮಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿಲ್ಲವೆ?
ಇಲ್ಲ. ನಾಟಕ ಕ್ಯಾಂಪ್ ಬದಲಾದಾಗ ಬೇರೆ ಊರಿಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ನನ್ನ ಓದಿಗೆ ತೊಂದರೆ ಆಗಬಾರದೆಂದು ತಂದರೆಯಾವರು ವ್ಯವಸ್ಥೆ ಮಾಡಿದ್ದರು. ನಾಟಕದ ಮನೆಯೇ ನಮಗೆ ಶಾಲೆಯಾಗಿತ್ತು. ಅಲ್ಲಿ ಓದುವುದಕ್ಕಾಗಿಯೇ ನಮಗೆ ಸಮಯ ನಿಗದಿ ಮಾಡಿದ್ದರು. ಅಮ್ಮನೂ ಈ ಬಗ್ಗೆ ಕಾಳಜಿ ವಹಿಸಿದ್ದರು. ನಾಟಕ ಹೇಗೆ ಮುಖ್ಯವೋ ಓದುವುದೂ ನಮಗೆ ಮುಖ್ಯವಾಗಿತ್ತು. ತಂದೆಯವರು ಇದರಲ್ಲಿ ಖಡಕ್ ಆಗಿದ್ದರು. ಹೊರಗೆ ಜನಜೀವನ ಹೇಗಿರುತ್ತದೆ ಎಂದು ಮಕ್ಕಳಿಗೆ ಗೊತ್ತಾಗಬೇಕು. ಬದುಕಿನ ಶೈಲಿ ಹೇಗೆ ಇರುತ್ತದೆ ಎಂದೂ ಗೊತ್ತಾಗಬೇಕು. ನಡುಬೀದಿ ನಾರಾಯಣ ನಾಟಕದಲ್ಲಿ ತಂದೆಯವರು ಒಂದು ಮಾತು ಹೇಳುತ್ತಿದ್ದರು. ನಡುಬೀದಿಗಿಂತ ಶ್ರೇಷ್ಠ ಯೂನಿವರಿಸಿಟಿ ಬೇರೊಂದು ಇನ್ನೊಂದಿಲ್ಲ. ಅಲ್ಲಿ ಕಲಿಯುವುದು ಬಹಳಿದೆ ಅನ್ನುತ್ತಿದ್ದರು. ಹಸಿವೆ ಆದಾಗಲೇ ಊಟದ ಮನೆ ಆಗೋದು. ನೀರಡಿಕೆಯಾದಾಗಲೇ ನಲ್ಲಿ ನೀರೆ ನೆನಪಾಗುವುದು. ಇದನ್ನು ಕಲಿಯಲು ಯಾವ ಕಾಲೇಜಿನಲ್ಲೂ ಓದಬೇರಾಗಿಲ್ಲ. ಜ್ಞಾನದ ಹಸಿವು ಆದಾಗಲೇ ಪುಸ್ತಕ ತೆರೆಯಬೇಕು ಅನ್ನುತ್ತಿದ್ದರು. ಅವರ ಪ್ರೋತ್ಸಾಹ ನಮಗೆ ಎಂದಿಗೂ ಇತ್ತು.

೫. ನಿಮ್ಮ ರಂಗದ ಅನುಭವದ ಬಗ್ಗೆ ಇನ್ನಷ್ಟು ಹೇಳಿ.
ಹೇಳಿದೆನಲ್ಲ. ದಿವೂ ನಾಟಕ ನೋಡುವುದು, ಅಂದಿನ ಪ್ರಯೋಗದ ಬಗ್ಗೆ ಎಲ್ಲರೂ ಚರ್ಚಿಸುವುದು ಇದ್ದೇ ಇರುತ್ತಿತ್ತು. ನಮ್ಮ ತಂದೆಯ ಮಾತು ನಿರರ್ಗಳವಾಗಿರುತ್ತಿತ್ತು. ಅಭಿನಯ ನನ್ನ ಗಮನ ಸೆಳೆಯುತ್ತಿತ್ತು. ಅವರಲ್ಲಿ ಮಾತಿನ ಅಕ್ಷಯ ಪಾತ್ರೆ ಇದ್ದಂತೆ. ಇಂದು ಆಡಿದ ಮಾತುಗಳು ನಾಳೆ ಬೇರೆಯೇ ಇರುತ್ತಿದ್ದವು. ಅವರದು ಮುಗಿಯದ ಮಾತುಗಳು.