ಖಾಲಿ ಹೊಟ್ಟೆಗೆ ಬಾಳೆಹಣ್ಣು ಒಳ್ಳೆಯದಲ್ಲ




ಬಾಳೆ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು, ಹಸಿವಿಗೆ ಸಂಜೀವಿನಿ ಮತ್ತು ಶುಭ ಕಾರ್ಯಕ್ರಮಕ್ಕೆ ಬಾಳೆಹಣ್ಣು ಪ್ರಮುಖವಾದ ಹಣ್ಣು. ಊಟದ ನಂತರ ಒಂದು ಬಾಳೆ ಸವಿದರೆ ಹೊಟ್ಟೆ ಸಂತುಷ್ಟವಾಗುವುದು. ಆದರೆ ಬಾಳೆಹಣ್ಣು ಅತಿಯಾಗಿ ತಿನ್ನುವುದರಿಂದ ಅಥವಾ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆ ತಿಳಿಯೋಣ…

ಈ ಬಾಳೆ ಹಣ್ಣಿನ ಮತ್ವವೇನು ಎಂಬುದನ್ನು ಸ್ವಲ್ಪಮಟ್ಟಿಗೆ ತಿಳಿದರೆ ಒಳ್ಳೆಯದು.ಬಾಳೆಹಣ್ಣಿನಲ್ಲಿ ಸಾಕಷ್ಟು ನಾರಿನಂಶ, ವಿಟಮಿನ್ ಬಿ, ಖನಿಜಾಂಶ, ಪೊಟ್ಯಾಶಿಯಂ ಹೇರಳವಾಗಿ ಸಿಗುತ್ತದೆ. ದಕ್ಷಿಣ ಭಾರತದಲ್ಲಿ ವಿವಿಧ ಅಡುಗೆ ತಯಾರಿಸಲು ಬಳಸಲಾಗುತ್ತದೆ. ಬಾಳೆಹಣ್ಣಿನ ಶೇಖರಣಿ, ಸಲಾಡ್, ಮತ್ತು ಅವುಗಳ ಬಾಳೆ ಹೂವು, ಬಾಳೆದಿಂಡನ್ನು ವಿವಿಧ ಖಾದ್ಯವಾಗಿ ಬಳಸಬಹುದು. ಬಾಳೆಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆಯಿದೆ. ಪೊಟ್ಯಾಷಿಯಂ ಅಂಶ ಅಧಿಕವಾಗಿದೆ, ಇದು ರಕ್ತದೊತ್ತಡ ಸಮತೋಲನದಲ್ಲಿ ಇಡಲು ಸಹಕಾರಿ.ಇದು ದೇಹಕ್ಕೆ ಬೇಕಾದ ನೀರಿನಂಶ ಒದಗಿಸಿ ಹೃದಯಾಘಾತ, ತಲೆ ಸುತ್ತುವುದನ್ನು ತಪ್ಪಿಸುತ್ತದೆ.

ಬಾಳೆ ಹಣ್ಣಿನ ಉಪಯೋಗ :

ಹೊಟ್ಟೆ ಉಬ್ಬರ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ದೇಹದ ಉಷ್ಣತೆಯನ್ನು ಕಮ್ಮಿ ಮಾಡಲು ಸಹಾಯಕಾರಿಯಾಗಿದೆ.

ಫೋಟೋ ಕೃಪೆ : The news minute

ಬಾಳೆದಿಂಡು ಆರೋಗ್ಯಕ್ಕೆ ಸಾಕಷ್ಟು ಲಾಭದಾಯಕವಾಗಿದೆ :

ಬಾಳೆ ಗಿಡದ ಹೊರಗಿನ ಸಿಪ್ಪೆ ತಗೆದ ನಂತರ ಬಾಳೆದಿಂಡು ಸಿಗುತ್ತದೆ ಅದರಿಂದ ಜ್ಯುಸ್ ಮಾಡಿ ಕುಡಿದರೆ, ಮೂತ್ರ ಪಿಂಡದಲ್ಲಿನ ಕಲ್ಲಿದ್ದರೆ ಕರುಗುತ್ತದೆ. ಇದರಲ್ಲಿ ಫೈಬರ್ ಅಂಶ ಹೇರಳವಿರುತ್ತದೆ. ಮೂತ್ರನಾಳದ ಸೋಂಕು, ಸಕ್ಕರೆ ಕಾಯಿಲೆಗೆ ಮನೆಯ ಮದ್ದು, ಅಸಿಡಿಟಿ, ಮಲಬದ್ಧತೆಯ ಸಮಸ್ಯೆಯನ್ನು ನಿಯಂತ್ರಿಸುತ್ತದೆ, ದೇಹದಲ್ಲಿ ಕಬ್ಬಿಣ ಅಂಶದ ವಿಪರೀತ ಕೊರತೆಯನ್ನು ನೀಗಿಸುತ್ತದೆ.

ಫೋಟೋ ಕೃಪೆ : timesofisrae

ಖಾಲಿ ಹೊಟ್ಟೆಗೆ ಬಾಳೆಹಣ್ಣು ಒಳ್ಳೆಯದಲ್ಲ: 

ಏಕೆಂದರೆ ಬಾಳೆ ಹಣ್ಣಿನಲ್ಲಿ ಸುಮಾರು ೧೦೦ ಗ್ರಾಂ ನಷ್ಟಿರುವ ೧೨ ರಿಂದ ೧೪ ಗ್ರಾಂ ನಷ್ಟು ಸಕ್ಕರೆ ಅಂಶಗಳು ಸೇರಿವೆ. ಖಾಲಿ ಹೊಟ್ಟೆಯಲ್ಲಿ ಇಷ್ಟು ಪ್ರಮಾಣದ ಸಕ್ಕರೆ ಅಂಶ ಮನುಷ್ಯನ ದೇಹ ಸೇರಿದರೆ ಗ್ಲುಕೋಸ್ ಅಂಶದ ಮಟ್ಟ ಏರುವುದಲ್ಲದೆ, ನಿದ್ದೆಗೆ ಪ್ರೇರೇಪಿಸುತ್ತದೆ. ಬೆಳಗಿನ ಸಮಯದಲ್ಲಿ ಬಾಳೆ ಹಣ್ಣು ಸೇವನೆ ಒಳ್ಳೆಯದಲ್ಲ.ಕಾರಣ ಹಸಿವನ್ನು ತಡೆಗಟ್ಟುತ್ತದೆ, ಜೀರ್ಣಕ್ರಿಯೆ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗಿರುವ ಆಮ್ಲವನ್ನು ಮೊದಲೇ ಕಡಿಮೆ ಮಾಡಿ ಬಿಡುತ್ತದೆ. ಇದರಿಂದ ನಾವು ನಂತರ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ಫೈಬರ್ ಅಂಶ ಹೇರಳವಾಗಿರುವುದರಿಂದ ಕೆಲವರಲ್ಲಿ ಬೇಧಿ ಆಗುವ ಸಾಧ್ಯತೆ ಇರುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading