ಮಲೆನಾಡಿನಲ್ಲಿ ಈ ವರ್ಷದ ಬೇಸಿಗೆಯಲ್ಲಿ 39 ರಿಂದ 40 ಡಿಗ್ರಿ ಉಷ್ಣಾಂಶ ಆದರೆ ಕಾಂಕ್ರೀಟ್ ನಗರ ಬೆಂಗಳೂರಿನಲ್ಲಿ ಗರಿಷ್ಟ 32 ಡಿಗ್ರಿ ಯಾಕೆ?…ಅರುಣ ಪ್ರಸಾದ್ ಅವರು ಬರೆದಿರುವ ಲೇಖನ ತಪ್ಪದೆ ಓದಿ…
1985 ರಲ್ಲಿ ಹಾನಗಲ್ ತಾಲ್ಲೂಕಿನ ಚಿಕ್ಕಾ೦ಶಿ ಹೊಸೂರು ಎಂಬ ಊರಿಂದ ಒಂದು ಹಳೆಯ ಗೋಡ್ಕೆ ಕಂಪನಿಯ ರೈಸ್ ಮಿಲ್ ಖರೀದಿಸಿ ತಂದು ಅದನ್ನು errection ಮಾಡಿಸುತ್ತಿದ್ದೆ ಆಗ ನನ್ನ ಪ್ರಾಯ 20 ವರ್ಷ, ರಿಪ್ಪನ್ ಪೇಟೆಯ ವೆಂಕಟರಮಣ ಆಚಾರ್ ರೈಸ್ ಮಿಲ್ ನ ರಿಡಲ್ ಮತ್ತು ಹಸ್ಕ್ ಪ್ಯಾನ್ ಯುನಿಟ್ ದುರಸ್ತಿ ಮಾಡುತ್ತಿದ್ದರು.
ಅವತ್ತು ನಮ್ಮ ಊರಲ್ಲಿ ಶಿವಮೊಗ್ಗದ ಪರಿಸರ ಪ್ರೇಮಿ ಸಂಘಟನೆಗಳು ಶಾಲಾ ಮಕ್ಕಳನ್ನು ಸೇರಿಸಿ ” ಅರಣ್ಯ ನಾಶದಿ೦ದ ಮಳೆ ಬೆಳೆ ಸರ್ವನಾಶ ” ಎ೦ಬ ಬ್ಯಾನರ್ ನಲ್ಲಿ ಜನ ಜಾಗೃತಿ ಮೆರವಣಿಗೆ ನಡೆಸಿದರು ಅವಾಗ ಯಾರೂ ನಿರೀಕ್ಷಿಸದ ಭಾರೀ ಮಳೆ ನಮ್ಮ ಊರಲ್ಲಿ ಆಯಿತು ಆಗ ಮರದ ಕೆಲಸದ ವೆಂಕಟರಮಣ ಆಚಾರ್ ತುಂಬು ಉತ್ಸಾಹದಿಂದ ತಮ್ಮ ಮರದ ಕೆಲಸದಲ್ಲಿ ಉಳಿಗೆ ಸುತ್ತಿಗೆಯ ಏಟು ಹಾಕುತ್ತಾ ಪರಿಸರವಾದಿಗಳಿಗೆ ಗೇಲಿ ಮಾಡಿದ್ದರು… ಈಗ ಹೇಗೆ ಮಳೆ ಬಂತು ಅಂತ…
ಮೊನ್ನೆ 25- ಏಪ್ರಿಲ್ -2023 ಮಂಗಳವಾರ ಬೆಂಗಳೂರಿಗೆ ಹೋಗಿದ್ದೆ ಅಲ್ಲಿನ ಗರೀಷ್ಟ ಉಷ್ಣಾಂಶ 32 ಡಿಗ್ರಿ ಅದೇ ಸಮಯದಲ್ಲಿ ನಮ್ಮ ಆನಂದಪುರಂ ನಲ್ಲಿ 39 ಡಿಗ್ರಿ ಹೀಗೇಕೆ ?.
ಕಾಂಕ್ರಿಟ್ ಕಾಡಾಗಿರುವ ಬೆಂಗಳೂರು ಅರೆ ಮಲೆನಾಡಾಗಿರುವ ಆನಂದಪುರಂ ಇವುಗಳ ಭೂಗೋಳಿಕ ಪ್ರಸಕ್ತ ಪರಿಸ್ತಿತಿಯಲ್ಲಿ ಬೆಂಗಳೂರಲ್ಲಿ 38 ಡಿಗ್ರಿ ಇರಬೇಕಿತ್ತು ಆದರೆ ಅಲ್ಲಿ ಕಡಿಮೆ ಉಷ್ಣಾಂಶ 32 ಡಿಗ್ರಿ ಇದೆ!? ಆನಂದಪುರಂನಲ್ಲಿ 39 ಡಿಗ್ರಿ ಇದೆ ಯಾಕೆ?
ನಾವು ಏನೇ ಕಾರಣ ನೀಡಿದರೂ … ಪ್ರಕೃತಿಯಲ್ಲಿ ಬೇರೆ ಯಾವುದೋ ಲೆಕ್ಕಾಚಾರ ಇದೆ ಅದು ಏನಂತ ನಮಗೂ ಗೊತ್ತಿಲ್ಲ.
- ಅರುಣ ಪ್ರಸಾದ್