ಎಂಥ ಲವಲವಿಕೆ, ಅರ್ಥಗರ್ಭಿತ ಮಾತುಗಳು. ಕಣ್ ಬಾಯಿಬಿಟ್ಟು ನೋಡುತ್ತಿದ್ದೆ. ಪ್ರೇಕ್ಷಕರಿಂದ ಅವರಿಗೆಸಿಗುತ್ತಿದ್ದ ಚಪ್ಪಾಳೆ, ಪ್ರಶಂಸೆ, ಪ್ರೋತ್ಸಾಹಗಳು, ಸನ್ಮಾನಗಳು ಅವನ್ನೆಲ್ಲ ಕಂಡು ನಾನೂ ಹಾಗೇ ಅಪ್ಪನ ಹಾಗಿರಬೇಕು. ತಾತ ಮತ್ತು ತಂದೆಯ ಹಾದಿಯಲ್ಲಿ ಯಶಸ್ಸು ಗಳಿಸಬೇಕು ಅನ್ನು ಆಸೆ ಇರುತ್ತಿತ್ತು. ನಮ್ಮ ಸಂಸ್ಥೆಯ ನಟರು ನಮಗೆ ಕೊಟ್ಟ ಉತ್ತೇಜನ ಮರಾಯಲಾಗದು. ತಂದೆಯವರಿಗೆ ಒಂದು ಡಿಗ್ರಿ ಆಗಬೇಕು ನಾವೆಲ್ಲ ವಿದ್ಯೆಯಿಂದ ವಂಚಿತರಾಗಿದ್ದೀವಿ. ಮಕ್ಕಳು ಹಾಗಾಗಬಾರದು ಅನ್ನುತ್ತಿದ್ದರು. ಯಾಕಂದರೆ ನಾಟಕವೆನ್ನುವುದು ಅನಿಶ್ಚಿತ ಬದುಕು. ಕಲೆ ಅನ್ನುವುದು ಶ್ರೇಷ್ಠ. ಆದರೆ ಅದು ಬದುಕಿಗಲ್ಲ ಎಂದು ತಾತ ಹೇಳುತ್ತಿದ್ದರು. ಜನ ಗುರುತಿಸುವುದು ಪ್ರತಿಭೆಯನ್ನು ಮಾತ್ರ. ಇದು ಯಾರ ಮಗ, ಯಾರ ತಾತ ಎನ್ನುವುದಿಲ್ಲ. ಒಮ್ಮೆ ಜನ ನಮ್ಮನ್ನು ತಿರಸ್ಕರಿಸಿದರೆ ಬುದುಕಿನ ದಾರಿ ಕವಲಾಗಿರುತ್ತದೆ. ಅದಕ್ಕಾಗಿ ಮಕ್ಕಳಿಗೆ ಶಿಕ್ಷಣ ಬೇಕು ಅನ್ನುತ್ತಿದ್ದರು. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದರು.
೬. ನೀವು ಭಾಗವಹಿಸಿದ ಮೊದಲ ನಾಟಕ ಯಾವುದು? ಯಾವ ನಾಟಕ-ಯಾವ ಪಾತ್ರ?
ಬಾಲ್ಯದಲ್ಲಿ ಹತ್ತನೆಯ ವಯಸ್ಸಿನಲ್ಲಿ ಪ್ರವೇಶ ಅನ್ನಿ. ಕಲ್ಕ್ಯಾವತಾರ ನಾಟಕದಲ್ಲಿ ಆರಂಭ. ಆ ಪ್ತ್ರವೆಂದರೆ ಗೀತೋಪದೇಶ ಭಂಗಿಯಲ್ಲಿ ಸುಮ್ಮನೆ ವಿಲ್ಲುವ ಕೆಲಸ ನನಗಿತ್ತು. ನಂತರ ಒಂದಷ್ಟು ಮಾತುಗಳನ್ನು ಕಾಡುತ್ತಿದ್ದರು. ಪೋಸ್ಟಮ್ಯಾನ್ ಇಲ್ಲ ನೆರೆಹೊರೆಯವರು, ಇಲ್ಲ ಗುಂಪಿನ ಪಾತ್ರಗಳಿರುತ್ತಿದ್ದವು. ಮುಂದೆ ಅಪ್ಪನೊಂದಿಗೆ ನಾಯಿಂದನ ಪಾತ್ರ ಮಾಡುವ ಅವಕಾಶ ದಕ್ಕಿತು.ಯೋಗಾಯೋಗವೇನೋ. ಹದಿನಾಲ್ಕನೇ ವಯಸ್ಸಿವಲ್ಲಿ ದೊಡ್ಡ ಪೋತ್ರವನ್ನೇ ಮಾಡಿದೆ. ತಾತ ಮತ್ತು ತಂದೆ ಮಾಡುತ್ತಿದ್ದ ನಾಜೂಕಯ್ಯ ನ ಪಾತ್ರ ಮಾಡಿಬಿಟ್ಟೆ. ಯಾವ ತಯಾರಿಯೂ ಇಲ್ಲದ ದಿನ ನಾನು ಪ್ರವೇಶ ಮಾಡಿದೆ.
೭.ಅದರ ನಂತರ ನೀವು ರಂಗಭೂಮಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿರಿ? ಹಾಗಿದ್ದರೆ ನಿಮ್ಮ ಯೋಜನೆಗಳು ಹೆಗಿದ್ದವು? ಏನೇನು ಅಂದುಕೊಂಡಿರಿ?
ಆ ದಿನದ ನಂತರ ಅಪ್ಪ ಮತ್ತು ಅಮ್ಮ ನನ್ನನ್ನು ಮೆಚ್ಚಿಕೊಂಡರು. ಆದರೆ ಅದೇ ಮುಳುವಾಗಬಾರದೆಂದೂ ಯೋಚಿಸಿದರು. ನನ್ನನ್ನು ಬೆಂಗಳೂರಿಗೆ ಅಟ್ಟಿ ಬಿ.ಇ. ಮುಗಿಯುವವರೆಗೆ ನಾಟಕದಿಂದ ದೂರವಿರಬೇಕು ಎಂದು ಕಟ್ಟಪ್ಪಣೆ ಮಾಡಿದರು. ಆದರೂ ರಜೆ ದಿನಗಳಲ್ಲಿ ನಾಟಕ ಆಡಲು ಒಪ್ಪಿಗೆ ಇತ್ತರು. ಹೇಗೂಕಂಪನಿಯಲ್ಲಿ ಕೆಲಸ ಇತ್ತಲ್ಲ.ಬಿ.ಇ. ಮುಗಿಯುವವರೆಗೆ ನಾನು ಪೂರ್ಣಪ್ರಮಾಣದ ಪಾತ್ರ ಮಾಡಲಿಲ್ಲ. ಆದರೆ ಅಮ್ಮನಿಗೆ ಡಿಗ್ರಿ ಮೇಲೆ ಎಷ್ಟು ಪ್ರೀತಿ ಇತ್ತೋ ಹಾಗೇನೇ ರಂಗಭೂಮಿಯಲ್ಲೂ ಪ್ರೀತಿಯಿತ್ತು. ಹಾಗಾಗಿ ನನಗೆ ಸಂಗೀತ, ಸಾಹಿತ್ಯದ ಶಿಕ್ಷಣವನ್ನೂ ಕೊಡಿಸಿದರು. ಭರತ ನಾಟ್ಯ, ಶಾಸ್ತ್ರೀಯ ಸಂಗೀತ ಶಿಕ್ಷಣವನ್ನೂ ನೀಡಿದರು. ಕನ್ನಡ ಬರವಣಿಗೆ, ಓದು, ನಾಟಕಗಳನ್ನು ಓದಿಲುವುದು ತಾವೇ ಮಾಡಿಸಿದರು. ಅಮ್ಮನೇ ನಮಗೆ ಗುರುವಾಗಿದ್ದರು.
೮. ರಂಗ ಶಿಕ್ಷಣ-ಇತರೆ ತರಬೇತು ಪಡೆದಿರಾ?
ಬೆಳೆದದ್ದೇ ನಾಟಕದ ವಾತಾವರಣದಲ್ಲಿ. ಅಲ್ಲಿ ನಿತ್ಯವೂ ನಾಟಕದ ಅಭ್ಯಾಸ, ಪ್ರಯೋಗ,ಇದ್ದ ಕಾರಣಅದೇ ರಂಗ ಶಿಕ್ಷಣ ಕೇಂದ್ರವಾಯಿತು. ನಮ್ಮ ತಂದೆಯೂ ಸೇರಿ ೩೦-೩೫ ನುರಿತ ನಟರಿದ್ದ ಸಂಸ್ಥೆ ಅದು. ಶ್ರೀ ಕೆ. ಹಿರಣ್ಣಯ್ಯ ಮಿತ್ರ ಮಂಡಲಿ ಎಂಬ ಹೆಸರಿನ ಕಂಪನಿ. ಇದು ವಿಲಾಸೀ ಸಂಸ್ಥೆ. ಅಲ್ಲಿ ವ್ಯವಸ್ಥಾಪರ, ವ್ಯವಹಾರ, ಕ್ಯಾಂಪಿನ ಉಸ್ತುವಾರಿ, ನಾಟಕ ರತನೆ, ಸಂಗೀತ, ನಟನೆ ಎಲ್ಲವನ್ನೂ ಖುದ್ದಾಗಿ ಕಲಿಯುವ ಅವಕಾಶವಿತ್ತು. ಅದೇ ನನ್ನ ಜನ್ಮ ಭೂಮಿ. ಅದೇ ಕಾಯಕ. ತರಬೇತಿ ಶಿಕ್ಷಣವೂ ಆಗಿತ್ತು.
೯.ನಿರ್ದೇಶನದತ್ತ ಒಲವು ಬಂದದ್ದು ಹೇಗೆ? ಅದರ ಅನುಭವಗಳೇನು?
