ಕನ್ನಡದಲ್ಲಿ ಒಳ್ಳೆ ಸಿನಿಮಾಗಳಿವೆ – ವಿನಯ ಮಾಧವ




ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ ಎನ್ನುವುದು ಸುಳ್ಳು. ಪುಕ್ಸಟೆ ಲೈಫು, ಗರುಡ ಗಮನ, ವೃಷಭ ವಾಹನ ಗಳಂತಹ ಒಳ್ಳೆಯ ಸಿನಿಮಾಗಳು ಚಿತ್ರಮಂದಿರದಲ್ಲಿ ಸೋಲು ಕಂಡಿದ್ದು ಬೇಸರ. ಕನ್ನಡ ಸಿನಿಮಾದ ಕುರಿತು ಪತ್ರಕರ್ತ ವಿನಯ ಮಾಧವ ಅವರು ಬರೆದ ಒಂದು ಪುಟ್ಟ ಲೇಖನ.ಮುಂದೆ ಓದಿ…

ಬಹಳ ಹಿಂದೆ ನಾಟಕ ಒಂದರಲ್ಲಿ‌ #ಮಾಸ್ಟರ್_ಹಿರಣ್ಣಯ್ಯನವರು ಹೇಳಿದ ಮಾತಿದು: ನಮ್ಮ‌ ಬೆಂಗಳೂರು ಹೇಗಪ್ಪಾ ಅಂದ್ರೆ, ಅತ್ತ ಎಕ್ಕಡ, ಇತ್ತ ಎನ್ನಡ, ಮಧ್ಯ ಸ್ವಲ್ಪ ಕನ್ನಡ.

ಆಗಿನ‌ ಕಾಲವೇ ಪರವಾಗಿರಲಿಲ್ಲ ಅಂತ ಅನ್ನಿಸುತ್ತೆ. ಈಗ ಬೆಂಗಳೂರಿರಲಿ, ರಾಜ್ಯದಲ್ಲಿ #ಕನ್ನಡ ಎಷ್ಟು ಭಾಷೆಗಳ ಮಧ್ಯೆ ನಲುಗಿ ಹೋಗಿದೆ ಎನ್ನುವುದನ್ನು ಹುಡುಕ ಬೇಕಾಗಿದೆ.

ಇದರ ಮಧ್ಯೆ ದೊಡ್ಡ ಕೂಗೆಂದರೆ, ಕನ್ನಡ ಭಾಷೆಯಲ್ಲಿ ಒಳ್ಳೆಯ ಸಿನೆಮಾಗಳು ಬರುತ್ತಿಲ್ಲ ಎನ್ನುವುದು. ಕೆಜಿಎಫ್ ಥರದ ಸಿನೆಮಾಗಳ ಗೆಲುವನ್ನು ವರ್ಷಾನುಗಟ್ಟಲೆ ಮಾತನಾಡಬೇಕಾದ ಪರಿಸ್ಥಿತಿ ಇದೆ. ಯಾವಾಗಲೋ ಒಂದು ಸರಣಿಯಲ್ಲಿ ಬಂದ ಕಿರಿಕ್ ಪಾರ್ಟಿ, ತಿಥಿ, ಯು ಟರ್ನ್, ಒಂದು ಮೊಟ್ಟೆಯ ಕಥೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಂತಾದ ಸಿನೆಮಾಗಳನ್ನು ನೆನಪಿಸಿಕೊಳ್ಳಬೇಕು ಎನ್ನುವುದು.

ಪುಕ್ಸಟೆ ಲೈಫು ಸಿನಿಮಾ

ರೋನಾ ಲಾಕ್ ಡೌನ್ ಸಮಯದಲ್ಲಂತೂ, ಓಟಿಟಿ ಪೂರ್ತಿ ಮಲಯಾಳಂ ಮತ್ತು ತಮಿಳು ಚಿತ್ರಗಳದ್ದೇ ಹವಾ. ನಾನು ಸಿನೆಮಾ ಹೆಚ್ಚಾಗಿ ನೋಡುವವನಲ್ಲದಿದ್ದರೂ, ನನಗೆ ಇಷ್ಟವಾಗುವ ಸಿನೆಮಾಗಳ ಪಟ್ಟಿಯೇ ಇದೆ. ಹಾಗಾಗಿ, ಈ ಆರೋಪ ಪೂರ್ತಿ ಸತ್ಯ ಎಂದು ನನಗನಿಸಲಿಲ್ಲ. ನಮ್ಮ ಕನ್ನಡ‌ ಸಿನೆಮಾ‌ ವೀಕ್ಷಕರ ಅಭಿರುಚಿ ಬೇರೆ ಎಂದೆನಿಸುತ್ತದೆ.

ಗರುಡ ಗಮನ, ವೃಷಭ ವಾಹನ

ನಾನು ಇಂದು ನೋಡಿದ ಎರಡು ಚಿತ್ರಗಳು ಯಾವ ಮಲಯಾಳಂ ಮತ್ತು ತಮಿಳಿನ ಸದಭಿರುಚಿಯ ಚಿತ್ರಗಳನ್ನು ಅನಾಯಾಸವಾಗಿ ಹಿಂದೆ ಹಾಕುತ್ತವೆ. ಮೊದಲನೆಯದಾಗಿ, ಥಿಯೇಟರ್ ಗಳಲ್ಲಿ ಸೊರಗಿ ಓಟಿಟಿಗೆ ಬಂದ ‘#ಪುಕ್ಸಟೆ_ಲೈಫು‘, ಮತ್ತೊಂದು ‘ಗರುಡ ಗಮನ, ವೃಷಭ ವಾಹನ’. ಕ್ಷಣ ಕ್ಷಣಕ್ಕೂ ಕುಸೂಹಲ, ಮನರಂಜನೆ ನೀಡಿ, ಕೊನೇ ಕ್ಷಣದಲ್ಲಿ ಅನಿರೀಕ್ಷಿತ ತಿರುವು ಪಡೆಯುವ ಪುಕ್ಸಟ್ಟೆ ಲೈಫು, ಚಿತ್ರಮಂದಿರದಲ್ಲಿ ಸೋತರೆ, ಒಳ್ಳೆಯ ಚಿತ್ರ ಮಾಡಲು ಯಾರಾದರೂ ಮುಂದೆ ಬರುತ್ತಾರೆ ಎನ್ನುವುದು ಅನುಮಾನ.

ಇನ್ನು ಗರುಡ ಗಮನ, ವೃಷಭ ವಾಹನ ನನಗೆ ಹತ್ತಿರವಾಗಲು ಹಲವಷ್ಟು ಕಾರಣಗಳುಂಟು. ಸಿನೆಮಾ ಗೆಲ್ಲಲು ಬೇಕಾಗುವ ಹೀರೋಯಿನ್ ಅಥವಾ ಹಾಡುಗಳು ಇಲ್ಲದೆ ಹೇಗೆ ಉತ್ತಮ‌ ಸಿನೆಮಾ ಮಾಡಬೇಕು ಎನ್ನುವುದಕ್ಜೆ ಇದೊಂದು ಉದಾಹರಣೆ. ಕನ್ನಡದಲ್ಲಿ ಇನ್ನಷ್ಟು ಇಂತಹ ಚಿತ್ರಗಳ ನಿರೀಕ್ಷೆಯಲ್ಲಿದ್ದೇನೆ….


  • ಮಾಕೋನಹಳ್ಳಿ ವಿನಯ ಮಾಧವ  (‘ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು’ ಕೃತಿ ಲೇಖಕರು, ಪತ್ರಕರ್ತರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW