ನೋವು ,ಸಂಕಟ ,ನಿರಾಶೆ, ನಿರೀಕ್ಷೆ,ಸಂತೋಷ ಇವೆಲ್ಲವೂ ಜೀವನದ ಅಡಿಪಾಯ.ಕವಯತ್ರಿ ರೇಷ್ಮಾ ಗುಳೇದಗುಡ್ಡಾಕರ್ ಅವರಿಂದ ಸುಂದರ ಕವನ. ಮುಂದೆ ಓದಿ…
ಬೇಯ ಬೇಕು ಒಲೆಯ ಮೇಲೆ ಬ್ಯಾಳಿ
ಬೆಂದು ಬೆಂದು ಊಟಕ್ಕೆ ರುಚಿಯಾಗಬೇಕು …
ಬೇಯ ಬೇಕು ಬದುಕು ಎಲ್ಲ ತಿರುವುಗಳಲ್ಲೂ
ಅಳತೆ ಮೀರಿ ಸಹನೆ ಎಂಬ ಗಾಣಕ್ಕೆ
ಒತ್ತಡವ ಹತ್ತಿಕ್ಕಿ ನಲಿಯಬೇಕು …!
ಬೇಯುವದು ಬಾಳಿಗು ಸಹಜ
ಮನಕೂ ಸಹಜ ….!!?
ಬೆಂದು ನೊಂದು ನಗುತಾ
ಬೆರತು ಸಾಗಬೇಕು…
ಸಂದಿಗ್ನ ಸ್ಥಿತಿಯನ್ನು ಒಳಗೂಂಡು
ಕನಸುಗಳನ್ನು ಬೇಯಿಸಿ
ಸಂಘರ್ಷಗಳನ್ನು ದಾಟಿ
ನಿತ್ಯದ ಬಾಳಿಗೆ ಆಭರಣವಾಗಬೇಕು….
ಬೇಯುವದು ಒಮ್ಮೊಮ್ಮೆ
ಮನವೂ ,ಬದುಕೊ ಕಾಲವೇ
ನಿರ್ಧರಿಸ ಬೇಕು….
ಬೆಂದರು ಕಾಣದಂತೆ
ತೆಪ್ಪಗೆ ಇದ್ದು ಬಿಡಬೇಕು…..
ಬ್ಯಾನಿ ಎನಿದ್ದರು
ಎಷ್ಟು ಉರಿ ಎರಿಸಿದರು
ಬ್ಯಾಳಿ ಅಳುವದಿಲ್ಲ…
ಈ ಬಾಳು ಕೇಳುವುದಿಲ್ಲ
ಓಡುವ ಸಮಯದೊಂದಿಗೆ ಬೆಂದು
ಹಗುರಾಗಬೇಕು ,
ಬಾಳ ಪಥದಲ್ಲಿ ಗಟ್ಟಿ ಬೇರುಗಳ
ವಿಶಾಲವಾಗಿ ಅರಳಿ ಮರದಂತೆ ಹರಡಬೇಕು….
ಮಾನ ಅಪಮಾನ
ನೋವು ,ಸಂಕಟ ,ನಿರಾಶೆ
ನಿರೀಕ್ಷೆ ಎಲ್ಲವ ಒಟ್ಟುಮಾಡಿ
ಬೆಂದು ಬೆಂದು ಹದವಾಗಿ
ನಿತ್ಯ ನೂತನ ದಿನಗಳಿಗೆ ಅಣಿಯಾಗ ಬೇಕು ….
- ರೇಶ್ಮಾಗುಳೇದಗುಡ್ಡಾಕರ್