ಆಗ ರಂಗಭೂಮಿಯಲ್ಲಿ ಪ್ರತಿ ನಟನಿಗೂ ಪೂರ್ಣವಾಗಿ ಇಡೀ ನಾಟಕವೇ ಬಾಯಿಬಾಠ ಇರುತ್ತಿತ್ತು. ಹಾಗಾಗಿ ಸಾಮಾನ್ಯವಾಗಿ ನಿರ್ದೇಶಕ ಅನ್ನುವ ಪರಿಪಾಠವಿರಲಿಲ್ಲ. ನಾಟಕ ಮೇಷ್ಟ್ರು ಇರುತ್ತಿದ್ದರು. ಅಥವಾ ನಾಟಕದ ಮಾಲಕರೇ ಆ ಸ್ಥಾನದಲ್ಲಿರುತ್ತಿದ್ದರು. ಹಾಗಾಗಿ ನಾನು ಬಿ.ಇ. ನಂತರ ಸಂಸ್ಥೆಯ ನಟನಾಗಿ ನಿರ್ದೇಶಕ ಎಂದು ಎಲ್ಲರೂ ಕರೆಯತೊಡಗಿದರು. ಅದಕ್ಕೆ ನನ್ನ ವಿದ್ಯಾರ್ಹವೂ ಕಾರಣ ಇರಬೇಕು. ನಾಟಕದ ಅಭ್ಯಾಸ ಮಾಡಿಸುವುದು, ಹೊಸಬರ ತರಬೇತಿ ಮಾಡುವುದು. ಮುಂದಿನ ನಾಟಕಕ್ಕೆ ಪಾತ್ರ ಹಂಚುವುದು ಮಾಡುತ್ತ ನಿರ್ದೇಶಕ ಎಂದು ಅವರೇ ಹೇಳಿದರು. ಕಂಪನಿಯ ಮಗ ಬೇರೆ ಆಗಿದ್ದೆ. ಹಿರಿಯ ಕಲಾವಿದರೂ ಅದರ ಬಗ್ಗೆ ಏನೂ ಮುಜುಗುರ ಇಲ್ಲದೆ ನನ್ನನ್ನು ನಿರ್ದೇಶಕ ಎಂದು ಕರೆದರು. ಆದರೆ ನನ್ನ ಜವಾಬ್ದಾರಿ ಹೆಚ್ಚಿತ್ತುವಾಗಿರಲಿಲ್ಲ. ಆದರೆ ನಾನು ಅಂದುಕೊಳ್ಳುವಷ್ಟು ಸರಳವಾಗಿರಲಿಲ್ಲ. ನಾನು ನಿರ್ದೇಶಕನಾಗುವುದು ಕಷ್ಟದ ಕೆಲಸ ಅನ್ನಿಸಿತು. ಎಲ್ಲಾ ಕಡೆ ಇರುವ ಹಾಗೆ ಇಲ್ಲಿಯೂ ಈರ್ಷೆ, ಮೇಲಾಟಗಳು ಇಲ್ಲಿಯೂ ಇದ್ದವು. ಕೆಲವರು ತೊಂದರೆಯನ್ನೂ ಕೊಟ್ಟರೆನ್ನಿ. ಆದರೆ ನನ್ನ ಪುಣ್ಯ. ಅಪ್ಪ ನನ್ನ ಜೊತೆಗಿದ್ದರು. ಅಪ್ಪ ಿದ್ದರೆ ಸಾಕು. ನಾಟಕ ನಡೆಯುತ್ತಿದ್ದವು. ನಮ್ಮ ಕಂಪನಿಯ ಉಳಿವಿಗಾಗಿ ಮೆಟ್ಟಿ ನಿಲ್ಲಬೇಕಾಗಿತ್
೧೦.ಮಾ.ಹಿರಣ್ಣಯ್ಯನವರೂ ಮುಂದೆ ಕಿರುತೆರೆಯತ್ತ ವಾಲಿದರಲ್ಲ. ಅದರ ಪ್ರಭಾವ ನಿಮ್ಮ ಮೇಲೂ ಆಯಿತೆ?
ಹೌದು. ಅದಕ್ಕೆ ನಿಖಿರ ಕಾರಣ ಹೇಳಲಾರೆ. ಕಿರುತೆರೆ ಮತ್ತು ಹಿರಿತೆರೆಗಳೂ ಕಲೆಯ ಒಂದು ಭಾಗವೇ. ರಂಗದ ಅನುಭವದ ಹಿನ್ನಲೆಯಾದ್ದರಿಂದ ಬೇಡವೆನ್ನಲಾಗಲಿಲ್ಲ. ತಂದೆಯವರು ಯುದ್ಧಕ್ಕೆ ಹೋದ ಮೇಲೆ ಯಾವುದಕ್ಕೂ ಸಿದ್ಧರಿರಬೆಕು ಅನ್ನುತ್ತಿದ್ದರು. ನಾಟಕ ಕಲಾವಿದರು ಆಕರ್ಷಣೆಯಿಂದ ದೂರವಾಗಲಿಲ್ಲ. ಈ ಮಾಧ್ಯಮಕ್ಕೆ ಸಾಕಷ್ಟು ಕಲಾವಿದರು ಬಂದರು. ಅದು ಕಾಲದ ಅವಶ್ಯಕತೆಯಾಗಿತ್ತೇನೊ. ನಾವು ಎಷ್ಟೇ ತಡೆದರೂ ಪ್ರವಾಹದ ಎದುರು ನಿಲ್ಲಲಾಗಲಿಲ್ಲ. ಕಂಪನಿಯಲ್ಲಿದ್ದವರು ಆಮಿಷಕ್ಕಾಗಿಯೋ, ಸ್ವಾತಂತ್ಯಕ್ಕಾಗಿಯೋ ಸುಖ ಅಲ್ಲಿದೆಯೋ ಎಂದು ಕೆಲವರು ಹೋದರು. ತಂದೆ ಹೇಳುವ ಹಾಗೆ ಒಂದು ಹಕ್ಕಿ ಮರದಿಂದ ಮರಕ್ಕೆ ಹಾರಬಹುದು. ಆದರೆ ಹಕ್ಕಿಯಿಂದ ಹಕ್ಕಿಗೆ ಮರ ಹಾರುವುದಿಲ್ಲ ಅನ್ನುತ್ತಿದ್ದರು. ಅದು ಸತ್ಯಲೂ ಆಗಿತ್ತು. ಸಮಯ ವ್ಯರ್ಥ ಮಾಡದೆ ಆಗಾಗ ಕಿರುತೆರೆ-ಸಿನಿಮಾದಲ್ಲಿ ಕಾಣಿಸಿಕೊಂಡೆವು. ರಂಗಭೂಮಿಯಲ್ಲಿ ಇಬ್ಬರೂ ಪಳಗಿಸಿಕೊಂಡಿದ್ದರಿಂದ ಧ್ವನಿ ಕ್ಯಾಸೆಟ್ ರೋಕಕ್ಕೂ ಕಾಲಿಟ್ಟೆವು. ಇಲ್ಲಿ ನಮಗೆ ಹೆಚ್ಚು ಬೇಡಿಕೆಯೂ ಬರತೊಡಗಿತು. ರಂಗಭೂಮಿಯ ನಟರಿಗೆ ಕಿರಿತೆರೆ ಮತ್ತು ಸಿನಿಮಾಗಳಲ್ಲಿ ನಟನೆ ಮಾಡುವುದು ಸುಲಭ. ಹಣವೂ ಬರುತ್ತಿತ್ತು. ಆರಂಭದಲ್ಲಿ ಇದು ಕಡಿಮೆ ಇತ್ತು. ಆಮೇಲೆ ಬೇಡಿಕೆ ಹೆಚ್ಚಾಯಿತು. ಎರಡೂ ಕ್ಷೇತ್ರದಲ್ಲಿ ಸಮನಾಗಿ ಕೆಲಸ ಮಾಡಿದೆವು. ಆದರೆ ರಂಗಭೂಮಿಯೇ ಸವಾಲು ನೀಡುವ ಕೆಲಸ.
೧೧.ರಂಗ ಕಟ್ಟುವ ಸಾಹಸ ಮಾಡಿದ್ದೀರಿ. ಅದರ ಬಗ್ಗೆ ಹೇಳಿ.
ಕಂಪನಿ ರಂಗಭೂಮಿಯ ಅಯತನದಲ್ಲೇ ಬೆಳೆದವನು ನಾನು. ಈಗ ತಂಡ ಕಟ್ಟುವುದು, ನಿಭಾಯಿಸುವುದು,ಸಾಹಸವೇನೂ ಅಲ್ಲ. ಮೇಲಾಗಿ ಇಂದು ರಂಗಭೂಮಿಯನ್ನು ಹೊಟ್ಟೆಪಾಡಿಗೆಂದು ಅವಲಂಬಿಸಿದ ನಟ-ನಟಿಯರು ಕಡಿಮೆ. ಹೆಚ್ಚಿನ ಮಂದಿ ಇದನ್ನು ಆಸಕ್ತಿಯಿಂದ ಕಲಿಕೆ.ಇಂದ ನೋಡುವುದರ ಜೊತೆಗೆ ಬರುತ್ತಾರೆ. ಹೆಚ್ಚು ಹೆಚ್ಚಾಗಿ ವಿದ್ಯಾವಂತರೇ ಮುಂದೆ ಬರುತ್ತಾರೆ. ಅದು ಅನುಕೂಲವೂ ಆಗಿದೆ. ಮೇಲಾಗಿ ಯುವಕರು ಬೆರೆಯುವದರಿಂದ ನಮಗೂ ಹುಮ್ಮಸ್ಸು ಇಮ್ಮಡಿಯಾದುತ್ತದೆ.
೧೨. ವೃತ್ತಿ ರಂಗಭೂಮಿಯು ಮೊದಲಿನ ಹಾಗೆ ತನ್ನ ಮೊದಲಿನ ರಂಗು ಮೆರಗು ತರಬಹುದೆ?
ಇಂದಿನ ಕಾಲ ಘಟ್ಟದಲ್ಲಿ ಕಷ್ಟ. ಯ್ದಕ್ಕೆ ಅನೇಕ ಕಾರಣ. ಸಮಾಜದ ವ್ಯವಸ್ಥೆ, ಜನರ ಜೀವನ ಶೈಲಿ, ಅಗತ್ಯಗಳು, ಮಾಧ್ಯಮದ ಆವಿಸ್ಕಾರಗಳು, ಸಂಚಾರದ ಅನುಕೂಲಗಳು ಎಲ್ಲವೂ ಸೇರಿ ರಂಗಭೂಮಿಯ ಸ್ವರೂಪವನ್ನು ಬದಲಾಗಿಸಿದೆ. ವೃತ್ತಿಯಿಂದ ,ಹವ್ಯಾಸಿ, ರೆಪರ್ಟರಿಗಳು ಹೊಸ ರೂಪ ಕಂಡಿವೆ. ರಿಕಾರ್ಡ ಪ್ಲೇಟ್ ಗಳು ಹೋಗಿ, ಟೇಪ್ ಆಗಿವೆ. ನಂತರ ಸಿ.ಡಿ. ಆಗಿದ್ದು ಪೆನ್ ಡ್ರೈವ್ ಆಗಿವೆ. ಇವೆಲ್ಲ ಮುಂದೆ ಹೋಗಿದೆ. ಹಾಗೆಯೇ ಹಾಡಿನ ಮೂಲ ಧಾಟಿಗಳೂ ಬದಲಾಗಿ ಹೋಗಿದೆ. ಹಾಗೇ ರಂಗಭೂಮಿಯೂ ಬದಲಾದದ್ದು ಸಹಜವೆ. ಮೊದಲಿನ ರಂಗಭೂಮಿ ಮತ್ತೆ ಸಿಗುವುದ ಕಷ್ಟ.
೧೩.ಹವ್ಯಾಸಿ ರಂಗಭೂಮಿಯಲ್ಲಿ ಶ್ರೇಷ್ಠತೆ ಬಯಸುವ ಸಂಗತಿಗಳೇನು?
ರಂಗಭೂಮಿಯ ಪರಿ ಯಾವುದೇ ಇರಲಿ. ನಾನು ಬಯಸುವುದು ವೃತ್ತಿಪರತೆಯನ್ನು ಪ್ರೇಕ್ಷಕ ಕೊಡುವ ದುಡ್ಡು, ಪ್ರೋತ್ಸಾಹ, ಪ್ರತಿತ್ರಿಯೆ, ಯಾವುದೇ ಶ್ರೇಷ್ಠವಲ್ಲ. ಅಮೂಲ್ಯವಲ್ಲ.ಆದರೆ ಅವರು ಅದಕ್ಕಾಗಿ ವ್ಯಯ ನೀಡುವ ಸಮಯ ಅಪರೂಪದ್ದು. ಅದನ್ನು ಹಿಂದುರಿಗಿಸಲು ಸಾಧ್ಯವೇ ಇಲ್ಲ. ಕಳೆದುಹೋದ ಮೇಲೆ ಹಿಂದೆ ಪಡೆಯಲಾಗದ ಅತ್ಯಮೂಲ ವೆಂದರೆ ಸಮಯ. ನಮ್ಮನ್ನು ನಂಬಿ ಬರುವ ಪ್ರೇಕ್ಷಕನಿಗೆ ನಾವು ಕನಿಷ್ಠ ಪಕ್ಷ ಶೇಕಡಾ ೯೦ ರಷ್ಚಾದರೂ ಅದನ್ನು ಹಿಂದುರಿಗಿಸಬೇಕಲ್ಲವೆ. ನಮ್ಮ ಬಾಧ್ಯತೆ ಇರಬೇಕು. ಅವರಿಗಾಗಿ ನಾವು, ಅವರಿಂದ ಕಲೆ ನಾವು ಎಂದೇ ವಿನಃ ನಾನು ಮಾಡಿದ್ದನ್ನು ನೀವು ನೋಡಬೇಕು ಎಂಬ ಧೋರಣೆ ಕೆಲವರಿಗಿದೆ. ಈ ಕಾರಣಕ್ಕೆ ನಮ್ಮ ತಂದೆಯವನ್ನು ಅನ್ನದಾತರು ಎಂದಿದ್ದು. ಅನ್ನ ಹೊಟ್ಟೆಗಷ್ಟೇ ಅಲ್ಲ. ಮಸ್ತಕಕ್ಕೆ, ಅರಿವಿಗೆ,ಎಲ್ಲಕ್ಕೂ ಅದೇ ಮೂಲ.
೧೪.ನಿಮ್ಮ ಕುಟುಂಬದಲ್ಲಿ ಕಲಾರಾಧ್ಯವನ್ನೇ ಆಯ್ಕೆ ಮಾಡಿಕೊಂಡವರು ಯಾರಿದ್ದಾರೆ?
· ಸಧ್ಯ ಯಾರೂ ಇಲ್ಲ. ಅ.ನ.ಕೃ ಅವರು ಹೇಳಿದಂತೆ ಕಲಾ ಮಾತೆ ಎಲ್ಲರನ್ನೂ ಕೈ ಮಾಡಿ ಕರೆಯುತ್ತಾಳೆಯ ಕೆಲವರನ್ನು ಮಾತ್ರ ಕೈ ಹಿಡಿಯುತ್ತಾಳೆ ಅನ್ನುವುದು ಎಷ್ಟು ಸತ್ಯ ನೋಡಿ. ಯಾರಲ್ಲಿ ತಪಸ್ಸು, ತ್ಯಾಗ, ಅರ್ಪಣಾ ಮನೋಭಾವವಿರುತ್ತದೋಅವರನ್ನು ಮಾತ್ರ ಕೈಬೀಸಿ ಕರೆಯುತ್ತಾಳೆ.ಆದ್ರೆ ಇದೆಲ್ಲವೂ ನಮ್ಮಲ್ಲಿದ್ದರೂ ಅದನ್ನೇ ನಂಬಿ ಬದುಕಲು ಈಗ ಸಾಧ್ಯವಿಲ್ಲ. ಮುಖ್ಯವಾದದ್ದೆಂದರೆ ಇದೆಲ್ಲ ನಮ್ಮಲ್ಲಿದ್ದರೂ ಅದನ್ನೇ ನಂಬಿ ಬದುಕಲು ಪ್ರೇಕ್ಷಕನ ಒಪ್ಪಿಗೆ ಬೇಕು. ಯಾವ ಮಾನದಂಡವೂ ಇಲ್ಲ. ರೂಪ,ಬಣ್ಣ, ವಿದ್ಯೆ, ವಂಶವಾಹಿನಿಎಲ್ಲವೂ ಇದ್ದರೂ ಅವರು ಒಪ್ಪದೇ ಇರಬಹುದು. ಹಾಗಾಗಿ ಈ ಅನಿಶ್ಚತತೆ ಕಾಡಿದಾಗ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಆಯ್ಕೆ ಅವರದು ನೋಡಿ. ನನ್ನದು ಮೂರನೇ ತಲೆಮಾರಿನದು.
ಮುಂದಿನವರಲ್ಲೂ ಆಸಕ್ತಿ, ಕಲೆ, ರಿಹರ್ಸಲ್ ಎಲ್ಲವೂ ಇದೆ. ಆದರೆ ಸಧ್ಯಕ್ಕೆ ಇನ್ನೂ ಬೇರೆಯವರು ಯಾರೂ ಇಲ್ಲ. ಮುಂದಿನದು ಪ್ರೇಕ್ಷಕ ಭಗವಂತನ ಕೃಪೆಯಷ್ಟೆ.
೧೫. ಮಾ. ಹಿರಣ್ಣಯ್ಯನವರನ್ನು ನೆನಪಿಸುವ ರಂಗ ಮಂದಿರ, ಪ್ರತಿಷ್ಠಾನ, ರಂಗಶಿಕ್ಷಣ ಕೇಂದ್ರ ಮಾಡುವ ಹೀಗೆ ಏನಾದರೂ ಯೋಚನೆ ಇದೆಯಾ?
ನಮ್ಮ ಅಪ್ಪನಿಗೆ ನನ್ನ ಕ್ರಿಯಾಶೀಲತೆಯೇ ಮಾಮು ಮಾಡುವ ದೊಡ್ಡ ಸ್ಮಾರಕ. ಆದರೂ ಮುಂದಿನ ಪೀಳಿಗೆಗೆ ನಾನೊಂದು ಯೂಟ್ಯೂಬ್ ಚಾನೆಲ್ ಮಾಡಿದ್ದೇನೆ. ಅಲ್ಲಿ ಅವರ ಬಗ್ಗೆ ಅವರ ಮಾತು, ನಾಟಕಗಳನೆಲ್ಲ ದಾಖಲಿಸಿದ್ದೇನೆ. ಅವರ ಬಗ್ಗೆ ನಾನು ಮಾಸ್ಟರ್ ಹಿರಣ್ಣಯ್ಯ-ನನ್ನ ಕಥೆ ಹೇಳ್ತೀನಿ ಎಂಬ ಆತ್ಮ ಚರಿತ್ರೆ ಯನ್ನ ಅವರೇ ಹೆಳಿದಂತೆ ಅವರದೇ ಮಾತು ಹೃದಯದಲ್ಲಿ ಪುಸ್ತಕಗಳನ್ನು ನೀಡಿದ್ದೇನೆ. ಒಂದು ಆರ್ಟ್ ಫೌಂಡೇಶನ್ ಬಹಳ ವರ್ಷಗಳ ಹಿಂದೆಯೇ ಆರಂಭವಾಗಿದೆ. ಅವರ ಮಕ್ಕಳು-ಮೊಮ್ಮಕ್ಕಳು ಕುಟುಂಬ ಮಾತ್ರ ದೇಣಿಗೆನೀಡುತ್ತ, ರಂಗ ಕಲಾವಿದರ ಸಹಾಯಕ್ಕೆ ಸಮಾಜದ ಸಹಾಯಕ್ಕೆ ಅಗತ್ಯ ಸಹಾಯ ಮಾಡುತ್ತಿದ್ದೇವೆ. ಇತ್ತೀಚೆಗೆ ಕೋವಿಡ್ ಸಂದರ್ಭದಲ್ಲಿ ಸುಮಾರು ೫೦-೬೦ ಮಂದಿ ರಂಗ ಕಲಾವಿದರಿಗೆ ಧನಸಹಾಯ ನೀಡಿದ್ದೇವೆ. ಬೆಂಗಳೂರು ದಕ್ಷಿಣ ಸೈಬರ್ ಸೆವ್ ಮತ್ತು ನಾರಕೋಟಕ್‌ಆರಕ್ಷಕಠಾಣೆಗೆಒಂದು ಸುಸಜ್ಜಿತ ಕಟ್ಟಡವನ್ನು ಸುಮಾರು ೧೮೨೦ಲಕ್ಷದಲ್ಲಿ ಕಟ್ಟಿಸಿದ್ದೇವೆ. ಬೆಂಗಳೂರಲ್ಲಿ ಒಂದು ಸುಸಜ್ಜಿತ ಹಾಗೂ ರಂಗ ತರಬೇತಿ ಕೇಂದ್ರವನ್ನು ಆರಂಭಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ.
೧೬. ಮಾ.ಹಿರಣ್ಣಯ್ಯ ನವರನ್ನು ಕುರಿತು ಸರಕಾರದಿಂದ ಅಂಥ ಯಾವ ಕೆಲಸವೇನೂ ಆಗಿಲ್ಲ. ಯಾಕೆ?
· ಕರ್ನಾಟಕ ಅಕಾಡೆಮಿಯಲ್ಲಿ ನಾವೇ ದತ್ತಿ ನಿಧಿಯನ್ನಿಟ್ಟು ಪ್ರಶಸ್ತಿ ನೀಡುತ್ತಿದ್ದೇವೆ. ಎಲ್ಲವನ್ನೂ ಮಾಡುತ್ತದೆ ಎಂಬ ನಿರೀಕ್ಷೆ ಇಲ್ಲ. ಮೇಲಾಗಿ ಅವರು ನಮ್ಮ ಜಾತಿ, ಮತ, ಪಕ್ಷ ನೋಡಿಕೊಂಡೇ ನೋಡುವುದು. ಅದೇ ಅವುಗಳಿಗೆ ಮಾನದಂಡವಾಗಿರುತ್ತದೆ. ಮಿಕ್ಕಂತೆ ಅವರ ಎಲ್ಲಾ ವೇದಿಕೆಗೆ ಸೀಮಿತ ಅಷ್ಟೇ. ಮಾಸ್ಟರ್ ಹಿರಣ್ಣಯ್ಯನವರು ರಾಜಕಾರಣಿಗಳು ನೇರಾ ನೇರವಾಗಿ ಮಾತಾಡುತ್ತಿದ್ದರು. ಅದರಿಂದ ಯಾವ ಹಂಗವೂ ಅವರಿಗಿರಲಿಲ್ಲ. ಅದೇ ಕಾರಣಕ್ಕೆ ಇರಬೇಕು. ಅವರಿಗೆ ಏನೆಲ್ಲಾ ಸಾಧನೆಗಳಿದ್ದರೂ ಇವರುಗಂ ಪದ್ಮಶ್ರೀಯಾಗಲೀ, ಕೇಂದ್ರ ನಾಟಕ ಅಕಾಡಿಮಿಯಿಂದಾಗಲೀ ಯಾವುದೇ ಗೌರವ ಲಭಿಸಲಿಲ್ಲ. ಇರಲಿ. ನಮ್ಮಿಂದಾಗಬಹುದಾದನ್ನು ಯಾ ನಿರೀಕ್ಷೆಯೂ ಇಲ್ಲದೆಮಾಡುತ್ತೇವೆ. ಅನಿವಾರ್ಯವಾದರೆ ನಮ್ಮೊಂದಿಗೆ ಜನರಿದ್ದಾರಲ್ಲ.

ಬಾಬು ಹಿರಣಯ್ಯ (ಫೋಟೋ ಕೃಪೆ : youtube)
೧೭.ನಿಮ್ಮ ಮುಂದಿನ ಯೋಜನೆಗಳೇನು?
·ಯಾವ ಅಪೇಕ್ಷೆಯಿಲ್ಲದೆ ರಂಗಭೂಮಿ, ಕಿರುತೆರೆ, ಸಿನಿಮಾಗಳ ಕಾಯಕ ಮಾಡುವುದು. ನಡುಬೀದಿ ನಾರಾಯಣ ನಾಟಕದಲ್ಲಿ ಹೇಳಿರುವಂತೆ ನಮ್ಮ ವಂಶದವರಿಗೆ ದೊಡ್ಡ ಹೆಸರು ತರಬೇಕಾಗಿಲ್ಲ. ಅವರೆಲ್ಲ ಒಳ್ಳೆಯ ಗುಣದಿಂದ ಒಳ್ಳೆಯ ನಾಗರಿಕರಾಗಿದ್ದರೆ ಸಾಕು. ನನಗೂ ಅಷ್ಟೇ. ಹೆಸರಿನ ಹಿಂದೆ ಬಿದ್ದವನಲ್ಲ. ಜನ ಇನ್ನೂ ಬೇಕು ಅನ್ನುವಾಗಲೇ ಹೋಗಬೇಕು. ತಂದೆ, ತಾತನಿಗೆ ಕೆಟ್ಟ ಹೆಸರು ತರಲಾರೆ. ಮುಂದಿನ ಪೀಳಿಗೆ ಅವರನ್ನು ನೆನೆಯಬಿಕು. ಅದಷ್ಚೇ ನನ್ನ ಆಸೆ.
೧೮.ರಂಗ ಕಲಾವಿದರಿಗೆ ನೀವು ಹೇಳಬೇಕು ಅನ್ನುವ ಸಲಹೆಗಳೇನು?
ರಂಗಭೂಮಿಗೆ ನಾವು ಅನಿವಾರ್ಯವಲ್ಲ. ನಮಗೆ ರಂಗಭೂಮಿ ಅನಿವಾರ್ಯವಾಗಿದೆ. ಇನ್ನೊಮ್ಮೆ ನಮಗೆ ಈ ಜನ್ಮ ಲಭಿಸುವುದು ದುಸಾಧ್ಯ. ಇದನ್ನು ಸಂಪೂರ್ಣವಾಗಿ ಬಲಶಿಕೊಳ್ಳಿ. ಮತ್ತೊಂದು ಜನ್ಮ ಬೇಡವೆಂಬಂತೆ ಬದುಕಿರಿ. ನನ್ನ ಅಪ್ಪನ ವಾಣಿ- ತುಳಿದು ಬಾಳಿದರೆ ಅಳಿದು ಹೋಗುತ್ತೀಯ. ತಿಳಿದು ಬಾಳಿದರೆ ಅಳಿದ ಮೇಲೂ ಉಳಿಯುತ್ತೀಯ.
- ಹೂಲಿ ಶೇಖರ್ (ಖ್ಯಾತ ನಾಟಕಕಾರರು, ಸಾಹಿತಿಗಳು, ಲೇಖಕರು, ರಾಜ್ಯೋತ್ಸವ ಪ್ರಶಸ್ತಿ ಪುರಸತ್ಕೃತರು)
